Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನಿರೀಕ್ಷಿಸಿ ಮಿಶೆಲ್ ಒಬಾಮ ಮುಖಪುಟ!
ಈ ವರ್ಷದ ಡಿಸೆಂಬರ್ ತಿಂಗಳಿನ ಜರ್ನಲ್ ಮ್ಯಾಗ್ ಝೀನಿಗೆ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಏಕೆಂದರೆ ಈ ಮಾಸಿಕವು ಮುಖಪುಟದಲ್ಲಿ ಈ ಬಾರಿ ಅಮೆರಿಕಾದ ಪ್ರಥಮ ಮಹಿಳೆ ಮಿಶೆಲ್ ಒಬಾಮಳ ಛಾಯಾಚಿತ್ರವನ್ನು ಹೊತ್ತುತರಲಿದೆ. ಈ ಮಾಸಿಕದ ಓದುಗರೊಂದಿಗೆ ಈ ಪ್ರಥಮ ಮಹಿಳೆ ವೈಟ್ ಹೌಸಿನಲ್ಲಿ ಕ್ರಿಸ್ ಮಸ್ ಹಬ್ಬದಾಚರಣೆ ಹೇಗಾಗುತ್ತದೆ ಎನ್ನುವುದನ್ನು ಹಂಚಿಕೊಳ್ಳಲಿದ್ದಾರೆ.
ಈ ಬಾರಿಯ ಕ್ರಿಸ್ ಮಸ್ ವಿಶೇಷವೆಂದರೆ ಅಮೆರಿಕಾದ ಪ್ರಥಮ ಮಹಿಳೆಯ ಮನೆಯ ಹಬ್ಬದ ಸಡಗರವನ್ನು ಆಕೆಯಿಂದಲೇ ತಿಳಿದುಕೊಳ್ಳಬಹುದು. ಮುಖಪುಟದ ಚಿತ್ರವು ಆಕೆಯ ಸುಂದರ ನಗುವನ್ನು ಓದುಗರತ್ತ ಕೊಂಡೊಯ್ಯಲಿದೆ.

ಮುಖಪುಟದ ಈ ಚಿತ್ರದಲ್ಲಿ ಮಿಶೆಲ್ ಒಬಾಮ ಗೋಲ್ಡ್ ಮೆಟಾಲಿಕ್ ಸ್ಲೀವ್ ಲೆಸ್ ಉಡುಪಿನಲ್ಲಿ ಹೂನಗೆ ಚೆಲ್ಲುತ್ತಾ ನಿಂತಿರುವುದನ್ನು ಕಾಣಬಹುದಾಗಿದೆ. 49 ವರ್ಷದ ಈಕೆಯ ನೀಳ ಬಾಹುಗಳು, ಮೇಕಪ್, ಮೋಹಕ ಕಂಗಳು ನೋಡುಗರನ್ನು ಸೆಳೆಯುವಂತಿದೆ ಅಲ್ಲವೆ? ರಜೆಗಾಗಿ ಸಿದ್ಧತೆ ನಡೆಸಿರುವ ಮಿಶೆಲ್ ಆ ದಿನಗಳಿಗಾಗಿ ಕಾತರದಿಂದ ಕಾಯುತ್ತಿದ್ದಾರಂತೆ.
ಈ ಸಂಚಿಕೆಯಲ್ಲಿ ಮಿಶೆಲ್ ತಾವು ಕ್ರಿಸ್ ಮಸ್ ಹಬ್ಬವನ್ನು ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹೇಗೆ ಆಚರಿಸುತ್ತಾರೆ ಎಂದು ಹೇಳಿದ್ದಾರಂತೆ. ಹಬ್ಬದ ಸಮಯದಲ್ಲಿ ಮಾಡಲಾಗುವ ಎಲ್ಲ ಆಚರಣೆಗಳಲ್ಲೂ ಪಾಲ್ಗೊಳ್ಳುವುದು ಆಕೆಗೆ ಸಂತಸದ ಸಂಗತಿಯಂತೆ. ಆಕೆ ತಮ್ಮ ಕುಟುಂಬದ ಸಂಪ್ರದಾಯದಂತೆ ಹೇಗೆ ಹಬ್ಬವನ್ನು ಆಚರಿಸುತ್ತಾರೆ ಎಂಬುದನ್ನು ಹಂಚಿಕೊಂಡಿದ್ದಾರಂತೆ.
ಕ್ರಿಸ್ ಮಸ್ ಹಬ್ಬ ಮಿಶೆಲ್ ಒಬಾಮಳ ಈ ಸುಂದರ ಚಿತ್ರದೊಂದಿಗೆ ಆಕೆಯ ಮನದಾಳದ ಮಾತುಗಳನ್ನು ತನ್ನ ಓದುಗರಿಗೆ ಹಬ್ಬದ ಉಡುಗೊರೆಯಾಗಿ ನೀಡಲಿದೆ. ನೀವು ಕೂಡ ಡಿಸಂಬರ್ ನ ಈ ಸಂಚಿಕೆಗಾಗಿ ಕಾಯುವಿರಿ ಅಲ್ಲವೇ?



Click it and Unblock the Notifications
