Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಇಂಗ್ಲೀಷ್ ನಿಘಂಟಿನಲ್ಲಿ ಇಲ್ಲದ ಇಂಗ್ಲೀಷ್ ಪದಗಳಿವು!
ಇಂಗ್ಲೀಷ್ ಭಾಷೆಯ ಕೆಲವೊಂದು ಪದಗಳನ್ನು ನಮ್ಮ ಮಾತೃ ಭಾಷೆಯ ಪದಗಳ ಜೊತೆ ಸೇರಿಸಿ ಮಾತನಾಡುತ್ತೇವೆ. ಉದಾಹರಣೆಗೆ ಹೆಲ್ಪ್ ಮಾಡಿ, ಥ್ಯಾಂಕ್ಸ್, ಬಸ್, ರೈಲ್ ಈ ರೀತಿ ಅನೇಕ ಪದಗಳನ್ನು ನಮ್ಮ ದಿನನಿತ್ಯದ ವ್ಯವಹಾರದಲ್ಲಿ ಬಳಸುತ್ತೇವೆ. ಈ ಪದಗಳನ್ನು ಓದಿದವರು ಅಂತಲ್ಲ, ಶಾಲೆ ಮೆಟ್ಟಿಲು ಹತ್ತದವರೂ ಕೂಡ ಬಳಸುವುದನ್ನು ಕಾಣಬಹುದು.
ಇಂಗ್ಲೀಷ್ ಭಾಷೆಯೆಂದು ನಾವು ಬಳಸುವ ಕೆಲವೊಂದು ಪದಗಳು ಇಂಗ್ಲೀಷ್ ಪದಕೋಶದಲ್ಲಿಯೇ ಇಲ್ಲ ಗೊತ್ತಾ? ಅಮೇರಿಕನ್ ಇಂಗ್ಲೀಷ್, ಇಂಗ್ಲೆಂಡ್ ನ ಇಂಗ್ಲೀಷ್ ಭಾಷೆಗಿಂತ ಸ್ವಲ್ಪ ಭಿನ್ನವಾಗಿದೆ ಎಂದು ನಮಗೆಲ್ಲಾ ಗೊತ್ತು. ನಾವು ಭಾರತೀಯರು ಮಾತನಾಡುವುದು ಇಂಗ್ಲೆಂಡ್ ಶೈಲಿಯ ಇಂಗ್ಲೀಷ್ ಆದರೂ ನಾವು ಬಳಸುವ ಕಂಪ್ಯೂಟರ್ ನಲ್ಲಿ ಬಳಕೆಯಲ್ಲಿರುವುದು ಅಮೇರಿಕನ್ ಇಂಗ್ಲೀಷ್! ಅಮೇರಿಕದ ಇಂಗ್ಲೀಷ್ ನಲ್ಲಿ ಕೆಲವು ಪದಗಳಲ್ಲಿ ವ್ಯತ್ಯಾಸ ಮಾಡಿದ್ದು ಮಾತ್ರವಲ್ಲ (clour ಬದಲು color) ಕೆಲವೊಂದು ತಮಾಷೆಯ ಪದಗಳನ್ನು ಹುಟ್ಟು ಹಾಕಿದ್ದಾರೆ ಕೂಡ.
ಅದನ್ನೇ ನಾವಿಂದು ಗ್ರೇಟ್ ಇಂಗ್ಲೀಷ್ ಎಂದು ಬಹಳ ಸ್ಟೈಲಾಗಿ ಬಳಸುತ್ತೇವೆ. ಆ ಫನ್ನೀ ವರ್ಡ್ಸ್ ಯಾವುವು ಎಂದು ನೋಡೋಣವೇ?

LoL: ಈ ಪದವನ್ನು ಎಷ್ಟು ಸಲ ಬಳಸುತ್ತೇವೆ ಅಂದರೆ ಲೆಕ್ಕನೇ ಇಲ್ಲ. ಹಾಸ್ಯ ಭಾವವನ್ನು ಹೊರ ಹಾಕುವಲ್ಲಿ ಈ ಪದ ಬಳಸುತ್ತೇವೆ.
ROFl: ಹೊಟ್ಟೆ ಹುಣ್ಣಾಗುವಷ್ಟು ನಗು ಬಂತು/ ನಗಿಸಿದ ಎಂದು ಅಚ್ಚ ಕನ್ನಡದಲ್ಲಿ ಹೇಳುವವರ ಸಂಖ್ಯೆ ಕಡಿಮೆಯಾಗಿ ಈ ಪದ ಸಾಮಾಜಿಕ ತಾಣಗಳಲ್ಲಿ ಹೆಚ್ಚು ಬಳಕೆಯಾಗುತ್ತಿದೆ, ಗಮನಿಸಿ ನೋಡಿ.
Aww: ಯಾರಿಗಾದರೂ ಕರುಣೆ ತೋರಿಸುವಾಗ ಬಳಸುವ ಪದ ಇದಾಗಿದೆ.
Ouch: ಕಾಲೇಜು ಹುಡುಗಿಯರಿಗೆ ಏನಾದರೂ ತಾಗಿ ನೋವಾದಾಗ ಅವರ ಬಾಯಿಂದ ಬರುವ ಮೊದಲ ಪದ ಇದಾಗಿದೆ. ನೋವಾದಾಗ ಅಮ್ಮಾ... ಅಂತ ಹೇಳುವ ಬದಲು ಆ ಪದವನ್ನು ಆಕ್ರಮಿಸಿದ ಇಂಗ್ಲೀಷ್ ಪದ ಇದಾಗಿದೆ.
Crispy: ಗರಿಗರಿಯಾದ ತಿಂಡಿಗೆ ಕ್ರಿಸ್ಪಿ ಅನ್ನುತ್ತೇವೆ. ಆದರೆ ಇಂಥದ್ದೊಂದು ಪದ ಇಂಗ್ಲೀಷ್ ಪದ ಕೋಶದಲ್ಲಿ ಇಲ್ಲ.
ಹಾಗೇ Girl ಎನ್ನಲು Gal, boy friend ಅಂತ ಹೇಳಲು beau, Hot ಅಂತ ಹೇಳಲು Hawt ಹೀಗೆ ಎಸ್ಸೆಮ್ಮೆಸ್ ಭಾಷೆ ಅಂತೂ ಯುವ ಜನಾಂಗಕ್ಕೆ ಚಿರಪರಿಚಿತ.



Click it and Unblock the Notifications
