Latest Updates
-
ಸಣ್ಣ ಫ್ಲ್ಯಾಟ್ನಲ್ಲಿ ಗಣೇಶೋತ್ಸವ: ಅತಿಥಿಗಳಿಗಾಗಿ ಜಾಗ ಮತ್ತು ಸುರಕ್ಷತೆಗಾಗಿ ಈ 5 ಟಿಪ್ಸ್ ಫಾಲೋ ಮಾಡಿ -
ಗಣೇಶೋತ್ಸವದ ಪ್ರಸಾದ ಬೇಗ ಹಾಳಾಗುತ್ತಿದೆಯೇ? ಮೋದಕ ಮತ್ತು ಸಿಹಿ ತಿಂಡಿಗಳನ್ನು ತಾಜಾವಾಗಿಡಲು ಈ ಟಿಪ್ಸ್ ಪಾಲಿಸಿ! -
ಗಣೇಶೋತ್ಸವ 2026: ಲಾಲ್ಬಾಗ್ಚಾ ರಾಜನ ದರ್ಶನಕ್ಕೆ ಬೆಸ್ಟ್ ಟೈಮ್ ಯಾವುದು? ಮೆಟ್ರೋ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ! -
ಹಬ್ಬದ ಪೂಜೆಯ ವೇಳೆ ಮೊಣಕಾಲು ಮತ್ತು ಬೆನ್ನು ನೋವು ಕಾಡುತ್ತಿದೆಯೇ? ನೋವಿಲ್ಲದೆ ಪೂಜೆ ಮಾಡಲು ಇಲ್ಲಿದೆ 10 ನಿಮಿಷಗಳ ಸಿಂಪಲ್ ಟಿಪ್ಸ್! -
ಗಣೇಶೋತ್ಸವದ ಸೌಂಡ್ ಕಿರಿಕಿರಿ: ನೆರೆಹೊರೆಯವರ ಜೊತೆ ಜಗಳವಿಲ್ಲದೆ ನೆಮ್ಮದಿಯ ನಿದ್ರೆ ಪಡೆಯುವುದು ಹೇಗೆ? -
ದೆಹಲಿ ಮಳೆ: ನಿಮ್ಮ ಮನೆಯಲ್ಲಿ ಬೂಷ್ಟು ಮತ್ತು ತೇವಾಂಶ ತಡೆಯಲು 45 ನಿಮಿಷದ ಸಿಂಪಲ್ ಪ್ಲಾನ್! -
ಗಣೇಶ ಹಬ್ಬದ ಮೋದಕ: ಶುಗರ್ ಏರಿಕೆಯಾಗದಂತೆ ಸವಿಯಲು ಇಲ್ಲಿವೆ 5 ಆರೋಗ್ಯಕರ ಟಿಪ್ಸ್ -
ಐಫೋನ್ 18 ಪ್ರೋ ಪ್ರೀ-ಆರ್ಡರ್: ₹7,000 ಕ್ಯಾಶ್ಬ್ಯಾಕ್ ಪಡೆಯುವುದು ಹೇಗೆ? ನಕಲಿ ಆಫರ್ಗಳಿಂದ ಎಚ್ಚರ! -
ದೆಹಲಿ ಮಳೆ: ಜಾರಿ ಬೀಳದಂತೆ ಎಚ್ಚರ, ಬೆನ್ನುನೋವಿನಿಂದ ಮುಕ್ತಿ ಪಡೆಯಲು 12 ನಿಮಿಷದ ವರ್ಕೌಟ್ ರೂಟಿನ್! -
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್!
ವಿಚಿತ್ರ ಕಾಯಿಲೆ ಇರುವ ಹಾಲಿವುಡ್ ಸೆಲೆಬ್ರಿಟಿಗಳು
ಪ್ರತಿಯೊಬ್ಬರಿಗೆ ಒಂದಲ್ಲಾ ಒಂದು ರೀತಿಯ ಭಯವಿದ್ದೇ ಇರುತ್ತದೆ. ಆದರೆ ಭಯದ ಕಾಯಿಲೆ ಅನ್ನುವುದು ಕೆಲವರಲ್ಲಿ ಮಾತ್ರ ಇರುತ್ತದೆ. ಕೆಲವರಿಗೆ ಸಮುದ್ರ ಕಂಡರೆ ಭಯ, ಮತ್ತೆ ಕೆಲವರಿಗೆ ಎತ್ತರದ ಪ್ರದೇಶದಲ್ಲಿ ನಿಂತರೆ ಭಯ, ಜಿರಳೆ ಕಂಡರೆ ಭಯ, ಕಪ್ಪೆ ಕಂಡರೆ ಭಯ, ಕತ್ತಲೆಂದರೆ ಭಯ ಹೀಗೆ ಸಣ್ಣ ಪುಟ್ಟ ವಿಷಯಗಳಿಗೆ ಭಯ ಪಡುವವರನ್ನು ನೋಡುತ್ತೇವೆ. ಫೇಮಸ್ ಸೆಲೆಬ್ರಿಟಿಗಳಲ್ಲಿ ಕೆಲವರು ವಿಚಿತ್ರವಾದ ಭಯದ ಕಾಯಿಲೆಗೆ ತುತ್ತಾಗಿದ್ದಾರೆ.
ಇಲ್ಲಿ ನಾವು ಭಯದ ಕಾಯಿಲೆ ಇರುವ ಕೆಲ ಹಾಲಿವುಡ್ ಸೆಲೆಬ್ರಿಟಿಗಳ ಬಗ್ಗೆ ಹೇಳಿದ್ದೇವೆ. ಈ ಫೇಮಸ್ ಸೆಲೆಬ್ರಿಟಿಗಳು ಯಾವ ವಿಷಯಕ್ಕೆ ಭಯ ಪಡುತ್ತಾರೆ ಎಂದು ತಿಳಿದರೆ ನಿಮಗೆ ಇಷ್ಟೆಲ್ಲಾ ಚಿಕ್ಕ ವಿಷಯಕ್ಕೆ ಭಯ ಪಡುತ್ತಾರೆ ಎಂದು ನಿಮಗೆ ಆಶ್ಚರ್ಯವಾಗಬಹುದು, ಆದರೆ ಇವೆಲ್ಲಾ ಒಂದು ಬಗೆಯ ವಿಚಿತ್ರವಾದ ಕಾಯಿಲೆಯಾಗಿದೆ:

ರಾಬರ್ಟ್ ಪ್ಯಾಟಿನ್ಸನ್
ಈ ಫೇಮಸ್ ಸೆಲೆಬ್ರಿಟಿಗೆ ಎಲ್ಲಾ ಪ್ರಾಣಿಗಳೆಂದರೆ ಇಷ್ಟ ಆದರೆ ಕುದುರೆಯೆಂದರೆ ವಿಪರೀತ ಭಯ. ಕುದುರೆ ನೋಡುವುದಿರಲಿ ಅದರ ಬಗ್ಗೆ ಹೇಳಿದರೆ ಸಾಕು ಇವರು ಭಯದಿಂದ ನಡುಗಿ ಬಿಡುತ್ತಾರಂತೆ. ಈ ಕಾಯಿಲೆಗೆ Equinophobia ಎಂದು ಹೆಸರು.

ಓಪ್ರಾ ವಿನ್ಫ್ರೇ
ಈ ಸೆಲೆಬ್ರಿಟಿಗೆ ಚ್ಯೂಯಿಂಗ್ ಗಮ್ ಅಗೆಯುವುದೆಂದರೆ ವಿಪರೀತ ಭಯವಂತೆ. ಇವರ ಎದುರಿಗೆ ಯಾರಾದರೂ ಚ್ಯೂಯಿಂಗ್ ಗಮ್ ಅಗೆಯುತ್ತಿದ್ದರೆ ಅದನ್ನು ನೋಡಲು ಕೂಡ ಅವರಿಂದ ಸಾಧ್ಯವಿಲ್ಲವಂತೆ, ವಿಪರೀತ ಭಯಬಿದ್ದು ಬಿಡುತ್ತಾರಂತೆ. ಈ ಕಾಯಿಲೆಗೆ ಹೆಸರು Chiclephobia.

ನಿಕೋಲ್ ಕಿಡ್ಮನ್
ಈ ನಟಿಗೆ ಚಿಟ್ಟೆ ಕಂಡರೆ ವಿಪರೀತ ಭಯವಂತೆ. ಅನೇಕ ಜನರಲ್ಲಿ ಈ ರೀತಿಯ ಭಯ ಕಂಡು ಬರುತ್ತದೆ. ಇದನ್ನು Lepidopterophobia ಎಂದು ಗುರುತಿಸಲಾಗಿದೆ.

ಪಮೇಲಾ ಆಂಡರ್ಸನ್
ಈ ಮಾದಕ ನಟಿ ತನ್ನ ಸೌಂದರ್ಯವನ್ನು ಕನ್ನಡಿಯಲ್ಲಿ ನೋಡಲು ಭಯ ಪಡುತ್ತಾಳಂತೆ! ಹುಡುಗಿಯರಿಗೆ ಕನ್ನಡಿಗೆ ಏನೋ ನಂಟು, ಅಂಥದ್ದರಲ್ಲಿ ಇವರು ಕನ್ನಡಿ ಕಂಡರೆ ಭಯದಿಂದ ಕಿರುಚಿ ಬಿಡುತ್ತಾರಂತೆ. ಈ ರೀತಿಯ ಕಾಯಿಲೆ ಮಾಡಲ್ ಗಳಲ್ಲಿ ಕಂಡು ಬರುವುದು ಸಹಜ ಅಂತಾರೆ. ಈ ಕಾಯಿಲೆಯನ್ನು Spectrophobia ಎಂದು ಗುರುತಿಸಲಾಗಿದೆ.

ಕಾರ್ಮೆನ್ ಎಲೆಕ್ಟ್ರಾ
ಈ ನಟಿಗೆ ನೀರೆಂದರೆ ತುಂಬಾ ಭಯ. ಈ ಕಾಯಿಲೆಗೆ Aquaphobia ಎಂದು ಹೆಸರು.

ಕೆಲ್ಲಿ ಆಸ್ಬಾರ್ನ್
ಈ ನಟಿ ಸ್ಪರ್ಶಕ್ಕೆ ಭಯ ಪಡುತ್ತಾರಂತೆ . ಇದನ್ನು Haphephobia ಎಂದು ಕರೆಯುತ್ತಾರೆ.

ಕ್ಯಾಮರಾನ್ ಡಯಾಜ್
ಈ ನಟಿಗೆ ಕದ ತಟ್ಟುವ ಶಬ್ದ ಕೇಳಿದರೆ ತುಂಬಾ ಭಯ ಪಡುತ್ತಾರಂತೆ. ಪುಣ್ಯಕ್ಕೆ ಮನೆಗೆ ಬರುವಾಗ ಡೋರ್ ಓಪನ್ ಮಾಡಲು ಇವರಿಗೆಲ್ಲಾ ಜನ ಇದ್ದಾರೆ. ಜನ ಸಾಮಾನ್ಯರಿಗೆ ಈ ಕಾಯಿಲೆ ಕಾಣಿಸಿದರೆ ಮಾತ್ರ ಆ ವ್ಯಕ್ತಿ ತುಂಬಾ ಕಷ್ಟ ಪಡಬೇಕಾಗುತ್ತದೆ.

ವಾಲ್ಟ್ ಡಿಸ್ನಿ
ಹಾಲಿವುಡ್‌ನ ಮಿಕ್ಕಿ ಮೌಸ್ ಕಾರ್ಟೂನಿಸ್ಟ್ ವಾಲ್ಟ್ ಡಿಸ್ನಿಗೆ ಇಲಿಗಳೆಂದರೆ ತುಂಬಾ ಭಯವಂತೆ.

ಡೊನಾಲ್ಡ್ ಟ್ರಂಪ್
ಇವರಿಗೆ ಶೇಕ್ ಹ್ಯಾಂಡ್ ಮಾಡಲು ಭಯವಂತೆ, ವಿಚಿತ್ರ ಅನಿಸಿದರೂ ಇದು ನಿಜ ಕೂಡ ಹೌದು.

ಮೇಗನ್ ಫಾಕ್ಸ್
ಇವರಿಗೆ ಅನೇಕ ಬಗೆಯ ವಿಚಿತ್ರ ಕಾಯಿಲೆಗಳಿವೆ, ಕತ್ತಲೆಂದರೆ ಭಯ, ಪೇಪರ್ ಕಂಡರೆ ಭಯ. ಪೇಪರ್ ಕಂಡ ಜಾಗದಲ್ಲಿ ಇವರು ನಿಲ್ಲುವುದಿಲ್ಲವಂತೆ.



Click it and Unblock the Notifications
