Latest Updates
-
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ
ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ 9 ಮಾಡಲ್ಸ್
ಮಾಡಲಿಂಗ್ ಜಗತ್ತಿಗೆ ಕಾಲಿಡಬೇಕೆನ್ನುವುದು ಅನೇಕ ಯುವ ಪೀಳಿಗೆಯವರ ಕನಸ್ಸಾಗಿರುತ್ತದೆ. ಮಾಡಲಿಂಗ್ ಜಗತ್ತಿಗೆ ಕಾಲಿಡಲು ಬೇಕಾಗಿರುವ ಅರ್ಹತೆಯೆಂದರೆ ಆಕರ್ಷಕ ಮೈಮಾಟ ಮತ್ತು ಪ್ರತಿಭೆ. ಮಾಡಲಿಂಗ್ ಜಗತ್ತಿಗೆ ಕಾಲಿಟ್ಟ ಪ್ರತಿಯೊಬ್ಬರ ಕೆರಿಯರ್ ಉತ್ತಮವಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ, ಕೆಲವರಷ್ಟೇ ಆ ಫೀಲ್ಡ್ ನಲ್ಲಿ ಬೆಳೆಯುತ್ತಾರೆ, ಮತ್ತೆ ಕೆಲವರು ಆ ಜಗತ್ತಿಗೆ ಕಾಲಿಟ್ಟು ತಮ್ಮನ್ನು ತಾವೇ ಕಳೆದುಕೊಳ್ಳುತ್ತಾರೆ!
ಟಾಪ್ ಮಾಡಲ್ ಆದರೆ ಕೈ ತುಂಬಾ ಮನಿ, ಫೇಮ್ ಬರುತ್ತದೆ, ಟಾಪ್ ಮಾಡಲ್ ಆಗುವುದು ಸುಲಭವೇನಲ್ಲ, ಸಾಕಷ್ಟು ಸ್ಪರ್ಧಿಗಳಿರುತ್ತಾರೆ, ಎಲ್ಲಾ ಸವಾಲು ಮೀರಿದರೆ ಮಾತ್ರ ಟಾಪ್ ಮಾಡಲ್ ಆಗಲು ಸಾಧ್ಯ.
ಪ್ರತೀವರ್ಷ ವಿಶ್ವದಲ್ಲಿಯೇ ಅತೀ ಹೆಚ್ಚು ಸಂಭಾವನೆ ಪಡೆಯುವಮಾಡಲ್ ಗಳ ಹೆಸರನ್ನು ಆಯ್ಕೆ ಮಾಡುತ್ತಾರೆ, ಮಾಡಲ್ ಗಳಿಗೆ ದೊರೆಯುವ ಆದಾಯದ ಮೇಲೆ ಈ ಲಿಸ್ಟ್ ಮಾಡಲಾಗುವುದು.
ಇಲ್ಲಿ ನಾವು 2013ರ ಸಾಲಿನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ ಮಾಡಲ್ ಗಳ ಲಿಸ್ಟ್ ನೀಡಿದ್ಧೇವೆ ನೋಡಿ:

ಡೇವಿಡ್ ಗ್ಯಾಂಡಿ(David Gandy)
ಬ್ರಿಟಿಷ್ ಮಾಡಲ್ ಆಗಿರುವ ಇವರು ವಿಶ್ವದಲ್ಲಿಯೇ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ ಮಾಡಲ್ ಗಳಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ.

ಗಿಸೆಲೆ ಬುಂಡ್ಚೆನ್ (Gisele Bundchen)
ಈಕೆ ಮಹಿಳೆಯರಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ ಮಾಡಲ್ . ಇವರು ಫ್ಯಾಷನ್ ಮಾಡಲ್, ನಟಿ, ನಿರ್ಮಾಪಕಿ ಕೂಡ ಹೌದು. ಇವರ ಸಂಭಾವನೆ ಡಾಲರ್ 150 ಮಿಲಿಯನ್.

ಟ್ಯಾರಾ ಬ್ಯಾಂಕ್ಸ್()Tyra Banks)
ಈಕೆ ಅಮೇರಿಕದ ಟಾಪ್ ಹಾಟ್ ನಟಿ. ಇವರ ಸಂಭಾವನೆ ಡಾಲರ್ 91 ಮಿಲಿಯನ್.

ಕ್ರಿಸ್ಟಿ ಬ್ರಿಂಕ್ಲೆ (Christie Brinkley)
59 ವರ್ಷದ ಅಮೇರಿಕದ ಈ ಸೂಪರ್ ಮಾಡಲ್ ನ ಸಂಭಾವನೆ ಎಷ್ಟು ಗೊತ್ತೇ? ಡಾಲರ್ 83 ಮಿಲಿಯನ್.

ಕೇಟ್ ಮಾಸ್ (Kate Moss)
ಕೇಟ್ ಮಾಸ್ ತನ್ನ ಪ್ರತಿಭೆಯಿಂದ ಖ್ಯಾತಿ ಮತ್ತು ಕೆಟ್ಟ ಹವ್ಯಾಸದಿಂದ ಕುಖ್ಯಾತಿಯನ್ನು ಗಳಿಸಿದ ಮಾಡಲ್. ಈ ಮಾಡಲ್ ನ ಸಂಭಾವನೆ ಡಾಲರ್ 80 ಮಿಲಿಯನ್.

ಹೈಡಿ ಕ್ಲುಮ್ರು (Heidi Klumr)
ಈಕೆ ಮಾಡಲ್ ಮಾತ್ರವಲ್ಲ, ಸಿನಿಮಾ ರಂಗದಲ್ಲೂ ಅಭಿನಯಿಸುತ್ತಿದ್ದಾರೆ. ಇವರ ಸಂಭಾವನೆ ಡಾಲರ್ 71 ಮಿಲಿಯನ್ ನಷ್ಟಿದೆ.

ಎಲ್ಲೆ ಮ್ಯಾಕ್ಫರ್ಸನ್ (Elle Macpherson)
ಈಕೆ ಸ್ಟಾಕಿಂಗ್ ಉಡುಗೆಯಲ್ಲಿ(ಚಿತ್ರದಲ್ಲಿ ಇರುವಂತೆ) ಪೋಸ್ ನೀಡಿ ಸಾಕಷ್ಟು ವಿವಾದವನ್ನು ಎಬ್ಬಿಸಿದ್ದರು. ವಯಸ್ಸು 49 ಆದರೂ 18ರ ಸೌಂದರ್ಯದಿಂದ ಮಿಂಚುತ್ತಿರುವ ಈಕೆಯ ಸಂಭಾವನೆ ಡಾಲರ್ 60 ಮಿಲಿಯನ್.

ಮಿಲಾ ಜೊವೊವಿಚ್ರೊಂದಿಗೆ (Mila Jovovich)
ಇಂಟಲಿಯ ನೀಲಿ ಕಂಗಳ ಈ ಸೂಪರ್ ಮಾಡಲ್ ಈ ಚೆಲುವೆಯ ಗಳಿಕೆ ಡಾಲರ್ 36 ಮಿಲಿಯನ್.

ಅಡ್ರಿಯಾನಾ ಲಿಮಾ ( Adriana Lima)
ಬ್ರೆಜಿಲ್ ನ ಈ ಮಾಡಲ್ 2000 ಇಸವಿಯಿಂದಲೂ ಮಾಡಲ್ ಜಗತ್ತಿನಲ್ಲಿ ಗುರುತಿಸಿಕೊಂಡಿರುವ ಈಕೆಯ ಸಂಭಾವನೆ ಡಾಲರ್ 35 ಮಿಲಿಯನ್.



Click it and Unblock the Notifications
