Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಶ್ವೇತ ಸುಂದರಿ ಶಿಲ್ಪ ಶೆಟ್ಟಿ
ಶಿಲ್ಪ ಶೆಟ್ಟಿ ಇತ್ತೀಚೆಗೆ ಮಂಗಳೂರಿನಲ್ಲಿ ದೇಸಿ ಲುಕ್ ನಲ್ಲಿ ಕಾಣಿಸಿಕೊಂಡಳು. ಶಿಲ್ಪ ಶೆಟ್ಟಿ ಯಾವಾಗಲೂ ತನ್ನ ಅಲಂಕಾರದ ವಿಷಯದಲ್ಲಿ ಏನಾದರೂ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾಳೆ. ಮತ್ತು ತಾನು ಆಯ್ಕೆ ಮಾಡಿಕೊಳ್ಳುವ ವಸ್ತ್ರವಿನ್ಯಾಸಕ್ಕೆ ಹೊಂದುವಂತಹ ಅಲಂಕಾರದೊಂದಿಗೆ ಆಕೆ ಮಿಂಚುತ್ತಿರುತ್ತಾಳೆ.
ಶಿಲ್ಪ ಶೆಟ್ಟಿ ತವರೂರಿನಲ್ಲಿ ಪಿ.ಸಿ. ಜ್ಯೂವೆಲರ್ಸ್ ಎನ್ನುವ ಮಳಿಗೆಯ ಉದ್ಘಾಟನೆಗೆ ಬಂದಿದ್ದಳು. ಈ ಉದ್ಘಾಟನೆಗೆ ಶಿಲ್ಪ ಸೀರೆಯುಟ್ಟು, ಹೂ ಮುಡಿದು ಬಂದಿದ್ದಳು. ಮಂಗಳೂರು ಆಕೆಯ ತವರೂರು ಮತ್ತು ಆಕೆ ತುಳು ಕೂಡ ಮಾತನಾಡಬಲ್ಲಳು.

ಶಿಲ್ಪ ಶೆಟ್ಟಿ ಈ ಉದ್ಘಾಟನೆಗೆ ಉಟ್ಟಿದ್ದ ಬಣ್ಣದ ಅಂಚಿನ ಬಿಳಿ ಸೀರೆಯಲ್ಲಿ ಸುಂದರವಾಗಿ ಕಾಣುತ್ತಿದ್ದಳು. ಈ ಸೀರೆಯ ಅಂಚಿನ ಮೇಲೆ ಗುಲಾಬಿ ಬಣ್ಣದ ಚುಮ್ಕಿ ಕಸೂತಿಯಿತ್ತು.
ಸೀರೆಯ ಮೈ ತುಂಬ ಸ್ಟ್ರಿಪ್ ಗಳಿದ್ದವು. ಸೀರೆಗೆ ಒಪ್ಪುವಂತಹ ಚಿನ್ನದ ಬಣ್ಣದ ಜರಿಯ ಕಪ್ ಸ್ಲೀವ್ಸ್ ಬ್ಲೌಸ್ ತೊಟ್ಟಿದ್ದಳು. ಡೈಮಂಡ್, ಎಮರೆಲ್ಡ್ ಮತ್ತು ರೂಬಿಯಿದ್ದ ನೆಕ್ ಲೇಸ್, ಅದಕ್ಕೊಪ್ಪುವ ಓಲೆ ತೊಟ್ಟಿದ್ದಳು. ದಕ್ಷಿಣ ಭಾರತೀಯಳಾದ ಕಾರಣ ಆಕೆಗೆ ಮಲ್ಲಿಗೆ ಇಷ್ಟ. ಬೈತಲೆ ತೆಗೆದು ಗಂಟು ಹಾಕಿದ ಕೂದಲಿಗೆ ಮಲ್ಲಿಗೆ ದಂಡೆ ಮುಡಿದು ಬಂದಿದ್ದಳು. ಕಣ್ಣಿನ ಮೇಲಿನ ರೆಪ್ಪೆಗೆ ಐಲೈನರ್ ಹಚ್ಚಿದ್ದಳು. ಗುಲಾಬಿ ಬಣ್ಣದ ಬಿಂದಿಯೊಂದಿಗೆ ಆಕೆಯ ಸೌಂದರ್ಯ ಮನಮುದಗೊಳಿಸುವಂತಿತ್ತು.
ನಮಗಂತೂ ಮಂಗಳೂರಿನ ಪಿ.ಸಿ.ಜ್ಯೂವಲರ್ಸ್ ಉದ್ಘಾಟನೆಯಲ್ಲಿ ಕಾಣಿಸಿಕೊಂಡ ಶಿಲ್ಪಾ ಶೆಟ್ಟಿ ಅಲಂಕಾರ ಇಷ್ಟವಾಯಿತು ನಿಮಗೆ?
ಶಿಲ್ಪಾ ನಾಚ್ ಬಲಿಯೇ ಅಥವ ರೆಡ್ ಕಾರ್ಪೆಟ್ ನಂತಹ ಕಾರ್ಯಕ್ರಮಗಳಲ್ಲಿ ಕೂಡ ಸೀರೆ ಉಟ್ಟು ಕಾಣಿಸಿಕೊಂಡಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಸೀರೆ ನಿಮ್ಮ ದೇಹದ ಸಿರಿಯನ್ನು ಎಲ್ಲ ರೀತಿಯಲ್ಲೂ ಎತ್ತಿ ತೋರುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ನೀವೆನಂತೀರಿ?



Click it and Unblock the Notifications
