Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಲೈಫ್ ಬೋರಾಗುತ್ತಿದೆಯೇ? ಹಾಗಾದರೆ ಈ ರೀತಿ ಮಾಡಿ
ತುಂಬಾ ಬೋರಾದಾಗ ನೀವೇನು ಮಾಡುತ್ತೀರಿ? ನಾನಂತೂ ಮಾಡುವ ಕೆಲಸವನ್ನು ಅರ್ಧದಲ್ಲಿ ಬಿಟ್ಟು ಒಂದೋ ಸೋಮಾರಿಯಂತೆ ಕೂತು ಬಿಡುತ್ತಿದ್ದೆ, ಮನೆಯಲ್ಲಿ ಇದ್ದರೆ ಜೋರಾಗಿ ನಿದ್ದೆ ಮಾಡುತ್ತಿದ್ದೆ. ಆದರೆ ಈ ರೀತಿಯೆಲ್ಲಾ ಮಾಡಬಾರದಂತೆ! ಈ ರೀತಿ ಮಾಡಿದರೆ ಮತ್ತಷ್ಟು ಬೋರಾಗುವುದು, ಚೈತನ್ಯ ಕಡಿಮೆಯಾಗಿ ಆ ದಿನಾ ಪೂರ್ತಿ ಸೋಮಾರಿಗಳಂತೆ ಕಾಲಕಳೆಯುವಂತಾಗುವುದು.
ಲೈಫ್ ಬೋರು ಅನಿಸಿದರೆ ಆ ಭಾವನೆ ಬೇಗನೆ ಹೋಗುವುದಿಲ್ಲ. ಕೆಲವರಿಗೆ ವಾರಗಟ್ಟಲೆ ಇರುತ್ತದೆ. ಯಾವುದೇ ಕೆಲಸ ಮಾಡಲು ಮನಸ್ಸು ಬರುವುದಿಲ್ಲ. ನನಗೆ ಬೋರಾಗುತ್ತದೆ ಎಂದು ಹೇಳಿದರೆ ನಮ್ಮ ಕೆಲಸವನ್ನು ಇತರರು ಮಾಡಿಕೊಡುವುದಿಲ್ಲ. ಆದ್ದರಿಂದ ಬೋರ್ ಆದಾಗ ಈ ಕೆಳಗಿನಂತೆ ಮಾಡಬೇಕಂತೆ, ಆಗ ನಮ್ಮಲ್ಲಿ ಲವಲವಿಕೆ ಮರಳಿ ಬರುತ್ತದೆ. ನಾನಂತು ಇದನ್ನು ಪಾಲಿಸುತ್ತಿದ್ದೇನೆ (ಪಾಲಿಸಲೇ ಬೇಕು, ಇಲ್ಲಾಂದರೆ ಸೋಮಾರಿ ಎಂದು ಹೇಳಿ, ನಮ್ಮ ಆಫೀಸ್ ನಲ್ಲಿ ಇಂಥವರು ಬೇಡ ಎಂದು ಸೀದಾ ಮನೆಗೆ ಕಳುಹಿಸಿಬಿಡುತ್ತಾರೆ ಅಷ್ಟೇ), ನೀವು ಜೀವನ ಬೋರಾಗುತ್ತಿದೆ ಎಂದು ಕೂತರೆ ಬಾಸ್ ಸುಮ್ಮನೆ ಬಿಡುವುದಿಲ್ಲ ಅಲ್ಲವೇ? ಹಾಗಾದರೆ ಈ ಸಲಹೆ ಪಾಲಿಸಲು ನೀವು ರೆಡಿನಾ?
ಬೋರಾದಾಗ ಈ ರೀತಿ ಮಾಡಿ:

ತಿನ್ನಿ
ತುಂಬಾ ಬೋರಾದರೆ ನಿಮ್ಮ ಪ್ರಿಯವಾದ ಅಡುಗೆಯನ್ನು ತಿನ್ನಿ. ಅದರಲ್ಲೂ ಹೊರಗಡೆ ಹೋಗಿ ತಿನ್ನಿ. ಈ ರೀತಿ ಮಾಡಿದರೆ ಬೋರು ಸ್ವಲ್ಪ ಮಟ್ಟಿಗೆ ದೂರವಾಗುವುದು.
ಪ್ಲಾನ್ ಮಾಡಿ
ತುಂಬಾ ಬೋರ್ ಅನಿಸಿದಾಗ ಸ್ವಲ್ಪ ದೂರ ಪ್ರಯಾನಕ್ಕೆ ಪ್ಲಾನ್ ಮಾಡಿ. ಸ್ನೇಹಿತರು ಅಥವಾ ಮನೆಯವರ ಜೊತೆ ಹೋಗಿ ಬನ್ನಿ, ಆಗ ನಿಮಗೆ ಸ್ವಲ್ಪ ರಿಲ್ಯಾಕ್ಸ್ ದೊರೆಯುತ್ತದೆ. ಬೋರು, ಜಡತನ ದೂರವಾಗಿ ಲವಲವಿಕೆಯಿಂದ ಇರುವಿರಿ.
ಕರೆಮಾಡಿ
ಬೋರಾದಾಗ ನಿಮ್ಮ ಸ್ನೇಹಿತರಲ್ಲಿ ಸ್ವಲ್ಪ ಹಾಸ್ಯ ಸ್ವಭಾವ ಇರುವವರಿಗೆ ಫೋನ್ ಮಾಡಿ, ಅವರ ಮಾತುಗಳನ್ನು ಕೇಳುತ್ತಿದ್ದರೆ ನಿಮಗೆ ನಿಮ್ಮ ಬೋರು ದೂರವಾಗುವುದು.
ನಿಮ್ಮ ಹಳೆಯ ಡೈರಿ ಓದಿ
ನಿಮಗೆ ತುಂಬಾ ಬೋರು ಅನಿಸಿದರೆ ಹಳೆಯ ಡೈರಿ ಓದಿ. ಆಗ ಹಳೆಯ ನೆನಪುಗಳು ಮರುಕಳಿಸುತ್ತದೆ, ಫೋಟೋ ನೋಡಿ, ಫ್ರೆಂಡ್ಸ್ ಕರೆ ಮಾಡಿ.
ಮನೆಯನ್ನು ಸ್ವಚ್ಛ ಮಾಡಿ
ನನ್ನ ಫ್ರೆಂಡ್ ಗೆ ಈ ಅಭ್ಯಾಸವಿದೆ. ಅವಳಿಗೆ ತುಂಬಾ ಬೋರ್ ಅನಿಸಿದಾಗ ಮನೆಯನ್ನು ಕಬೋರ್ಡ್ ನಲ್ಲಿರುವ ವಸ್ತುಗಳನ್ನೆಲ್ಲಾ ಜೋಡಿಸಿ, ಮನೆಯನ್ನು ಸ್ವಚ್ಛ ಮಾಡುತ್ತಾಳೆ. ಈ ರೀತಿ ಮಾಡಿದರೆ ನನಗೆ ಒಂಥರಾ ಖುಷಿ ಸಿಗುತ್ತದೆ, ಬೋರು ಕೂಡ ಆಗುವುದಿಲ್ಲ ಅಂತಾಳೆ. ನೀವು ಕೂಡ ಟ್ರೈ ಮಾಡಿ ನೋಡಿ.
ಸಿನಿಮಾ ನೋಡಿ
ಲೈಫ್ ಬೋರ್ ಅನಿಸಿದಾಗ ನಿಮ್ಮ ನೆಚ್ಚಿನ ಹೀರೋನ ಸಿನಿಮಾ ನೋಡಿ. ಬರೆಯುವ ಾಸಕ್ತಿ ಇದ್ದರೆ ನಿಮಗೆ ತೋಚಿದ್ದನ್ನು ಬರೆಯಿರಿ. ಇಷ್ಟು ಮಾಡಿ ನಿಮ್ಮ ಬೋರು ಬಂದ ದಾರಿಗೆ ಸುಂಕವಿಲ್ಲದಂತೆ ದೂರ ಹೋಗುವುದು.



Click it and Unblock the Notifications
