Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಳೆಗೆ ಅರಳುವ ರಂಗು ರಂಗಿನ ಕೊಡೆಗಳು
ಮಳೆಯಲ್ಲಿ ನೆನೆಯದಿರಲು ಕೊಡೆಯಿದ್ದರೆ ಸಾಕು ಎಂಬ ಸ್ವಭಾವ ಕೆಲವರದ್ದು, ಆದರೆ ಹೇಗೋ ಒಂದು ಕೊಡೆ ಕೊಳ್ಳುತ್ತೇವೆ, ಆ ಕೊಡೆ ಸ್ಟೈಲಿಶ್ ಆಗಿದ್ದರೆ ಮತ್ತಷ್ಟು ಚೆಂದ ಅಲ್ಲವೇ ?
ವರ್ಷದಿಂದ-ವರ್ಷಕ್ಕೆ ಕೊಡೆಯ ಫ್ಯಾಷನ್ ಕೂಡ ಬದಲಾಗುತ್ತಿರುತ್ತದೆ. ಈಗಂತೂ ಎರಡು ರೀತಿಯ ಕೊಡೆ ಟ್ರೆಂಡ್ ನಲ್ಲಿದೆ. ಒಂದು ಫೋಲ್ಡ್ ಮಾಡಿ, ಚಿಕ್ಕ ವ್ಯಾನಿಟಿ ಬ್ಯಾಗ್ ನಲ್ಲಿ ತುಂಬಬಹುದಾದ ಕೊಡೆ, ಮತ್ತೊಂದು ರಂಗು ರಂಗಿನ ಉದ್ದದ ಕೊಡೆ ( ಈ ರೀತಿಯ ಕಪ್ಪು ಕೊಡೆಯನ್ನು ಅಜ್ಜಂದಿರ ಕೊಡೆ ಎನ್ನುತ್ತಾರೆ, ಬಣ್ಣದಾಗಿದ್ದರೆ ಮಾತ್ರ ಫ್ಯಾಷನಬಲ್!).
ಇಲ್ಲಿ ನಾವು ಈ ವರ್ಷ ಅತೀ ಹೆಚ್ಚು ಗಮನ ಸೆಳೆದ ಕೆಲ ಸ್ಟೈಲಿಶ್ ಕೊಡೆಗಳ ಮಾಡಲ್ ಗಳನ್ನು ಸ್ಲೈಡ್ ನಲ್ಲಿ ನೀಡಿದ್ದೇವೆ.

ಫ್ರಿಲ್ಡ್ ಕೊಡೆ
ಈ ಕೊಡೆ ಏನಿದ್ದರೂ ಯುವ ತರುಣಿಯರಿಗೇ ಸೂಕ್ತ. ಈ ರೀತಿಯ ಕೊಡೆಗಳು ಬೇರೆ-ಬೇರೆ ಬಣ್ಣದಲ್ಲಿ, ಗಾತ್ರದಲ್ಲಿ ದೊರೆಯುತ್ತದೆ. ಇದು ನೋಡಕ್ಕೆ ತುಂಬಾ ಆಕರ್ಷಕವಾಗಿ ಕಂಡರೂ ಇತರ ಕೊಡೆಗಳಿಗೆ ಹೋಲಿಸಿದರೆ ಇದು ಸ್ವಲ್ಪ ಭಾರವಾದ ಕೊಡೆಯಾಗಿದೆ.

ಬಣ್ಣ-ಬಣ್ಣದ ಪ್ಲೇನ್ ಕೊಡೆಗಳು
ಈ ಕೊಡೆಯ ಫ್ಯಾಷನ್ ಬಂದು ವರ್ಷಗಳೇ ಕಳೆದರೂ ಈಗಲೂ ಫ್ಯಾಷನ್ ಪ್ರಿಯರ ಕೈಯಲ್ಲಿ ಭದ್ರವಾಗಿದೆ.

ಚುಕ್ಕೀ... ಬಣ್ಣದ ಚುಕ್ಕೀ
ಡ್ರೆಸ್ ತುಂಬಾ ಫ್ಯಾಷನಬಲ್ ಆಗಿದ್ದು ಕೊಡೆ ಸಾಧಾರಣ ಕೊಡೆಯಾಗಿದ್ದರೆ ಏನು ಚೆಂದ ಅಲ್ಲವೇ? ನಿಮ್ಮ ಔಟ್ ಫಿಟ್ ಗೆ ಮತ್ತಷ್ಟು ಲುಕ್ ನೀಡುವ ಕೊಡೆ ಇದಾಗಿದೆ.

ಅಡ್ಡ ಗೆರೆಯ ಕೊಡೆ
ತುಂಬಾ ಫ್ರೊಫೆಷನಲ್ ಆಗಿ ಡ್ರೆಸ್ ಮಾಡಿದಾಗ ಈ ರೀತಿಯ ಕೊಡೆ ಚೆನ್ನಾಗಿ ಒಪ್ಪುತ್ತೆ.

ಚೆಸ್ ಕೊಡೆ
ಚೆಸ್ ಕೊಡೆಯನ್ನು ಪುರುಷರೂ ಕೊಂಡೊಯ್ಯಬಹುದಾಗಿದೆ. ಇದು ಅನೇಕ ಬಣ್ಣದಲ್ಲಿ ದೊರೆಯುವುದಾದರೂ ಕಪ್ಪು ಮತ್ತು ಬಿಳಿ ಬಣ್ಣ ಹೆಚ್ಚು ಆಕರ್ಷಕವಾಗಿ ಕಾಣುವುದು.

ಮಕ್ಕಳ ಮೆಚ್ಚಿನ ಕೊಡೆ
ಅನಿಮೇಟಡ್ ಕೊಡೆ ಬಾಲಕಿಯರ ಮೆಚ್ಚಿನ ಕೊಡೆಯಾಗಿ ಹೊರಹೊಮ್ಮಿದೆ. ಈ ಕೊಡೆ ಹಿಡಿದು ಅವರು ನಡೆಯುತ್ತಿದ್ದರೆ ಕೊಡೆಯ ವಿನ್ಯಾಸ ನೋಡುಗರ ಗಮನ ಸೆಳೆಯುವಂತಿದೆ.

ಬ್ಯುಸಿನೆಸ್ ಕೊಡೆ
ಎಲ್ಲಾ ಪ್ರಾಯದವರೂ ಕೊಂಡೊಯ್ಯಬಹುದಾದ ಫ್ಯಾಷನಬಲ್ ಕೊಡೆ ಇದಾಗಿದೆ.

ಪಾರದರ್ಶಕ ಕೊಡೆ
ಈ ಕೊಡೆ ಕೂಡ ಎಲ್ಲಾರೂ ಇಷ್ಟ ಪಡುವ ಕೊಡೆಯಾಗಿದೆ.

ಮಕ್ಕಳ ಕೊಡೆ
ಮಕ್ಕಳನ್ನು ಸೆಳೆಯಲು ಆಕರ್ಷಕ ಗೊಂಬೆಗಳ ಚಿತ್ರವಿರುವ ಕೊಡೆ.

ಆಲ್ ಟೈಮ್ ಫ್ಯಾಷನ್
ಈ ಕಪ್ಪು ಕೊಡೆ ಮಾತ್ರ ಔಟ್ ಆಫ್ ಫ್ಯಾಷನ್ ಆಗುವುದೇ ಇಲ್ಲ..



Click it and Unblock the Notifications
