Latest Updates
-
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ!
ಹೆಂಗಸರ ಕಾಫಿ ಟೈಂ ಚರ್ಚೆಯ ವಿಷಯಗಳು
ಹೆಂಗಸರೆಂದರೆ ವಿಚಿತ್ರವಾದ, ವಿಲಕ್ಷಣವಾದ ಮತ್ತು ವಿಶೇಷವಾದ ಗುಣಗಳನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ಅದು ಅವರ ವೇಷದಲ್ಲಾಗಿರಬಹುದು, ವರ್ತನೆಯಲ್ಲಾಗಿರಬಹುದು ಅಥವಾ ದೈನಂದಿನ ಸಂಗತಿಗಳಾಗಿರಬಹುದು. ಎಲ್ಲದಕ್ಕು ಅವರ ಅಭಿರುಚಿ ಮತ್ತು ಭಾವನೆಗಳ ಬೆಸುಗೆಯನ್ನು ಅವರು ಹಾಕಿರುತ್ತಾರೆ. ಗಂಡಸರು ರಾಜಕೀಯ, ಕ್ರೀಡೆ ಮತ್ತು ಹೆಂಗಸರ ಜೊತೆ ಕಾಲ ಕಳೆಯುವ ವಿಚಾರಗಳಿಗೆ ಒತ್ತು ನೀಡಿದರೆ, ಹೆಂಗಸರು ಬೇರೆ ಬೇರೆ ವಿಚಾರಗಳಿಗೆ ಒತ್ತು ನೀಡಿ ಅವುಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಹೆಂಗಸರು ಕಾಫಿ ಕುಡಿಯುವಾಗ ಅಥವಾ ಕೆಲಸ ಮಾಡುವಾಗ ಗಾಸಿಫ್‍ಗಳಿಗೆ ಹೆಚ್ಚಿನ ಆಧ್ಯತೆ ನೀಡುತ್ತಾರೆ. ಅವರ ಚರ್ಚಾ ವಿಷಯದ ವಸ್ತು ಗುಂಡು ಸೂಜಿಯಿಂದ ಹಿಡಿದು ಮಂಗಳ ಯಾತ್ರೆಯವರೆಗೆ ಹರಡಿಕೊಂಡಿರುತ್ತದೆ. ಇಷ್ಟಕ್ಕೂ ಹೆಂಗಸರು ಕಾಫಿ ಕುಡಿಯುತ್ತ ಯಾವ ವಿಚಾರದ ಬಗ್ಗೆ ಮಾತನಾಡುತ್ತಾರೆ? ಎಂದು ಕೇಳಿ ನೋಡಿ!, ಅವರು ಮಾತನಾಡದಿರುವ ವಿಚಾರ ಜಗತ್ತಿನಲ್ಲೇ ಇಲ್ಲ! ಎಂಬ ವಿಚಾರ ತಿಳಿಯುತ್ತೆ. ಇನ್ನು ನಿಮಗೂ ಗೊತ್ತಿರದ ಪ್ರಪಂಚದ ಸೂಕ್ಷ್ಮಗಳು ನಿಮಗೆ ಅವರ ಮಾತಿನಿಂದ ಗೊತ್ತಾಗುತ್ತದೆ.
ಕೆಲವೊಮ್ಮೆ ಹೆಂಗಸರು ಯಾವ ವಿಚಾರದ ಕುರಿತಾಗಿ ಮಾತನಾಡುತ್ತಿದ್ದಾರೆ ಎಂಬ ಅಂಶ ತಿಳಿದುಕೊಳ್ಳಲು ಕಷ್ಟವಾಗುತ್ತದೆ. ಇದಕ್ಕೆ ಸೂಕ್ತವಾದ ಉತ್ತರ ಸ್ವತಃ ಅವರು ನೀಡಲೂ ಸಾಧ್ಯವಾಗುವುದಿಲ್ಲ ಒಮ್ಮೊಮ್ಮೆ!. ಈ ವಿಚಾರದಲ್ಲಿ ಪ್ರತಿ ಹೆಂಗಸು ಭಿನ್ನಾತಿಭಿನ್ನ. ಕೆಲವರಿಗೆ ರಾಜಕೀಯ ಇಷ್ಟ, ಇನ್ನು ಕೆಲವರಿಗೆ ಅದು ಇಷ್ಟವಿಲ್ಲ. ಕೆಲವು ಹೆಂಗಸರಿಗೆ ಫ್ಯಾಶನ್ ಎಂದರೆ ಇಷ್ಟ, ಇನ್ನು ಕೆಲವರಿಗೆ ಮತ್ತೊಂದು ಎಂದರೆ ಇಷ್ಟ. ಹೀಗೆ ಅವರು ಒಬ್ಬರಿಗಿಂತ ಒಬ್ಬರು ಭಿನ್ನ. ಏನೇ ಇರಲಿ ಅವರ ನೆಚ್ಚಿನ ವಿಷಯದಲ್ಲಿ ಅವರು ಪರಿಪೂರ್ಣತೆಯನ್ನು ಸಾಧಿಸಿರುತ್ತಾರೆ. ಹೀಗೆ ಹೆಂಗಸರು ಲೋಕಾಭಿರಾಮವಾಗಿ ಕಾಫಿ ಕುಡಿಯಲು ಕುಳಿತರೆ ರಾಜಕೀಯ, ಧಾರ್ಮಿಕ, ಫ್ಯಾಶನ್, ಸೆಲೆಬ್ರಿಟಿ ಗಾಸಿಫ್, ಇತಿಹಾಸ, ಸಿನಿಮಾ, ಪುಸ್ತಕ ಮತ್ತು ಇತ್ಯಾದಿ ವಿಷಯಗಳ ಬಗೆಗೆ ಕುಳಿತು ಹರಟುತ್ತಾರೆ. ಇವರ ಹರಟೆಯ ರುಚಿಯನ್ನು ಬಲ್ಲವನೆ ಬಲ್ಲ. ಅಷ್ಟು ರಸವತ್ತಾಗಿರುತ್ತದೆ ಈ ಹರಟೆ. ಇದರಿಂದ ಕೆಲವು ಮಂದ ಬುದ್ಧಿಯ ಗಂಡಸರಿಗೆ ಙ್ಞಾನೋದಯವಾಗುತ್ತದೆ. ಇಲ್ಲಿ ನಾವು ಹೆಂಗಸರು ಹರಟುವ ಕೆಲವು ವಿಚಾರಗಳನ್ನು ಪಟ್ಟಿ ಮಾಡಿದ್ದೇವೆ ಓದಿ ತಿಳಿದುಕೊಳ್ಳಿ.

ಚಿತ್ರಕಥೆ - ಸಂಭಾಷಣೆಯ ಅಗತ್ಯತೆಯೆ ಇಲ್ಲ
ಒಂದು ಹೆಂಗಸಿನ ಜೊತೆಗೆ ಕುಳಿತು ಕಾಫಿ ಕುಡಿಯುತ್ತ ಆಕೆಯನ್ನು ಒಲಿಸಿಕೊಳ್ಳುವ ಆಲೋಚನೆ ನಿಮಗಿದೆಯೇ? ಹಾಗಾದರೆ ಆ ದೃಶ್ಯಕ್ಕೆ ಚಿತ್ರಕತೆ - ಸಂಭಾಷಣೆಯನ್ನು ಬರೆಯಬೇಡಿ. ಅದು ಉಪಯೋಗಕ್ಕೆ ಬರುವುದಿಲ್ಲ. ಒಂದು ವೇಳೆ ಏನು ಮಾತನಾಡಬೇಕು ಎಂದು ಯೋಜನೆ ಹಾಕಿಕೊಂಡರು ಅದು ಪ್ರಯೋಜನಕ್ಕೆ ಬರುವುದಿಲ್ಲ. ಹಾಗಾಗಿ ಮಾತು ಆರಂಭಿಸಿ ಅದರ ಪಾಡಿಗೆ ಅದನ್ನು ಬಿಟ್ಟು ಬಿಡಿ. ಹೆಂಗಸರ ಮಾತು ನಿಮಗೆ ದಾರಿ ತೋರಿಸುತ್ತ ಸಾಗುತ್ತದೆ.

ಸಿನಿಮಾ
ಹೆಂಗಸರಿಗೆ ಕಾಫಿ ಸಮಯದಲ್ಲಿ ಮಾತನಾಡಲು ದೊರೆಯುವ ಅತ್ಯುತ್ತಮ ವಿಚಾರ ಸಿನಿಮಾ. ಈಕೆ ಯಾವಾಗಲು ಸಿನಿಮಾದಲ್ಲಿನ ನಟಿಯರ ಕುರಿತಾಗಿ ಅವರ ವೇಷ ಭೂಷಣದ ಕುರಿತಾಗಿ ಮಾತನಾಡಲು ಉತ್ಸುಕತೆಯನ್ನು ತೋರುತ್ತಾರೆ. ಜೊತೆಗೆ ಆಕೆಯ ಬಗ್ಗೆ ವಿಮರ್ಶೆಯನ್ನು ಸಹ ಮಾಡುತ್ತಾರೆ. ಅಷ್ಟೇ ಅಲ್ಲ ಕಡೆಗೆ ಆಕೆಯು ತನಗಿಷ್ಟವಾದ ಚಿತ್ರದ ನಾಯಕನ ಬಗ್ಗೆ ಒಂದು ನಾಲ್ಕು ಮಾತನಾಡದೆ ಮುಗಿಸುವುದಿಲ್ಲ!. ಇನ್ನೇಕೆ ತಡ ಕಾಫಿ ಕೈಗೆತ್ತಿಕೊಂಡು ಒಂದು ಸಿನಿಮಾದ ಹೆಸರು ಹೇಳಿ ಸಾಕು.

ಪ್ರೀತಿ ಪ್ರೇಮ
ಪ್ರೀತಿ ಪ್ರೇಮದ ಬಗ್ಗೆ ಮಾತನಾಡದೆ ಕಾಫಿ ಕುಡಿದರೆ ಆ ಕಾಫಿ ಮತ್ತು ಅಂದಿನ ಚರ್ಚೆ ಅಪೂರ್ಣವಾಗುತ್ತದೆ. ಅದು ಸಾರ್ವಜನಿಕವಾಗಿಲ್ಲದಿದ್ದರು, ವೈಯುಕ್ತಿಕವಾಗಿ ಆಕೆಗೆ ಖುಷಿಕೊಡುವ ವಿಷಯ ಇದೇ. ಇಬ್ಬರು ಹೆಂಗಸರು ತುಂಬಾ ಗಂಭೀರವಾಗಿ ಒಂದು ವಿಚಾರವನ್ನು ಮಾತನಾಡುತ್ತಿದ್ದಾರೆ ಎಂದರೆ ಅದು ಪ್ರೀತಿ ಪ್ರೇಮದ ವಿಷಯ ಎಂದು ಬಿಡಿಸಿ ಹೇಳಬೇಕಾಗಿಲ್ಲ. ಬಿಡಿ ಆ ಹೆಂಗಸರು ಮಾತನಾಡಲಿ, ಅವರಿಗೆ ತೊಂದರೆ ಮಾಡಬೇಡಿ.

ಪ್ರವಾಸ ಮತ್ತು ಬಿಡುವಿನ ಕಾಲ
ಕೆಲವು ಹೆಂಗಸರಿಗೆ ಪ್ರವಾಸ ಎಂದರೆ ಭಾರೀ ಇಷ್ಟ. ಇನ್ನು ಕೆಲವರಿಗೆ ಅಯ್ಯೋ, ಬೇಡವೇ ಬೇಡ ಆ ವಿಚಾರ ಎಂಬಷ್ಟು ಕಷ್ಟ. ಅದರಲ್ಲು ನಿಮ್ಮ ಪ್ರಿಯತಮೆಯೊಂದಿಗೆ ಬಿಡುವಿನ ಕಾಲವನ್ನು ಕಳೆಯಲು ಯೋಜನೆ ಹಾಕಿಕೊಳ್ಳುತ್ತಿದ್ದೀರಿ ಎಂದರೆ ಮೊದಲು ಒಂದು ಕಪ್ ಕಾಫಿ ಕೈಗೆತ್ತಿಕೊಳ್ಳಿ. ಆಗ ಆಕೆಯೇ ನಿಮ್ಮೊಂದಿಗೆ ತನ್ನ ಇಷ್ಟ ಕಷ್ಟಗಳನ್ನು ಹೇಳುತ್ತ ಸಾಗುತ್ತಾಳೆ. ಈ ಪ್ರವಾಸದಲ್ಲಿ ಆಕೆಗೆ ಬೇಕಾಗಿರುವುದು ಮತ್ತು ಬೇಡವಾಗಿರುವುದು ಎಲ್ಲವನ್ನು ಕಾಫಿಯೊಂದಿಗೆ ಹೇಳಿ ಮುಗಿಸುತ್ತಾಳೆ. ಹೆಂಡತಿಯೊಂದಿಗೆ ಮಧುಚಂದ್ರದ ಸವಿ ಸವಿಯುವ ಮೊದಲು ಒಂದು ಕಾಫಿ ಸವಿಯಿರಿ.

ಕನಸುಗಳು
ಕನಸುಗಳಿಲ್ಲದ ಹೆಂಗಸರು ಇರಲು ಸಾಧ್ಯವೇ? ಅಸಾಧ್ಯ!! ಪ್ರತಿ ಹೆಂಗಸು ಕೆಲವೊಂದು ಕನಸುಗಳನ್ನು ಇಟ್ಟು ಕೊಂಡಿರುತ್ತಾಳೆ. ಕೊನೆ ಪಕ್ಷ ರಾತ್ರಿಯಲ್ಲಾದರು ನಿದ್ದೆಯಲ್ಲಿ ಕೆಲವು ಕನಸು ಕಾಣುತ್ತಾರೆ. ಕಾಫಿ ಕುಡಿಯುತ್ತ ಕೆಲವು ಹೆಂಗಸರು ತಮ್ಮ ಕನಸುಗಳನ್ನು ಹಂಚಿಕೊಳ್ಳುತ್ತಾರೆ. ಅದು ಕೆಟ್ಟದ್ದೊ, ಒಳ್ಳೆಯದೊ ಒಟ್ಟಿನಲ್ಲಿ ಕಾಫಿ ಕೈಗೆ ಬಂದಾಗ ಕನಸು ನಾಲಿಗೆಯ ಮೇಲೆ ಬರುತ್ತದೆ.

ಹವ್ಯಾಸಗಳು
ಕಾಫಿ ಕುಡಿಯುವಾಗ ಬಹುತೇಕ ಹೆಂಗಸರು ತಮ್ಮ ತಮ್ಮ ಹವ್ಯಾಸಗಳ ಕುರಿತಾಗಿ ಮಾತನಾಡಲು ಬಯಸುತ್ತಾರೆ. ಹೆಂಗಸರು ವಿಭಿನ್ನತೆಯನ್ನು ಬಯಸುವ ವ್ಯಕ್ತಿತ್ವದವರಾದರು ಸರಿ ಒಂದೇ ಹವ್ಯಾಸವನ್ನು ಹೊಂದಿದ್ದರೆ ಸಾಕು ಅದರ ಬಗ್ಗೆ ಕಾಫಿ ಮುಗಿದ ಮೇಲೂ ಮಾತನಾಡುತ್ತಲೆ ಇರುತ್ತಾರೆ. ಕೆಲವೊಮ್ಮೆ ಇದೇ ಹವ್ಯಾಸವನ್ನು ಮುಂದಿಟ್ಟುಕೊಂಡು ಅವರು ವ್ಯವಹಾರವನ್ನು ಸಹ ಕುದುರಿಸುತ್ತಾರೆ. ಅದು ಅವರ ಶಕ್ತಿ.

ಸ್ನೇಹಿತರು
ಕಾಫಿ ಕುಡಿಯುವಾಗ ಹೆಂಗಸಿಗೆ ಸ್ನೇಹಿತರು ನೆನಪಿಗೆ ಬರಲಿಲ್ಲವಾದರೆ ಹೇಗೆ ? ಹೆಂಗಸರಿಗೆ ಕಾಫಿ ಕುಡಿಯುವಾಗ ತಮ್ಮ ಬಾಯ್ ಫ್ರೆಂಡ್‍ಗಳು ಸಹ ನೆನಪಿಗು ಬರಬಹುದು.ಕೆಲವೊಮ್ಮೆ ಅವರ ನೆಚ್ಚಿನ ಸ್ನೇಹಿತರು ನೆನಪಿಗೆ ಬರಬಹುದು, ಇನ್ನು ಕೆಲವೊಮ್ಮೆ ಕೇವಲ ಗಾಸಿಫ್‍ಗಾಗಿ ಮಾತ್ರ ಗಂಡಸಿನ ಬಗ್ಗೆ ಮಾತನಾಡುತ್ತಾರೆ. ಇನ್ನು ಕೆಲವೊಮ್ಮೆ ಇದು ಅಂತ್ಯವಿಲ್ಲದೆ ಹೋಗಿ ಬಿಡುತ್ತದೆ.



Click it and Unblock the Notifications











