40 ದಾಟಿದ ಪುರುಷರಿಗಾಗಿ ಸ್ಟೈಲ್ ಟಿಪ್ಸ್

By Super

ಫ್ಯಾಷನ್ ಗೆ ವಯಸ್ಸಿನ ಮಿತಿಯಿಲ್ಲ. ನೀವು ಇಪ್ಪತ್ತು ವರ್ಷದವರೇ ಆಗಿರಬಹುದು ಅಥವಾ ನಲವತ್ತು ದಾಟಿರಬಹುದು ಫ್ಯಾಷನ್ ಎಲ್ಲರಿಗೂ ಒಂದೇ. ಫ್ಯಾಷನ್ ಸ್ಥಿರವಲ್ಲ ಬದಲಾಗುತ್ತಾ ಹೋಗುತ್ತದೆ. ಅದರಲ್ಲೂ ಸೌಂದರ್ಯ ಮತ್ತು ಫ್ಯಾಷನ್ ವಯಸ್ಸಿನೊಂದಿಗೆ ವೃದ್ಧಿಸುತ್ತಾ ಹೋಗುತ್ತವೆ ಎಂದರೆ ತಪ್ಪಾಗಲಾರದು.

ವಯಸ್ಸಿನೊಂದಿಗೆ ನಿಮ್ಮ ಜ್ಞಾನ ಬೆಳೆಯುತ್ತಾ ಹೋಗುತ್ತದೆ ಇದೇ ಕಾರಣದಿಂದ ನೀವು ನಿಮ್ಮ ಕೆಲಸ, ಸಂಬಂಧಗಳು ಮತ್ತು ಜೀವನ ವಿಧಾನದಲ್ಲಿ ಮತ್ತಷ್ಟು ಧೈರ್ಯದಿಂದ ವರ್ತಿಸುತ್ತೀರಿ. ಬೋಲ್ಡ್ ಸ್ಕೈ ಗೆ ನೀವು ನಿಮ್ಮದೇ ಆದ ಸ್ಟೈಲನ್ನು ಅಭಿವೃದ್ಧಿ ಪಡಿಸಿದ್ದೀರಿ ಎಂದು ಖಚಿತವಾಗಿ ಗೊತ್ತಿದೆ. ಆದರೂ ಇಲ್ಲಿ ಕೆಲವು ಫ್ಯಾಷನ್ ಸಲಹೆಗಳನ್ನು ನೀಡಿದ್ದೇವೆ. ಇವುಗಳ ಮೂಲಕ ನೀವು ಮತ್ತೂ ಷ್ಯಾಷನೇಬಲ್ ಆಗಿರುತ್ತೀರಿ ಎಂಬ ಗ್ಯಾರಂಟಿ ನಮ್ಮದು.

1. ನಿಮ್ಮ ಫ್ಯಾಷನ್ ನ ಮೂಲಮಂತ್ರ ನೆನಪಿರಲಿ

1. ನಿಮ್ಮ ಫ್ಯಾಷನ್ ನ ಮೂಲಮಂತ್ರ ನೆನಪಿರಲಿ

ಇತ್ತೀಚೆಗೆ ನೀವು ಶಾಪಿಂಗ್ ಗೆ ಹೋದಾಗ ಅಲ್ಲಿನ ಆಯ್ಕೆಗಳನ್ನು ನೋಡಿ ದಂಗಾಗಿರುವುದಂತೂ ಖಂಡಿತ. ಆದರೆ ಸರಳವಾಗಿರುವುದು ಅತ್ಯಂತ ಉತ್ತಮ ಎಂಬ ಮಾತು ಸದಾ ನಿಮ್ಮ ಮನಸ್ಸಿನಲ್ಲಿರಲಿ. ವಿಧ ವಿಧ ಚಿತ್ತಾರಗಳನ್ನು ತೊಡುವ ಸಮಯ ಎಂದೋ ಹೊರಟುಹೋಗಿದೆ. ದೊಡ್ಡ ದೊಡ್ಡ ಚಿತ್ತಾರದ ಹಾಗು ಎದ್ದು ಕಾಣಿಸುವ ಟೈ ಗಳನ್ನೆಲ್ಲಾ ಈಗಿನ ಯುವಕರಿಗೆ ಬಿಟ್ಟುಬಿಡಿ. ಈಗಿನ ನಿಮ್ಮ ಫ್ಯಾಷನ್ ಕಾಲಾತೀತವಾಗಿರಬೇಕು. ಸರಳ ಮತ್ತು ಸುಂದರವಾಗಿರಬೇಕು. ಸರಿಯಾಗಿ ಇಸ್ತ್ರಿ ಮಾಡಿದ ಬಟ್ಟೆಗಳೇ ನಿಮ್ಮ ಫ್ಯಾಷನ್ ನ ಮೂಲಮಂತ್ರ ಎನ್ನುವುದನ್ನು ನೆನಪಿನಲ್ಲಿಡಿ. ಇದರ ವಿರುದ್ಧವಾಗಿ ತಯಾರಾಗುತ್ತೀರಿ ಎಂದಾದರೆ ಆಯ್ಕೆ ನಿಮಗೆ ಬಿಟ್ಟದ್ದು ಆದರೆ ಮತ್ತೆ ಯಾಕೆ ಹೀಗೆ ಮಾಡಿದೆ ಎಂದು ಮರುಗದಿರಿ.

2. ದೇಹಕ್ಕೆ ಫಿಟ್ ಆಗುವ ಡ್ರೆಸ್ ನ ಆಯ್ಕೆ

2. ದೇಹಕ್ಕೆ ಫಿಟ್ ಆಗುವ ಡ್ರೆಸ್ ನ ಆಯ್ಕೆ

ನಲವತ್ತು ದಾಟಿದ ಪುರುಷರು ರೆಡಿವೇರ್ ಗಳನ್ನು ಧರಿಸುವುದು ಅಷ್ಟೊಂದು ಸರಿಯಲ್ಲ. ನಿಮ್ಮೆ ದೇಹಕ್ಕೆ ಸರಿಯಾಗಿ ಫಿಟ್ ಆಗುವಂತಹ ಬಟ್ಟೆಗಳನ್ನು ದರ್ಜಿಯ ಕೈಯಲ್ಲೇ ಹೊಲಿಸಿಕೊಳ್ಳಿ. ದರ್ಜಿ ಮಾತ್ರ ನಿಮ್ಮ ಕೊನೆಯ ಕ್ಷಣದ ಬದಲಾವಣೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅದೇ ರೀತಿ ಬಟ್ಟೆಗಳನ್ನು ತಯಾರಿಸುತ್ತಾನೆ. ನಿಮಗೆ ಸರಳವಾದ ಆದರೆ ಆಕರ್ಷಕವಾಗಿ ಕಾಣುವ ಬಟ್ಟೆಗಳನ್ನೇ ಆರಿಸಲು ದರ್ಜಿಯ ಸಲಹೆ ಮತ್ತು ಸಹಾಯ ಪಡೆಯಿರಿ.

3. ವಯಸ್ಸನ್ನು ಮರೆ ಮಾಚುವ ಡ್ರೆಸ್ಸಿಂಗ್

3. ವಯಸ್ಸನ್ನು ಮರೆ ಮಾಚುವ ಡ್ರೆಸ್ಸಿಂಗ್

ನೀವು ಬದುಕಿದ ವಯಸ್ಸಿನ ಬಗ್ಗೆ ನಿಮಗೆ ಗರ್ವ ಇರಲಿ. ನಿಮ್ಮ ವಯಸ್ಸನ್ನು ಮರೆಮಾಚಲು ಪ್ರಯತ್ನಿಸಬೇಡಿ. ಬಹಳ ಸಡಿಲವಾದ ಮತ್ತು ಬಹಳ ತೆಳುವಾದ ಬಟ್ಟೆಗಳನ್ನು ತೊಟ್ಟು ನಾನೂ ಈ ವಯೋಮಿತಿಯ ಬಟ್ಟೆ ತೊಡುವ ವಯಸ್ಸಿನವನಾಗಿದ್ದೇನೆ ಎಂದು ತೋರಿಸಿಕೊಳ್ಳಲು ಹೋಗದಿರಿ, ಗ್ರಾಫಿಕ್ ಗಳು, ಪ್ರಿಂಟೆಡ್ ಶರ್ಟ್ ಅಥವಾ ಟಿ ಶರ್ಟ್ ಗಳು ನಿಮಗಲ್ಲ. ‘ನಿಮ್ಮ ಗರ್ಲ್ ಫ್ರೆಂಡ್ ನನ್ನತ್ತ ಗುರಾಯಿಸುವುದನ್ನು ನಿಲ್ಲಿಸಲಿ' ಎಂಬ ಅರ್ಥ ಬರುವ ವಾಕ್ಯಗಳಿರುವ ಟಿ ಶರ್ಟ್ಗ್ ಗಳು ನಿಮಗಲ್ಲ.

4.ಸ್ಟೈಲ್ ಕಾಲದ ಪರಿಮಿತಿಯೊಳಗೆ ಇರದಿರಲಿ

4.ಸ್ಟೈಲ್ ಕಾಲದ ಪರಿಮಿತಿಯೊಳಗೆ ಇರದಿರಲಿ

ಈಗಿನ ಸ್ಟೈಲ್ ಗಳನ್ನು ಫ್ಯಾಷನ್ ಗಳನ್ನು ಪಾಲಿಸಲೇ ಬೇಡಿ ಎಂಬುದು ನಮ್ಮ ಸಲಹೆಯಲ್ಲ. ಆದರೆ ಎಲ್ಲವನ್ನೂ ನೀವು ಪಾಲಿಸಲೇ ಬೇಕು ಎಂಬ ಹಠ ಬೇಡ. ವರ್ಷಗಳು ಕಳೆದಂತೆ ಸ್ಟೈಲ್ ಗಳು ಬದಲಾಗುತ್ತವೆ ಕೆಲವೊಮ್ಮೆ ಕೆಲವೇ ದಿನಗಳಲ್ಲಿ ಬದಲಾಗುವ ಸಂಭವವೂ ಇದೆ. ನಲವತ್ತು ದಾಟಿದ ಪುರುಷರಿಗೆ ಸ್ಟೈಲ್ ಎನ್ನುವುದು ಯಾವುದೇ ಕಾಲದ ಪರಿಮಿತಿಯೊಳಗೆ ಇರಬಾರದು. ಕೆಲವು ಸ್ಟೈಲ್ ಗಳು ಆಯಾ ಪ್ರದೇಶಕ್ಕೆ ತಕ್ಕಂತೆ ಇರುತ್ತವೆ ಅಂತಹವು ನಿಮ್ಮ ವಯಸ್ಸಿಗೆ ಸರಿಹೊಂದುವುದಿಲ್ಲ.

5. ಫ್ಯಾಷನಬಲ್ ಮತ್ತು ಡೀಸೆಂಟ್ ಆಗಿರಲಿ

5. ಫ್ಯಾಷನಬಲ್ ಮತ್ತು ಡೀಸೆಂಟ್ ಆಗಿರಲಿ

ಕೆಲವು ಸ್ಟೈಲ್ ಗಳು ಫ್ಯಾಷನ್ ಗಳು ಒಂದು ಸಮಯದಲ್ಲಿದ್ದು ಮತ್ತೆ ಮರೆಯಾಗಿ ಕೆಲವು ಸಮಯದ ನಂತರ ಮರಲಿ ಚಾಲ್ತಿಗೆ ಬರುತ್ತವೆ ಇದರ ಅರ್ಥ ನೀವು ನಿಮ್ಮ ಯೌವ್ವನದ ಸಮಯದಲ್ಲಿದ್ದ ಸ್ಟೈಲ್ ಮರಳಿ ಬಂದಿದೆ ಎಂದಾದರೆ ಅದನ್ನು ಪಾಲಿಸಬೇಕೆಂದಲ್ಲ.

ಈಗ ಆ ಫ್ಯಾಷನ್ ಮತ್ತೇನನ್ನೋ ಪ್ರತಿನಿಧಿಸಬಹುದು ಆದರೆ ನೀವು ಅದನ್ನೇ ಧರಿಸಲು ಸಾಧ್ಯವಿಲ್ಲ. ನಿಮಗೆ ಅದೇ ಪ್ಯಾಷನ್ ಅನ್ನಿಸಿದರೂ ಅದರಲ್ಲೇ ಸಣ್ಣ ಬದಲಾವನೆಗಳನ್ನು ಮಾಡಿರಲಾಗುತ್ತದೆ, ದೊಡ್ಡ ಏವಿಯೇಟರ್ ಕನ್ನಡಕಗಳು ಈಗ ಮತ್ತೆ ಚಾಲ್ತಿಯಲ್ಲಿವೆ ಆದರೆ ಈಗ ಅವು ಹಳೆಯ ಕಾಲದಂತೆ ಅಲ್ಲ ಅವುಗಳ ಫ್ರೇಮ್ ಗಳಲ್ಲಿ ಹಾಗೂ ಇನ್ನಿತರ ವಿನ್ಯಾಸದಲ್ಲಿ ಬದಲಾವಣೆಗಳನ್ನು ಮಾಡಿ ಬಳಸಲಾಗುತ್ತಿದೆ.

ಹೀಗಾಗಿ ಈಗಿನ ನಿಮ್ಮ ವಯೋಮಿತಿಯ ಫ್ಯಾಷನ್ ಅನ್ನೇ ಬಳಸಿ ಅಪ್ ಡೇಟ್ ಆಗಿ ಅದರ ಬದಲು ಯುವಕ ಫ್ಯಾಷನ್ ಬಳಸಲು ಹೋಗಿ ಔಟ್ ಡೇಟ್ ಆಗಬೇಡಿ.

6. ಪ್ಯಾಂಟ್ ಗಳನ್ನು ಹೆಚ್ಚು ಅವಲಂಬಿಸಿ

6. ಪ್ಯಾಂಟ್ ಗಳನ್ನು ಹೆಚ್ಚು ಅವಲಂಬಿಸಿ

ಎಲ್ಲಾ ಕಾಲಕ್ಕೂ ಸಲ್ಲುವ ಕೆಲವು ಪ್ಯಾಂಟ್ ಗಳು ನಿಮ್ಮಲ್ಲಿ ಇರಲೇ ಬೇಕು. ನೀವು ನಿಮ್ಮ ದೇಹವನ್ನು ಉತ್ತಮವಾಗಿ ನಿರ್ವಹಣೆ ಮಾಡಿದ್ದೀರಿ ಜಿಮ್ ಗೆ ಹೋಗುತ್ತಿದ್ದೀರಿ ಎಂದಾದರೆ ಸರಿ. ಇಲ್ಲವಾದರೆ ನಿಮ್ಮ ಬೊಜ್ಜುಗಳನ್ನೆಲ್ಲಾ ಮರೆಮಾಚಲು ಅಂತಹ ಸಾಮಾನ್ಯ ಪ್ಯಾಂಟ್ ಗಳೇ ಸಹಾಯ ಮಾಡುತ್ತವೆ. ನೈಸರ್ಗಿಕ ಫೈಬರ್ ಮತ್ತು ಡೆನಿಮ್ ಗಳು ಎಲ್ಲಾ ಕಾಲಕ್ಕೂ ಉತ್ತಮ. ಆದರೆ ಹರಿದ ಮತ್ತು ವಿಚಿತ್ರವಾಗಿ ಕಾಣುವ ಪ್ಯಾಂಟ್ ಗಳು ನಿಮ್ಮವಲ್ಲ. ಬಣ್ಣಗಳಲ್ಲಿ ನೀವು ವೈವಿಧ್ಯತೆ ಕಾಪಾಡಬಹುದು. ಆದರೆ ದರ್ಜಿಯ ಬಳಿ ಹೊಲಿಸುವಾಗ ನಿಮ್ಮ ಸ್ಟೈಲ್ ಗೆ ಸರಿ ಹೊಂದುವಂತೆ ಇಡಲು ನೆನಪಿಡಿ.

7. ಸ್ಟೈಲಿಷ್ ಪರಿಕರಗಳು

7. ಸ್ಟೈಲಿಷ್ ಪರಿಕರಗಳು

ಕೆಲವು ಪರಿಕರಗಳು ನಿಮ್ಮ ಹಳೆಯ ಬೇಜಾರಾಗುವ ಫ್ಯಾಷನ್ ಗೆ ಇನ್ನಷ್ಟು ಮೆರೆಗು ನೀಡುತ್ತವೆ. ಟೈ ಪಿನ್ ಗಳು, ಕಫ್ ಲಿಂಕ್ ಗಳು, ಕೈಗಡಿಯಾರ, ಕನ್ನಡಕ ಕಲೆವು ಬಳಸಬಹುದಾದಂತಹ ಪರಿಕರಗಳಾಗಿವೆ. ಇವೆಲ್ಲವೂ ನಿಮ್ಮ ಶೂ ಗಳೊಂದಿಗೆ ಹೊಂದಿಕೆ ಅಗುವಂತಿರಲಿ. ಕಪ್ಪು ಬೆಲ್ಟ್ ಧರಿಸುತ್ತೀರಿ ಎಂದಾದರೆ ಕಪ್ಪು ಶೂ ಗಳೇ ಇರಲಿ ಬದಲಾಗಿ ಕಂದು ಬಣ್ಣದ ಶೂ ಗಳನ್ನು ಧರಿಸಲು ಹೋಗದಿರಿ. ನೀವು ಯಾರೂ ಗಮನಿಸುವುದಿಲ್ಲ ಎಂದು ಭಾವಿಸಬಹುದು ಆದರೆ ನಿಜವಾಗಿ ಎಲ್ಲರೂ ಗಮನಿಸುತ್ತಾ ಇರುತ್ತಾರೆ,

ಪ್ರಕಾಶ್ ರಾಜ್

ಪ್ರಕಾಶ್ ರಾಜ್

ಪ್ರಕಾಶ್ ರಾಜ್ ಹೇಗೆ ತನ್ನ ವಯಸ್ಸಿಗೆ ತಕ್ಕಂತೆ ಆಕರ್ಷಕವಾಗಿ ಸ್ಟೈಲ್ ಗಳನ್ನು ಮಾಡಿದ್ದಾರೆ ನೋಡಿಅವರ ದೇಹಕ್ಕೆ ಸರಿಯಾಗಿ ಹೊಂದಿಕೊಳ್ಳುವ ಅವರ ಬಟ್ಟೆಗಳು ಇವುಗಳ ಜೊತೆಗೆ ಅವರ ಪರಿರಕಗಳ ಆಯ್ಕೆಯೂ ಬಹಳ ಆಕರ್ಷಕವಾಗಿದೆ.

ಫ್ಯಾಷನ್ ಗಳು ಇಂದು ಬಂದರೆ ನಾಳೆಗೆ ಮಾಯವಾಗಿರುತ್ತವೆ ಆದರೆ ನೀವು ನಿಮ್ಮದೇ ಶೈಲಿಯನ್ನು ಆಭಿವೃದ್ಧಿ ಪಡಿಸಿಕೊಂಡರೆ ಅದು ನಿಮ್ಮನ್ನು ಬೇರೆಯವರಿಂದ ಭಿನ್ನವಾಗಿಡುತ್ತದೆ. ವಯಸ್ಸಾದಂತೆ ಸುಂದರವಾಗಿರಿ ಮತ್ತು ಕಾಲಾತೀತರಾಗಿರಿ.

X
Desktop Bottom Promotion