Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಕನಸ್ಸು ಮತ್ತು ಅವುಗಳ ಅರ್ಥ
ಸುಂದರವಾಗಿ ಕನಸ್ಸು ಬೀಳುತ್ತಿದ್ದಾಗ ಯಾರಾದರೂ ನಮ್ಮನ್ನು ಎಬ್ಬಿಸಿದರೆ ತುಂಬಾ ಕೋಪ ಬರುತ್ತದೆ, ಛೇ.. ಎಷ್ಟೊಂದು ಒಳ್ಳೆಯ ಕನಸ್ಸು ಬಿತ್ತು, ಹಾಳು ಮಾಡಿ ಬಿಟ್ಟೆ ಎಂದು ಗೊಣಗುತ್ತೇವೆ, ಅದೇ ಕೆಟ್ಟ ಕನಸ್ಸು ಬಿದ್ದರೆ ಭಯಬಿದ್ದು ಎದ್ದು ಕೂರುವುದಲ್ಲದೆ ಮನೆಯವರನ್ನೂ ಎಬ್ಬಿಸುತ್ತೇವೆ. ಜೀವನದಲ್ಲಿ ಕಷ್ಟ-ಸುಖ ಎಂಬ ಎರಡು ಮುಖಗಳಿರುವಂತೆ ಕನಸ್ಸಿನಲ್ಲಿಯೂ ಸುಂದರವಾದ ಕನಸ್ಸು ಹಾಗೂ ಭಯಾನಕ ಕನಸ್ಸುಗಳು ಬೀಳುತ್ತವೆ.
ಯಾವುದೇ ಕನಸ್ಸು ಬೀಳಲಿ ನಾವು ಎಚ್ಚರವಾದ ಮೇಲೆ ಅದರ ಬಗ್ಗೆ ಯೋಚಿಸುತ್ತೇವೆ, ಕೆಲವೊಂದು ಕನಸ್ಸುಗಳಂತೂ ದಿನವಿಡೀ ಕಾಡುತ್ತವೆ. ಅದರಲ್ಲಂತೂ ನನಗೆ ಈ ರೀತಿಯ ಕನಸ್ಸು ಬಿದ್ದಿದೆ ಅದಕ್ಕೆ ಅರ್ಥವೇನು ಎಂದು ಹುಡುಕುತ್ತೇವೆ. ಆ ಅರ್ಥಗಳು ಎಷ್ಟರ ಮಟ್ಟಿಗೆ ಸತ್ಯವಾದದು ಎಂದು ಹೇಳುವಂತಿಲ್ಲ, ಆದರೆ ಒಂದೊಂದು ಕನಸ್ಸಿಗೂ ನಮ್ಮಲ್ಲಿ ಅನೇಕ ನಂಬಿಕೆಗಳಿವೆ ಅಲ್ಲವೇ? ಇಲ್ಲಿ ನಾವು ಅಂತಹ ಕೆಲ ನಂಬಿಕೆಗಳ ಬಗ್ಗೆ ಹೇಳಿದ್ಧೇವೆ ನೋಡಿ:

ನಮ್ಮನ್ನು ಅಟ್ಟಿಸಿಕೊಂಡು ಬರುವಂತಹ ಕನಸ್ಸು ಬಿದ್ದರೆ
ನಮ್ಮನ್ನು ಯಾರಾದರು ಅಟ್ಟಿಸಿಕೊಂಡು ಬರುವಂತಹ ಕನಸ್ಸು ಬಿದ್ದರೆ ನಾವು ಯಾವುದೋ ವಿಷಯಕ್ಕೆ ಅಥವಾ ವ್ಯಕ್ತಿಗೆ ಭಯ ಪಡುತ್ತಿದ್ದೇವೆ, ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ ಅನ್ನುವ ಅರ್ಥವಂತೆ.
ಹಲ್ಲು ಮುರಿದು ಹೋದಂತೆ ಕನಸ್ಸು ಬಿದ್ದರೆ
ಈ ರೀತಿಯ ಕನಸ್ಸು ಅನೇಕರಿಗೆ ಬೀಳುತ್ತದೆ. ಈ ರೀತಿಯ ಕನಸ್ಸು ಬಿದ್ದರೆ ಏನೋ ಕೆಟ್ಟದು ಕಾದಿದೆ, ಆದರೆ ಅದನ್ನು ತಡೆಯಲು ಯಾವುದೇ ಮಾರ್ಗಗಳು ನಮ್ಮಲ್ಲಿ ಇಲ್ಲ ಎಂದು ಅರ್ಥ.
ಬೀಳುತ್ತಿರುವಂತೆ
ಬೆಡ್, ಚೇರ್, ಬೆಟ್ಟ ಹೀಗೆ ಯಾವುದೇ ಸ್ಥಳದಿಂದ ನೀವು ಬೀಳುತ್ತಿರುವಂತೆ ಕನಸ್ಸು ಬಿದ್ದರೆ ನಿಮ್ಮ ಜೀವನದಲ್ಲಿ ಅನೇಕ ವಿಷಯಗಳು ನಿಮ್ಮ ಕೈ ಮೀರಿ ನಡೆಯುತ್ತಿದೆ ಎಂದು ಅರ್ಥ. ನಿಮ್ಮಲ್ಲಿ ಗೊಂದಲ, ಅತಂತ್ರ ಪರಿಸ್ಥಿತಿ ಇದೆ ಎಂದು ಅರ್ಥ.
ಅಪಘಾತ
ನಾವು ಆಯ್ದುಕೊಂಡ ದಾರಿಯ ಬಗ್ಗೆ ಇರುವ ನಮ್ಮ ಮನಸ್ಥಿತಿ ಅಪಘಾತ ಕನಸ್ಸು ಬೀಳುವ ಮೂಲಕ ವ್ಯಕ್ತವಾಗುತ್ತದೆ ಎನ್ನಲಾಗುತ್ತದೆ.
ಬಂಧಿಸಿದರೆ
ಯಾರಾದರೂ ನಮ್ಮನ್ನು ಟ್ರ್ಯಾಪ್ ಅಥವಾ ಬಂಧಿಸಿದಂತೆ ಕನಸ್ಸು ಬಿದ್ದರೆ ನಮ್ಮ ಸ್ಥಾನ ಮಾನಕ್ಕೆ, ಆರೋಗ್ಯಕ್ಕೆ ಅಥವಾ ಸಂಬಂಧಕ್ಕೆ ಏನೋ ಕುತ್ತು ಉಂಟಾಗಲಿದೆ ಎಂಬ ಅರ್ಥವಂತೆ.
ಸಾವಿನ ಕನಸ್ಸು
ನಾವು ಸತ್ತಂತೆ ಅಥವಾ ನಮ್ಮ ಆಪ್ತರು ಸತ್ತಂತೆ ಕನಸ್ಸು ಕಂಡರೆ ನಮ್ಮ ಕಷ್ಟ ಕಾಲ ಹೋಗಿ ಶುಭವಾಗಲಿದೆ ಎಂದು ಅರ್ಥ, ಅದೇ ಬೇರೆಯವರು ಸತ್ತಂತೆ ಕನಸ್ಸು ಕಂಡರೆ ನಮಗೇನೋ ಅಪಾಯ ಕಾದಿದೆ ಎಂದು ಅರ್ಥ.



Click it and Unblock the Notifications
