Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬ್ರಿಟನ್ ನ ಉತ್ತಾರಾಧಿಕಾರಿಯ ಆಗಮನ
ಬ್ರಿಟಿಷ್ ರಾಜಮನೆತನದ ಆಗುಹೋಗುಗಳ ಬಗ್ಗೆ ತಿಳಿಯುವ ಕುತೂಹಲ ಬ್ರಿಟಿಷರಿಗೆ ಮಾತ್ರವಲ್ಲ, ಇತರ ರಾಷ್ಟ್ರದವರಿಗೂ ಇದೆ. ಬ್ರಿಟಿಷ್ ರಾಜಮನೆತನಕ್ಕೆ ಉತ್ತಾರಾಧಿಕಾರಿ ಬರುತ್ತಿದೆ ಅನ್ನುವ ಸುದ್ಧಿ ಎಲ್ಲಾ ದೇಶದ ನ್ಯೂಸ್ ಪೇಪರ್ ಗಳಲ್ಲಿ ಪ್ರಮುಖ ಸುದ್ಧಿಯಾಗಿತ್ತು.
ಬ್ರಿಟಿಷ್ ರಾಜಮನೆತನ ಬಗ್ಗೆ ಇತರರ ಕುತೂಹಲ ಹೆಚ್ಚಲು ಅಲ್ಲಿಯ ವಿಶಿಷ್ಟ ಪದ್ಧತಿಗಳು ಕೂಡ ಒಂದು ಕಾರಣ. ಬ್ರಿಟಿಷ್ ರಾಜಮನೆತನ ಕೆಲವೊಂದು ಪದ್ಧತಿಗಳನ್ನು ಅನುಸರಿಸುತ್ತದೆ, ಹಳೆಯ ತಲೆಮಾರುಗಳ ಆಡಳಿತ ಹೋಗಿ, ಹೊಸ ತಲೆಮಾರಿನವರ ಆಡಳಿತ ಬಂದ ಮೇಲೂ ಆ ಪದ್ಧತಿಯಲ್ಲಿ ಹೆಚ್ಚೇನು ಬದಲಾವಣೆಯಾಗಿಲ್ಲ.ರಾಜಕುಮಾರ ವಿಲಿಯಂನ ತಾಯಿ ಡಯಾನ ಸುದ್ಧಿ ಮಾಡಿದಷ್ಟು ಈ ಮನೆತನದಲ್ಲೂ ಯಾರೂ ಮಾಡಿಲ್ಲ, ಡಯಾನಾ ಬಾಳಿದ ರೀತಿ, ಅವಳ ದುರಂತ ಸಾವಿನ ರಹಸ್ಯ ಹಿಂದಿಗೂ ಅನೇಕರನ್ನು ಕಾಡುತ್ತಿದೆ.
ಡಯಾನಳ ಮಗ ರಾಜಕುಮಾರ ವಿಲಿಯಂ ಕೇಟ್ ಎನ್ನುವ ತರುಣಿಯನ್ನು ವರಿಸಿದಾಗ ದೊಡ್ಡ ಸುದ್ಧಿಯಾಗಿತ್ತು. ನಂತರ ಕೇಟ್ ಗರ್ಭಿಣಿಯಾದಾಗ ಕೇಟ್ ಬ್ರಿಟಿಷ್ ರಾಜಮನೆತನದ ನಿಯಮಗಳನ್ನು ಮುರಿಯುತ್ತಿದ್ದಾಳೆ ಎಂಬ ಅನೇಕ ಅಂತೆ-ಕಂತೆಗಳು ಕೇಳಿ ಬರುತ್ತಿದ್ದೆವು, ಅದರಲ್ಲೊಂದು ಬ್ರಿಟನ್ ನ ರಾಜಮನೆತನದವರು ಹೆರಿಗೆಗೆ ಸೇಂಟ್ ಮೇರಿ ಆಸ್ಪತ್ರೆಗೆ ಹೋಗುವುದು ಅಲ್ಲಿಯ ಪದ್ಧತಿ, ಆದರೆ ಕೇಟ್ ಈ ಪದ್ಧತಿ ಮುರಿದು ತನ್ನ ಅಮ್ಮನ ಮನೆಯ ಪಕ್ಕದಲ್ಲಿರುವ ಆಸ್ಪತ್ರಗೆ ಹೆರಿಗೆಗೆ ಹೋಗುತ್ತಾಳೆ ಎನ್ನುವ ಸುದ್ಧಿ ಬರುತ್ತಿತ್ತು, ಇನ್ನು ಅವಳ ಹೊಟ್ಟೆಯಲ್ಲಿರುವ ಮಗುವಿನ ಲಿಂಗದ ಬಗ್ಗೆ ಕೂಡ ಅನೇಕ ಅಂತೆ ಕಂತೆಗಳು ಕೇಳಿ ಬಂದವು. ಈಗ ಆ ಅಂತೆ ಕಂತೆಗಳಿಗೆ ತೆರೆಬಿದ್ದಿದೆ.
ಕೇಟ್ ರಾಜ ಮನೆತನದವರು ಹೋಗುವಂತಹ ಸೇಂಟ್ ಮೇರಿ ಆಸ್ಪತ್ರೆಯಲ್ಲಿ ಮುಂದಿನ ಉತ್ತಾರಾಧಿಕಾರಿಗೆ ಜುಲೈ 23 ಕ್ಕೆ ಜನ್ಮ ನೀಡಿದ್ದಾರೆ. ಇವತ್ತು ಮಾಧ್ಯಮದ ಮುಂದೆ ಪ್ರಿನ್ಸ್ ವಿಲಿಯಂ ಮತ್ತು ಕೇಟ್ ತಮ್ಮ ಮುದ್ದಾದ ಮಗುವಿನೊಂದಿಗೆ ಕಾಣಿಸಿಕೊಂಡ ಚಿತ್ರಗಳು ನೋಡಿ ಇಲ್ಲಿವೆ:

ಉತ್ತಾರಾಧಿಕಾರಿಯನ್ನು ಜಗತ್ತಿಗೆ ಪರಿಚಯ
ಸೇಂಟ್ ಮೇರಿ ಆಸ್ಪತ್ರೆಯಿಂದ ಬ್ರಿಟನ್ ನ ಉತ್ತರಾಧಿಕಾರಿಯನ್ನು ಹಿಡಿದು ಹೊರ ಬರುತ್ತಿರುವ ಪ್ರಿನ್ಸ್ ವಿಲಿಯಂ ಮತ್ತು ಕೇಟ್.

31 ವರ್ಷಗಳ ಹಿಂದೆ ಪ್ರಿನ್ಸ್ ವಿಲಿಯಂ
ಕೇಟ್ ಮತ್ತು ಪ್ರಿನ್ಸ್ ವಿಲಿಯಂ ಮಗುವನ್ನು ಹಿಡಿದು ಹೊರಬರುತ್ತಿರುವ ಚಿತ್ರ, 31 ವರ್ಷಗಳ ಹಿಂದೆ ಡಯಾನಾ ಮತ್ತು ಪ್ರಿನ್ಸ್ ವೇಲ್ಸ್ ಪುಟ್ಟ ಪ್ರಿನ್ಸ್ ವಿಲಿಯಂ ನನ್ನು ಹಿಡಿದುಕೊಂಡು ಹೊರ ಬರುತ್ತಿರುವ ಫೋಟೊ ನೋಡಿ.

ಕೇಟ್
ಉತ್ತಾರಾಧಿಕಾರಿಗೆ ಜನ್ಮ ನೀಡಿದ ಸಾರ್ಥಕ ಮನೋಭಾವದಲ್ಲಿ ಕೇಟ್.

ಅಪ್ಪನ ಅಪ್ಪುಗೆ
ಅಪ್ಪನ ಬಿಸಿ ಅಪ್ಪುಗೆಯಲ್ಲಿ ಬ್ರಿಟನ್ ನ ಉತ್ತಾರಾಧಿಕಾರಿ.

ನಾನೇ ಮುಂದಿನ ರಾಜಕುಮಾರ
ರಾಯಲ್ ಮನೆತನದ ಹೊಸ ಸದಸ್ಯ.

ಅಪ್ಪ ಮತ್ತು ಮಗ
ಬಲದಲ್ಲಿ ಪ್ರಿನ್ಸ್ ವಿಲಿಯಂ ನ ಮಗ, ಎಡ ಭಾಗದ ಚಿತ್ರದಲ್ಲಿ ಮಗುವಾಗಿದ್ದಾಗ ವಿಲಿಯಂ.

ಸಂಭ್ರಮದ ಕ್ಷಣಗಳು
ಅಪ್ಪ, ಅಮ್ಮವಾದ ಸಂಭ್ರಮದಲ್ಲಿ ವಿಲಿಯಂ ಮತ್ತು ಕೇಟ್.

ಮಾಧ್ಯಮದವರ ಜೊತೆ ಮಾತುಕತೆ
ಹೊಸ ಉತ್ತಾರಾಧಿಕಾರಿಯ ದರ್ಶನಕ್ಕೆ ಕಾದಿದ್ದ ಮಾಧ್ಯಮದವರ ಜೊತೆ ಪ್ರಿನ್ಸ್ ವಿಲಿಯಂ ಮಾತನಾಡಿ, ತಮ್ಮ ಸಂತೋಷವನ್ನು ವ್ಯಕ್ತ ಪಡಿಸಿದರು.

ಪ್ರಿನ್ಸ್ ವಿಲಿಯಂ ಮತ್ತು ಪ್ರಿನ್ಸ್ ವೇಲ್ಸ್
ಡಯಾನ ಪ್ರಿನ್ಸ್ ವಿಲಿಯಂಗೆ ಜನ್ಮ ನೀಡಿದಾಗ ಅವಳನ್ನು ಕೊಂಡೊಯ್ಯಲು ಬಂದಾಗ ಪ್ರಿನ್ಸ್ ಚಾರ್ಲ್ಸ್ ಸೂಟ್ ಧರಿಸಿ ಬಂದಿದ್ದರು, ಆದರೆ ವಿಲಿಯಂ ಆಕರ್ಷಕವಾದ ಕ್ಯಾಸ್ಯೂಯಲ್ ಉಡುಗೆಯಲ್ಲಿ ಬಂದಿದ್ದು, ಅವರು ಧರಿಸಿದ ಶರ್ಟ್ ನ ಮತ್ತೊಂದು ವಿಶೇಷವೆಂದರೆ ಶರ್ಟ್ ನ ಬಣ್ಣ, ಪತ್ನಿ ಕೇಟ್ ಳ ಉಡುಪಿನ ಬಣ್ಣಕ್ಕೆ ಮ್ಯಾಚ್ ಆಗುತ್ತಿತ್ತು.

ಅರಮನೆಯೆಡೆಗೆ ಪ್ರಯಾಣ
ಮಗುವಿನೊಂದಿಗೆ ಅರಮನೆಗೆ ಮರಳುತ್ತಿರುವ ಕೇಟ್.

ಕಪ್ಪು ಕಾರು
1982ರಲ್ಲಿ ಡಯಾನಾ ಪ್ರಿನ್ಸ್ ವಿಲಿಯಂಗೆ ಜನ್ಮ ನೀಡಿ ಆಸ್ಪತ್ರೆಯಿಂದ ಮನೆಗೆ ಹೋಗುವಾಗ ಕಪ್ಪು ಕಾರಿನಲ್ಲಿ ಹೋಗಿದ್ದರು. ಪ್ರಿನ್ಸ್ ವಿಲಿಯಂ ಮತ್ತು ಕೇಟ್ ಕೂಡ ಕಪ್ಪು ಕಾರಿನಲ್ಲಿಯೇ ತಮ್ಮ ಮಗುವಿನೊಂದಿಗೆ ಅರಮನೆಗೆ ತೆರಳಿದರು.



Click it and Unblock the Notifications
