Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
2013ರ ಭಾರತದ ಅತೀ ದೊಡ್ಡ ನ್ಯೂ ಇಯರ್ ಪಾರ್ಟಿಗಳು
ಹೊಸ ವರ್ಷ ಪ್ರಾರಂಭವಾಗಿ ಇಂದಿಗೆ 3 ದಿನಗಳಾಯಿತು. 2012 ಮುಗಿದು 2013 ಪ್ರಾರಂಭವಾಗುವ ಆ ಗಳಿಗೆಯನ್ನು ಹೆಚ್ಚಿನವರು ಪಾರ್ಟಿ ಮುಖಾಂತರ ಬರ ಮಾಡಿಕೊಂಡರೆ, ಮತ್ತೆ ಕೆಲವರು ಒಬ್ಬರಿಗೊಬ್ಬರು ಶುಭಾಶಯವನ್ನು ಹೇಳುವುದರ ಮುಖಾಂತರ ಬರ ಮಾಡಿಕೊಂಡೆವು.
ನ್ಯೂ ಇಯರ್ ಪಾರ್ಟಿಯ ಸವಿ ಗುಂಗಿನಿಂದ ಇನ್ನೂ ನಾವೂ ಹೊರಬಂದಿಲ್ಲ. ಭಾರತದ ಕೆಲವು ಕಡೆಗಳಲ್ಲಿ ಅಂತೂ ಹೊಸ ವರ್ಷವನ್ನು ತುಂಬಾ ದೊಡ್ಡ ಪಾರ್ಟಿಗಳ ಮುಖಾಂತರ ಬರಮಾಡಿಕೊಂಡರು. 2013ರಲ್ಲಿ ನಡೆದಂತಹ ಭಾರತದ ಅತೀ ದೊಡ್ಡ ನ್ಯೂ ಇಯರ್ ಪಾರ್ಟಿಗಳ ಬಗ್ಗೆ ಇಲ್ಲಿ ಹೇಳಲಾಗಿದೆ.

ಸನ್ ಬರ್ನ್ ಫೆಸ್ಟಿವಲ್
ಗೋವಾದಲ್ಲಿ ಈ ಪಾರ್ಟಿಯನ್ನು ಆಚರಿಸಲಾಯಿತು. ಈ ಪಾರ್ಟಿ 2012 ಡಿಸೆಂಬರ್ 27-29ರವರೆಗೆ ನಡೆಯಿತು.

ಡಿಗ್ರಿ 13 ಬೆಂಗಳೂರು
ಇದು ಬೆಂಗಳೂರಿನ ಜೆಪಿ ನಗರದಲ್ಲಿರುವ ವುಡ್ ರೋಸ್ ಪಾರ್ಕ್ ನಲ್ಲಿ ನಡೆಯಿತು. ಮನೆಯವರು ಮತ್ತು ಚಿಕ್ಕ ಮಕ್ಕಳ ಜೊತೆ ಪಾರ್ಟಿ ಮಾಡ ಬಯಸುವವರಿಗೆ ಈ ಸ್ಥಳ ಸೂಕ್ತವಾಗಿತ್ತು.

ಮೇಕ್ ಸಮ್ ನೋಯ್ಸ್
ಜೋರು ಶಬ್ದದ ಮ್ಯೂಸಿಕ್ ಇದ್ದು ತುಂಬಾ ಗದ್ದಲ ಇರಬೇಕು. ನಾವು ಗದ್ದಲ ಜೊತೆ ಮತ್ತಷ್ಟು ಕಿರುಚುತ್ತಾ ಇಲ್ಲಿ ಸೇರಿದವರು ಹೊಸ ವರ್ಷವನ್ನು ಬರಮಾಡಿಕೊಂಡರು.

ಬಾಲಿವುಡ್ ನೈಟ್
ಇಲ್ಲಿ ಬಾಲಿವುಡ್ ಥೀಮ್ ನಲ್ಲಿ ಹೊಸ ವರ್ಷವನ್ನು ಆಚರಿಸಲಾಯಿತು. ಡ್ರಾಮಾ, ಆಂಕ್ಷನ್ , ಫನ್ ಇವುಗಳು ಈ ಪಾರ್ಟಿಗೆ ಬಂದವರನ್ನು ನಗೆ ಕಡಲಿನಲ್ಲಿ ಮುಳುಗಿಸಿತು.

ಎಲೆಕ್ಟ್ರಿಕ್ ನೈಟ್
ಹಾಟ್ ಸೆಲೆಬ್ರಿಟಿ ಜೊತೆ ಪಾರ್ಟಿ ಮಾಡಬೇಕೆಂದು ಬಯಸುವವರು ದೆಹಲಿಯಲ್ಲಿರುವ ಈ ಎಲೆಕ್ಟ್ರಿಕ್ ನೈಟ್ ಪಾರ್ಟಿಗೆ ಬರಬಹುದು. ನಿಮಗೂ ಈ ಆಸೆ ಇದ್ದರೆ ಮುಂದಿನ ವರ್ಷ ಪ್ರಯತ್ನಿಸಿ. ಇಲ್ಲಿ ಅತ್ಯುತ್ತಮವಾದ ಆಹಾರ ಮತ್ತು ಮದ್ಯದ ಸೌಲಭ್ಯವಿದೆ.

ಗ್ರ್ಯಾಂಡ್ ಹೋಟೆಲ್ ನ ಪಾರ್ಟಿ
ದೆಹಲಿಯಲ್ಲಿರುವ ಈ ಐಷಾರಾಮಿ ಹೋಟೆಲ್ ನಲ್ಲಿ ಕೂಡ ಸಕತ್ ಜೋರಾಗಿ ನ್ಯೂ ಇಯರ್ ಪಾರ್ಟಿ ಆಚರಿಸಲಾಯಿತು. ಇಲ್ಲಿ ಒಂದು ಜೋಡಿಗೆ ಪಾಸ್ ನ ಬೆಲೆ ರು. 30.000 ಅಷ್ಟೆ!

ಎ ನೈಟ್ ಇನ್ ಪ್ಯಾರಿಸ್
ಮುಂಬಯಿಯಲ್ಲಿ ಎ ನೈಟ್ ಇನ್ ಪ್ಯಾರಿಸ್ ಪಾರ್ಟಿ ಹಮ್ಮಿಕೊಳ್ಳಲಾಗಿತು. ಇದು ಒಂದು ರೊಮ್ಯಾಂಟಿಕ್ ಆದ ಪಾರ್ಟಿ ಆಗಿತ್ತು.

ಹ್ಯಾಂಗೋವರ್
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಈ ಪಾರ್ಟಿ ಇತ್ತು. ಇದನ್ನು ವಾರ್ ಆಫ್ ಡಿ ಜೆ ಸ್ಪರ್ಧೆಯಲ್ಲಿ 3 ಭಾರಿ ಮೊದಲನೇ ಸ್ಥಾನ ಗಳಿಸಿದ ಡಿ. ಜೆ ಜಿತೆನ್ ನಡೆಸಿಕೊಟ್ಟರು.



Click it and Unblock the Notifications
