Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಸ್ಲಿಮ್ ಆಗಿ ಕಾಣುವಂತೆ ಮಾಡುವ ಡ್ರೆಸ್ಸಿಂಗ್ ಟಿಪ್ಸ್
ಕೆಲವೊಂದು ಡ್ರೆಸ್ ಹಾಕಿದಾಗ ನೀವು ಗಮನಿಸಿರಬಹುದು, ಇರುವ ದಪ್ಪಕ್ಕಿಂತ ಸ್ವಲ್ಪ ಅಧಿಕವೇ ಗುಂಡಾಗಿ ಕಾಣುತ್ತಿರುತ್ತೀರಿ. ಇರುವ ಮೈ ಮಾಟಕ್ಕಿಂತ ತೆಳ್ಳಗೆ ಕಾಣಲು ಅಥವಾ ದಪ್ಪಗೆ ಕಾಣಲು ಡ್ರೆಸ್ಸಿಂಗ್ ಹೇಗಿರಬೇಕೆಂಬ ಐಡಿಯಾ ನಿಮ್ಮಲ್ಲಿ ಇದ್ದರೆ, ನೀವು ಮತ್ತಷ್ಟು ಆಕರ್ಷಕವಾಗಿ ಕಾಣುವುದರಲ್ಲಿ ಯಾವುದೇ ಸಂಶಯವಿಲ್ಲ.
ಸಾಮಾನ್ಯವಾಗಿ ದಪ್ಪಗಿರುವವರೆಗೆ 'ಈ ಡ್ರೆಸ್ ನನಗೆ ಚೆಂದ ಕಾಣುತ್ತಿಲ್ಲ', 'ಇದರಲ್ಲಿ ನಾನು ದಪ್ಪಗೆ ಕಾಣುತ್ತಿದ್ದೇನೆ' ಕೀಳೆರಿಮೆ ಅಧಿಕವಿರುತ್ತದೆ. ಇಲ್ಲಿ ನಾವು ನೀವು ತೆಳ್ಳಗೆ ಕಾಣಿಸಲು ನಿಮ್ಮ ಡ್ರೆಸ್ಸಿಂಗ್ ಸ್ಟೈಲ್ ಹೇಗಿರಬೇಕೆಂಬ ಟಿಪ್ಸ್ ನೀಡಿದ್ಧೇವೆ ನೋಡಿ:

ಕುರ್ತಾ
ಇತ್ತೀಚಿನ ದಿನಗಳಲ್ಲಿ ಮಹಿಳೆಯರು ತುಂಬಾ ಕಂಫರ್ಟ್ ಡ್ರೆಸ್ ಎಂದು ಕುರ್ತಾವನ್ನೇ ಹೆಚ್ಚಾಗಿ ಧರಿಸುತ್ತಾರೆ. ಕುರ್ತಾ ಕೊಳ್ಳುವಾಗ ಸ್ವಲ್ಪ ಸಡಿಲವಾಗಿರುವ ಕುರ್ತಾ ಕೊಳ್ಳಿ. ಅಡ್ಡ ಲೈನ್ ಇರುವ, ದೊಡ್ಡ ಹೂ ಇರುವ ಕುರ್ತಾಗಳನ್ನು ಕೊಳ್ಳಬೇಡಿ. ಕುರ್ತಾ ಟಾಪ್ ತುಂಬಾ ಶಾರ್ಟ್ ಬದಲು ಮಂಡಿಯವರೆಗೆ ಇರಲಿ. ಈ ಔಟ್ ಫಿಟ್ ನಿಮ್ಮನ್ನು ಸ್ವಲ್ಪ ತೆಳ್ಳಗೆ ಕಾಣುವಂತೆ ಮಾಡುತ್ತದೆ.

ಸೆಲ್ವಾರ್
ಸೆಲ್ವಾರ್ ಧರಿಸುವಾಗಲೂ ಅಷ್ಟೇ ತುಂಬಾ ಬಿಗಿಯಾದ ಮತ್ತು ತುಂಬಾ ಸಡಿಲವಾದ ಸೆಲ್ವಾರ್ ಧರಿಸಬೇಡಿ, ನಿಮ್ಮ ದೇಹಕ್ಕೆ ಸರಿಹೊಂದುವ ಫಿಟ್ ಡ್ರೆಸ್ ಹಾಕಿ. ಚೂಡಿ ಟಾಪ್ ಸ್ವಲ್ಪ ಉದ್ದವಿರಲಿ, ಕೈ 'ಫುಲ್ ಕೈ' ಆಗಿರಲಿ.

ಸೀರೆ
ಜರಿ ಸೀರೆ, ಕಾಟನ್ ಸೀರೆ ಈ ರೀತಿಯ ಸೀರೆಗಳಲ್ಲಿ ಇರುವುದಕ್ಕಿಂತ ಸ್ವಲ್ಪ ದುಂಡಾಗಿ ಕಾಣುವಿರಿ. ಆದ್ದರಿಂದ ಫಿಟ್ ಬ್ಲೌಸ್ ಗೆ ಶಿಫಾನ್ ಸೀರೆ ಧರಿಸಬಹುದು.

ಸೀರೆ
ಜರಿ ಸೀರೆ, ಕಾಟನ್ ಸೀರೆ ಈ ರೀತಿಯ ಸೀರೆಗಳಲ್ಲಿ ಇರುವುದಕ್ಕಿಂತ ಸ್ವಲ್ಪ ದುಂಡಾಗಿ ಕಾಣುವಿರಿ. ಆದ್ದರಿಂದ ಫಿಟ್ ಬ್ಲೌಸ್ ಗೆ ಶಿಫಾನ್ ಸೀರೆ ಧರಿಸಬಹುದು.

ಡ್ರೆಸ್ ಬಣ್ಣ
ಎದ್ದು ಕಾಣುವ ಬಣ್ಣಕ್ಕಿಂತ ಕಪ್ಪು ಅಥವಾ ಬ್ಲೂ ಈ ರೀತಿಯ ಬಣ್ಣದ ಡ್ರೆಸ್ ಆಕರ್ಷಕವಾಗಿ ಕಾಣುವುದು. ವಿನ್ಯಾಸ ಡ್ರೆಸ್ ನ ಬಣ್ಣ ಮಾತ್ರವಲ್ಲ ಅದರ ವಿನ್ಯಾಸವನ್ನು ಗಮನಿಸಬೇಕು. ದೊಡ್ಡ ಚುಕ್ಕಿ ಇರುವ, ಅಡ್ಡ ಗೆರೆಯ ಡ್ರೆಸ್ ಗಳು ತೆಳ್ಳಗೆ ಇದ್ದವರಿಗೆ ಚೆಂದ ಕಂಡರೆ ಉದ್ದ ಗೆರೆಯ, ಚಿಕ್ಕ ಹೂಗಳಿರುವ ಡ್ರೆಸ್ ದಪ್ಪಗಿರುವವರೆಗೆ ಆಕರ್ಷಕವಾಗಿ ಕಾಣುವುದು.

ಅಲಂಕಾರ
ಸ್ವಲ್ಪ ದಪ್ಪಗಿರುವವರೆಗೆ ದೊಡ್ಡ ಸರ ಮತ್ತು ದೊಡ್ಡ ಕಿವಿಯೋಲೆ ಫ್ಯಾಷನಬಲ್ ಲುಕ್ ನೀಡುತ್ತದೆ.

ಹೇರ್ ಸ್ಟೈಲ್
ಕೂದಲನ್ನು ಗಾಳಿಯಲ್ಲಿ ಹಾರಾಡಲು ಬಿಡಬಹುದು, ಅಥವಾ ಆಕರ್ಷಕ ವಿನ್ಯಾಸದಿಂದ ಕಟ್ಟಿದರೆ ಅಂದವಾಗಿ ಕಾಣುವುದು.

ಸ್ಲಿಪ್ಪರ್
ಸ್ವಲ್ಪ ಹೀಲ್ಡ್ ಇರುವ ಸ್ಲಿಪ್ಪರ್ ಧರಿಸಿ. ಹೀಲ್ಡ್ ಸ್ಲಿಪ್ಪರ್ ನಲ್ಲಿ ನೀವು ಎತ್ತರವಾಗಿ ಕಾಣುವುದರಿಂದ ನಿಮ್ಮ ಮೈ ಮಾಟ ತೆಳ್ಳಗೆ ಕಾಣುವುದು.

ಸರಳವಾದ ಮೇಕಪ್
ತುಂಬಾ ಎದ್ದು ಕಾಣುವ ಮೇಕಪ್ ಗಿಂತ ಸರಳವಾದ ಮೇಕಪ್ ಹೆಚ್ಚು ಆಕರ್ಷಕವಾಗಿ ಕಾಣುವುದು.



Click it and Unblock the Notifications
