Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಐಬಿಎಫ್ 13:ಪಲ್ಲವಿ ಜೈಕಿಶನ್ ಸಂಗ್ರಹ
ಅನುಭವಿ ವಸ್ತ್ರ ವಿನ್ಯಾಸಕಿ ಪಲ್ಲವಿ ಜೈಕಿಶನ್ ವಿನ್ಯಾಸದ ಉಡುಪುಗಳು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಈಕೆ ವಿನ್ಯಾಸಗೊಳಿಸಿದ ಸೀರೆ, ಲೆಹಂಗಾಗಳ ಮೇಲೆ ಹ್ಯಾಂಡ್ ಪೈಂಟ್ ಮಾಡಲಾಗಿತ್ತು. ಇದಕ್ಕೆ ಗ್ರಾನೈಟ್ ಆಕ್ಸ್ ಬ್ಲಡ್ ಮರೂನ್ ಬಣ್ಣಗಳನ್ನು ಬಳಸಲಾಗಿತ್ತು.
ಈ ವಿನ್ಯಾಸಕಿಯ ಸಂಗ್ರಹದಲ್ಲಿ ಪೈಂಟೆಡ್ ಫ್ರೆಂಚ್ ಜಾಕ್ವರ್ಡ್, ಜಾರ್ಜೆಟ್ ಮತ್ತು ತುಲ್ಲೆ ಸೀರೆಗಳನ್ನು ಕೂಡ ಕಾಣಬಹುದಿತ್ತು. ಇವುಗಳ ಮೇಲೆ ಆಕೆಯ ವಿನ್ಯಾಸದ ಹೂವಿನ ಚಿತ್ತಾರಗಳಿದ್ದವು. ಆಕೆಯ ಪ್ರತಿ ಸೀರೆಯ ಮೇಲೆ ಸುಂದರವಾದ ಫ್ರೆಂಚ್ ಚುಮ್ಕಿ ಕಸೂತಿಯಿದ್ದು ಆಕರ್ಷಣೀಯವಾಗಿತ್ತು.
ವೇದಿಕೆಯ ಮೇಲೆ ಪ್ರದರ್ಶಿಸಲಾದ ಲೆಹಂಗ ಉಡುಪುಗಳೆಲ್ಲ ಒಂದೇ ಪೀಸ್‍ನವಾಗಿದ್ದು ಗಾಗ್ರಾಗಳನ್ನು ಡೆಲಿಕೇಟ್ ಸ್ಟೋಲ್‍ನೊಂದಿಗೆ ಧರಿಸಲಾಗಿತ್ತು. ಮತ್ತೊಂದು ಈಕೆಯ ವಿನ್ಯಾಸದ ಉಡುಪುಗಳ ಆಕರ್ಷಣೆಯೆಂದರೆ ಲೆಹಂಗ ಸೀರೆಗಳು ಮತ್ತು ಡಿಸೈನರ್ ಜಾಕೆಟ್ಸ್ ಇವುಗಳು ಕುಲ್ಲೊಟ್ಸ್ ಅಥವ ನೀ ಬ್ರೀಚಸ್ ಹೊಂದಿದ್ದವು. ಇವೆಲ್ಲ ಗ್ರಾನೈಟ್- ಆಕ್ಸ್ ಬ್ಲಡ್- ಮರೂನ್ ಬಣ್ಣದಲ್ಲಿದ್ದವು.
ಐಬಿಎಫ್ ಡಬ್ಲ್ಯೂ 2013: ಪಲ್ಲವಿ ಜೈಕಿಶನ್ ವಿನ್ಯಾಸಗಳು:

1. ಬೇಬಿ ಪಿಂಕ್
ಪಲ್ಲವಿಯವರ ಸಂಗ್ರಹದಲ್ಲಿದ್ದ ಅತ್ಯುತ್ತಮ ಉಡುಪುಗಳಲ್ಲಿ ಬೇಬಿ ಪಿಂಕ್‍ನ ಈ ದಿರಿಸು ಕೂಡ ಒಂದು. ಇದರ ಮೇಲೆ ಹಳದಿ ಮತ್ತು ಮರೂನ್ ಬಣ್ಣದ ಹಲವು ಫ್ರೆಂಚ್ ಹೂಗಳಿದ್ದವು.

2. ಡ್ಯುಯಲ್ ಕಾಂಬಿನೇಷನ್
ಇದು ಈ ಸಂಜೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿತ್ತು. ಈ ಉಡುಪಿಗೆ ದೊಡ್ಡ ಪದಕ ಹೊಂದಿದ್ದ ಮುತ್ತಿನ ಹಾರ ಹೆಚ್ಚಿನ ಮೆರುಗನ್ನು ತಂದುಕೊಟ್ಟಿತು.

3. ನೆಟ್ ಯೆಲ್ಲೋ
ಈ ಸೀರೆ ಕೂಡ ಈ ವಿನ್ಯಾಸಕಿಯ ಅತ್ಯುತ್ತಮ ಸೀರೆಗಳಲ್ಲಿ ಒಂದಾಗಿತ್ತು. ಈ ಸೀರೆಯ ಅಂಚಿಗೆ ನಿರಿಗೆಗಳಿದ್ದು ಗಾಢ ಪಿಂಕ್ ಬಣ್ಣದ ಹೂಗಳು ಇದರ ಅಂದವನ್ನು ಹೆಚ್ಚಿಸಿದ್ದವು.

4. ಕಾಂಟೆಂಪೊರರಿ
ನಿಮಗೆ ಸಮಕಾಲೀನ ಸೀರೆಗಳು ಇಷ್ಟವಾಗುವುದಾದರೆ ಈ ಸೀರೆ ನಿಮಗೆ ಇಷ್ಟವಾಗುತ್ತದೆ. ಐಬಿಎಫ್ ಡಬ್ಲ್ಯೂ 2013ರಲ್ಲಿ ಪ್ರದರ್ಶಿಸಲಾದ ಅತಿ ಸುಂದರ ಸೀರೆಗಳಲ್ಲಿ ಇದು ಕೂಡ ಒಂದು.

5. ಗಾಗ್ರ ಪ್ಯಾಂಟ್ಸ್
ಕೆಲವರಿಗೆ ಗಾಗ್ರವನ್ನು ಹೀಗೆ ಹಾಕಿಕೊಳ್ಳಲು ಇಷ್ಟವಾಗುತ್ತದೆ. ಬ್ರೈಟ್ ಪಿಂಕ್ ಬಣ್ಣದ ಗಾಗ್ರ ಪ್ಯಾಂಟುಗಳನ್ನು ಹೂವಿನ ಚಿತ್ತಾರವಿದ್ದ ಕುರ್ತಿಯೊಂದಿಗೆ ಹಾಕಿಕೊಳ್ಳಲಾಗಿತ್ತು.

6. ಇನ್ ಎಲ್ಲೋ
ಹಳದಿ ಮತ್ತು ಸಿಲ್ವರ್ ಬಣ್ನ ಬಹುಶಃ ಲೆಟೆಸ್ಟ್ ಫ್ಯಾಷನ್ ಇರಬೇಕು. ಈ ಸನ್ ಶೈನ್ ಎಲ್ಲೋ ಸೀರೆಯ ಮೇಲೆ ಸಿಲ್ವರ್ ಬಣ್ಣದ ಹೂವಿನ ಪ್ರಿಂಟ್‍ಗಳಿದ್ದವು. ಇದಕ್ಕೆ ಗ್ರೇಯಿಶ್ ಬಣ್ಣದ ಬ್ಲೌಸ್ ಧರಿಸಲಾಗಿತ್ತು.

7. ಪೀಚಿ ಆರೆಂಜ್
ಇದು ಕೂಡ ಪಲ್ಲವಿಯ ಅತ್ಯುತ್ತಮ ವಿನ್ಯಾಸಗಳಲ್ಲಿ ಒಂದಾಗಿತ್ತು. ಬ್ರೈಟ್ ಪೀಚ್ ಮತ್ತು ಆರೆಂಜ್ ಕಾಂಬಿನೇಷನ್ ದಿರಿಸು ನೋಡಲೇ ಬೇಕಾದ ದಿರಿಸು.

8. ಕೋರಲ್
ಪಲ್ಲವಿ ಜೈಕಿಶನ್ ಕಲೆಕ್ಷನ್‍ನಲ್ಲಿ ಅತಿ ಹೆಚ್ಚು ಕಾಣಿಸಿಕೊಂಡ ಮತ್ತೊಂದು ಬಣ್ಣ ಕೋರಲ್. ಈ ಸೀರೆಗೆ ಸಿಲ್ವರ್ ಬೀಡಿಂಗ್ ಕೊಡಲಾಗಿತ್ತು. ಇದು ನೋಡುವವರನ್ನು ಮೂಕವಿಸ್ಮಿತರನ್ನಾಗಿಸುವಂತಿತ್ತು.

9.ನೈಟ್ ಬ್ಲೂ ರೆಡ್
ಈ ನೈಟ್ ಬ್ಲೂ ರೆಡ್ ನೆಟ್ ಸೀರೆ ದೀಪಗಳ ಬೆಳಕಿನಲ್ಲಿ ಮತ್ತಷ್ಟು ಸುಂದರವಾಗಿ ಕಾಣುತಿತ್ತು. ಈ ಸೀರೆ ಸಂಜೆಯ ರಂಗಿಗೆ ಮೋಹಕತೆಯನ್ನು ತಂದಿತ್ತು.

10. ಬ್ಲಡ್ ರೆಡ್
ಕೆಂಪು ಐಬಿಎಫ್ ಡಬ್ಲ್ಯೂ 13ರಲ್ಲಿ ಪ್ರದರ್ಶನಗೊಂಡ ವಿನ್ಯಾಸಕರು ಅತಿ ಹೆಚ್ಚು ಬಳಸಿದ್ದ ಬಣ್ಣವಾಗಿತ್ತು. ಈ ಸೀರೆಗೆ ಭರ್ಜರಿ ಕಸೂತಿಯನ್ನು ಮಾಡಲಾಗಿತ್ತು.

11. ಲವ್ಲಿ ಪಿಂಕ್
ಪಿಂಕ್ ಪ್ರದರ್ಶನದ ಇಂದಿನ ಬಣ್ಣವಾಗಿತ್ತು. ಈ ಕ್ರೀಂ ಮತ್ತು ಪಿಂಕ್ ಗಾಗ್ರ ವಧು ತೊಡಬಹುದಾದ ಅತ್ಯುತ್ತಮ ಉಡುಗೆ ಎನಿಸುವ ಹಾಗಿತ್ತು. ಇದರ ಮೇಲೆ ದೊಡ್ಡ ಹೂಗಳಿದ್ದದ್ದು ಇದರ ಆಕರ್ಷಣೆಯಾಗಿತ್ತು.

12. ಹಾಟ್ ಪಿಂಕ್
ವೇದಿಕೆಯ ಮೇಲೆ ಕಾಣಿಸಿಕೊಂಡ ಮತ್ತೊಂದು ಪಿಂಕ್ ಬಣ್ಣದ ಗಾಗ್ರ ಇದು. ಪಲ್ಲವಿ ವಧುವಿಗೆ ಹೊಂದುವಂತಹ ಬಣ್ಣ ಪಿಂಕ್ ಎಂಬುದನ್ನು ಈ ಉಡುಪಿನ ಮೂಲಕ ಸಾಬೀತುಗೊಳಿಸಿದರು.

13. ಹೂವಿನ ಚಿತ್ತಾರ
ಗೋಲ್ಡ್, ಕ್ರೀಂ ಮತ್ತು ಪಿಂಕ್ ಹೂವುಗಳು ಈ ಉಡುಪಿನ ಅಂದವನ್ನು ಹೆಚ್ಚಿಸಿದ್ದವು. ನಮಗೆ ಇದರಲ್ಲಿ ಇಷ್ಟವಾದದ್ದು ಈ ಉಡುಪಿನ ದುಪ್ಪಟವನ್ನು ಸ್ಟೈಲಿಶ್ ಆಗಿ ಬಳಸಿದ್ದು.

14. ಹೆವಿ ಕೋರಲ್
ವಧುವಿಗಾಗಿ ಆಯ್ಕೆ ಮಾಡಬಹುದಾದ ಬಟ್ಟೆಗಳಲ್ಲಿ ಕೋರಲ್ ಕೂಡ ಒಂದು. ಪಲ್ಲವಿ ಈ ಪ್ರದರ್ಶನದಲ್ಲಿ ಗೋಲ್ಡನ್ ಗಾಗ್ರವನ್ನು ಪ್ರದರ್ಶಿಸಿದರು.

15. ಕ್ರಿಂಸನ್ ರೆಡ್
ವಾವ್! ಇದೇ ಈ ಉಡುಪನ್ನು ಕಂಡ ತಕ್ಷಣ ಬಂದ ಪ್ರತಿಕ್ರಿಯೆ. ಕ್ರಿಂಸನ್ ರೆಡ್ ಕಲರ್‍ನ ಈ ಗಾಗ್ರ ಪಲ್ಲವಿಯ ಕಲೆಕ್ಷನ್ ಸುಂದರ ವಿನ್ಯಾಸಗಳಲ್ಲಿ ಒಂದಾಗಿತ್ತು.



Click it and Unblock the Notifications
