Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ಪುರುಷರು 30ರ ಬಳಿಕ ಇವುಗಳನ್ನು ಧರಿಸುವುದು ಸೂಕ್ತವಲ್ಲ
ಯೌವನ ಪ್ರಾಯವನ್ನು ಪ್ರತಿಯೊಬ್ಬರೂ ಇಷ್ಟಪಡುತ್ತೇವೆ. ಆ ವಯಸ್ಸು ಹಾಗೇ ನಿಂತೇ ಬಿಡಲಿ, ನಮಗೆ ಮುಪ್ಪು ಬರದಿರಲಿ ಎಂದೇ ಎಲ್ಲರೂ ಬಯಸುತ್ತೇವೆ. ಆದರೆ ಕಾಲ ಮತ್ತು ವಯಸ್ಸನ್ನು ತಡೆಯಲು ನಮ್ಮಿಂದ ಸಾಧ್ಯವೇ? ಪ್ರತೀವರ್ಷ ಹ್ಯಾಪಿ ಬರ್ತ್‌ಡೇ ಆಚರಿಸುತ್ತೇವೆ. ಆದರೆ ಯಾವಾಗ ನಮ್ಮ 30ನೇ ಬರ್ತ್‌ಡೇ ಬರುತ್ತದೋ ಆಗ ಹೊಟ್ಟೆಯಲ್ಲಿ ತಳಮಳ ಪ್ರಾರಂಭವಾಗುತ್ತದೆ. 30 ವರ್ಷ ಕಳೆದರೆ ಯೌವನ ಪ್ರಾಯ ಕಳೆದು ಮಧ್ಯೆ ವಯಸ್ಸಿನತ್ತ ಸಾಗುತ್ತಿದ್ದೇವೆ ಎಂದು ಯೋಚಿಸುವಾಗ ಛೇ ಯೌವನದ ವಯಸ್ಸು ಇನ್ನು ಸ್ವಲ್ಪ ವರ್ಷ ಇರಬಾರದಿತ್ತೇ, ಒಂದು 50 ಕಳೆದ ಮೇಲೆ ಮಧ್ಯವಯಸ್ಸು ಬರಬಾರದಿತ್ತೇ ಎಂದುಕೊಳ್ಳುತ್ತೇವೆ.
30ರ ನಂತರ ನಮ್ಮ ನಡುವಳಿಕೆಯಲ್ಲಿ ಮತ್ತಷ್ಟು ಪ್ರೌಢರಾಗಬೇಕಾಗುತ್ತದೆ. ವೇಷಭೂಷಣದಲ್ಲೂ ಬದಲಾವಣೆಯಾಗಬೇಕಾಗುತ್ತದೆ. ಪುರುಷರಂತೂ ಈ ವಿಷಯದಲ್ಲೂ ತುಂಬಾ ಎಚ್ಚರದಿಂದ ಇರಬೇಕು. 30ರ ಬಳಿಕ ಕೂಡ 20 ಯುವಕನಂತೆ ಡ್ರೆಸ್ ಮಾಡುತ್ತೇನೆ ಎಂದು ಮಾಡಿದರೆ ನೋಡುಗರ ಕಣ್ಣಿಗೆ ಜೋಕರ್ ನಂತೆ ಕಾಣುತ್ತೀರಿ. ಆದ್ದರಿಂದ ಇಲ್ಲಿ ನಾವು 30 ಬಳಿಕ ಯಾವ ಬಗೆಯ ಡ್ರೆಸ್ಸಿಂಗ್ ಸೂಕ್ತವಲ್ಲ ಎಂದು ಹೇಳಿದ್ದೇವೆ ನೋಡಿ:

croc ಶೂ
ಈ ಶೂ ಧರಿಸಿದರೆ ತುಂಬಾ ಕಂಫರ್ಟ್ ಇರಬಹುದು. ಆದರೆ 30ರ ಒಳಗೆ ಈ ರೀತಿಯ ಶೂ ಓಕೆ, ನಂತರ ಧರಿಸುವುದು ಅಷ್ಟು ಸೂಕ್ತವಲ್ಲ.

ಸ್ಟೈಲೀಶ್ ಸ್ಯಾಂಡಲ್
30 ನಂತರ ಕೂಡ ಸ್ಯಾಂಡಲ್ ಧರಿಸಬಹುದು. ಆದರೆ ತುಂಬಾ ಸ್ಟೈಲೀಶ್ ಆದ ಸ್ಯಾಂಡಲ್ ನಿಮಗೆ ಸ್ಟೈಲೀಶ್ ಲುಕ್ ನೀಡುವುದಿಲ್ಲ ಅನ್ನುವುದಿಲ್ಲ ನೆನಪಿರಲಿ.

ಪಿಂಕ್ ಶರ್ಟ್
ಕಡು ಪಿಂಕ್ ಶರ್ಟ್ ಪುರುಷರಿಗೆ ಸೂಕ್ತವಾದ ಬಣ್ಣವಲ್ಲ, ಅದರಲ್ಲೂ 30ರ ನಂತರ ಈ ಬಣ್ಣದ ಆಯ್ಕೆಯಿಂದ ದೂರವಿರುವುದು ಒಳ್ಳೆಯದು.

ಸ್ಲೋಗನ್ ಇರುವ ಟೀ ಶರ್ಟ್
ಸ್ಲೋಗನ್ ಇರುವ ಟೀ ಶರ್ಟ್ ಟೀನೇಜ್ ಗೆ ಚೆಂದ, ಆ ವಯಸ್ಸು ಮೀರಿದ ಮೇಲೆ ಅಂತಹ ಟೀ ಶರ್ಟ್ ಧರಿಸದಿರುವುದು ಒಳ್ಳೆಯದು.

ಕ್ಯಾಪ್
ಸ್ಟೈಲೀಶ್ ಕ್ಯಾಪ್ ಕೂಲ್ ಲುಕ್ ನಲ್ಲಿ ಕಾಣಿಸಬೇಕೆಂಬ ಪ್ರಯತ್ನ ಬೇಡ. ಸ್ಪೋರ್ಟ್ಸ್ ಆಡುವಾಗ ಓಕೆ, ಉಳಿದ ಸಮಯದಲ್ಲಿ ಬೇಡ ಅನ್ನುವುದೇ ನಮ್ಮ ಸಲಹೆ.

ಡಿಸೈನ್ ಡಿಸೈನ್ ಶರ್ಟ್
ತುಂಬಾ ಬಣ್ಣ-ಬಣ್ಣದ ಶರ್ಟ್ ಗಿಂತ ಕೂಲ್, ನೀಟಾಗಿರುವ ಶರ್ಟ್ 30ರ ನಂತರ ಹೆಚ್ಚು ಆಕರ್ಷಕ.

ಸ್ಟಡ್ಸ್
ಕಿವಿಗೆ ಸ್ಟಡ್ಸ್, ಹುಬ್ಬಿಗೆ ಚುಚ್ಚಿಕೊಳ್ಳುವುದು ಇವೆಲ್ಲಾ ಯುವಕರಾಗಿದ್ದಾಗ ಚೆಂದ, ನಂತರ ಹಾಕಿದರೆ ಅಷ್ಟೊಂದು ಆಕರ್ಷಕವಲ್ಲ.

ಬರೀ ಬನಿಯನ್ ನಲ್ಲಿ ತಿರುಗಾಡುವುದು
ಹೆಚ್ಚಿನವರಿಗೆ ಇದೊಂದು ಫ್ಯಾಷನ್. ಶರ್ಟ್ ಧರಿಸದೆ ಬರೀ ಬನಿಯನ್ ನಲ್ಲಿ ತಿರುಗುವುದು ಫ್ಯಾಷನ್, ಆದರೆ 30ರ ಬಳಿಕ ಹೊರಗಡೆ ಹೋಗುವಾಗ ಈ ರೀತಿಯ ವೇಷ ತುಂಬಾ ಕೆಟ್ಟ ಡ್ರೆಸ್ಸಿಂಗ್.

ಬಿಗಿಯಾದ ಜೀನ್ಸ್
ತುಂಬಾ ಬಿಗಿಯಾದ ಜೀನ್ಸ್ ಗಿಂತ ಮಾಮೂಲಿ ಜೀನ್ಸ್ ಹೆಚ್ಚು ಆಕರ್ಷಕ ಲುಕ್ ನೀಡುವುದು.

ರಾಕ್ ಸ್ಟಾರ್ ಇಮೇಜ್
ಹುಡುಗರಿಗೆ ರಾಕ್ ಸ್ಟಾರ್ ಇಮೇಜ್ ನಲ್ಲಿ ಕಾಣಿಸಿಕೊಳ್ಳುವುದೆಂದರೆ ಬಲು ಪ್ರೀತಿ, 30ರ ಬಳಿಕವೂ ಹೀಗೆ ಕಾಣಿಸಲು ಇಚ್ಛೆ ಪಟ್ಟರೆ ಜನ ನಿಮ್ಮ ನೋಡಿ ನಕ್ಕಾರು.



Click it and Unblock the Notifications