Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ನಕಾರಾತ್ಮಕ ಮನೋಭಾವನೆಯನ್ನು ಕೊಲ್ಲುವುದು ಹೇಗೆ?
ನೀವು ಯಾವಾಗಲು ನಿಮ್ಮಕುರಿತಾಗಿ ಬರುವ ಟೀಕೆ ಟಿಪ್ಪಣಿ ಮತ್ತು ವಿಮರ್ಶೆಗಳ ಬಗ್ಗೆ ತಲೆ ಕೆಡಿಸಿಕೊಂಡಿದ್ದೀರಾ? ಯಾವಾಗಲು ವಿಮರ್ಶೆಯನ್ನು ನೆನಪಿಸಿಕೊಳ್ಳುತ್ತಿರುತ್ತೀರಾ? ನಿಮಗೆ ಸಿಗಬೇಕಾದ ಹೆಸರು, ಗೌರವ ನಿಮಗಿನ್ನು ದೊರೆತಿಲ್ಲವೆ? ಈ ಎಲ್ಲಾ ವಿಚಾರಗಳು ನಿಮ್ಮ ತಲೆಯನ್ನು ತುಂಬಿ ಹೋಗಿವೆಯೇ? ಎಚ್ಚರ!!! ಇವೆಲ್ಲವು ನಕಾರಾತ್ಮಕ ಮನೋಭಾವನೆಗಳು. ನೀವು ಅದಕ್ಕೆ ಬಲಿಯಾಗಿದ್ದೀರಿ ಎಂದು ಸೂಚಿಸುತ್ತಿವೆ ನಿಮ್ಮ ಭಾವನೆಗಳು. ಏಕೆ ಈ ನಕಾರಾತ್ಮಕ ಮನೋಭಾವನೆಗಳ ಬಗ್ಗೆ ಅಷ್ಟೊಂದು ಎಚ್ಚರಿಕೆಯಿಂದಿರಬೇಕು ಎಂದು ಭಾವಿಸುತ್ತಿರುವಿರಿ ಅಲ್ಲವೇ?. ನಿಜ ಇವು ಅಪಾಯಕಾರಿ ಭಾವನೆಗಳು, ಇವು ನಿಮ್ಮನ್ನು ಪ್ರಪಂಚದಲ್ಲಿ ಒಬ್ಬಂಟಿಯನ್ನಾಗಿಸಿ ಕಾಡುತ್ತವೆ. ನಿಮ್ಮ ಆತ್ಮವಿಶ್ವಾಸವನ್ನು ಕಸಿದುಕೊಂಡು ನಿಮ್ಮನ್ನು ಸೋಲುವಂತೆ ಮಾಡುತ್ತವೆ. ಹಾಗಾಗಿ ಇವುಗಳ ಬಗ್ಗೆ ಎಷ್ಟು ಎಚ್ಚರಿಕೆಯಿಂದ ಇದ್ದರೆ, ಅಷ್ಟು ಒಳ್ಳೆಯದು.
ಒಂದು ದಿನ ನೀವು ಯಾರ ಮೇಲೊ ಕೂಗಾಡುತ್ತಿರುತ್ತೀರಿ, ಯಾರ ಮೇಲೋ ಮುನಿಸಿಕೊಂಡಿರುತ್ತೀರಿ. ಆದರೆ ಮಾರನೆಯ ದಿನ ನಿಮಗೆ ಗೊತ್ತಾಗುತ್ತದೆ, ನೀವು ಎಲ್ಲಿ ಯಾಮಾರಿದ್ದೀರಿ ಎಂದು. ಆಗ ಎಲ್ಲವೂ ನಕಾರಾತ್ಮಕ ಹಾದಿಯಲ್ಲಿ ಸಾಗಲು ಆರಂಭಿಸುತ್ತದೆ. ಇದರಿಂದಾಗಿ ಜೀವನದ ಸುಂದರ ಕ್ಷಣಗಳು ನಿಮ್ಮಿಂದ ದೂರಸರಿಯಲು ಆರಂಭಿಸುತ್ತವೆ, ನೀವು ಅವುಗಳನ್ನು ಕಳೆದುಕೊಳ್ಳುತ್ತೀರಿ. ಇವೆಲ್ಲದಕ್ಕು ಕಾರಣ ನಕಾರಾತ್ಮಕ ಆಲೋಚನೆಗಳು ಎಂದು ಬಿಡಿಸಿ ಹೇಳ ಬೇಕಿಲ್ಲ. ಅದಕ್ಕಾಗಿ ನೀವು ನಿಮ್ಮ ಮನಸ್ಸಿನ ಭಾವನೆಗಳನ್ನು ಸದಾ ಗಮನಿಸುತ್ತಿರಬೇಕು. ನಿಮ್ಮ ನಡೆ - ನುಡಿ ಹಾಗು ಚಲನವಲನಗಳನ್ನು ಸದಾ ಗಮನಿಸುತ್ತಿರಿ. ನಿಮ್ಮ ಜೀವನದ ಕುರಿತಾಗಿ ಒಳ್ಳೆಯ ಭಾವನೆಗಳನ್ನು ಬೆಳೆಸಿಕೊಳ್ಳಿ. ಅದಕ್ಕಾಗಿ ನಿಮ್ಮ ಆಲೋಚನೆಗಳ ಮೇಲೆ ಹಿಡಿತ ಸಾಧಿಸಿ,ಅವುಗಳಲ್ಲಿ ಸಮತೋಲನ ತನ್ನಿ.

ನಕಾರಾತ್ಮಕ ಮನೋಭಾವನೆಗಳು ನಿಮ್ಮನ್ನು ಭಯ, ಒತ್ತಡ ಮತ್ತು ಅಸುರಕ್ಷತೆಯೆನ್ನುವ ವೃತ್ತದಲ್ಲಿ ಸಿಲುಕಿಸಿ,ನಲುಗಿಸುತ್ತವೆ. ಜೊತೆಗೆ ಇವು ನಿಮಗೆ ಸೋಲಿನ ಮನೋಭಾವ ಸಹ ಕಾಡುವಂತೆ ಮಾಡುತ್ತವೆ. ಇದರಿಂದ ಪಾರಾಗಲು ಇರುವ ಒಂದೇ ಒಂದು ಮಾರ್ಗ ಇಂತಹ ಆಲೋಚನೆಗಳನ್ನು ಮನಸ್ಸಿನಿಂದ ತೊಡೆದು ಹಾಕುವುದು. ಇಲ್ಲಿ ನಾವು ನಿಮಗಾಗಿ ಕೆಲವೊಂದು ಮಾರ್ಗೋಪಾಯಗಳನ್ನು ಸೂಚಿಸಿದ್ದೇವೆ. ಓದಿ ನಕಾರಾತ್ಮಕ ಮನೋಭಾವನೆಯಿಂದ ಪಾರಾಗಿ.
1. ನಿಮ್ಮ ಆಲೋಚನೆಗಳನ್ನು ಗಮನಿಸಿ.
ನಕಾರಾತ್ಮಕ ಮನೋಭಾವನೆಗಳಿಂದ ಪಾರಾಗಲು ಮೊದಲು ನಿಮ್ಮ ಆಲೋಚನೆಗಳ ಮೇಲೆ ಒಂದು ಕಣ್ಣಿಡಿ. ಜೊತೆಗೆ ಆ ಭಾವನೆಗಳ ಮೇಲೆ ನಿಯಂತ್ರಣವನ್ನು ಇಡಿ. ನಿಮ್ಮ ಭಾವನೆಗಳನ್ನು ಒಂದು ಅಂತರದಿಂದ ನೋಡಿ, ಅವುಗಳು ನಿಮ್ಮ ಮೇಲೆ ಬೀರುತ್ತಿರುವ ಪ್ರಭಾವವನ್ನು ಅರ್ಥ ಮಾಡಿಕೊಳ್ಳಿ. ಒಂದು ವೇಳೆ ನಕಾರಾತ್ಮಕ ಭಾವನೆಗಳು ನಿಮ್ಮ ಮೇಲೆ ದುಷ್ಪರಿಣಾಮವನ್ನು ಬೀರಲು ಆರಂಭಿಸುತ್ತಿವೆ ಎಂದು ಅರಿವಾದೊಡನೆ ಅಥವಾ ನಿಮ್ಮ ಗಮನಕ್ಕೆ ಬಂದ ಕೂಡಲೆ ಅದರ ಬಗ್ಗೆ ಆಲೋಚಿಸುವುದನ್ನು ತಕ್ಷಣ ನಿಲ್ಲಿಸಿ. ಅದರ ಬದಲಿಗೆ ಯಾವುದಾದರು ರಚನಾತ್ಮಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ.
2. ಬರವಣಿಗೆಯನ್ನು ಅಭ್ಯಸಿಸಿ.
ಯಾವಾಗ ಒಂದು ನಕಾರಾತ್ಮಕ ಮನೋಭಾವನೆಯನ್ನು ಗುರುತಿಸುತ್ತೀರೋ, ಆಗ ನೀವು ಮಾಡಬೇಕಾದ ಮೊದಲ ಕೆಲಸ ಅದನ್ನು ತಡೆಯುವುದು. ಅದನ್ನು ತಡೆಯಲು ಇರುವ ಅತ್ಯುತ್ತಮ ಮಾರ್ಗ ಬರವಣಿಗೆಯನ್ನು ಅಭ್ಯಸಿಸುವುದು. ನಿಮ್ಮ ಮನಸ್ಸಿಗೆ ಬರುವ ಎಲ್ಲ ಆಲೋಚನೆಗಳನ್ನು ಅಕ್ಷರ ರೂಪಕ್ಕೆ ತನ್ನಿ. ಮೊದಲು ನಿಮ್ಮ ಭಾವನೆಗಳನ್ನು ನೈಜವಾಗಿ ಬರೆದಿಡಿ, ನಂತರ ಅವುಗಳನ್ನು ವಸ್ತು ನಿಷ್ಠವಾಗಿ ವಿಶ್ಲೇಷಣೆ ಮಾಡಿ.
3. ಸದಾ ಚಟುವಟಿಕೆಯಿಂದಿರಿ.
ನಕಾರಾತ್ಮಕ ಮನೋಭಾವನೆಗಳನ್ನು ಹತೋಟಿಯಲ್ಲಿಡಲು ಇರುವ ಅತ್ಯುತ್ತಮ ಉಪಾಯ ಚಟುವಟಿಕೆಯಿಂದಿರುವುದು. ಜಡವಾಗಿ ಕೂರಬೇಡಿ. " ಅನ್ ಐಡಲ್ ಮೈಂಡ್ ಈಸ್ ಡೆವಿಲ್ಸ್ ವರ್ಕ್ ಶಾಪ್" ಎಂಬ ನಾಣ್ಣುಡಿ ಆಂಗ್ಲಭಾಷೆಯಲ್ಲಿದೆ. ಇದರರ್ಥ ಸುಮ್ಮನೆ ಇರುವವನ ಮನದಲ್ಲಿ ಭೂತ ಬೇಕಾದರು ಕುಣಿಯುತ್ತದೆ. ಇಲ್ಲಿ ಭೂತವೆಂದರೆ ನಕಾರಾತ್ಮಕ ಮನೋಭಾವನೆ. ಅದಕ್ಕಾಗಿ ನೀವು ಸದಾ ಯಾವುದಾದರು ಒಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ. ಸುಸ್ತಾಗುವವರೆಗು ಕೆಲಸ ಮಾಡಿ, ರಾತ್ರಿ ಚೆನ್ನಾಗಿ ನಿದ್ದೆ ಮಾಡುವಿರಿ.
4. ನಿಮಗೆ ಆಸಕ್ತಿ ಇರುವ ಹವ್ಯಾಸದಲ್ಲಿ ತೊಡಗಿಸಿಕೊಳ್ಳಿ.
ನಿಮಗೆ ಮಾಡಲು ಯಾವ ಕೆಲಸವು ಇಲ್ಲವಾದಲ್ಲಿ, ಯಾವುದಾದರು ಆಸಕ್ತಿಕರ ಹವ್ಯಾಸದಲ್ಲಿ ತೊಡಗಿಸಿಕೊಳ್ಳಿ. ಇದು ನಿಮ್ಮ ಬಿಡುವಿನ ವೇಳೆಯಲ್ಲಿ ಕಾಲ ಕಳೆಯಲು ಬಳಕೆಯಾಗುವುದರ ಜೊತೆಗೆ, ನಕಾರಾತ್ಮಕ ಮನೋಭಾವನೆಗಳನ್ನು ಕೊಲ್ಲಲು ಸಹ ಬಳಕೆಯಾಗುತ್ತದೆ. ಅದಕ್ಕಾಗಿ ಪೆಯಿಂಟಿಗ್, ಗಾರ್ಡೆನಿಂಗ್, ಹೆಣಿಗೆ ಅಥವಾ ಹೊಸ ರುಚಿ ಮಾಡುವ ಹವ್ಯಾಸವನ್ನು ಬೆಳೆಸಿಕೊಳ್ಳಿ.
5. ವಾಯುವಿಹಾರ ಮಾಡಿ
ನಿಮ್ಮ ಸ್ನೇಹಿತರು ಅಥವಾ ಸಂಗಾತಿಯ ಜೊತೆಗೆ ಒಂದು ಧೀರ್ಘ ನಡಿಗೆಯನ್ನು ಸಂಜೆಗಳಲ್ಲಿ ಕೈಗೊಳ್ಳಿರಿ. ಆದರೆ ನೆನಪಿರಲಿ ಅವರು ಸಕಾರಾತ್ಮಕ ಮನೋಭಾವದವರಾಗಿರಬೇಕಾದುದು ಅತ್ಯಾವಶ್ಯಕ. ಅವರ ಜೊತೆಗೆ ನಿಮ್ಮ ಸಮಸ್ಯೆಗಳನ್ನು ಚರ್ಚಿಸಿ. ಒಬ್ಬಂಟಿಯಾಗಿಯೋ ಅಥವಾ ಸಪ್ಪಗೆ ಯಾರೊಂದಿಗು ಮಾತನಾಡದೆ ಕಳೆಯಬೇಡಿ. ಯಾವಾಗ ನಿಮ್ಮ ಮನಸ್ಸನ್ನು ಮುಕ್ತವಾಗಿ ತೆರೆದು ಮಾತನಾಡುತ್ತೀರೊ, ಆಗ ನಿಮಗು ಆರಾಮವಾಗುತ್ತದೆ. ಜೊತೆಗೆ ಈ ಸುಮಧುರ ಕ್ಷಣಗಳಲ್ಲಿ ನೀವು ನಕಾರಾತ್ಮಕ ಮನೋಭಾವನೆಯಿಂದ ಹೊರಬರುತ್ತೀರಿ. ಹೀಗೆ ನಿಮ್ಮ ನಕಾರಾತ್ಮಕ ಮನೋಭಾವನೆಯಿಂದ ನೀವು ಹೊರಬರಬಹುದು.
6. ಅಚ್ಚರಿಗೊಳಗಾಗುವ ಕಲೆಯನ್ನು ಕರಗತ ಮಾಡಿಕೊಳ್ಳಿ
ಒಂದು ವೇಳೆ ನಿಮಗೆ ನಕಾರಾತ್ಮಕ ಮನೋಭಾವನೆಯೆಂಬುದು ಕಾಡುತ್ತಿದ್ದರೆ, ಅದರಿಂದ ಪಾರಾಗಲು ಒಂದು ಮಾರ್ಗವಿದೆ. ಅದು ನವೀನ ಮಾರ್ಗ, ನಿಮ್ಮ ಮನಸ್ಸನ್ನು ತುಂಬಾ ಕಾಲದಿಂದ ಕಾಡುತ್ತಿರುವ ಕೆಲವು ವಿಚಾರಗಳನ್ನು ಅಸ್ತಿತ್ವಕ್ಕೆ ತನ್ನಿ. ಸಂಗೀತ ಕಲಿಯುವುದು, ಪುಸ್ತಕ ಓದುವುದು, ಸುತ್ತಾಡುವುದು ಅಥವಾ ಯಾವುದಾದರು ಸರಿ ಒಟ್ಟಿನಲ್ಲಿ ನೀವು ಇಷ್ಟಪಟ್ಟಿದ್ದನ್ನು ಪೂರೈಸಿಕೊಳ್ಳಿ ಸಾಕು.
7. ಕೃತಙ್ಞತಾ ಮನೋಭಾವ ಕೀಲಿ ಕೈ
ನಕಾರಾತ್ಮಕ ಮನೋಭಾವನೆಯನ್ನು ತಡೆಯಲು ಮತ್ತೊಂದು ಉಪಾಯವಿದೆ. ಅದು ಕೃತಙ್ಞತಾ ಮನೋಭಾವ. ಯಾವಾಗ ನಿಮ್ಮ ಮನದಲ್ಲಿ ಒಂದು ನಕಾರಾತ್ಮಕ ಮನೋಭಾವನೆಯು ಸುಳಿಯುತ್ತದೊ, ಆಗ ಅದರ ಜಾಗದಲ್ಲಿ ಧನ್ಯತಾ ಮನೋಭಾವವನ್ನು ತುಂಬಿ. ಅದಕ್ಕೆ ಮಾಡಬೇಕಾದುದು ಏನೂ ಇಲ್ಲ. ಸುಮ್ಮನೆ ಒಂದು ಕಾಗದ ತೆಗೆದುಕೊಳ್ಳಿ. ನೀವು ನಿಮ್ಮ ಜೀವನದಲ್ಲಿ ಯಾರು ಯಾರಿಗೆ ಕೃತಙ್ಞರಾಗಿದ್ದೀರಿ, ಎಂಬ ಪಟ್ಟಿಯನ್ನು ತಯಾರಿಸಿ. ಅವರಿಗೆ ಮನದಲ್ಲಿಯೇ ಒಂದು ಕೃತಙ್ಞತೆಯನ್ನು ಅರ್ಪಿಸಿ. ಅದನ್ನು ಮತ್ತೆ, ಮತ್ತೊಮ್ಮೆ, ಮಗದೊಮ್ಮೆ ಓದಿ. ಆ ನಕಾರಾತ್ಮಕ ಮನೋಭಾವನೆಯನ್ನು ಮರೆತು ಬಿಡಿ, ಜೀವನ ಸುಂದರ ಮತ್ತು ಅದ್ಭುತವೆಂಬುದನ್ನು ಮನಗಾಣಿ.
8. ನಿಮ್ಮ ಸಂತಸದ ಗುಟ್ಟನ್ನು ಅರಿಯಿರಿ
ನಿಮಗೆ ಯಾವುದರಲ್ಲಿ ಸಂತೋಷ ಸಿಗುತ್ತದೆ ಎಂಬುದನ್ನು ಮೊದಲು ತಿಳಿಯಿರಿ. ಕೆಲವೊಮ್ಮೆ ಇವು ನಿಮಗೇ ನಗು ತರಿಸುವಷ್ಟು ಕ್ಷುಲ್ಲಕವಾಗಿರಬಹುದು. ಆದರೆ ಅದು ಇಲ್ಲಿ ಮುಖ್ಯವಲ್ಲ, ಒಟ್ಟಿನಲ್ಲಿ ನಿಮಗೆ ನಗು ತರಿಸಬೇಕು ಅಷ್ಟೇ. ಅದು ಒಂದು ನಾಯಿಯನ್ನೊ ಅಥವಾ ಬೆಕ್ಕನ್ನೊ ಆಟವಾಡಿಸುವುದಾಗಿರಬಹುದು. ಇಲ್ಲವೇ ಒಂದು ಕಪ್ ಐಸ್ ಕ್ರೀಮ್ ತಿನ್ನುವುದಾಗಿರಬಹುದು. ಯಾವುದಾದರು ಸರಿ ಒಟ್ಟಿನಲ್ಲಿ ನಿಮಗೆ ಆನಂದ ಕೊಡಬೇಕು ಅಷ್ಟೇ, ಮೊದಲು ಅದನ್ನು ಮಾಡಿ.



Click it and Unblock the Notifications