Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಈ 7 ಕಾರ್ಯಗಳನ್ನು ಬ್ರಿಟಿಷ್ ರಾಯಲ್ಸ್ ಮಾಡುವಂತಿಲ್ಲ!
ಸೆಲೆಬ್ರಿಟಿಗಳಾಗುವ ಬದಲು ಸಾಮಾನ್ಯ ಜನರಂತೆ ಬದುಕುವವರೆ ನಿಜವಾಗಲೂ ಸುಖಿಗಳು ಎಂದು ಎಷ್ಟೋ ಬಾರಿ ನನಗೆ ಅನಿಸಿದಿಂಟು. ಕೈಗೆ ಸಿಗದ ದ್ರಾಕ್ಷಿ ಹುಳಿ ಅಂತ ನಿಮಗೆ ನನ್ನ ಬಗೆ ಅಂದುಕೊಂಡರೂ ಚಿಂತೆಯಿಲ್ಲ. ನನಗೆ ಅನಿಸದ್ದನ್ನು ಹೇಳಿದೆ ಅಷ್ಟೆ.
ಸೆಲೆಬ್ರಿಟಿಗಳಿಗೆ ತುಂಬಾ ನಿರ್ಬಂಧನೆಗಳಿರುತ್ತವೆ. ಅವರು ಇಡುವ ಪ್ರತಿಯೊಂದು ಹೆಜ್ಜೆ, ಮಾತನಾಡುವ ಪ್ರತಿಯೊಂದು ಮಾತು ಪ್ರಮುಖವಾಗಿರುತ್ತದೆ. ಅವರಿಗೆ ನಮ್ಮಂತೆ ರೋಡ್ ನಲ್ಲಿ ಫ್ರೀಯಾಗಿ ನಡೆದಾಡಲು ಸಾಧ್ಯವೇ? ಅವರು ಕಾಣಿಸಿಕೊಂಡರೆ ಸಾಕು ಜನ ಮುತ್ತುವರೆದು ಬಿಡುತ್ತಾರೆ.
ಬ್ರಿಟನ್ ನ ರಾಜಮನೆತನದ ಬಗ್ಗೆ ಅನೇಕ ಸುದ್ಧಿಗಳನ್ನು ನೀವು ಕೇಳಿರಬಹುದು. ಅವರಿಗೆ ತಮ್ಮದೇ ಆದ ನಿಯಮಗಳಿವೆ, ಆ ನಿಮಯಗಳು ಜನ ಸಾಮಾನ್ಯರಿಗೆ ಅನ್ವಹಿಸುವುದಿಲ್ಲ. ಆ ನಿಯಮಗಳಲ್ಲೊಂದು ಅವರು ರೋಡ್ ನಲ್ಲಿ ನಡೆಯುವಂತಿಲ್ಲ! ನಾವು ಮಾಡುವಂತಹ ಕೆಲವು ಸರಳ ವಿಷಯಗಳನ್ನು ಅವರಿಗೆ ಮಾಡಲು ಸಾಧ್ಯವಿಲ್ಲ. ನಾವು ಮಾಡುವಂತಹ ಯಾವುದೆಲ್ಲ ಕಾರ್ಯಗಳನ್ನು ಅವರು ಮಾಡುವಂತಿಲ್ಲ ಎಂದು ನೋಡೋಣ ಬನ್ನಿ:

ನಿಕ್ ನೇಮ್ ಇಲ್ಲ: ಬ್ರಿಟನ್ ರಾಜಮನೆತನದವರಿಗೆ ತಮ್ಮದೇ ಆದ ಬಿರುದು ಇದೆ, ಅದಲ್ಲದೆ ಅವರನ್ನು ಯಾವುದೇ ಅಡ್ಡ ಹೆಸರಿನಿಂದ ಕರೆಯುವಂತಿಲ್ಲ.
ರಾಣಿ ತಿನ್ನುವುದು ನಿಲ್ಲಿಸಿದ ನಂತರ ತಿನ್ನುವಂತಿಲ್ಲ: ಡೈನಿಂಗ್ ಟೇಬಲ್ ನಲ್ಲಿ ಕುಳಿತು ಊಟ ಮಾಡುವಾಗ ರಾಣಿ ತಿನ್ನುವುದನ್ನು ನಿಲ್ಲಿಸಿದ ನಂತರ ಯಾರೂ ತಿನ್ನುವಂತಿಲ್ಲ. ಈ ನಿಯಮವನ್ನು ತುಂಬಾ ಶಿಸ್ತಿನಿಂದ ಪಾಲಿಸುತ್ತಾರೆ.
ನೋ ಪೋಸ್: ಮಾಧ್ಯಮದವರು ಇಂಗ್ಲೇಂಡ್ ರಾಣಿಯ ಫೋಟೊವನ್ನು ತೆಗೆಯಬಹುದು. ಆದರೆ ಅವರು ಯಾವುದೇ ಫೋಟೊಕ್ಕೆ ಫೋಸ್ ಕೊಡುವಂತಿಲ್ಲ.
ನೋ ಆಟೋಗ್ರಾಫ್: ಸೆಲೆಬ್ರಿಟಿಗಳು ಆಟೋಗ್ರಾಫ್ ಕೊಡುವುದು, ಬಿಡುವುದು ಅವರ ವೈಯಕ್ತಿಕ ವಿಷಯ. ಆದರೆ ರಾಜಮನೆತನಕ್ಕೆ ಸೇರಿದವರು ಯಾರೂ ಆಟೋಗ್ರಾಫ್ ಕೊಡುವಂತಿಲ್ಲ. ಇವರ ಸಹಿಯನ್ನು ಯಾರೂ ನಕಲಿ ಮಾಡದಿರಲು ಈ ನಿಯಮವನ್ನು ಪಾಲಿಸಲಾಗುತ್ತಿದೆ.
ಸ್ವಾರ್ಥಿಗಳಾಗಬಾರದು: ಯಾವುದೇ ವಿಷಯದಲ್ಲೂ ರಾಜಮನೆತನದವರು ಸ್ವಾರ್ಥಿಗಳಂತೆ ವರ್ತಿಸಬಾರದು ಎಂಬ ನಿಯಮವಿದೆ.
ಮತದಾನದ ಹಕ್ಕು: ಇಂಗ್ಲೇಂಡ್ ನ ಪ್ರತಿಯೊಬ್ಬ ಪ್ರಜೆಗೂ ಮತನಾದ ಹಕ್ಕು ಇದೆ. ಆದರೆ ಈ ರಾಜ ಮನೆತನಕ್ಕೆ ಸೇರಿದವರು ಓಟು ಹಾಕುವಂತಿಲ್ಲ.
ದಾರಿಯಲ್ಲಿ ನಡೆಯುವಂತೆ ಇಲ್ಲ: ದಾರಿಯಲ್ಲಿ ನಡೆಯುತ್ತಾ, ಐಸ್ ಕ್ರೀಮ್ ತಿನ್ನುತ್ತಾ ಸಂತೋಷ ಪಡಲು ಇಂಗ್ಲೇಂಡ್ ನ ರಾಜಮನೆತನದವರಿಗೆ ಸಾಧ್ಯವಿಲ್ಲ.



Click it and Unblock the Notifications
