Latest Updates
-
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ?
ಯಶ್ ಚೋಪ್ರಾ ಹುಟ್ಟುಹಬ್ಬದಂದು ತಾರೆಗಳ ಸ್ಟೇಜ್ ಶೋ
ಬಾಲಿವುಡ್ ಜಗತ್ತಿನ ಹೆಸರಾಂತ ನಿರ್ಮಾಪಕರಾಗಿದ್ದ ಯಶ್ ಚೋಪ್ರಾರವರ 81ನೇ ವರ್ಷದ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಸಡಗರದಿಂದ ಆಚರಿಸಲಾಯಿತು. ಈ ಹುಟ್ಟು ಹಬ್ಬದ ಸಂಭ್ರಮಕ್ಕೆ ಬಾಲಿವುಡ್ ನ ಅನೇಕ ಗಣ್ಯರು ಆಗಮಿಸಿ, ರಾಂಪ್ ಶೋ(ramp show)ದಲ್ಲಿ ಭಾಗ ವಹಿಸಿದರು.
ಶಾರೂಖ್ ಖಾನ್, ಕತ್ರಿನಾ ಕೈಫ್, ಅನುಷ್ಕಾ ಶರ್ಮಾ, ಮಾಧುರಿ ದೀಕ್ಷಿತ್, ಪ್ರೀತಿ ಜಿಂಟಾ, ರೇಖಾ, ಜೂಹಿ ಚಾವ್ಲಾ, ಶ್ರೀದೇವಿ ಮುಂತಾದ ಸೆಲೆಬ್ರಿಟಿಗಳು ಭಾಗವಹಿಸಿದ್ದು, ಎಲ್ಲರು ಸಾಂಪ್ರದಾಯಕವಾದ ಉಡುಗೆಯಲ್ಲಿ ಗಮನ ಸೆಳೆದರು. ಸಾಂಪ್ರದಾಯಕವಾದ ಚೆಲುವಿನಲ್ಲಿ ಸೆಲೆಬ್ರಿಟಿಗಳ ramp ವಾಕಿಂಗ್ ಫೋಟೊಗಳನ್ನು ಸ್ಲೈಡ್ ನಲ್ಲಿ ನೀಡಲಾಗಿದೆ ನೋಡಿ:

ಕತ್ರಿನಾ ಕೈಫ್
ಕತ್ರಿನಾ ಕೈಫ್ ಲೆಹಂಗಾ ಧರಿಸಿ ಸ್ಟೇಜ್ ಶೋದಲ್ಲಿ ಭಾಗವಹಿಸಿದರು. ಇವರ ಮೇಕಪ್ ಮತ್ತು ಆಭರಣ ಮ್ಯಾಚಿಂಗ್ ಕೂಡ ಅದ್ಭುತವಾಗಿತ್ತು.

ಪ್ರೀತಿ ಜಿಂಟಾ
ಎಂಬ್ರಾಯ್ಡ್ ವರ್ಕ್ಸ್ ಇರುವ ಬಿಳಿ ಬಣ್ಣದ ಶರಾರ ಡ್ರೆಸ್ ನಲ್ಲಿ ಸ್ಟೇಜ್ ನಲ್ಲಿ ವಾಕ್ ಮಾಡಿದ ಡಿಂಪಲ್ ರಾಣಿ.

ರಾಣಿ ಮುಖರ್ಜಿ
ಕಡು ಪಿಂಕ್ ಬಣ್ಣದ ಲೆಹಂಗಾ ಸೀರೆ, ಉದ್ದ ಜಡೆ, ರಿಂಗ್ ಮೂಗುತಿಯಲ್ಲಿ ಗಮನ ಸೆಳೆದರು.

ಶ್ರೀದೇವಿ
ಶ್ರೀದೇವಿಯ ಅವತಾರ ನೋಡಿದರೆ ಯಾರಾದರೂ ಒಂದು ಕ್ಷಣ ಮೈಮರೆತು ಬಿಡುತ್ತೇವೆ. ಬಿಳಿ ಬಣ್ಣದ ಲೆಹಂಗಾ ಅದಕ್ಕೆ ರಾಜಾಸ್ಥಾನಿ ಆಭರಣಗಳು, ನೇತಾಡುವ ಕಿವಿಯೋಲೆ, ಮಲ್ಟಿ ಚೈನ್ ನೆಕ್ಲೆಸ್ ನಲ್ಲಿ ರಾಜಕುಮಾರಿಯಂತೆ ಕಂಡರು.

ಅನುಷ್ಕಾ ಶರ್ಮಾ
ಬ್ಲ್ಯಾಕ್ ಲೇಸ್ ಸ್ಯಾರಿಯಲ್ಲಿ ರೆಟ್ರೋ ಸ್ಟೈಲ್ ನಲ್ಲಿ ಅನುಷ್ಕಾ ಶರ್ಮಾ ramp walk ಮಾಡಿದರು.

ಜೂಹಿ ಚಾವ್ಲಾ
ಶೀಫಾನ್ ಬಟ್ಟೆಯ ಹೂವಿನ ವಿನ್ಯಾಸವಿರುವ ಲೆಹಂಗಾ ಡ್ರೆಸ್ ನಲ್ಲಿ ramp walk ಮಾಡಿದ ಜೂಹಿ ಚಾವ್ಲಾ.

ಮಾಧುರಿ ದೀಕ್ಷಿತ್
ಬ್ಲ್ಯಾಕ್ ಕಲರ್ ಲೇಸ್ ಸ್ಯಾರಿ ಅದಕ್ಕೆ ಹೊಂದುವ ಗೋಲ್ಡನ್ ಮತ್ತು ಬ್ಲ್ಯಾಕ್ ಕಲರ್ ಕಾಂಬಿನೇಷನ್ ಬ್ಲೌಸ್ ಧರಿಸಿ, ರೆಟ್ರೋ ಸ್ಟೈಲ್ ನಲ್ಲಿ ಹೇರ್ ಸ್ಟೈಲ್ ಮಾಡಿದ ಸ್ಟೇಜ್ ಶೋದಲ್ಲಿ ಹೆಜ್ಜೆ ಹಾಕಿದ ಮಾಧುರಿ.

ಪರಿಣಿತಿ ಚೋಪ್ರಾ
ಪರಿಣಿತಿ ಚೋಪ್ರಾ ಸಂಪೂರ್ಣವಾಗಿ ಸಾಂಪ್ರದಾಯಕವಾದ ಲುಕ್ ನಲ್ಲಿ ಕಾಣಿಸಿದರು. ತುಂಬಾ ಎಂಬ್ರಾಯ್ಡ್ ವರ್ಕ್ ಇರುವ ಲೆಹಂಗಾ, ಅಷ್ಟೇ ಗ್ರ್ಯಾಂಡ್ ಆದ ಹೇರ್ ಸ್ಟೈಲ್ ಮತ್ತು ಕುತ್ತಿಗೆಯಲ್ಲಿ ಹೊಳೆಯುವ ನೆಕ್ಲೆಸ್, ಈ ವೇಷದಲ್ಲಿ ಪರಿಣಿತಿಯ ಚೆಲುವು ಇಮ್ಮಡಿಯಾಗಿತ್ತು.

ರೇಖಾ
ಚಿರಯೌವನೆ ತಾರೆ ರೇಖಾ ಚಿನ್ನದ ಬಣ್ಣದ ಕಾಂಜೀವರಂ ಸೀರೆ ಧರಿಸಿದ್ದರು. ಹಣೆಗೆ ನೆತ್ತಿ ಬೊಟ್ಟು, ಕುತ್ತಿಗೆಯಲ್ಲಿ ದೊಡ್ಡ ನೆಕ್ಲೆಸ್ ಇವು ಅವರಿಗೆ ಸಾಂಪ್ರದಾಯಕವಾದ ಚೆಲುವು ನೀಡಿತು.

ಶಾರೂಖ್ ಖಾನ್
ಯಶ್ ಚೋಪ್ರಾ ನಿರ್ಮಾಣದ ಬಹುತೇಕ ಚಿತ್ರಗಳಲ್ಲಿ ಶಾರುಖ್ ನಾಯಕ ನಟನಾಗಿ ಅಭಿನಯಿಸಿದ್ದ ಶಾರೂಖ್ ಕೂಡ ಸ್ಟೀಜ್ ಶೋದಲ್ಲಿ ಹೆಜ್ಜೆ ಹಾಕಿದರು.



Click it and Unblock the Notifications