Latest Updates
-
ಬಿಸಿಲಿನ ತಾಪಕ್ಕೆ ದಾಂಪತ್ಯದಲ್ಲಿ ಜಗಳವೇ? ಈ ಟಿಪ್ಸ್ ಪಾಲಿಸಿ -
ದೆಹಲಿ ಬಿಸಿಲು: ಮನೆಯನ್ನು ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ತೂಕ ಇಳಿಸುವ ಔಷಧಿಗಳ ಬೆಲೆ ಇಳಿಕೆ: ಬೊಜ್ಜು ನಿವಾರಣೆಗೆ ಹೊಸ ಭರವಸೆ -
ಎಸ್ಪಿಎಫ್ ಸ್ಟಿಕ್: ಬಿಸಿಲ ಬೇಗೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಯೋಗಾಸನ ಚಾಂಪಿಯನ್ಶಿಪ್: ಅಯೋಧ್ಯೆಯಲ್ಲಿ ಯೋಗದ ಅದ್ಭುತ ಕೌಶಲ ಪ್ರದರ್ಶನ -
ಗುಜರಾತ್ ಲಿವ್-ಇನ್ ಜೋಡಿಗಳೇ, ಈ ಹೊಸ ನಿಯಮ ಮಿಸ್ ಮಾಡ್ಬೇಡಿ! -
ಹಬ್ಬದ ಅಲಂಕಾರ: ಕಡಿಮೆ ಖರ್ಚಿನಲ್ಲಿ ನಿಮ್ಮ ಮನೆ ಕಂಗೊಳಿಸಲಿ ಹೀಗೆ! -
ಬಿಸಿಲಿನ ತಾಪಕ್ಕೆ ಸುಸ್ತಾದ್ರಾ? ಈ ಪಾನೀಯಗಳು ನಿಮ್ಮನ್ನು ಕಾಪಾಡುತ್ತವೆ -
ಬಿಸಿಗಾಳಿ ಕಾಟ: ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು! -
ಅನುಷ್ಕಾ ಶರ್ಮಾ ಫ್ಲೋರಲ್ ಲುಕ್: ಸ್ಟೇಡಿಯಂನಲ್ಲಿ ಮಿಂಚಲು ಹೀಗೆ ಮಾಡಿ
ಜೋಶ್ ನಿಂದ ಇರಲು ಏನೆಲ್ಲಾ ಮುಖ್ಯ ಗೊತ್ತೆ?
ನಮಗೆಲ್ಲರಿಗು ತಿಳಿದಿರುವಂತೆ ದೈಹಿಕ ಚಟುವಟಿಕೆಗಳು ಮತ್ತು ವ್ಯಾಯಾಮಗಳು ನಮ್ಮ ಆರೋಗ್ಯವನ್ನು ಕಾಪಾಡುವುದರ ಜೊತೆಗೆ, ಆಯುಸ್ಸನ್ನು ಸಹ ಹೆಚ್ಚಿಸುತ್ತವೆ.
ಒಂದು ವೇಳೆ ನಿಮಗೆ ವ್ಯಾಯಾಮ ಮಾಡಲು ಕಷ್ಟವಾದರೆ, ನಾವು ಕೆಳಗೆ ಸೂಚಿಸಿರುವ ಕೆಲವೊಂದು ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ. ಇವುಗಳಿಗಾಗಿ ನೀವೇನು ವಿಶೇಷವಾದ ಸಮಯವನ್ನು ಮೀಸಲಿಡ ಬೇಕಾದ ಅಗತ್ಯವಿಲ್ಲ. ಇವುಗಳನ್ನು ಮಾಡುವುದರಿಂದ ನಿಮಗೆ ಮುಂದೆ ಅಪಾಯವನ್ನುಂಟು ಮಾಡುವ ಕಾಯಿಲೆಗಳು ಬರದಂತೆ ತಡೆಯಬಹುದು.
ಲವಲವಿಕೆಯಿಂದ ಇರುವಂತೆ ಮಾಡುವ ಸುಲಭ ಉಪಾಯಗಳು

1. ಯಾವುದಾದರು ಆಟವಾಡಲು ಹೋಗಿ
ಯಾವುದಾದರು ಒಂದು ಆಟದಲ್ಲಿ ಪಾಲ್ಗೊಳ್ಳುವುದರಿಂದ ನಿಮ್ಮ ಜಡಗಟ್ಟಿದ ಜೀವನಶೈಲಿಯಿಂದ ಮುಕ್ತಿ ಹೊಂದಬಹುದು. ನಿಮ್ಮ ಸ್ನೇಹಿತರ ಅಥವಾ ನೆರೆಹೊರೆಯವರೊಂದಿಗೆ ಕೂಡಿ ಬ್ಯಾಡ್‍ಮಿಂಟನ್, ಟೆನ್ನಿಸ್ ಅಥವಾ ಇನ್ನಿತರ ಯಾವುದಾದರೂ ಒಂದು ಆಟವನ್ನು ಆಡಿ; ಈ ಆಟಗಳು ನಿಮ್ಮ ದೇಹದಲ್ಲಿರುವ ಕೆಲವು ಕ್ಯಾಲೋರಿಗಳನ್ನು ಕರಗುವಂತೆ ಮಾಡಿ, ಒತ್ತಡವನ್ನು ಕಡಿಮೆ ಮಾಡಿ, ನಿಮ್ಮಲ್ಲಿ ಸಂತೋಷ ಉಂಟು ಮಾಡುತ್ತದೆ.

2. ಲೈಂಗಿಕ ಕ್ರಿಯೆಗೆ ಇಲ್ಲವೆನ್ನ ಬೇಡಿ
ಲೈಂಗಿಕ ಕ್ರಿಯೆಯು ನಿಮಗೆ ಕೇವಲ ಮುದವನ್ನಷ್ಟೇ ನೀಡುವುದಿಲ್ಲ. ಅದರ ಜೊತೆಗೆ ಉತ್ತಮ ಆರೋಗ್ಯ ಮತ್ತು ಉಲ್ಲಾಸವನ್ನು ಸಹ ನೀಡುತ್ತದೆ. ನಿಯಮಿತವಾಗಿ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೋಳ್ಳುವುದರಿಂದ ನೀವು ಸದಾ ಚಟುವಟಿಕೆಯಿಂದಿರಬಹುದು. ಇದು ನಿಮ್ಮ ಮಾನಸಿಕ ಒತ್ತಡವನ್ನು ಹೊರದೂಡುತ್ತದೆ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಕ್ಯಾಲೋರಿಗಳು ಕರಗುವಂತೆ ಮಾಡುತ್ತದೆ ಮತ್ತು ನಿಮ್ಮಲ್ಲಿ ಸಕಾರಾತ್ಮಕ ಮನೋಭಾವನೆಯನ್ನು ಬೆಳೆಸುತ್ತದೆ.

3. ನಡೆ ಮುಂದೆ, ನಡೆ ಮುಂದೆ, ನುಗ್ಗಿ ನಡೆ ಮುಂದೆ!
ಸದಾ ಚಟುವಟಿಕೆಯಿಂದ ಇರಲು ನಡಿಗೆ ಅತ್ಯಂತ ಸರಳ ಮಾರ್ಗವಾಗಿದೆ. ನಿಮಗೆ ಸಾಧ್ಯವಾದಷ್ಟು, ನಡೆಯಿರಿ. ಇದು ಅತ್ಯಂತ ಸುಲಭವಾದ ಚಟುವಟಿಕೆಯಾಗಿದೆ. ಇದರಿಂದ ನಿಮಗೆ ಹಲವಾರು ಆರೋಗ್ಯಕಾರಿ ಲಾಭಗಳು ದೊರೆಯುತ್ತವೆ.

4. ಸೈಕಲ್ ತುಳಿಯಿರಿ
ನಿಮ್ಮ ಹಳೆಯ ಸೈಕಲ್ ಹೊರಗೆ ತೆಗೆದು, ನಿಮ್ಮ ಸ್ನೇಹಿತರ ಜೊತೆಗೆ ಸುತ್ತಾಡಲು ಹೊರಡಿ. ಈ ಚಟುವಟಿಕೆಯು ನಿಮ್ಮನ್ನು ಪರಿಸರದೊಂದಿಗೆ ಬೆರೆಯುವಂತೆ ಮಾಡುವುದರ ಜೊತೆಗೆ, ನಿಮ್ಮ ಸ್ನಾಯುಗಳ ಸಾಮರ್ಥ್ಯ ಮತ್ತು ಆರೋಗ್ಯವನ್ನು ಹೆಚ್ಚುವಂತೆ ಮಾಡುತ್ತದೆ.

4. ಮೆಟ್ಟಿಲು ಹತ್ತಿ, ಗಟ್ಟಿ ಮುಟ್ಟಾಗಿರಿ
ನೀವು ಬೇಗ ಗಟ್ಟಿ ಮುಟ್ಟಾಗಿ ಆಗಬೇಕೆಂದರೆ, ಮೊದಲು ಲಿಫ್ಟ್ ಹತ್ತುವುದನ್ನು ಬಿಟ್ಟು ಮೆಟ್ಟಿಲು ಹತ್ತಿ. ಮೆಟ್ಟಿಲು ಹತ್ತುವುದನ್ನು ಒಂದು ಅಭ್ಯಾಸವನ್ನಾಗಿ ಮಾಡಿಕೊಳ್ಳಿ. ಇದು ನಿಮ್ಮ ದೇಹವನ್ನು ಒಂದು ಒಳ್ಳೆಯ ಆಕಾರಕ್ಕೆ ತರಲು ನೆರವಾಗುತ್ತದೆ.

5. ನೃತ್ಯ ಮಾಡಿ
ನೃತ್ಯ ಮಾಡುವುದರಿಂದ ನಿಮ್ಮ ಸ್ನಾಯುಗಳನ್ನು ಬೆಳೆಸಬಹುದು ಮತ್ತು ಕೊಬ್ಬಿನಂಶವನ್ನು ಕರಗಿಸಬಹುದು.

6. ಲಘು ವ್ಯಾಯಾಮ ಮಾಡಿ
ಲಘು ವ್ಯಾಯಾಮವು ನಿಮ್ಮನ್ನು ಲವಲವಿಕೆಯಿಂದ ಇರುವಂತೆ ಮಾಡಲು ಉಪಯೋಗಕಾರಿ. ಕತ್ತು ತಿರುಗಿಸುವುದು, ಉಠ್ ಬೈಸ್ ಹೊಡೆಯುವುದು, ಒತ್ತಡ ನಿವಾರಕ ಲಘು ವ್ಯಾಯಾಮಗಳು ದಿನಪೂರ್ತಿ ನಿಮ್ಮಲ್ಲಿ ಲವಲವಿಕೆಯನ್ನು ತುಂಬುತ್ತವೆ.

7. ಸ್ನಾನಕ್ಕೆ ಬಕೆಟ್ ಬಳಸಿ
ಇದು ನಿಮಗೆ ಆಶ್ಚರ್ಯವನ್ನುಂಟು ಮಾಡಬಹುದು, ಆದರೂ ನಿಜ. ಶವರ್ ಕೆಳಗೆ ನಿಂತು ಸ್ನಾನ ಮಾಡುವ ಬದಲು, ಬಕೆಟ್‍ನಲ್ಲಿ ಸ್ನಾನ ಮಾಡಿ. ಇದರಿಂದ ಬಗ್ಗಿ-ನಿಂತು ನಿಮ್ಮಲ್ಲಿರುವ ಕೆಲವು ಕ್ಯಾಲೋರಿಗಳು ಕರಗುತ್ತವೆ. ಸ್ನಾನ ಮಾಡುವಾಗ ನಿರಂತರವಾಗಿ ಬಗ್ಗಿ -ಏಳುವುದರಿಂದಾಗಿ ನಿಮ್ಮ ಕೈಗಳಿಗೆ ಮತ್ತು ಸೊಂಟಕ್ಕೆ ಒಳ್ಳೆಯ ವ್ಯಾಯಾಮ ದೊರೆಯುತ್ತದೆ.

8. ನಿಮ್ಮ ಮನೆಕೆಲಸಗಳನ್ನು ಮಾಡಿ
ದೈಹಿಕ ಚಟುವಟಿಕೆಗಳನ್ನು ಮಾಡಲು ಅತ್ಯುತ್ತಮ ಉಪಾಯವೆಂದರೆ, ನಿಮ್ಮ ಮನೆಯಲ್ಲಿನ ಸಣ್ಣ ಪುಟ್ಟ ಕೆಲಸಗಳನ್ನು ಮಾಡುವುದು. ಮತ್ತೇಕೆ ತಡ ಪೊರಕೆ ತೆಗೆದುಕೊಂಡು ಫ್ಯಾನಿನ ಹಿಂದೆ ಕಟ್ಟಿರುವ ಧೂಳನ್ನು ಜಾಡಿಸಿ. ಹೀಗೆ ಮಾಡುವುದರಿಂದಲು ನಿಮ್ಮ ದೇಹಕ್ಕೆ ಉತ್ತಮ ಆಕಾರ ಒದಗುತ್ತದೆ.

9. ಮನೆಯಲ್ಲಿ ಕೈತೋಟ ಮಾಡಿ
ನಿಮಗೆ ಆಟವಾಡಲು ಇಷ್ಟವಿಲ್ಲದಿದ್ದರೆ, ಕೈತೋಟವನ್ನು ಮಾಡಿ. ತೋಟಗಾರಿಕೆಯು ಮನಸ್ಸಿಗೆ ಮುದ ನೀಡುವಂತಹ ಒಂದು ಚಟುವಟಿಕೆಯಾಗಿರುತ್ತದೆ. ಈ ಚಟುವಟಿಕೆಯಲ್ಲಿ ಕಳೆ ಕೀಳುವುದು, ಅಗೆಯುವುದು ಮುಂತಾದ ಕೆಲಸ ಮಾಡಬೇಕಾಗುತ್ತದೆ. ಇದರಿಂದ ನಿಮ್ಮ ಸ್ನಾಯುಗಳಿಗೆ ಉತ್ತಮ ವ್ಯಾಯಾಮ ದೊರೆತು, ಅವು ಉತ್ತಮ ರೂಪವನ್ನು ಪಡೆದುಕೊಳ್ಳುತ್ತವೆ.

10. ನಿಮ್ಮ ನಾಯಿಯನ್ನು ಹೊರಗೆ ಸುತ್ತಾಡಿಸಿಕೊಂಡು ಬನ್ನಿ
ನಿಮ್ಮ ನಾಯಿಯನ್ನು ಪ್ರತಿದಿನವು ಹೊರಗೆ ಸುತ್ತಾಡಿಸಿಕೊಂಡು ಬನ್ನಿ. ಇದರಿಂದ ನಿಮಗೆ ಮತ್ತು ನಿಮ್ಮ ನಾಯಿ ಇಬ್ಬರಿಗು ಉತ್ತಮ ಆರೋಗ್ಯವು ದೊರೆಯುತ್ತದೆ.

11. ಆರೋಗ್ಯಕಾರಿ ಊಟವನ್ನು ತಯಾರಿಸಿ
ನಿಮ್ಮ ಮನೆಯ ಅಡುಗೆ ಕೆಲಸದಾಳಿಗೆ ರಜೆ ನೀಡಿ. ಬದಲಿಗೆ ನೀವೆ ಒಂದು ಉತ್ತಮ ಪೋಷಕಾಂಶವಿರುವ ಊಟವನ್ನು ತಯಾರಿಸಿ.

12. ನೃತ್ಯ ಮಾಡುವ ವರ್ಕ್ ಔಟ್‍ಗಳನ್ನು ಪ್ರಯತ್ನಿಸಿ
ಜಿಮ್‍ಗೆ ಹೋಗಿ ದೇಹವನ್ನು ದಂಡಿಸುವುದು ನಿಮಗೆ ಇಷ್ಟವಿಲ್ಲವೇ? ಹಾಗಾದರೆ ಜಡವಾಗಿರುವ ಜೀವನಶೈಲಿಗೆ ಸೃಜನ ಶೀಲತೆಯ ಸ್ಪರ್ಶ ನೀಡಿ. ಫಿಟ್‍ನೆಸ್ ಬಗ್ಗೆ ಇರುವ ಕೆಲವು ಡಿವಿಡಿಗಳನ್ನು ತೆಗೆದುಕೊಳ್ಳಿ ಅಥವಾ ಯೂ ಟ್ಯೂಬ್‍ಗೆ ಲಾಗ್ ಆನ್ ಆಗಿ. ಆರೋಗ್ಯವಾಗಿ ಮತ್ತು ಸದೃಢವಾಗಿರಲು ನೆರವಾಗುವ ಡಾನ್ಸ್ ವರ್ಕ್ ಔಟ್‍ಗಳನ್ನು ನೋಡಿ, ಅದನ್ನು ನೀವು ಮಾಡಿ.

13.ನಿಮ್ಮ ಬಟ್ಟೆಗಳನ್ನು ಒಗೆದು ಹಾಕಿ
ನಿಮಗೆ ಸಮಯಾವಕಾಶವಿದ್ದರೆ, ಅವುಗಳನ್ನು ನೀವೆ ಒಗೆದುಹಾಕಿ. ವಾಷಿಂಗ್ ಮೆಷಿನ್‍ಗೆ ಹಾಕಬೇಡಿ. ಬಟ್ಟೆ ಒಗೆಯುವುದು ಕ್ಯಾಲೋರಿಗಳನ್ನು ಕರಗಿಸುವ ಅತ್ಯುತ್ತಮ ದೈಹಿಕ ಚಟುವಟಿಕೆಯಾಗಿರುತ್ತದೆ.

14. ಚಾರಣಕ್ಕೆ ಹೋಗಿ ಬನ್ನಿ
ದೈಹಿಕ ವ್ಯಾಯಾಮಕ್ಕೆ ಚಾರಣವು ಅತ್ಯುತ್ತಮವಾದ ಚಟುವಟಿಕೆಯಾಗಿರುತ್ತದೆ. ಇದರಿಂದ ವಿಶ್ರಾಂತಿ ಮತ್ತು ಮನಸ್ಸಿಗೆ ಮುದ ಸಹ ದೊರೆಯುತ್ತದೆ.

15. ನಿಮ್ಮ ಸಂಗಾತಿಗೆ ಮಸಾಜ್ ಮಾಡಿ
ನಿಮ್ಮ ಸಂಗಾತಿಗೆ ಮುದ ಮತ್ತು ಪುನಃಶ್ಚೇತನ ಒದಗಿಸುವ ಅತ್ಯುತ್ತಮ ಮಾರ್ಗ ಮಸಾಜ್. ಸಾಧ್ಯವಾದರೆ ನಿಮ್ಮ ಸಂಗಾತಿಗೆ ಒಂದು ಒಳ್ಳೆಯ ಫುಲ್ ಬಾಡಿ ಮಸಾಜ್ ಮಾಡಿ. ಇದರಿಂದ ಅವರು ಉಲ್ಲಾಸಗೊಳ್ಳುತ್ತಾರೆ. ಜೊತೆಗೆ ನಿಮ್ಮ ಕೈಗಳಿಗೆ ಉತ್ತಮ ವ್ಯಾಯಾಮ ದೊರೆಯುತ್ತದೆ.

18. ಚೆನ್ನಾಗಿ ನೀರು ಸೇವಿಸಿ
ಚೆನ್ನಾಗಿ ನೀರನ್ನು ಸೇವಿಸುವುದರಿಂದ ನಿಮ್ಮ ಮೂತ್ರಾ ಪಿಂಡಗಳಿಗೆ ಉತ್ತಮ ವ್ಯಾಯಾಮ ದೊರೆಯುತ್ತದೆ. ಆಗಾಗ ಎದ್ದು, ಮೂತ್ರ ವಿಸರ್ಜನೆಗೆ ಹೋಗುವುದರಿಂದ ಸಹ ನಿಮ್ಮ ಜಡತ್ವವನ್ನು ತೊಲಗಿಸಬಹುದು.

17. ನಿಮ್ಮ ಕಾರನ್ನು ದೂರದಲ್ಲಿ ಪಾರ್ಕ್ ಮಾಡಿ
ನೀವು ಹೋಗಬೇಕಾದ ಜಾಗಕ್ಕೆ ಬೇರೆ ಯಾವುದೇ ವಾಹನ ವ್ಯವಸ್ಥೆ ಇಲ್ಲವಾದರೆ, ಕಾರಿನಲ್ಲಿ ಹೋಗಿ. ಆದರೆ ಅದನ್ನು ಆದಷ್ಟು ದೂರದಲ್ಲಿ ಪಾರ್ಕ್ ಮಾಡಿ ನಡೆದುಕೊಂಡು ಹೋಗಿ. ಇದರಿಂದ ಕಾಲುಗಳಿಗೆ ಅಗತ್ಯ ವ್ಯಾಯಾಮ ದೊರೆಯುತ್ತದೆ.

18. ಫಿಟ್‍ನೆಸ್ ತರಗತಿಗಳಿಗೆ ಸೇರಿಕೊಳ್ಳಿ
ನಿಮ್ಮ ಮನಸ್ಸು ಮತ್ತು ದೇಹಕ್ಕೆ ಒಳ್ಳೆಯದಾಗುತ್ತದೆಯೆಂದಾದಲ್ಲಿ ಏನಾದರು ಒಂದು ಹೊಸತನ್ನು ಪ್ರಾರಂಭಿಸಿ. ಬಿಡುವಿದ್ದಾಗ ಝುಂಬಾ, ಯೋಗ ಅಥವಾ ಇನ್ನಿತರ ನೃತ್ಯ ತರಗತಿಗಳಂತಹ ಫಿಟ್‍ನೆಸ್ ತರಗತಿಗಳಿಗೆ ಸೇರಿಕೊಳ್ಳಿ. ಹೊಸ ಕೌಶಲ್ಯವನ್ನು ಕಲಿತಂತೆಯು ಆಗುತ್ತದೆ. ದೇಹಕ್ಕೆ ವ್ಯಾಯಾಮವು ದೊರೆಯುತ್ತದೆ.

19. ಮನೆ ಸಾಮಾನು ಖರೀದಿಸಲು ನೀವೇ ಹೋಗಿ
ಮನೆಗೆ ತಂದು ನೀಡುವ ಹೋಮ್ ಡೆಲಿವರಿಗಳನ್ನು ಬಿಟ್ಟು ಬಿಡಿ. ಬದಲಿಗೆ ನೀವೇ ನಿಮ್ಮ ಮನೆಗೆ ಅಗತ್ಯವಾದ ಸಾಮಾನುಗಳನ್ನು ತರಲು ಮಾರ್ಕೆಟಿಗೆ ಹೋಗಿ. ಇದರಿಂದಾಗಿ ನಡೆಯುವುದು, ಭಾರ ಹೊರುವುದು ಮುಂತಾದ ಚಟುವಟಿಕೆಗಳಿಂದಾಗಿ ನಿಮ್ಮ ದೇಹಕ್ಕೆ ಸ್ವಲ್ಪ ವ್ಯಾಯಾಮವು ದೊರೆಯುತ್ತದೆ. ನಿಮ್ಮ ಮನೆಗ್ ಉತ್ತಮವಾದ ವಸ್ತುಗಳು ದೊರೆಯುತ್ತವೆ.

16. ನಡೆಯಿರಿ ಮತ್ತು ಮಾತನಾಡಿ
ನಿಮ್ಮ ಸ್ನೇಹಿತರ ಜೊತೆ ಹರಟೆ ಹೊಡೆಯುವುದಿರಲಿ ಅಥವಾ ಯಾವುದಾದರು ಒಂದು ಫೋನ್ ಬರಲಿ. ಮಾತನಾಡುತ್ತ ಸ್ವಲ್ಪ ದೂರ ನಡೆಯಿರಿ,ಇದರಿಂದ ಸಹ ನಿಮಗೆ ವ್ಯಾಯಾಮ ದೊರೆಯುತ್ತದೆ.



Click it and Unblock the Notifications











