Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಲೈಫ್ ಮತ್ತಷ್ಟು ಸುಂದರವಾಗಲು ಇರಬೇಕು ಹುಚ್ಚುತನ!
ದಿನಾ ಒಂದೇ ರೀತಿಯ ಜೀವನ. ಏನೂ ವ್ಯತ್ಯಾಸವಿಲ್ಲ, ನಮ್ಮ ಕಷ್ಟ-ಸುಖಗಳ ಜಂಜಾಟದ ನಡುವೆ ಇಡೀ ಬದುಕನ್ನು ಕಳೆದು ಬಿಡುತ್ತೇವೆ. ಬದುಕಿನ ಯಾವುದೋ ಒಂದು ಹಂತದಲ್ಲಿ ಪ್ರತಿಯೊಬ್ಬರಿಗೂ ನನಗಾಗಿ ನಾನು ಏನು ಮಾಡಿದೆ ಎಂದು ಅನಿಸಿಯೇ ಅನಿಸುತ್ತದೆ, ಆದರೆ ಹಾಗೇ ಅನಿಸಿದ ದಿನ ನಮಗರ್ಥವಾಗುವುದು ಬದುಕಿನ ಹಿಂದೆ ಉಸಿರು ಬಿಗಿ ಹಿಡಿದು ಓಡಿದ್ದೇವೆ, ಆದರೆ ಸಾಕಷ್ಟು ವಿಷಯಗಳನ್ನು ಬದುಕಿನಲ್ಲಿ ಮಿಸ್ ಮಾಡಿ ಕೊಂಡಿದ್ದೇವೆ ಅಂತ. ಕಳೆದು ಹೋದ ಕಾಲಕ್ಕೆ ಚಿಂತಿಸಿ ಫಲವೇನು?
ಬದುಕಿನಲ್ಲಿ ಕೆಲವೊಂದಿಷ್ಟು ಹುಚ್ಚುತನಗಳಿದ್ದರೆ ಬದುಕು ಸ್ವಾರಸ್ಯವಾಗಿರುತ್ತದೆ, ಅಲ್ಲವೇ? ಎಲ್ಲರಿಗಿಂತ ಭಿನ್ನವಾಗಿ ಇರಬೇಕೆಂಬ ತುಡಿತ ಎಲ್ಲರಲ್ಲಿಯೂ ಇರುತ್ತದೆ, ಆದರೆ ಆ ತುಡಿತಕ್ಕೆ ನೀರು ಎರೆಯುವವರು ಎಷ್ಟು ಜನ? ಆದ್ದರಿಂದಲೇ ಎಲ್ಲರಂತೆ ನಾವು ಬದುಕುತ್ತೇವೆ.
ಕವಿ ಹೇಳುತ್ತಾರೆ" ಮಾನವನಾಗಿ ಹುಟ್ಟಿದ ಮ್ಯಾಲೆ ಎನೇನ್ ಕಂಡಿ,
ಸಾಯೋತನಕ ಸಂಸಾರದೊಳಗೆ ಗಂಡಾಗುಂಡಿ,
ಹೇರಿಕೊಂಡು ಹೋಗೋದಿಲ್ಲ ಸತ್ತಾಗ್ ಬಂಡಿ
ಇರೋದರೊಳಗೆ ಒಮ್ಮೆ ನೋಡು ಜೋಗಾದ್ ಗುಂಡಿ"
ಆದರೆ ಜೋಗದ ಗುಂಡಿ ಮಾತ್ರ ನೋಡಿದರೆ ಸಾಲದು ಸಾಯುವುದಕ್ಕೆ ಮುಂಚೆ ಮಾಡಬೇಕಾದ ಇನ್ನೂ ಅನೇಕ ಕ್ರೇಜಿ ವಿಷಯಗಳಿವೆ. ಇಲ್ಲಿ ಏನೆಲ್ಲಾ ಮಾಡಬಹುದು ಎಂದು ಕೆಲ ಉಪಾಯ ನೀಡಿದ್ದೇವೆ, ಇದರ ಹೊರತಾಗಿಯೂ ಇನ್ನೂ ಹಲವು ಕ್ರೇಜಿ ವಿಷಯಗಳನ್ನು ಮಾಡಬಹುದು, ಇತ್ತೀಚಿಗೆ ಒಬ್ಬಾತ ಬೈಕ್ ನಲ್ಲಿ ಪ್ರಪಂಚ ಸುತ್ತಿ ಬಂದದ್ದನ್ನು ಓದಿದೆ. ಹಣ-ಪದವಿ ಅಂತ ನಾವು ಓಡುತ್ತಿರುತ್ತೇವೆ, ಅವುಗಳ ಮಧ್ಯೆ ಈ ರೀತಿಯ ಹುಚ್ಚುತನಕ್ಕೂ ಸ್ವಲ್ಪ ಸಮಯ ಮೀಸಲಿಟ್ಟರೆ ಜೀವನ ಯಾವತ್ತೂ ಬೋರು ಅನಿಸುವುದಿಲ್ಲ ಅನ್ನುವುದು ನನ್ನ ಅನಿಸಿಕೆ, ನೀವೇನು ಅಂತಿರಿ?

ಸ್ಕೈ ಡೈವಿಂಗ್
ಸಾವಿರ ಅಡಿ ಎತ್ತರದಿಂದ ಕೆಳಕ್ಕೆ ಹಾರುವುದು , ನೆನೆಸಿದರೆ ಮೈ ಜುಮ್ಮು ಅನ್ನುತ್ತದೆ ಅಲ್ವಾ? ಸಾಯುವ ಮುಂಚೆ ಈ ಸಾಹಸದ ಥ್ರಿಲ್ ಅನುಭವಿಸಬೇಕೆಂದು ಅನಿಸುತ್ತಿಲ್ಲವೇ?

ದಾಖಲೆ ಬುಕ್ ನಲ್ಲಿ ಹೆಸರಿಗಾಗಿ ಚಿಕ್ಕ ಪ್ರಯತ್ನ
ನಾನು, ನನ್ನ ಕುಟುಂಬ ಅಂತ ಒಂದು ಪರಿಧಿಯೊಳಗೆ ಇದ್ದರೆ ನಾವು ಸತ್ತ ಮೇಲೆ ಯಾರೂ ನಮ್ಮನ್ನು ನೆನೆಪಿನಲ್ಲಿ ಇಡುವುದಿಲ್ಲ, ನಾವೂ ಸತ್ತ ಮೇಲೂ ನಮ್ಮ ಹೆಸರು ಮರೆಯಬಾರದು ಎನ್ನುವ ಸ್ವಾರ್ಥತೆ ಇದ್ದರೆ ತಪ್ಪೇನು?

ಎತ್ತರದ ಶಿಖರವೇರುವುದು
ನೀವು ಸಾಹಸ ಪ್ರವೃತ್ತಿಯವರೇ, ಹಾಗಾದರೆ ಸಾಯುವ ಮುಂಚೆ ಒಮ್ಮೆಯಾದರೂ ಹಿಮಾಲಯ ಶಿಖರದ ತುದಿಯಲ್ಲಿ ನಿಂತು ಪ್ರಪಂಚವನ್ನು ನೋಡಬಾರದೇಕೆ?

ಸ್ಟ್ರೀಟ್ ಲೈಫ್
ನಮ್ಮಲ್ಲಿ ಹೆಚ್ಚಿನವರು ಸ್ಟ್ರೀಟ್ ಫುಡ್ ಟೇಸ್ಟ್ ನೋಡಿರಲ್ಲ, ಸ್ಟ್ರೀಟ್ ಲೈಫ್ ಬಗ್ಗೆ ಗೊತ್ತಿರುವುದಿಲ್ಲ. ಇದುವರೆಗೆ ಸ್ಟ್ರೀಟ್ ಲೈಫ್ ಬಗ್ಗೆ ಗೊತ್ತಿಲ್ಲದಿದ್ದರೆ ಉತ್ತಮ ಹೋಟೆಲ್ ನ ಫುಡ್ ಮಾತ್ರ ತಿನ್ನುವ ಬದಲು ಒಮ್ಮೆ ಬೀದಿ ಬದಿಯ ಆಹಾರ ತಿಂದು ನೋಡಿ, ಸ್ಟ್ರೀಟ್ ಲೈಫ್ ನೋಡಿ, ನಿಮಗೆ ಹೊಸದೊಂದು ಲೋಕ ಪರಿಚಯವಾಗುವುದು.

ಸ್ಕ್ಯುಬಾ ಡೈವ್
ಈಜು ಪ್ರಿಯರಾಗಿದ್ದರೆ ಸ್ಕ್ಯಬಾ ಡೈವ್ ಮಾಡಿ, ಇದೊಂದು ಸಾಹಸಮಯವಾದ ಜಲ ಕ್ರೀಡೆಯಾಗಿದ್ದು, ಸ್ವಲ್ಪ ಎಚ್ಚರ ತಪ್ಪಿದರೂ ಪ್ರಾಣಕ್ಕೆ ಅಪಾಯ ಜಾಗ್ರತೆ.

ಗುರುತ್ವಾಕರ್ಷಣೆಯ ವಿರುದ್ಧ ಹೋಗುವುದು
ನಮ್ಮನ್ನು ಗುರುತ್ವಾಕರ್ಷಣೆ ಬಲ ನಿಯಂತ್ರಿಸುತ್ತಿದೆ ಎನ್ನುವುದು ನಿಮಗೆ ಗೊತ್ತು, ಇದಕ್ಕೆ ವಿರುದ್ಧವಾಗಿ ಹೋಗಲು ಸಾಧ್ಯವೇ? ಆದರೆ ವಿಜ್ಞಾನಕ್ಕೆ ಅದು ಸಾಧ್ಯವಾದರೆ ಇದರ ಪ್ರಯೋಜನ ಪಡೆಯುವ ಅವಕಾಶ ನನಗೆ ದೊರೆತರೆ , ನಾನಂತು ಈ ಅವಕಾಶ ಮಿಸ್ ಮಾಡಿಕೊಳ್ಳುವುದಿಲ್ಲ, ನೀವು?

base jumbing
ಇದರ ಬಗ್ಗೆ ಕೇಳಿದ್ದೀರಾ? ನೀವು ಸಾಹಸವನ್ನು ಇಷ್ಟ ಪಡುವುದಾದರೆ ಇದನ್ನು ಟ್ರೈ ಮಾಡಬಹುದು.

ಹಾಟ್ ಏರ್ ಬಲೂನ್
ಹಾಟ್ ಏರ್ ಬಲೂನ್ ನಲ್ಲಿ ನೀವು ಕುಳಿತು ಹಾರುತ್ತಿದ್ದರೆ ಭೂಮಿಯ ಮೇಲೆ ಮನುಷ್ಯರು ಇರುವೆಯಷ್ಟು ಪುಟ್ಟದಾಗಿ ಕಾಣುತ್ತಾರಂತೆ.

ಪ್ರಪಂಚದ ಅದ್ಭುತಗಳನ್ನು ನೋಡುವುದು
ಈ ಪ್ರಪಂಚದಲ್ಲಿ ಅನೇಕ ಅದ್ಭುತಗಳಿವೆ, ಏನಿಲ್ಲವೆಂದರೂ ಪ್ರಪಂಚದ 7 ಅದ್ಭುತಗಳನ್ನು ನೋಡಿದವನೇ ಪುಣ್ಯವಂತ.

ಸಫಾರಿ
ಆಫ್ರಿಕದಂತಹ ಕಾಡುಗಳಲ್ಲಿ ಸಫಾರಿ ಹೋಗುವುದನ್ನು ಹಚ್ಚಿನ ಸಾಹಸಿಗಳು ಇಷ್ಟಪಡುತ್ತಾರೆ. ಆಫ್ರಿಕಕ್ಕೆ ಹೋಗಲು ಸಾಧ್ಯವಾಗದಿದ್ದರೂ ಭಾರತದಲ್ಲಿ ಅನೇಕ ಸಫಾರಿ ಸ್ಥಳಗಳಿವೆ, ಅದರ ಪರೀಕ್ಷೆಗೆ ಹೋಗಬಹುದು.

ಕ್ಯಾಂಪಿಂಗ್
ಇದನ್ನು ಹೆಚ್ಚಿನವರು ಮಾಡಿರುತ್ತೀರಾ? ಫ್ರೆಂಡ್ಸ್ ಅಥವಾ ಮನೆಯವರ ಜೊತೆ ಹೋಗಿ ಪ್ರಕೃತ್ತಿಯ ನಡುವೆ 2-3 ದಿನ ಇದ್ದು ಬಂದರೆ ನಿಮ್ಮ ಮಾನಸಿಕ ಒತ್ತಡಗಳು ಮೈಲು ದೂರ ಓಡಿ ಹೋಗಿರುತ್ತದೆ. ಇದುವರೆಗೆ ಕ್ಯಾಂಪಿಂಗ್ ಅಂತ ಹೋಗದಿದ್ದರೆ, ನಿಮ್ಮ ಸ್ನೇಹಿತರನ್ನು ಸೇರಿಸಿಕೊಂಡು ಹೋಗಲು ರೆಡಿಯಾಗಿ.

ನಕ್ಷತ್ರವನ್ನು ಎಣಿಸುತ್ತಾ ಮಲಗುವುದು
ರೂಂನಲ್ಲಿ ಬೆಚ್ಚಗೆ ಮಲಗುವ ಬದಲು ಕೆಲವೊಮ್ಮೆ ಮನೆಯ ಮಹಡಿಗೆ ಬಂದು ನಕ್ಷತ್ರಗಳ ಸೌಂದರ್ಯ ನೋಡುತ್ತಾ ನಿದ್ದೆ ಮಾಡುವುದು ಒಂದು ಅದ್ಭುತವಾದ ಅನುಭವವೇ ಸರಿ.

ನಿಮ್ಮ ಛಾಪು ಮೂಡಿಸಿ
ಎಲ್ಲರೂ ಮಾಡುತ್ತಾರೆ ಎಂದು ನೀವು ಮಾಡಲು ಹೋಗಬೇಡಿ, ನಿಮಗೆ ಸರಿ ಅನಿಸಿದ್ದನ್ನು ನೀವು ಮಾಡಿ, ನಿಮ್ಮದೇ ಛಾಪು ಮೂಡಿಸಿ.

ಪರಿಸರ ಪ್ರೇಮ
ನಿಮ್ಮ ಕೈಯಾರೆ ಒಂದಾದರೂ ಗಿಡವನ್ನು ನೆಡಿ. ಈ ಕೆಲಸವನ್ನು ಪ್ರತಿಯೊಬ್ಬರು ಮಾಡಿದರೆ ಅರಣ್ಯನಾಶ ತಡೆದು, ಪರಿಸರ ರಕ್ಷಣೆಗೆ ಅಳಿಲು ಸೇವೆ ಮಾಡಿದಂತಾಗುವುದು.

ಕಲಿಕೆ
ನಮ್ಮ ಮಾತೃ ಭಾಷೆಯನ್ನು ಹೊರತು ಪಡಿಸಿ, ಇಂಗ್ಲೀಷ್ ಅಂತೂ ಸಾಮಾನ್ಯ ಭಾಷೆಯಾಗಿದೆ, ಅದಲ್ಲದೆ ಫ್ರೆಂಚ್, ಚೈನೀಸ್ ಈ ರೀತಿಯಲ್ಲಿ ಭಾಷಾ ಪ್ರವೀಣರಾಗಲು ಪ್ರಯತ್ನಿಸುವುದು. ಸಂಗೀತ ಹೀಗೆ ಕೆಲವೊಂದು ಆಸಕ್ತಿಕರ ವಿಷಯವನ್ನು ಕಲಿಯುವುದು ಮಾಡಬಹುದು.

ಬದುಕಿನ ಸಾರ್ಥಕತೆಗೆ ಪ್ರಯತ್ನ
ಹೀಗೆ ಲೈಫ್ ನಲ್ಲಿ ಸ್ವಲ್ಪ ಸಮಯವನ್ನು ನಿಮಗಾಗಿಯೇ ಮೀಸಲಿಡಿ, ಇಲ್ಲಿ ನೀಡಿರುವುದು ಕೆಲವೊಂದು ಉಪಾಯಗಳನ್ನಷ್ಟೇ. ಇದಕ್ಕೆ ಹೊರತಾಗಿಯೂ ಇನ್ನೂ ಅನೇಕ ವಿಷಯಗಳಿವೆ. ನಿಮಗೆ ಇಷ್ಟವಾದಂತೆ ಮಾಡಿ, ಆಗ ಬದುಕಿನಲ್ಲಿ ಸಾರ್ಥಕತೆ ದೊರೆಯುವುದು.



Click it and Unblock the Notifications
