Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಕೇನ್ಸ್ ನಲ್ಲಿ ಭಾಗವಹಿಸುವ ಭಾರತದ ಸೆಲೆಬ್ರಿಟಿಗಳು
ಈಗ ಎಲ್ಲರ ಚಿತ್ತ 2013ರ ಕೇನ್ಸ್ ಚಿತ್ರೋತ್ಸವ ಮೇಲಿದೆ. ಈ ಚಿತ್ರೋತ್ಸವದಲ್ಲಿ ಭಾಗಿಯಾಗುವುದು ಪ್ರತಿಯೊಬ್ಬ ನಟ-ನಟಿಯರ ಕನಸ್ಸು ಮತ್ತು ಪ್ರತಿಷ್ಠೆಯ ವಿಷಯ. ಸಾಮಾನ್ಯವಾಗಿ ಬಾಲಿವುಡ್ ಸೆಲೆಬ್ರಿಟಿಗಳೇ ಹೆಚ್ಚಾಗಿ ಭಾಗವಹಿಸುವ ಈ ಚಿತ್ರೋತ್ಸವಕ್ಕೆ ಈ ಬಾರಿ ತನ್ನ ಸ್ಟೈಲ್ ನಿಂದ ಎಲ್ಲರ ಗಮನ ಸೆಳೆದ ಸೂಪರ್ ಸ್ಟಾರ್ ರಜನಿಕಾಂತ್ ಭಾಗವಹಿಸುತ್ತಿದ್ದಾರೆ ಅನ್ನುವ ಸುದ್ದಿ ಇದೆ.
ಈಗಾಗಲೇ ಅಮಿತಾ ಬಚ್ಚನ್, ಸೋನಂ ಕಪೂರ್, ವಿದ್ಯಾಬಾಲನ್ , ಫ್ರೀಡಾ ಪಿಂಟೋ ಭಾಗವಹಿಸಿದ್ದಾರೆ. ಇನ್ನೂ ಕೆಲ ಸೆಲೆಬ್ರಿಟಿಗಳು ರೆಡ್ ಕಾರ್ಪೆಟ್ ಮೇಲೆ ವಾಕ್ ಮಾಡಲಿದ್ದಾರೆ. ಈ ಬಾರಿ ಭಾರತದಿಂದ ಈ ಕೆಳಗಿನ ಸೆಲೆಬ್ರಿಟಿಗಳು ಕೇನ್ಸ್ ನ ರೆಡ್ ಕಾರ್ಪೆಟ್ ಮೇಲೆ ವಾಕ್ ಮಾಡಲಿದ್ದಾರೆ ಎಂಬ ನಿರೀಕ್ಷೆ ಇದೆ. ರೆಡ್ ಕಾರ್ಪೆಟ್ ಮೇಲೆ ವಾಕ್ ಮಾಡುವವರ ಉಡುಗೆ ತೊಡುಗೆಗಳು ಕೂಡ ವಿಮರ್ಶೆಗೆ, ಹೊಗಳಿಕೆಗೆ, ತೆಗಳಿಕೆಗೆ ಪಾತ್ರವಾಗುತ್ತದೆ ಅನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.
ಈ ಬಾರಿಯ ಕೇನ್ಸ್ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳುವ ಸೆಲೆಬ್ರಿಟಿಗಳು:

ಅಮಿತಾ ಬಚ್ಚನ್
ಅಮಿತಾ ಬಚನ್ ಈಗಾಗಲೇ ಆಗಮಿಸಿದ್ದಾರೆ.

ವಿದ್ಯಾ ಬಾಲನ್
ವಿದ್ಯಾ ಬಾಲನ್ ತನ್ನ ಡಿಫರೆಂಟ್ ದೇಶೀಯ ಲುಕ್ ನಿಂದ ಗಮನ ಸೆಳೆದಿದ್ದಾರೆ.

ಸೋನಂ ಕಪೂರ್
ಸೋನಂ ಕಪೂರ್ ಬಿಳಿ ಸೀರೆಯಲ್ಲಿ ಹಂಸ ನಡುಗೆಯಲ್ಲಿ ರೆಡ್ ಕಾರ್ಪೆಟ್ ಮೇಲೆ ವಾಕ್ ಮಾಡುತ್ತಿರುವ ಭಂಗಿ.

ಫ್ರೀಡೋ ಪಿಂಟೊ
ಫ್ರೀಡೋ ಪಿಂಟೊ ಪಿಂಕ್ ಉಡುಗೆಯಲ್ಲಿ ಮಿಂಚಿದ್ದು ಹೀಗೆ.

ಕೇನ್ಸ್ ಗೆ ಬರಲಿರುವ ಸೆಲೆಬ್ರಿಟಿಗಳು
ನೀಲ್ ನಿತಿನ್ ಮುಖೇಶ್- ಇವರ ಚಿತ್ರ 'ಶಾರ್ಟ್ ಕಟ್ ರೋಮಿಯೋ'ದ ಪ್ರೀಮಿಯರ್ ಶೋಗೆ ಕೇನ್ಸ್ ಗೆ ಬರಲಿದ್ದಾರೆ.

ಕೇನ್ಸ್ ಗೆ ಬರಲಿರುವ ಸೆಲೆಬ್ರಿಟಿಗಳು
ಅಮೀಷಾ ಪಟೇಲ್- ಇವರು ಕೂಡ 'ಶಾರ್ಟ ಕಟ್ ರೋಮಿಯೋ' ಪ್ರೀಮಿಯರ್ ಶೋಗೆ ಬರಲಿದ್ದು ಮನೀಷಾ ಮಲ್ಹೋತ್ರ ಡ್ರೆಸ್ ಧರಿಸುವೆ ಎಂದು ಈಗಾಗಲೇ ಹೇಳಿದ್ದಾರೆ.

ಕೇನ್ಸ್ ಗೆ ಬರಲಿರುವ ಸೆಲೆಬ್ರಿಟಿಗಳು
ಶೆರ್ಲಿನ್ ಚೋಪ್ರಾ- ಈ ಹಾಟ್ ತಾರೆ 'ಕಾಮಸೂತ್ರ 3 ಡಿ' ಸಿನಿಮಾ ಪ್ರೀಮಿಯರ್ ಶೋಗೆ ಬರಲಿದ್ದು ರೆಡ್ ಕಾರ್ಪೆಟ್ ವಾಕ್ ನಲ್ಲಿ ಯಾವ ರೀತಿಯ ಡ್ರೆಸ್ ತೊಡಬಹುದು ಎಂಬ ಕುತೂಹಲ ಮನೆ ಮಾಡಿದೆ.

ಕೇನ್ಸ್ ಗೆ ಬರಲಿರುವ ಸೆಲೆಬ್ರಿಟಿಗಳು
ಎವರ್ ಗ್ರೀನ್ ಬ್ಯೂಟಿ ಐಶ್ವರ್ಯ ರೈ-ದಶಕಗಳಿಂದ ಕೇನ್ಸ್ ಚಿತ್ರೋತ್ಸವಕ್ಕೆ ಬರುತ್ತಿರುವ ಈ ಚೆಲುವೆ ತನ್ನ ಡ್ರೆಸ್ಸಿಂಗ್ ನಿಂದ ನೋಡುಗರನ್ನು ಕ್ಲೀನ್ ಬೋಲ್ಡ್ ಮಾಡುತ್ತಾಳೆ ಅನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

ಕೇನ್ಸ್ ಗೆ ಬರಲಿರುವ ಸೆಲೆಬ್ರಿಟಿಗಳು
ಸರಳ ಸುಂದರಿ ನಂದಿತಾ ದಾಸ್- 2005ರಲ್ಲಿ ನಂದಿತಾ ದಾಸ್ ಕೇನ್ಸ್ ಚಿತ್ರೋತ್ಸವಕ್ಕೆ ಭಾಗವಹಿಸಿದದ್ದರು. ಈ ವರ್ಷದ ಕೇನ್ಸ್ ಸಂಭ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕೇನ್ಸ್ ಗೆ ಬರಲಿರುವ ಸೆಲೆಬ್ರಿಟಿಗಳು
ಸೂಪರ್ ಸ್ಟಾರ್ ರಜನಿಕಾಂತ್- ಇವರ 'ಕೋಚಡಿಯಾ' ಸಿನಿಮಾದ ಬಗ್ಗೆ ಜನರಲ್ಲಿ ತುಂಬಾ ನಿರೀಕ್ಷೆ ಇದ್ದು, ಕೇನ್ಸ್ ನಲ್ಲಿ ಈ ಸಿನಿಮಾದಲ್ಲಿ ಬಳಸಿದ ತಂತ್ರಜ್ಞಾನಕ್ಕೆ ಭವ್ಯ ಸ್ವಾಗತ ದೊರೆತಿದೆ.

ಕೇನ್ಸ್ ಗೆ ಬರಲಿರುವ ಸೆಲೆಬ್ರಿಟಿಗಳು
ಅನುರಾಗ್ ಕಶ್ಯಪ್- ತುಂಬಾ ಜನಪ್ರಿಯಗಳಿಸಿದ್ದ 'ಬಾಂಬೆ ಟಾಕೀಸ್' ಸಿನಿಮಾ 100 ವರ್ಷ ಕಳೆದರೂ ಅದೇ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ಅದರ ಪ್ರದರ್ಶನಕ್ಕೆ ಅನುರಾಗ್ ಕಶ್ಯಪ್ ಬರಲಿದ್ದಾರೆ.

ಕೇನ್ಸ್ ಗೆ ಬರಲಿರುವ ಸೆಲೆಬ್ರಿಟಿಗಳು
ನವಾಜುದ್ದಿನ್ ಸಿದ್ದಿಕಿ- ಬಾಂಬೆ ಟಾಕೀಸ್ ನ ಪ್ರಮೋಷನ್ ಗೆ ಇವರು ರೆಡ್ ಕಾರ್ಪೆಟ್ ವಾಕ್ ಮಾಡಲಿದ್ದಾರೆ.



Click it and Unblock the Notifications
