Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅನಾರ್ಕಲಿ ಡ್ರೆಸ್ ಔಟ್ ಆಫ್ ಫ್ಯಾಷನ್ ಆಗಿದೆಯೇ?
ಅನಾರ್ಕಲಿ ಫ್ಯಾಷನ್ ಔಟ್ ಆಫ್ ಫ್ಯಾಷನ್ ಆಗುತ್ತಾ ಬರುತ್ತಿದೆ. ಹಾಗಂತ ದುಬಾರಿ ಬೆಲೆ ತೆತ್ತು ತಂದ ಡ್ರೆಸ್ ಗಳನ್ನು ಕಬೋರ್ಡ್ ನ ಮೂಲೆಯಲ್ಲಿ ಇಡಬೇಡಿ. ನಾವು ಮಾಡಿದ್ದೇ ಫ್ಯಾಷನ್, ಹಾಗಂತ ನಾವು ಮಾಡಿದ ವೇಷ ಭೂಷಣದಿಂದ ಕಾಲಕ್ಕೆ ತಕ್ಕಂತೆ ಆಕರ್ಷಕವಾಗಿ ಕಾಣಲು ಸ್ವಲ್ಪ ಬ್ಯೂಟಿ ಸೆನ್ಸ್ ಇರಬೇಕಷ್ಟೇ.
ಇಲ್ಲಿ ನಾವು ಕೆಲವು ಹೇರ್ ಸ್ಟೈಲ್ ಬಗ್ಗೆ ಹೇಳಿದ್ದೇವೆ. ಫ್ಯಾಷನ್ ನಿಂದ ದೂರವುಳಿಯುತ್ತಿರುವ ಅನಾರ್ಕಲಿಯನ್ನು ಧರಿಸಿ, ಇಲ್ಲಿ ಹೇಳಿರುವ ಯಾವುದಾದರೂ ಒಂದು ಹೇರ್ ಸ್ಟೈಲ್ ಮಾಡಿ. ಹೇರ್ ಸ್ಟೈಲ್ ನಿಮಗೆ ಹೊಸ ಲುಕ್ ನೀಡಿ, ನೀವು ಫ್ಯಾಷನಬಲ್ ಆಗಿ ಕಾಣುವಿರಿ:

ತುರುಬು
ಅನಾರ್ಕಲಿ ಡ್ರೆಸ್ ಹಾಕಿ ನೀಟಾಗಿ ತುರುಬು ಕಟ್ಟಿ, ಕಿವಿಗೆ ದೊಡ್ಡ ಓಲೆ ಹಾಕಿ ಫಂಕ್ಷನ್ ಗೆ ಹೋಗಿ . ಈ ರೀತಿ ಮಾಡಿದರೆ ಎಲ್ಲರಿಗಿಂತ ಸ್ವಲ್ಪ ಭಿನ್ನವಾಗಿ, ಫ್ಯಾಷನಬಲ್ ಆಗಿ ಕಾಣುವಿರಿ. ನೋಡುಗರಿಗೆ ನಿಮ್ಮ ಡ್ರೆಸ್ ಔಟ್ ಫ್ಯಾಷನ್ ಆಗಿದೆ ಅನಿಸುವುದಕ್ಕಿಂತ ನಿಮ್ಮ ಡ್ರೆಸ್ಸಿಂಗ್ ಫ್ಯಾಷನಬಲ್ ಆಗಿದೆ ಎಂದು ಅನಿಸುವುದು.

ಎಲ್ಲಾ ಕೂದಲನ್ನು ಒಟ್ಟು ಸೇರಿಸಿ ಭುಜದ ಮೇಲೆ ಹಾಕಿ
ಈ ಹೇರ್ ಸ್ಟೈಲ್ ನೋಡುಗರ ಗಮನವನ್ನು ತನ್ನ ಸೆಳೆಯುವುದು. ನೇರ ಕೂದಲಿರುವವರಿಗೆ ಈ ಹೇರ್ ಸ್ಟೈಲ್ ಬೆಸ್ಟ್.

ಜುಟ್ಟು
ಕೂದಲನ್ನು ಮೇಲಕ್ಕೆತ್ತಿ ಒಂದು ಜುಟ್ಟು ಹಾಕಿದರೂ ಆಕರ್ಷಕವಾಗಿ ಕಾಣುವುದು.

ಹೇರ್ ಪಿನ್ ಬಳಸಿ ಕಟ್ಟಿ
ತಲೆ ಮಧ್ಯದಲ್ಲಿ ಗೆರೆ ತೆಗೆದು, ಎರಡೂ ಕಿವಿ ಹತ್ತಿರದಿಂದ ಸ್ವಲ್ಪ ಕೂದಲನ್ನು ಹಿಂದೆಕ್ಕೆ ತೆಗೆದು ಹೇರ್ ಪಿನ್ ಹಾಕಬಹುದು.

ಫ್ರೀ ಹೇರ್
ಕೂದಲಿನ ಮಧ್ಯೆ ಭಾಗದಲ್ಲಿ ಗೆರೆ ತೆಗೆದು ಫ್ರೀ ಬಿಟ್ಟ ಕೂದಲು ಕೂದಲು ಕೂಡ ಅನಾರ್ಕಲಿ ಡ್ರೆಸ್ ಗೆ ಆಕರ್ಷಕವಾಗಿ ಕಾಣುವುದು.

ಸೈಡ್ ಜಡೆ
ಎಲ್ಲಾ ರೀತಿಯ ಸಾಂಪ್ರದಾಯಕ ಉಡುಗೆಗೆ ಈ ಹೇರ್ ಸ್ಟೈಲ್ ಚೆನ್ನಾಗಿ ಒಪ್ಪುತ್ತದೆ.

ಸೈಡ್ ಬನ್
ಇದು ಪುರಾತನ ಕಾಲದಲ್ಲಿ ರಾಣಿಯರು ಮಾಡುತ್ತಿದ್ದ ಹೇರ್ ಸ್ಟೂಲ್. ಇದನ್ನು ನಮ್ಮ ಕಾಲಕ್ಕೆ ಕೂಡ ಮಾಡಬಹುದು. ಆಗ ಈ ರೀತಿ ಕಟ್ಟಿ ಹೂ ಮುಡಿಯುತ್ತಿದ್ದರು. ಈಗ ಬರೀ ಕೂದಲು ಬಳಸಿ ಒಂದು ಬದಿಗೆ ತುರುಬು ಕಟ್ಟುವುದು ಫ್ಯಾಷನ್ ಆಗಿದೆ.

ಮೆಸ್ಸಿ ಬನ್
ಈ ಹೇರ್ ಸ್ಟೈಲ್ ನಲ್ಲಿ ತುರುಬು ಕಟ್ಟಿ, ಮುಂದುಗಡೆ ಕೂದಲನ್ನು ಸ್ವಲ್ಪ ಹರಡಿ ಬಿಡಲಾಗುವುದು.

ಸೈಡ್ ಜುಟ್ಟು
ಇದು ಕೂಡ ಅನಾರ್ಕಲಿ ಡ್ರೆಸ್ ಗೆ ಸೂಕ್ತವಾಗುವ ಹೇರ್ ಸ್ಟೈಲ್ ಆಗಿದ್ದು ಫ್ಯಾಷನಬಲ್ ಲುಕ್ ನೀಡುತ್ತದೆ.



Click it and Unblock the Notifications
