Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಸೋನಾಕ್ಷಿ ಸಿನ್ಹಾ ಹೂವಿನ ಚಿತ್ತಾರದುಡುಗೆಯಲ್ಲಿ
ಸೋನಾಕ್ಷಿ ಸಿನ್ಹಾ ವೇರ್ ಹೌಸಿನ ಹೂವಿನ ಚಿತ್ತಾರದುಡುಗೆಯಲ್ಲಿ ಅದ್ಭುತವಾಗಿ ಕಾಣುತ್ತಿದ್ದಳು. ಆಕೆ ತನ್ನ ಬಿಡುಗಡೆಯಾಗಲಿರುವ ಚಿತ್ರ ಆರ್.. ರಾಜಕುಮಾರ್ ದಲ್ಲಿ ಬ್ಯುಸಿಯಾಗಿರುವುದರ ನಡುವೆಯೇ ತನ್ನ ಸ್ಟೈಲಿಶ್ ಲುಕ್ ಗಳಿಂದ ಗಮನ ಸೆಳೆಯುತ್ತಿದ್ದಾಳೆ. ಒಂದೇ ದಿನದಲ್ಲಿ ಹಲವು ನೋಟಗಳಲ್ಲಿ ಮಿಂಚುತ್ತಿದ್ದಾಳೆ!
ಈ ಸುಂದರ ಮೈಮಾಟದ ಬೆಡಗಿ ಇತ್ತೀಚೆಗಷ್ಟೇ ಎರಡು ವಿಭಿನ್ನ ಉಡುಗೆಗಳನ್ನು ತೊಟ್ಟು ಪ್ರದರ್ಶಿಸಿದಳು. ಶೆಹ್ಲಾ ಖಾನ್ ರ ವಿನ್ಯಾಸದ ಬೇಬಿ ಪಿಂಕ್ ದಿರಿಸಿನಲ್ಲಿ ಅನುಪಮ ಚೋಪ್ರಾ ಜೊತೆಯಲ್ಲಿ ಮೊದಲ ಸಾಲಿನಲ್ಲಿ ಕಾಣಿಸಿಕೊಂಡಿದ್ದಳು. ನಂತರ ಮಂಡಿವರೆಗಿನ ಹೂವಿನ ಚಿತ್ತಾರದುಡುಗೆಯನ್ನು ತೊಟ್ಟು ಪ್ರದರ್ಶಿಸಿದಳು.

ವೇರ್ ಹೌಸಿನ ಈ ಉಡುಗೆ ಅವಳ ಮೈಮಾಟಕ್ಕೆ ಒಪ್ಪುವಂತಿತ್ತು. ಇದನ್ನು ವಿಸ್ ಕೊಸೆ ಮತ್ತು ಎಲಾಸ್ಟಿನೆ ಬಳಸಿ ಸಿದ್ಧಪಡಿಸಲಾಗಿದೆ. ಈ ಉಡುಗೆಯ ತುಂಬ ಹೂವಿನ ಚಿತ್ತಾರ ಹೊಂದಿದೆ. ಮಂಡಿಯವರೆಗಿನ ಈ ಉಡುಪಿಗೆ ಹಿಗ್ಗಿಸಬಹುದಾದ ಜರ್ಸಿ ಬಳಸಲಾಗಿದೆ. ಕುತ್ತಿಗೆಯನ್ನು ಇಡಿಯಾಗಿ ಆವರಿಸುವ ಕ್ರ್ಯೂ ನೆಕ್ ಲೈನ್ ಡಿಸೈನ್ ಹೊಂದಿದೆ.
ಇದಕ್ಕೆ ಸ್ಟೈಲಿಶ್ ಲುಕ್ ನೀಡುವಂತೆ ಸೊಂಟದ ಸುತ್ತಲೂ ರಿಬ್ಬನ್ ನೀಡಲಾಗಿದೆ. ಸೋನಾಕ್ಷಿ ಸಿನ್ಹಾ ಈ ಹೂವಿನ ಚಿತ್ತಾರದ ಉಡುಗೆಯನ್ನು ಜರಾ ಪಾದ ಮುಚ್ಚುವ ಕಪ್ಪು ಶೂಗಳೊಂದಿಗೆ ಧರಿಸಿದ್ದಳು. ಈ ಫ್ಲಾಟ್ ಶೂಗಳ ಬದಲಾಗಿ ಆಕೆ ಹೀಲ್ ಶೂಗಳನ್ನು ಧರಿಸಿದ್ದರೆ ಚೆನ್ನಾಗಿರುತ್ತಿತ್ತು. ಸೋನಾಕ್ಷಿ ಸಿನ್ಹಾ ಮತ್ತಷ್ಟು ಎತ್ತರವಾಗಿ ಸ್ಟೈಲಿಶ್ ಆಗಿ ಕಾಣುತ್ತಿದ್ದಳು.
ಅನುಪಮಾ ಚೋಪ್ರಾಳೊಂದಿಗೆ ಕಾಣಿಸಿಕೊಂಡಂತೆ ಕೂದಲನ್ನು ಒಂದೆಡೆ ಇಳಿಬಿಟ್ಟ ಹೇರ್ ಸ್ಟೈಲ್ ನಲ್ಲಿಯೇ ಕಾಣಿಸಿಕೊಂಡಿದ್ದಳು. ಆಕೆ ಹಚ್ಚಿಕೊಂಡಿದ್ದ ಕೋರಲ್ ಬಣ್ಣದ ನೈಲ್ ಪಾಲಿಶ್ ಹೂವಿನುಡುಗೆಗೆ ಒಪ್ಪುತ್ತಿತ್ತು. ಜರಾ ಬೂಟ್ಸ್ ಹೊರತುಪಡಿಸಿದರೆ ಉಳಿದಂತೆ ಆಕೆಯ ಮೇಕಪ್ ಆಕೆಯ ಬಟ್ಟೆಗೆ ಒಪ್ಪುವಂತಿತ್ತು.



Click it and Unblock the Notifications
