Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
GQ ಅವಾರ್ಡ್-ಡ್ರೆಸ್ಸಿಂಗ್ ನಲ್ಲಿ ಗಮನ ಸೆಳೆದ ಸೆಲೆಬ್ರಿಟಿಗಳು
ಇತ್ತೀಚಿಗೆ ನಡೆದ GQ ಮೆನ್ ಆಫ್ ದಿ ಅವಾರ್ಡ್ 2013 ರ ಫ್ಯಾಷನಬಲ್ ಸಮಾರಂಭಕ್ಕೆ ಬಂದಿದ್ದ ಸೆಲೆಬ್ರಿಟಿಗಳು, ಸಮಾರಂಭಕ್ಕೆ ತಕ್ಕಂತೆ ಫ್ಯಾಷನಬಲ್ ಡ್ರೆಸ್ ಧರಿಸಿ ರೆಡ್ ಕಾರ್ಪೆಟ್ ವಾಕ್ ಮಾಡಿದರು.
ಕೆಲವೊಂದು ಸೆಲೆಬ್ರಿಟಿಗಳು ಕೆಲವು ವರ್ಷಗಳ ಬಳಿಕ ಆ ಸಮಾರಂಭದಲ್ಲಿ ಭಾಗವಹಿಸಿದ್ದರು. ಉದಾಹರಣೆಗೆ ರಾಣಿ ಮುಖರ್ಜಿ. ಈ ಬಾರಿ ಆಕರ್ಷಕವಾದ ಧಿರಿಸಿನಲ್ಲಿ ಸ್ಟೇಜ್ ಮೇಲೆ ಹೆಜ್ಜೆ ಹಾಕಿದರು. ಕಳೆದ ಬಾರಿಯ ಅವಾರ್ಡ್ ಸಮಾರಂಭದಲ್ಲಿ ಫ್ಯಾಷನಬಲ್ ಡ್ರೆಸ್ ಧರಿಸಿದ ಸೆಲೆಬ್ರಿಟಿಗಳಲ್ಲಿ ತುಂಬಾ ಗಮನ ಸೆಳೆದ ವ್ಯಕ್ತಿಯೆಂದರೆ ದೀಪಿಕಾ ಪಡುಕೋಣೆ. ಈ ಬಾರಿ ಅವರು ಭಾಗವಹಿಸಿರಲಿಲ್ಲ, ಈ ಬಾರಿಯ ಈ ಫ್ಯಾಷನಬಲ್ ಈವೆಂಟ್ ನಲ್ಲಿ ಶ್ರುತಿ ಹಾಸನ್ ಳ ಡ್ರೆಸ್ಸಿಂಗ್ ದಿ ಬೆಸ್ಟ್ ಎಂದು ಹೇಳುವಂತಿತ್ತು. ಇನ್ನು ಕೆಲ ಸೆಲೆಬ್ರಿಟಿಗಳು ಕೂಡ ಬೆಸ್ಟ್ ಡ್ರೆಸ್ಸಿಂಗ್ ನಲ್ಲಿ ಗಮನ ಸೆಳೆದರು. ಫ್ಯಾಷನಬಲ್ ಲುಕ್ ನಲ್ಲಿ ಮಿಂಚಿದ ಆ ನಟ-ನಟಿಯರು ಯಾರೆಂದು ನೋಡೋಣವೇ?

ಶ್ರುತಿ ಹಾಸನ್
ರಜತ್ ತಂಗ್ರಿ ಗೌನ್ ಧರಿಸಿದ್ದ ಶ್ರುತಿ ಹಾಸನ್ ಈ ಸಮಾರಂಭದಲ್ಲಿ ದಿ ಬೆಸ್ಟ್ ಫ್ಯಾಷನಬಲ್ ಲುಕ್ ನಲ್ಲಿ ramp walk ಮಾಡಿದರು.

ಸೋನಂ ಕಪೂರ್
ಪೌಲ್ ಗೌಟಿಲಿಯರ್ ಕೋರ್ಚರ್ ಡ್ರೆಸ್ ಧರಿಸಿ GQ ಅವಾರ್ಡ್ ನಲ್ಲಿ ಗಮನ ಸೆಳೆದರು. ನೆಲವನ್ನು ಗುಡಿಸುವಂತೆ ಇದ್ದ ಈ ಫುಲ್ ಗೌನ್ ನಲ್ಲಿ ಸೋನಂ ಕಪೂರ್ ವಿಭಿನ್ನ ಗೆಟಪ್ ನಲ್ಲಿ ಮಿಂಚಿದರು.

ಕ್ರಿಸ್ಟಿನ
ಕೆಂಡ ಬಣ್ಣದ ನಮ್ರತಾ ಜೋಶಿಪುರಾ ಗೌನ್ ಧರಿಸಿ ಗಮನ ಸೆಳೆದರು. ಸೈಡ್ ಕಟ್ ಇರುವ ಈ ಗೌನ್ ನಲ್ಲಿ ಫ್ಯಾಷನಬಲ್ ಅಂಡ್ ಸೆಕ್ಸಿಯಾಗಿ ಕಂಡರು.

ಸೋಫಿ ಚೌಧುರಿ
ಮೆರೂನ್ ರೆಡ್ ಬಣ್ಣದ ಸ್ಟ್ರಾಪ್ ಲೆಸ್ ಗೌನ್ ಧರಿಸಿ, ಕೈಯಲ್ಲಿ ಗೋಲ್ಡನ್ ಬಣ್ಣದ ಪೌಚ್ ಹಿಡಿದು ಸ್ಟೇಜ್ ಮೇಲೆ ಹೆಜ್ಜೆ ಹಾಕಿದರು. ಇವರ ಗೌನ್ ಬಣ್ಣ ಹಾಗೂ ಅದರ ವರ್ಕ್ಸ್ ನೋಡುಗರ ಗಮನ ಸೆಳೆಯಿತು.

ಅಧಿತಿ ರಾವ್
ಅಧಿತಿ ರಾವ್ ಸ್ವಲ್ಪ ವಿಭಿನ್ನ ಡ್ರೆಸ್ಸಿಂಗ್ ನಲ್ಲಿ ಗಮನ ಸೆಲೆದರು. ಕ್ರೀಮ್ ಬಣ್ಣದ ಗೌರವ್ ಗುಪ್ತಾ ಮರ್ಮೈಡ್ ಗೌನ್ ಧರಿಸಿದ್ದರು. ಮೇಕಪ್ ತುಂಬಾ ಸರಳವಾಗಿದ್ದರೂ ಆಕರ್ಷಕವಾಗಿ ಕಂಡರು.

ಜರಿನೆ ಖಾನ್
ಧರಿಸಿ, ಸೊಂಟಕ್ಕೆ ಮೆಟಾಲಿಕ್ ಬೆಲ್ಟ್ ಹಾಕಿ ಸ್ಟೇಜ್ ಮೇಲೆ ವಾಕ್ ಮಾಡಿದರು. ಅವರ ಫ್ಯಾಷನಬಲ್ ಡ್ರೆಸ್ಸಿಂಗ್ ಫ್ಯಾಷನ್ ಪ್ರಿಯರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಯಿತು.

ರಾಣಿ ಮುಖರ್ಜಿ
ಈ ಅವಾರ್ಡ್ ಫಂಕ್ಷನ್ ಗೆ ಬಂದಿದ್ದ ರಾಣಿ ಮುಖರ್ಜಿ ಸಿಲ್ವರ್ ಬಣ್ಣದ ಒಂದು ತೋಳಿನ ಗೌನ್ ನಲ್ಲಿ ಸ್ಟೇಜ್ ಮೇಲೆ ಹೆಜ್ಜೆ ಹಾಕಿದರು.

ಫರಾನ್ ಅಕ್ತಾರ್
ಸೂಟ್ ನಲ್ಲಿ ಕಾಣಿಸಿದ ಫರಾನ್ ಅಕ್ತಾರ್ ತುಂಬಾ ಗಂಭೀರವಾಗಿ ಹಾಗೂ ಆಕರ್ಷಕವಾಗಿ ಕಂಡರು. ಅವರ ಜೊತೆ ಸ್ಟೇಜ್ ಮೇಲೆ ವಾಕ್ ಮಾಡಿದ ಅವರ ಪತ್ನಿ ಮಂಡಿವರೆಗಿನ ಗೋಲ್ಡನ್ ವಿನ್ಯಾಸದ ಕಪ್ಪು ಡ್ರೆಸ್ ನಲ್ಲಿ ಕಾಣಿಸಿದರು.

ಹೃತಿಕ್ ರೋಶನ್
ಕಪ್ಪು ಶರ್ಟ್ ನ ಮೇಲೆ ಹೊಳೆಯುವ ಕೋಟ್ ಧರಿಸಿದ್ದ ಹೃತಿಕ್ ರೋಶನ್ ತುಂಬಾ ಸ್ಟೈಲಿಶ್ ಆಗಿ ಕಂಡರು.



Click it and Unblock the Notifications
