Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಇಂಡಿಯಾ ಬ್ರೈಡಲ್ ಫ್ಯಾಷನ್ ಶೋದ ಝಲಕ್-2
ಇಂಡಿಯನ್ ಬ್ರೈಡಲ್ ಫ್ಯಾಷನ್ ಶೋದ ಎರಡನೇಯ ದಿನದ ವಿಶೇಷವೇನು ಎಂದು ನೋಡೋಣವೇ?
ಸಿನಿಮಾ ನಿರ್ದೇಶಕ ಮುಜಾಫರ್ ಅಲಿ ಮತ್ತು ಅವರ ಪತ್ನಿ , ಫೇಮಸ್ ಡಿಸೈನರ್ ರವರ ಕಲ್ಪನೆಯಲ್ಲಿ ಮೂಡಿದ ಕೆಲವು ಅತ್ಯಾಕರ್ಷವಾದ ಉಡುಗೆಗಳನ್ನು ತೊಟ್ಟು ರೂಪರ್ಶಿಯರು ಆ ಉಡುಪುಗಳ ಸೌಂದರ್ಯವನ್ನು ಫ್ಯಾಷನ್ ಜಗತ್ತಿಗೆ ಪರಿಚಯಿಸಿದರು. ಇವರು ಡಿಸೈನ್ ಮಾಡಿದ ಡ್ರೆಸ್ ಅನ್ನು 'Pearls on Oriental Forms' ಎಂದು ಕರೆಯಲಾಗಿದ್ದು, ಇದರಲ್ಲಿ ಸೀರೆ, ಲೆಹಂಗಾ, ಅನಾರ್ಕಲಿ, ಪಾರ್ಸಿ ಪೈಜಾಮದಲ್ಲಿ ನಿಮಗೆ ಆಯ್ಕೆ ಮಾಡಲು ಉತ್ತಮ ಕಲೆಕ್ಷನ್ ಇದೆ.
ಬನ್ನಿ ಮೀರಾರವರು ವಿನ್ಯಾಸ ಮಾಡಿದ ಡ್ರೆಸ್ ಮತ್ತು ಅವುಗಳ ವಿನ್ಯಾಸದತ್ತ ನೋಡೋಣ:

ಲೆಹಂಗಾ
ಕ್ರೀಮ್ ಬಣ್ಣದ , ಗೋಲ್ಡನ್ ಬಾರ್ಡರ್ ಇರುವ ಲೆಹಂಗಾದಲ್ಲಿ ಮಿಂಚುತ್ತಿರುವ ರೂಪದರ್ಶಿ.

ಅನಾರ್ಕಲಿ
ಯೂನಿಕ್ ಕಲರ್ ನ ಅತ್ಯಾಕರ್ಷಕವಾದ ಅನಾರ್ಕಲಿ ಡ್ರೆಸ್ ಗಳು Pearls on Oriental Forms ನಲ್ಲಿ ಲಭ್ಯವಿದೆ.

ಸೀರೆ
ಮೀರಾರವರ ಕಲ್ಪನೆಯಲ್ಲಿ ಮೂಡಿ ಬಂದ ನ್ಯೂ ಬ್ರೈಡಲ್ ಸ್ಯಾರಿ.

ಲೆಹಂಗಾ
ಮೀರಾರವರು ವಿನ್ಯಾಸ ಮಾಡಿದಂತಹ ಬಹುತೇಕ ಡ್ರೆಸ್ ಗಳು ಕ್ರೀಮ್ ಬಣ್ಣದಲ್ಲಿ. ಬಹುಶಃ ಎಲ್ಲಾ ಬಣ್ಣದವರೆಗೆ ಸೂಟ್ ಆಗುವ ಬಣ್ಣ ಇದಾಗಿರುವುದರಿಂದ ಕ್ರೀಮ್ ಬಣ್ಣ ಆಯ್ಕೆ ಮಾಡಿರಬಹುದು. ಈ ಲೆಹಂಗಾ ಧರಿಸಿ, ಕುತ್ತಿಗೆಗೆ ನೆಕ್ಲಸ್ ಧರಿಸಿದರೆ ಸಾಕು,ಸರಳವಾದ ಆಭರಣದಲ್ಲಿ ಆಕರ್ಷಕವಾಗಿ ಕಾಣಬಹುದು.

ಲೆಹಂಗಾ
ಇಲ್ಲಿ ಕೂಡ ಕ್ರೀಮ್ ಬಣ್ಣದ ಟಾಪ್ ಕಾಣಬಹುದು. ಕ್ರೀಮ್ ಬಣ್ಣದ ಟಾಪ್ ಗೆ ಕೆಂಪು ಬಣ್ಣದ ಲಂಗದಲ್ಲಿ ಆಕರ್ಷಕ ವಿನ್ಯಾಸ ಹೊಂದಿರುವ ಈ ಲೆಹಂಗಾ ಮದುಮಗಳ ಚೆಲುವನ್ನು ಹೆಚ್ಚಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

ಸೀರೆ
ಸೀರೆ ಧರಿಸಿ, ಅದರ ಮೇಲೆ ಕೋಟ್ ಧರಿಸಿದಂತೆ ಕಾಣುವ ಈ ಸೀರೆ ನ್ಯೂ ಡ್ರೆಂಡ್ era ಕ್ರಿಯೇಟ್ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ.

ಲೆಹಂಗಾ
ಫುಲ್ ಅಂಡ್ ಫುಲ್ ಕ್ರೀಮ್. ಈ ಲೆಹಂಗಾಕ್ಕೆ ಓವರ್ ಕೋಟ್ ಇದ್ದು , ಕೋಟ್ ನ ನೆಕ್ ಫ್ಯಾಷನಬಲ್ ಆಗಿದೆ.

ಅನಾರ್ಕಲಿ
ಈ ಅನಾರ್ಕಲಿ ವಿನ್ಯಾಸದಲ್ಲಿ ಸ್ವಲ್ಪ ಭಿನ್ನವಾಗಿದೆ. ಸಾಮಾನ್ಯವಾಗಿ ಅನಾರ್ಕಲಿ ಮಂಡಿಗಿಂತ ಸ್ವಲ್ಪ ಕೆಳಗಿರುತ್ತದೆ, ಆದರೆ ಇದು ಪಾದವರೆಗೆ ಇದ್ದು , ಮುಂದಿನ ಅನಾರ್ಕಲಿ ಫ್ಯಾಷನ್ ಇದಾಗಿರಬಹುದೇ?

ಕಪ್ಪು ಮತ್ತು ಗೋಲ್ಡನ್ ಕಲರ್ ಮಿಶ್ರಿತ
ಕಪ್ಪು ಮತ್ತು ಗೋಲ್ಡನ್ ಮಿಶ್ರಿತವಾಗಿರುವ ಲೆಹಂಗಾ ಮತ್ತು ಅನಾರ್ಕಲಿ.

ಡಿಸೈನರ್ ಮೀರಾ
ರೂಪದರ್ಶಿಯರೊಂದಿಗೆ ನಡೆದು ಬರುತ್ತಿರುವ ಡಿಸೈನರ್ ಮೀರಾ.



Click it and Unblock the Notifications