Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗಿನ್ನೀಸ್ ಬುಕ್ ನಲ್ಲಿರುವ ವಿಚಿತ್ರವಾದ ರೆಕಾರ್ಡ್ ಗಳಿವು!
ಗಿನ್ನೀಸ್ ದಾಖಲೆ ಬಗ್ಗೆ ಸಾಕಷ್ಟು ಕೇಳಿರುತ್ತೀರಿ. ಅದಕ್ಕಾಗಿ ನಾನಾ ಕಸರತ್ತು ಮಾಡಿ, ಆ ಬುಕ್ ನಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸುವವರನ್ನು ನೋಡುತ್ತೇವೆ. ಇದುವರೆಗೆ ಯಾರೂ ಮಾಡಿರದ ಸಾಧನೆ ಮಾಡಿದರೆ ಅವರು ಗಿನ್ನೀಸ್ ಲಿಸ್ಟ್ ನಲ್ಲಿ ಸೇರುತ್ತಾರೆ. ಆ ಬುಕ್ ನಲ್ಲಿ ನಮ್ಮ ಹೆಸರು ಬರಬೇಕೆಂದೇ ಕೆಲವರು ಪಡಬಾರದ ಪಾಡು ಪಡುತ್ತಾರೆ. ಬಲ್ಬ್ ತಿನ್ನುವುದು, ಗೋಡೆ ಹತ್ತುವುದು, ಹಲ್ಲಿನಿಂದ ಗಾಡಿ ಎಳೆಯುವುದು ಹೀಗೆ ಚಿತ್ರ ವಿಚಿತ್ರವಾದ ಸಾಹಸಗಳನ್ನು ಮಾಡುತ್ತಾರೆ.
ಗಿನ್ನೀಸ್ ದಾಖಲೆ ಆಗಲು ಹೀಗೆ ಮಾಡಬೇಕೆಂಬ ರೂಲ್ಸ್ ಇಲ್ಲ, ಆದರೆ ಮಾಡಿದ ರೀತಿಯಲ್ಲಿ ಹೊಸತನ ಇರಬೇಕು ಅಷ್ಟೇ. ಇಲ್ಲಿ ನಾವು ಕೆಲವು ವಿಚಿತ್ರ ಕಾರಣಗಳಿಂದ ಗಿನ್ನೀಸ್ ದಾಖಲೆಯಾದವರ ಬಗ್ಗೆ ಹೇಳಿದ್ದೇವೆ. ಈ ವ್ಯಕ್ತಿಗಳ ವಿಶೇಷವೆಂದರೆ ಇವರು ತುಂಬಾ ಕಷ್ಟಪಟ್ಟು ತಮ್ಮ ಸಾಧನೆಯಿಂದ ಗಿನ್ನೀಸ್ ದಾಖಲೆಯಾದರು ಅನ್ನುವುದಕ್ಕಿಂತ, ಕೆಲವು ಕ್ರೇಜಿ ಕಾರಣಗಳಿಂದ ಆದರು. ಬನ್ನಿ ಅದೇನೆಂದು ನೋಡೋಣವೇ?

ಉದ್ದದ ಕಾಲುಗಳು
Svetlana Pankratovo ಎನ್ನುವ ಈ ಮಹಿಳೆ ನೈಸರ್ಗಿಕದತ್ತವಾಗಿ ದೊರೆತ ತನ್ನ 52 ಇಂಚಿನ ಉದ್ದ ಕಾಲುಗಳಿಂದಾಗಿ ಗಿನ್ನೀಸ್ ಲಿಸ್ಟ್ ನಲ್ಲಿ ಇದ್ದಾರೆ.

ಕೂದಲಿಗೆ ಇನ್ಸೂರೆನ್ಸ್
ನಿಮ್ಮ ಕೂದಲಿಗೆ ಇನ್ಸೂರೆನ್ಸ್ ಮಾಡಿಸಿಕೊಂಡಿದ್ದೀರಾ? ಇದೇನು ಕೂದಲಿಗೆ ಇನ್ಸೂರೆನ್ಸಾ ಎಂದು ಅಚ್ಚರಿ ಪಡಬೇಡಿ. ಟ್ರಾಯ್ (Troy Polamalu)ಅನ್ನುವ ಈ ವ್ಯಕ್ತಿ 1 ಮಿಲಿಯನ್ ಡಾಲರ್ ರಷ್ಟು ಇನ್ಸೂರೆನ್ಸ್ ಮಾಡಿಕೊಂಡಿದ್ದಾರೆ. ಇವರು Head and Shoulders ಶ್ಯಾಂಪೂ ಕಂಪನಿಯ ವಕ್ತಾರರು ಕೂಡ ಹೌದು.

ಉದ್ದದ ಕಾಲುಗಳು
Svetlana Pankratovo ಎನ್ನುವ ಈ ಮಹಿಳೆ ನೈಸರ್ಗಿಕದತ್ತವಾಗಿ ದೊರೆತ ತನ್ನ 52 ಇಂಚಿನ ಉದ್ದ ಕಾಲುಗಳಿಂದಾಗಿ ಗಿನ್ನೀಸ್ ಲಿಸ್ಟ್ ನಲ್ಲಿ ಇದ್ದಾರೆ.

ಉದ್ದದ ಉಗುರು
ಉಗುರನ್ನು ಉದ್ದ ಬೆಳೆಸುವ ಕ್ರೇಜಿ ಕೆಲವರಲ್ಲಿ ಇರುತ್ತದೆ. ಇಲ್ಲಿಯೊಬ್ಬರು ನೋಡಿ ಎಷ್ಟೊಂದು ಉದ್ದದ ಉಗುರು ಬೆಳೆಸಿದ್ದಾರೆ. ಈ ರೀತಿ ಉಗುರು ಬೆಳೆಸಿ ಗಿನ್ನೀಸ್ ಲಿಸ್ಟ್ ನಲ್ಲಿ ಸೇರಿದ್ದಾರೆ. ನೀವೂ ಪ್ರಯತ್ನಿಸಬಹುದು...

ಬಸವನ ಹುಳುವಿನ ಫೇಸ್ ಮಾಸ್ಕ್
ಬಸವನ ಹುಳು ನೋಡುವಾಗಲೇ ನಮ್ಮ ಮುಖದ ಭಾವನೆ ಬದಲಾಗುತ್ತದೆ. ಆದರೆ ಈ ಹುಳವನ್ನು ಮುಖದ ಮೇಲೆ Fin Keheler ಗಿನ್ನೀಸ್ ಬುಕ್ ನಲ್ಲಿ ತಮ್ಮ ಹೆಸರನ್ನು ಭದ್ರವಾಗಿಸಿದ್ದಾರೆ. ಒಂದು ಹುಳವಾದರೆ ಪರ್ವಾಗಿಲ್ಲ ನಾವೂ ಪ್ರಯತ್ನಿಸಬಹುದಿತ್ತು, ಆದರೆ ಬರೋಬ್ಬರಿ 43 ಬಸವನ ಹುಳುಗಳನ್ನು 10 ನಿಮಿಷ ತಮ್ಮ ಮುಖದ ಮೇಲೆ ಬಿಟ್ಟುಕೊಂಡು ಗಿನ್ನೀಸ್ ದಾಖಲೆಯಾಗಿದ್ದಾರೆ.

ಕಂಡ ಕಂಡಲ್ಲಿ ಚುಚ್ಚಿಕೊಂಡು
ಹುಬ್ಬು, ಕಿವಿಗೆ ಚುಚ್ಚಿಕೊಳ್ಳುವವರನ್ನು ನೋಡಿದ್ದೇವೆ. ಆದರೆ Elaine Davidson ಎಂಬ ಮಹಿಳೆ 1,900 ಭಾಗದಲ್ಲಿ ಚುಚ್ಚಿಕೊಂಡು ಗಿನ್ನೀಸ್ ದಾಖಲೆಯಾಗಿದ್ದಾಳೆ.

Mehmet Ozyurek
ಈ ವ್ಯಕ್ತಿ ತನ್ನ ಉದ್ದದ ಮೂಗಿನಿಂದಾಗಿ ಗಿನ್ನೀಸ್ ದಾಖಲೆಯಾಗಿದ್ದಾರೆ. ಛೇ, ಆ ದೇವರು ನಮ್ಮ ಮೂಗನ್ನು ಉದ್ದವಾಗಿ ಕೊಟ್ಟಿದ್ದರೆ ನಾವೂ ಗಿನ್ನೀಸ್ ಸೇರಬಹುದಿತ್ತು ಅಲ್ವಾ!

ಈ ಸಾಹಸ ನಾನಂತೂ ಮಾಡಲಾರೆ, ನೀವು?
Zdenek Zahradka ಎಂಬವರಂತೂ ತುಂಬಾ ವಿಶೇಷವಾದ ಸಾಧನೆಯಿಂದ ಗಿನ್ನೀಸ್ ಸೇರಿದ್ದಾರೆ. ಮರದ ಪೆಟ್ಟಿಗೆಯಲ್ಲಿ ಹಾಕಿ ಅವರನ್ನು ಜೀವಂತವಾಗಿ ಸಮಾಧಿ ಮಾಡಲಾಗಿತ್ತು, ಉಸಿರಾಡಲು ಉಸಿರಾಟದ ಕೊಳವೆಯ ವ್ಯವಸ್ಥೆ ಮಾತ್ರ ಇತ್ತು. 10 ದಿನಗಳ ಕಾಲ ನೀರು, ಆಹಾರವಿಲ್ಲದೆ ಬದುಕಿ ಗಿನ್ನೀಸ್ ದಾಖಲೆಯಾದರು!

ಭಾರ ಎಳೆಯುವುದು
Chanye Hultgren ಭಾರ ಎಳೆಯುವುದರ ಮುಖಾಂತರ ಗಿನ್ನೀಸ್ ದಾಖಲೆಯಾದರು. ಇವರು ಎಳೆದ ಭಾರ ಕೇಳಿದರೆ ತಲೆ ಚಕ್ಕರ್ ಬರಬಹುದು, ಬರೋಬರಿ 907 ಪೌಂಡ್ ಭಾರದ ವಸ್ತುವನ್ನು ಎಳೆದು ಗಿನ್ನೀಸ್ ದಾಖಲೆಯಾಗಿದ್ದಾರೆ.



Click it and Unblock the Notifications