Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಕಾಜಲ್ ನೋಡಿ ಕಲಿಬೇಕು ಸ್ಯಾರಿ ಮ್ಯಾಚಿಂಗ್ ಐಡಿಯಾ
ಸೀರೆಗೆ ತಕ್ಕ ಮ್ಯಾಚಿಂಗ್ ಬ್ಲೌಸ್ ಇಲ್ಲದಿದ್ದರೆ ಆ ಸೀರೆ ಉಡಲು ಯಾರೂ ಇಷ್ಟಪಡುವುದಿಲ್ಲ. ಸೀರೆ ಕೊಳ್ಳುವಾಗ ಬರೀ ಸೀರೆಯ ವಿನ್ಯಾಸ ನೋಡಿ ಕೊಳ್ಳುವುದಿಲ್ಲ, ಅದರ ಬ್ಲೌಸ್ ಡಿಸೈನ್ ಹೇಗಿದೆ ಎಂದು ನೋಡಿ ಕೊಳ್ಳುತ್ತೇವೆ. ಕೆಲವೊಮ್ಮೆ ಬ್ಲೌಸ್ ಅಟ್ಯಾಚ್ ಇಲ್ಲದ ಸೀರೆ ಕೊಂಡರೆ ಆ ಸೀರೆ ಬ್ಲೌಸ್ ಮ್ಯಾಚಿಂಗ್ ಮಾಡಲು 2-3 ಮ್ಯಾಚಿಂಗ್ ಅಂಗಡಿಗಳಿಗೆ ಅಲೆದು, ಪಕ್ಕಾ ಮ್ಯಾಚಿಂಗ್ ಬ್ಲೌಸ್ ಸಿಗುವವರೆಗೆ ಹುಡುಕುತ್ತೇವೆ.
ಅದಲ್ಲದೆ ಗ್ರ್ಯಾಂಡ್ ಸೀರೆ ಉಡುವಾಗ ಬ್ಲೌಸ್ ಕೂಡ ಸ್ವಲ್ಪ ಗ್ರ್ಯಾಂಡ್ ಆಗಿ ಇರಬೇಕೆಂದು ಬಯಸುತ್ತೇವೆ. ನಮಗಿಷ್ಟವಾದ ವಿನ್ಯಾಸದಲ್ಲಿ ಬ್ಲೌಸ್ ಸ್ಟಿಚ್ ಮಾಡಿಸಲು 2-3ಸಾವಿರದವರೆಗೆ ಬೊಟಿಕ್ ಅಂಗಡಿಗೆ ಕೊಡಬೇಕಾಗುತ್ತದೆ. ಆದರೆ ಹೀಗೆ ದುಬಾರಿ ಬೆಲೆ ಕೊಟ್ಟು ಸ್ಟಿಚ್ ಮಾಡಿಸಿದ ಬ್ಲೌಸ್ ಅನ್ನು ಬರೀ ಒಂದೇ ಸೀರೆಗೆ ಹಾಕುವ ಬದಲು, ಇನ್ನೂ ಕೆಲವು ಸೀರೆಗಳನ್ನು ಮ್ಯಾಚಿಂಗ್ ಮಾಡಬಹುದೆಂಬ ಐಡಿಯಾವನ್ನು ಕಾಜಲ್ ನೋಡಿ ಕಲಿಯಬಹುದು.
ಏನಪ್ಪಾ ಅಂದರೆ ಇತ್ತೀಚಿಗೆ ಚೆನ್ನೈ ನಲ್ಲಿ ಒಂದು ಶಾಪಿಂಗ್ ಮಾಲ್ ಉದ್ಘಾಟನೆಗೆ ಬಂದಿದ್ದ ಅವರು ಹಸಿರು ಬಣ್ಣದ ಬ್ಲೌಸ್ ಹಲವು ಬಣ್ಣದ ಸೀರೆಯನ್ನು ಮ್ಯಾಚಿಂಗ್ ಮಾಡಿ, ಪೋಸ್ ನೀಡಿದರು. ಗ್ರೀನ್ ಕಲರ್ ಬ್ಲೌಸ್ ಗೆ ಯಾವುದೆಲ್ಲಾ ಬಣ್ಣದ ಸೀರೆಯನ್ನು ಮ್ಯಾಚಿಂಗ್ ಮಾಡಬಹುದೆಂದು ನೋಡೋಣ:

ಗೋಲ್ಡನ್ ಕಲರ್ ಸ್ಯಾರಿ
ಚೆನ್ನೈನ ಒಂದು ಶಾಪಿಂಗ್ ಮಾಲ್ ಉದ್ಘಾಟನೆಗೆ ಬಂದಿದ್ದ ಕಾಜಲ್ ಡಾರ್ಕ್ ಗ್ರೀನ್ ಕಲರ್ ಬ್ಲೌಸ್ ಗೆ ಗೋಲ್ಡನ್ ವಿಥ್ ಗ್ರೀನ್ ಕಲರ್ ಡಿಸೈನ್ ನ ಸ್ಯಾರಿ ಧರಿಸಿದ್ದರು.

ಆಕರ್ಷಕ ವಿನ್ಯಾಸದ ಅರ್ಧ ತೋಳಿನ ಬ್ಲೌಸ್
ತುಂಬಾ ಗ್ರ್ಯಾಂಡ್ ವಿನ್ಯಾಸವಿರುವ ಅರ್ಧ ತೋಳಿನ ಬ್ಲೌಸ್ ಗೆ ಯಾವೆಲ್ಲಾ ಬಣ್ಣದ ಸೀರೆಯನ್ನು ಮ್ಯಾಚ್ ಮಾಡಿದರು ಎಂದು ತಿಳಿಯಲು ಮುಂದಿನ ಸ್ಲೈಡ್ ನೋಡಿ.

ಬಿಳಿ ಸೀರೆ
ಹಸಿರು ಬಾರ್ಡರ್ ಇರುವ ಬಿಳಿ ಬಣ್ಣದ ಸೀರೆಗೆ ಗ್ರೀನ್ ಮ್ಯಾಚಿಂಗ್ ಬ್ಲೌಸ್.

ತೆಳು ಪಿಂಕ್ ಕಲರ್ ಸ್ಯಾರಿ
ಗ್ರೀನ್ ಬಣ್ಣದ ಬ್ಲೌಸ್ ನಲ್ಲಿ ಗೋಲ್ಡನ್ ವಿನ್ಯಾಸವಿರುವುದರಿಂದ ಈ ಬಣ್ಣದ ಸೀರೆಯನ್ನು ಕೂಡ ಮ್ಯಾಚ್ ಮಾಡ ಬಹುದು.

ಗೋಲ್ಡನ್ ಕಲರ್ ಸ್ಯಾರಿ
ಕಾಜಲ್ ಉಟ್ಟ ಸೀರೆ ಕೂಡ ಗೋಲಡ್ನ್ ಕಲರ್ ಆಗಿತ್ತು. ಗ್ರೀನ್ ಕಲರ್ ಬ್ಲೌಸ್ ಇದ್ದರೆ ಗೋಲ್ಡನ್ ಮತ್ತು ಗ್ರೀನ್ ಇರುವ ಯಾವುದೇ ವಿನ್ಯಾಸದ ಸ್ಯಾರಿಯನ್ನು ಮ್ಯಾಚ್ ಮಾಡಬಹುದು.

ಹಳದಿ ಬಣ್ನದ ಸ್ಯಾರಿ
ಗ್ರೀನ್ ಬಾರ್ಡರ್ ಇರುವ ಹಳದಿ ಸ್ಯಾರಿಯನ್ನು ತಮ್ಮ ಗ್ರೀನ್ ಕಲರ್ ಬ್ಲೌಸ್ ಗೆ ಮ್ಯಾಚ್ ಮಾಡಿರುವ ಕಾಜಲ್.

ಕಾಜಲ್ ಅಗರ್ ವಾಲ್
ಕಾಜಲ್ ಅಗರ್ ವಾಲ್ ಗೋಲ್ಡನ್ ಕಲರ್ ಸ್ಯಾರಿ ಹಾಕಿದ್ದರು. ಅವರ ಡ್ರೆಸ್ಸಿಂಗ್ ಗೆ ತಕ್ಕ ಮೇಕಪ್ ಅವರನ್ನು ಮತ್ತಷ್ಟು ಆಕರ್ಷಕವಾಗಿ ಕಾಣುವಂತೆ ಮಾಡಿತು.



Click it and Unblock the Notifications
