ಸಾಮಾಜಿಕ ಜಾಲತಾಣಗಳು ಕಲಿಸುವ ವಿಷಯಗಳು

By Hemanth Amin

ಸಾಮಾಜಿಕ ಜಾಲತಾಣಗಳ ಬಳಕೆ ಇಂದಿನ ದಿನಗಳಲ್ಲಿ ಗಣನೀಯವಾಗಿ ಹೆಚ್ಚಾಗುತ್ತಿದೆ. ಸಾಮಾಜಿಕ ಜಾಲತಾಣಗಳೆಂದರೆ ಹೊಸ ಜನರನ್ನು ಭೇಟಿಯಾಗುವುದು ಮತ್ತು ಇಂಟರ್ನೆಟ್ ನಲ್ಲಿ ಮಾಹಿತಿಗಳನ್ನು ಹಂಚಿಕೊಳ್ಳುವುದು. ಕೆಲವೊಂದು ವೆಬ್ ಸೈಟ್ ಗಳು ಸಾಮಾಜಿಕ ಜಾಲತಾಣಗಳಿಗಾಗಿಯೇ ನಿರ್ಮಿಸಲಾಗಿದೆ ಮತ್ತು ಇದು ವಿಶ್ವದೆಲ್ಲೆಡೆಯ ಜನರನ್ನು ಸಂಪರ್ಕಿಸುತ್ತದೆ. ಇಂತಹ ಕೆಲವೊಂದು ವೆಬ್ ಸೈಟ್ ಗಳಲ್ಲಿ ಫೇಸ್ ಬುಕ್, ಟ್ವಿಟ್ಟರ್, ಲಿಂಕ್ಡ್ಇನ್ ಇತ್ಯಾದಿ. ಈ ಸೈಟ್ ಗಳಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ, ಫೋಟೊಗಳು, ವೀಡಿಯೋ ಮತ್ತು ಯೋಚನೆಗಳನ್ನು ಹಂಚಿಕೊಳ್ಳಲು ಸುರಕ್ಷಿತ ವಿಧಾನಗಳಿವೆ.

ಸಾಮಾಜಿಕ ಜಾಲತಾಣಗಳು ಅನೇಕ ವಿಧಗಳಲ್ಲಿ ಒಂದು ವರವಿದ್ದಂತೆ. ಇದು ವಿಶ್ವದೆಲ್ಲೆಡೆಯ ಜನರನ್ನು ಒಗ್ಗೂಡಿಸಲು ನೆರವಾಗಿದೆ. ಇದು ವಿಶ್ವದ ವ್ಯವಹಾರ, ವಿವಿಧ ಧರ್ಮ ಮತ್ತು ಸಮುದಾಯದ ಜನರ ನಡುವಿನಲ್ಲಿ ಏಕತೆ ಮತ್ತು ವೈಯಕ್ತಿಕವಾಗಿ ಸಂವಹನ ಸಮಸ್ಯೆ ಕಡಿಮೆಮಾಡಿದೆ. ಪ್ರತಿಯೊಂದು ವಿಷಯಗಳಲ್ಲಿ ಒಳ್ಳೆಯದ್ದು ಎನ್ನುವುದು ಇದ್ದಂತೆ ಕೆಟ್ಟದ್ದು ಕೂಡ ಇರುತ್ತದೆ. ಹಾಗೆ ಸಾಮಾಜಿಕ ಜಾಲತಾಣಗಳಲ್ಲೂ. ಆದರೆ ಪ್ರತೀ ನಾಣ್ಯಕ್ಕೂ ಎರಡು ಮುಖಗಳಿರುತ್ತದೆ.

Things social networking sites teach us

ಸಾಮಾಜಿಕ ಜಾಲತಾಣಗಳು ಹಲವಾರು ವಿಷಯಗಳನ್ನು ಕಲಿಸುತ್ತದೆ. ನಮಗೆ ಹಲವಾರು ವಿಷಯಗಳ ಅನುಭವವಾಗುತ್ತದೆ. ಇದರಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಇರುತ್ತದೆ. ಸಾಮಾಜಿಕ ಜಾಲತಾಣಗಳು ಕಲಿಸುವ ಕೆಲವೊಂದು ವಿಷಯಗಳನ್ನು ಇಲ್ಲಿ ಚರ್ಚಿಸಲಾಗಿದೆ.

1. ಸತ್ಯ ಹೇಳಿ
ಸಾಮಾಜಿಕ ಜಾಲತಾಣಗಳು ನಾವು ಸತ್ಯ ಹೇಳಬೇಕೆಂದು ಬಯಸುತ್ತದೆ. ಸುಳ್ಳು ಯಾವತ್ತೂ ನಿಲ್ಲುವುದಿಲ್ಲ, ಸುಳ್ಳು ಹೇಳುವವರಿಗೆ ಮತ್ತು ಸುಳ್ಳಿಗೆ ಯಾರು ಮರುಳಾಗುವುದಿಲ್ಲ. ಲಘುವಾಗಿ ಪರಿಗಣಿಸಿದರೆ ಮತ್ತು ಹೆಚ್ಚು ತೊಡಗಿಸಿಕೊಳ್ಳದಿದ್ದರೆ ಈ ಸೈಟ್ ಗಳು ತುಂಬಾ ಮೋಜು ಕೊಡುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ನೀವು ಭೇಟಿಯಾಗುವ ಹೊಸ ಜನರಲ್ಲಿ ಸತ್ಯ ಹೇಳಿ ಮತ್ತು ಪ್ರಾಮಾಣಿಕವಾಗಿರಿ.

2. ಎಲ್ಲೂ, ಎಲ್ಲೆಲ್ಲೂ ಹೊಸ ಗೆಳೆಯರೇ
ಪ್ರತಿಯೊಂದು ಸಾಮಾಜಿಕ ಜಾಲತಾಣಗಳು ಬೇರೇನೂ ಅಲ್ಲದೆ ವಿಶ್ವದ ಎಲ್ಲೆಡೆಯ ಜನರು ಭೇಟಿಯಾಗಿ ಮಾತನಾಡಬಹುದಾದ ಜಾಗ. ಯಾವುದೇ ಗಡಿಯ ಸಮಸ್ಯೆಯಿಲ್ಲದೆ ಹೊಸ ಗೆಳೆಯರು ಮತ್ತು ಹೊಸ ಸಂಬಂಧ ಬೆಳೆಸಬಹುದು. ಯಾವುದೇ ಸಂಬಂಧದಲ್ಲಿ ಗಡಿ ಮುಖ್ಯವಲ್ಲ ಎನ್ನುವುದು ಸಾಮಾಜಿಕ ಜಾಲತಾಣಗಳು ಕಲಿಸುವ ಮುಖ್ಯ ವಿಷಯ.

3. ಜಾಣ್ಮೆಯಿಂದ ಬಳಸಿ
ಸಾಮಾಜಿಕ ಜಾಲತಾಣವನ್ನು ತುಂಬಾ ಉಪಯುಕ್ತವಾಗಿ ಬಳಸಬಹುದು. ಪ್ರತಿಯೊಂದು ಫೀಚರ್ ಗಳನ್ನು ಸಂಪೂರ್ಣ ಮತ್ತು ಪರಿಣಾಮಕಾರಿಯಾಗಿ ಬಳಸಬಹುದು. ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ಪ್ರತಿಯೊಂದು ಅವಕಾಶವನ್ನು ಬಳಸಿಕೊಳ್ಳಬೇಕೆಂದು ಸಾಮಾಜಿಕ ಜಾಲತಾಣಗಳು ಹೇಳಿಕೊಡುತ್ತದೆ. ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ತಮ್ಮ ಉದ್ಯಮವನ್ನು ಅಭಿವೃದ್ಧಿಪಡಿಸಬಹುದು. ಪ್ರತಿಯೊಂದು ಉತ್ಪನ್ನ ಮತ್ತು ಸೇವೆಗಳನ್ನು ಸಾಮಾಜಿಕ ತಾಣಗಳಲ್ಲಿ ಮಾರುಕಟ್ಟೆ ಮಾಡಬಹುದು.

4. ಎಚ್ಚರವಾಗಿರಿ
ಸಾಮಾಜಿಕ ಜಾಲತಾಣಗಳು ಹಲವಾರು ಧನಾತ್ಮಕ ವಿಚಾರಗಳನ್ನು ಮತ್ತು ಯಾವುದೇ ರಾಷ್ಟ್ರವಾದರೂ ಎಲ್ಲಾ ಜನರಲ್ಲಿ ಏಕತೆಯನ್ನು ಉಂಟು ಮಾಡುತ್ತದೆ. ಅದೇ ರೀತಿ ಸಾಮಾಜಿಕ ಜಾಲತಾಣಗಳು ನಾವು ಭೇಟಿಯಾಗಿ ಮಾತನಾಡುವವರೊಂದಿಗೆ ನಮ್ಮನ್ನು ತುಂಬಾ ಜಾಗೃತರಾಗಿ ಮತ್ತು ಎಚ್ಚರಿಕೆಯಿಂದ ಇರಬೇಕೆಂದು ಕಲಿಸುತ್ತದೆ. ನೀವು ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡಲು ಪ್ರತಿಯೊಬ್ಬ ವ್ಯಕ್ತಿಯು ಒಳ್ಳೆಯ ಮತ್ತು ಸ್ನೇಹಿತನಾಗಿರಬೇಕೆಂದು ಅನಿವಾರ್ಯವಲ್ಲ. ಕೆಲವು ಕಿಡಿಗೇಡಿಗಳು ಇರಬಹುದು ಮತ್ತು ಇದರ ಬಗ್ಗೆ ಎಚ್ಚರಿಕೆ ವಹಿಸಬೇಕು. ನಾವು ಹೆಚ್ಚಿನ ವೈಯಕ್ತಿಕ ವಿಷಯ ಮತ್ತು ಫೋಟೊಗಳನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳಬಾರದು ಎನ್ನುವುದನ್ನು ಸಾಮಾಜಿಕ ಜಾಲತಾಣಗಳು ಕಲಿಸುತ್ತದೆ. ನಂಬಿಕೆ ಒಳ್ಳೆಯದು ಆದರೆ ಕುರುಡು ನಂಬಿಕೆ ಒಳ್ಳೆಯದಲ್ಲ.

5. ಮಿತಿಯೊಂದಿಗೆ ಮೋಜು ಮಾಡಿ
ಸಾಮಾಜಿಕ ಜಾಲತಾಣಗಳು ತುಂಬಾ ಮನರಂಜನೆ ಒದಗಿಸುತ್ತದೆ. ಇದು ಫೇಸ್ ಬುಕ್ ಅಥವಾ ವೃತ್ತಿಪರ ಸಾಮಾಜಿಕ ಜಾಲತಾಣಗಳಾಗಿರಬಹುದು. ಸಮಯ ಕಳೆಯಲು ಇದು ಒಳ್ಳೆಯ ವಿಧಾನ. ವೆಬ್ ನೊಂದಿಗೆ ಹೊಂದಿಕೊಂಡಿರುವುದು, ಜನಪ್ರಿಯವಾಗಿರುವುದು ತುಂಬಾ ಮನರಂಜನೆ ನೀಡುತ್ತದೆ. ಆದರೆ ಇದು ಬೇರೊಬ್ಬರ ಗೌಪ್ಯತೆಗೆ ತೊಂದರೆ ನೀಡುವ ಹಕ್ಕನ್ನು ನಿಮಗೆ ನೀಡುವುದಿಲ್ಲ. ಮೋಜಿನ ಮಿತಿ ದಾಟಿ ಒಬ್ಬರ ಫೋಟೊ ಅಥವಾ ವೀಡಿಯೋವನ್ನು ಬಳಸಿ ಯಾರನ್ನೂ ಅವಮಾನ ಅಥವಾ ಪುಂಡಾಟ ಮಾಡಬಾರದು. ಇದು ಕಾನೂನು ಬಾಹಿರವಾಗುತ್ತದೆ ಮತ್ತು ನಿಮ್ಮನ್ನು ಸಮಸ್ಯೆಗೆ ಸಿಲುಕಿಸಬಹುದು.

ಇವು ಸಾಮಾಜಿಕ ಜಾಲತಾಣಗಳಿಂದ ನಾವು ಕಲಿಯಬಹುದಾದ ಕೆಲವೊಂದು ವಿಷಯಗಳು. ಇಂದಿನ ತಲೆಮಾರಿಗೆ ಸಾಮಾಜಿಕ ಜಾಲತಾಣಗಳು ಒಂದು ವರವಾಗಿದೆ. ಇದನ್ನು ಒಂದು ಉಡುಗೊರೆಯಾಗಿಯೂ ಬಳಸಬಹುದು ಅಥವಾ ಇದರಲ್ಲಿ ಪುಂಡಾಟ ಮಾಡಲು ಹೋಗಿ ಸಮಸ್ಯೆಗೂ ಸಿಲುಕಬಹುದು. ಆಯ್ಕೆ ನಿಮಗೆ ಬಿಟ್ಟದ್ದು.

X
Desktop Bottom Promotion