Latest Updates
-
ಸಖತ್ ರುಚಿ ನೀಡುವ ಸುಲಭದ ಧನಿಯಾ ರಸಂ: ಸೂಪ್ನಂತೆ ಕುಡಿಯಬಹುದು! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಗ್ಯಾಸ್ ಹಚ್ಚೋದೆ ಬೇಡ; ಸುಲಭವಾಗಿ ಮಾಡಿ ಈ ಅದ್ಭುತ ರುಚಿಯ ಸ್ವೀಟ್! -
ಕೆಲಸ ಮಾಡಲು ದೇಹಕ್ಕೆ ಬಲಬೇಕಾದರೆ ಈ ಹೆಸರುಕಾಳಿನ ಸೂಪರ್ಫುಡ್ ತಿನ್ನಿ! ವಾರಕ್ಕೊಂದು ಉಂಡೆ ಸಾಕು! -
ಅರ್ಧದಷ್ಟು ಭಾರತೀಯರಲ್ಲಿ 6 ಗಂಟೆಗೂ ಕಡಿಮೆ ನಿದ್ರೆ: ಸಮೀಕ್ಷೆಯಲ್ಲಿದೆ ಆತಂಕಕಾರಿ ವಿಚಾರ! -
ವಿವಾಹ ಯೋಗ ಕೂಡುವ ಸಾಧ್ಯತೆ ಇದೆ! ಸಂಗಾತಿಗೆ ಗಿಫ್ಸ್ ನೀಡಬಹುದು -
ಮಹಿಳೆಯರು ಕಾಲುಂಗುರ ಏಕೆ ಧರಿಸಬೇಕು? ಎಷ್ಟು ಸುತ್ತು ನಿಮ್ಗೆ ಯಶಸ್ಸು ತರುತ್ತೆ? ರಹಸ್ಯ ತಿಳಿಯಿರಿ -
March 14 Horoscope: ಪ್ರಯಾಣಗಳ ಮಾಡುವ ದಿನವಾಗಲಿದೆ! -
ಸಿಲಿಂಡರ್ 3 ತಿಂಗಳು ಬರಬೇಕೆ? ಇನ್ಮುಂದೆ ಗ್ಯಾಸ್ ಚಿಂತೆ ಬೇಡ.. LPG ಉಳಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್
ಐಬಿಎಫ್ 13:ರಾಘವೇಂದ್ರ ರಾಥೋಡ್ ಸಂಗ್ರಹ
ಐಬಿಎಫ್ 2013ರಲ್ಲಿ ರಾಘವೇಂದ್ರ ರಾಥೋಡ್ ತಮ್ಮ ವಿನ್ಯಾಸದ ಉಡುಪುಗಳನ್ನು ಪ್ರದರ್ಶಿಸಿದಾಗ ಜನ ಮಾರುಹೋದರು. ಈತ ಹೆಚ್ಚಾಗಿ ಪುರುಷರ ಉಡುಪುಗಳನ್ನು ಪ್ರದರ್ಶಿಸಿದರು. ಏಕೆಂದರೆ ಈತ ಎಂದೂ ಕೂಡ ವರನನ್ನು ಕಡೆಗಣಿಸಿದ ಡಿಸೈನರ್ ಅಲ್ಲವೇ ಅಲ್ಲ.
ಐಬಿಎಫ್ 2013ರ ಮೂರನೇ ದಿನ ರಾಘವೇಂದ್ರ ರಾಥೋಡರ ಪ್ರದರ್ಶನವನ್ನು ಗಮನಿಸಿದರೆ ಆತ ಉಳಿದವರಿಗಿಂತ ಭಿನ್ನನಾಗಿರುವುದು ಕಂಡುಬರುತ್ತದೆ. ಈತನ ವಿನ್ಯಾಸಗಳು ಹೆಚ್ಚು ಸಮಕಾಲೀನವಾಗಿದ್ದವು. ಈತ ಬಿಳಿ ಅಥವ ಕಪ್ಪು ಬಣ್ಣಗಳಿಗೆ ಅಂಟಿಕೊಂಡಿರುವ ಬದಲು ಹಲವು ಹೊಸ ಬಣ್ಣಗಳನ್ನು ವಧುವಿನ ವಸ್ತ್ರವಿನ್ಯಾಸಕ್ಕಾಗಿ ಬಳಸಿದ್ದನ್ನು ಕಾಣಬಹುದಿತ್ತು.
ಈತನ ವಿನ್ಯಾಸಗಳು ನೋಡಲು ಅದ್ಭುತವಾಗಿತ್ತು. ಆದರೆ ಒಂದು ವಿಷಯವನ್ನು ನಾವು ಗಮನಿಸಿದ್ದೇನೆಂದರೆ ದೆಹಲಿಯಲ್ಲಿ ಪ್ರದರ್ಶಿಸಿದ ಉಡುಪುಗಳೇ ಇಲ್ಲಿ ಕೂಡ ಕಾಣಿಸಿಕೊಂಡಿತು.
ದಿಯಾ ಮಿರ್ಜಾ ರಾಘವೇಂದ್ರ ರಾಥೋಡ್ ವಿನ್ಯಾಸದ ಉಡುಪುಗಳಿಗೆ ರೂಪದರ್ಶಿಯಾಗಿದ್ದಳು. ಈಕೆ ಈ ಉಡುಪುಗಳಲ್ಲಿ ಬಹಳ ಸುಂದರವಾಗಿ ಕಾಣುತ್ತಿದ್ದಳು.
ಐಬಿಎಫ್ ಡಬ್ಲ್ಯೂ 2013 ರಲ್ಲಿ ರಾಘವೇಂದ್ರ ರಾಥೋಡ್ ಸಂಗ್ರಹ:

ಮುಖ್ಯ ಪ್ರದರ್ಶನಗಾರ್ತಿ
ಸುಂದರ ದಿಯಾ ಮಿರ್ಜಾ ಪ್ರೇಕ್ಷಕರನ್ನು ಬೆರಗುಗೊಳಿಸಿದರು. ಈಕೆ ರಾಘವೇಂದ್ರ ರಾಥೋಡ್ ವಿನ್ಯಾಸದ ಉಡುಪುಗಳನ್ನು ಮುಂಬೈನ ಐಬಿಎಫ್ ಡಬ್ಲ್ಯೂ 2013ರಲ್ಲಿ ಪ್ರದರ್ಶಿಸಿದಳು.

ಪಿಂಕ್ ವರ್ಸಸ್ ಬ್ಲಾಕ್
ರಾಘವೇಂದ್ರ ಪ್ರದರ್ಶಿಸಿದ ಅತ್ಯುತ್ತಮ ಉಡುಪುಗಳಲ್ಲಿ ಇದು ಕೂಡ ಒಂದು. ಆದರೆ ಇದೇ ಉಡುಪನ್ನು ಮಾಜಿ ಮಿಸ್ ಇಂಡಿಯಾ ಅಮೃತ ಪಾಟ್ಕಿ ಐಬಿಎಫ್ ಡಬ್ಲ್ಯೂ 2013ರ ಜುಲೈನ ವೇದಿಕೆಯಲ್ಲಿ ಪ್ರದರ್ಶಿಸಿದ್ದಳು.

ಸ್ಟೈಲಿಶ್ ಬ್ಲಾಕ್ ಅಂಡ್ ಗೋಲ್ಡ್
ಇದನ್ನು ನೋಡಿದಾಕ್ಷಣ ವಾವ್! ಎಂದು ಉದ್ಗರಿಸುತ್ತೀರಿ ಅಲ್ಲವೆ? ಕಪ್ಪು ಕುರ್ತಾ ಮೇಲಿನ ಚಿನ್ನದ ಬಣ್ಣದ ಅಂಚು ಇದರ ಪ್ರಮುಖ ಆಕರ್ಷಣೆಯಾಗಿತ್ತು.

ಲುಕಿಂಗ್ ಹ್ಯಾಂಡ್ಸಂ
ಪಿಂಕ್ ಬರೀ ಹೆಂಗಸರ ಬಣ್ಣವೆಂದು ತಿಳಿದಿದ್ದೆವು. ಆದರೆ ರಾಘವೇಂದ್ರ ಇದನ್ನು ಪುರುಷರ ಉಡುಗೆಗೂ ಕೂಡ ಬಳಸಿ ತೋರಿಸಿದರು.

ಹಾಟ್ ಪಿಂಕ್
ಪಿಂಕ್ ಈ ದಿನದ ಬಣ್ಣವಾಗಿತ್ತು. ಈ ಉಡುಪು ಅತ್ಯಂತ ಆಕರ್ಷಣೀಯವಾಗಿತ್ತು. ಇದರ ಬಣ್ಣಗಳ ಕಾಂಬಿನೇಷನ್ ಒಂದು ಮತ್ತೊಂದರ ಮೆರುಗನ್ನು ಹೆಚ್ಚಿಸುವಂತಿತ್ತು.

ಮತ್ತೊಮ್ಮೆ ಪಿಂಕ್
ಪುರುಷರ ವಸ್ತ್ರ ವಿನ್ಯಾಸಕ್ಕೆ ಈ ಬಣ್ಣವನ್ನು ಹೆಚ್ಚಾಗಿ ಬಳಸಲಾಗಿತ್ತು. ಇದಕ್ಕೆ ನೇರಳೆ ಬಣ್ಣದ ವೇಸ್ಟ್ ಕೋಟ್ ಪೂರಕವಾಗಿತ್ತು.

ಪೊಲ್ಕಾ ಕುರ್ತಾ
ಇಲ್ಲಿ ರಾಘವೇಂದ್ರ ರಾಥೋಡ್ ತಮ್ಮ ಸಂಗ್ರಹವನ್ನು ಮತ್ತೆ ಪುನರಾವರ್ತನೆಗೊಳಿಸಿದರು. ಇದೇ ಪೊಲ್ಕಾ ಕುರ್ತಾ ಐಬಿಎಫ್ ಡಬ್ಲ್ಯೂ 2013 ಜುಲೈನಲ್ಲಿ ಪ್ರದರ್ಶಿಸಲ್ಪಟ್ಟಿತ್ತು.

ರಾಯಲ್ ಲುಕ್
ನೇರಳೆ ಬಣ್ಣಕ್ಕೆ ನಿಜಕ್ಕೂ ರಾಯಲ್ ಲುಕ್ ಇದೆ. ಐಬಿಎಫ್ ಡಬ್ಲ್ಯೂ 2013 ಮುಂಬೈನಲ್ಲಿ ಈ ಉಡುಪು ಪ್ರಮುಖ ಆಕರ್ಷಣೆಯಾಗಿತ್ತು.

ಕ್ರಿಂಸನ್ ಪಿಂಕ್
ಸುಂದರ ಬಣ್ಣಗಳ ಕಾಂಬಿನೇಷನ್ ನ ಕುರ್ತಾಗಳು ಎಲ್ಲರ ಕಣ್ಣರಳಿಸಿದವು. ಈ ಕ್ರಿಂಸನ್ ಮತ್ತು ಪಿಂಕ್ ಕುರ್ತಾ ಪಾಕೆಟ್ ನೊಂದಿಗೆ ಮೋಹಕವಾಗಿತ್ತು.

ಲವ್ಲಿ ಪಿಂಕ್
ಪಿಂಕ್, ಬ್ಲಾಕ್ ಮತ್ತು ವೈಟ್ ಬಣ್ಣಗಳು ಈ ಕುರ್ತಾದ ಸೌಂದರ್ಯವನ್ನು ಪೂರ್ಣಗೊಳಿಸಿದವು. ಕುರ್ತಾದ ಕೊನೆಯಲ್ಲಿದ್ದ ಚಿನ್ನದ ದಾರದ ಕಸೂತಿ ಇದರ ಅಂದವನ್ನು ಹೆಚ್ಚಿಸಿದ್ದವು.

ವರ
ವರರ ಉಡುಪಿನಿಂದ ಕಪ್ಪು ಹೊರನಡೆದು ಅದರ ಜಾಗದಲ್ಲಿ ನೇರಳೆ ಬಣ್ಣ ಬಳಸಲಾಯಿತು. ಈ ರಾಯಲ್ ಕಲರ್ ಸಾಂಪ್ರದಾಯಿಕ ಉಡುಪಿಗೆ ಹೊಸ ಕಳೆಯನ್ನು ತಂದುಕೊಟ್ಟಿತು.

ಗುಲಾಬಿ ಬಣ್ಣದಲ್ಲಿ ವರ
ಪಿಂಕ್ ವೇಸ್ಟ್ ಕೋಟ್ ಮತ್ತು ಪಿಂಕ್ ಕುರ್ತಾ, ಬಿಳಿ ಪೈಜಾಮ ವರನುಡುಗೆಯನ್ನು ಪರಿಪೂರ್ಣಗೊಳಿಸಿತ್ತು. ಪಿಂಕ್ ಬಣ್ಣವನ್ನು ಇಷ್ಟಪಡುವ ವರಮಹಾಶಯರು ರಾಘವೇಂದ್ರ ರಾಥೋಡರ ಸಲಹೆ ಪಡೆಯಬಹುದು.

ಸಾಂಪ್ರದಾಯಿಕ
ನೇರಳೆ ಇತ್ತೀಚಿನ ವರನುಡುಗೆಯ ಬಣ್ಣವಾಗಿದ್ದು ರಾಘವೇಂದ್ರರ ವಿನ್ಯಾಸದ ಉಡುಗೆಗಳಲ್ಲಿ ಐಬಿಎಫ್ ಡಬ್ಲ್ಯೂ 2013ರ ವೇದಿಕೆಯಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿತು.

ರಾಜಕುಮಾರ
ರಾಜಕುಮಾರನ ದಿರಿಸು ಎನಿಸುವಂತಹ ಈ ಉಡುಪು ವೇದಿಕೆಯಲ್ಲಿ ಕಾಣಿಸಿಕೊಂಡಿತು. ಗೋಲ್ಡ್, ಬ್ಲಾಕ್, ನೇರಳೆ ಮತ್ತು ಬ್ರಾನ್ಜ್ ಬಣ್ಣಗಳನ್ನು ಈ ಕುರ್ತಾಗಾಗಿ ಬಳಸಲಾಗಿತ್ತು.

ಸಾಂಪ್ರದಾಯಿಕ ಚೆಲುವೆ
ರಾಘವೇಂದ್ರರ ಸಂಗ್ರಹದ ಉಡುಪುಗಳಲ್ಲಿ ಈ ಉಡುಪು ಹೆಚ್ಚು ಗಾಢ ಬಣ್ಣಗಳನ್ನು ಒಳಗೊಂಡಿತ್ತು.

ಬದಲಾವಣೆಯಿಲ್ಲದ ಉಡುಪು
ಭಾರತೀಯ ವರರ ಉಡುಪುಗಳ ವಿನ್ಯಾಸದಲ್ಲಿ ರಾಘವೇಂದ್ರ ಅದೇ ಸಾಂಪ್ರದಾಯಿಕ ಬಣ್ಣಗಳಾದ ಬಿಳಿ/ಕ್ರೀಂ ಮತ್ತು ಗೋಲ್ಡ್ ಬಳಸಿ ವಸ್ತ್ರಗಳನ್ನು ವಿನ್ಯಾಸಗೊಳಿಸಿದ್ದರು.

ಅಚ್ಚ ಬೆಳ್ಳಿ ಮತ್ತು ಬಿಳಿ ಮಿಶ್ರಣ
ಬಿಳಿ ಬಣ್ಣದ ಕುರ್ತಾಗೆ ಬೆಳ್ಳಿಯ ಲೈನಿಂಗ್ ನೀಡಲಾದ ಈ ಉಡುಪು ಆಕರ್ಷಣೀಯವಾಗಿತ್ತು. ಇದು ಈ ಪ್ರದರ್ಶನದ ಅತ್ಯುತ್ತಮ ಉಡುಪುಗಳಲ್ಲಿ ಒಂದಾಗಿತ್ತು.

ರಾತ್ರಿ ಕಪ್ಪು
ಈ ಉಡುಪಿನಲ್ಲಿ ಕಪ್ಪು ಮತ್ತು ಚಿನ್ನದ ಬಣ್ಣಗಳನ್ನು ಮಾತ್ರ ಕಾಣಬಹುದಾಗಿತ್ತು. ಇದು ಹೆಚ್ಚು ಆಕರ್ಷಣೀಯವಾಗಿತ್ತು.



Click it and Unblock the Notifications











