Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಏಷ್ಯಾವಿಷನ್ ಅವಾರ್ಡ್ಸ್ ನಲ್ಲಿ ಬಾಲಿವುಡ್ ತಾರೆಯರು
ಏಷ್ಯಾವಿಷನ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಜಾನ್ ಅಬ್ರಾಹಂ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದರು. ದುಬೈನಲ್ಲಿ ನಡೆದ ಈ ಸಮಾರಂಭದಲ್ಲಿ ಇನ್ನೂ ಹಲವು ಬಾಲಿವುಡ್ ತಾರೆಯರು ಭಾಗವಹಿಸಿದ್ದರು. ಬೋಲ್ಡ್ ಸ್ಕೈ ಸುಂದರವಾಗಿ ಅಲಂಕರಿಸಿಕೊಂಡಿದ್ದ ಪ್ರೀತಿಜಿಂಟಾ, ಕರಿಷ್ಮಾ ಕಪೂರ್, ರಾಣಿ ಮುಖರ್ಜಿ ಮತ್ತಿತರ ನಟಿಯರಚಿತ್ರಗಳನ್ನು ಸೆರೆಹಿಡಿದು ನಿಮಗಾಗಿ ತಂದಿದೆ.
ದುಬೈನಲ್ಲಿ ನಡೆದ ಸಮಾರಂಭಕ್ಕೆ ಬಂದಿದ್ದ ತಾರೆಯರು ಅದರ ಮೆರುಗನ್ನು ಹೆಚ್ಚಿಸಿದರು. ಈ ತಾರೆಯರು ಪ್ರಶಸ್ತಿ ಸ್ವೀಕರಿಸಲು ವೇದಿಕೆಗೆ ಬರುತ್ತಿದ್ದಂತೆ ಜನ ಹುಚ್ಚೆದ್ದು ಕುಣಿದರು. ಅಷ್ಟು ಸುಂದರವಾಗಿ ಅಲಂಕಾರ ಮಾಡಿಕೊಂಡಿದ್ದ ತಾರೆಯರ ಅಲಂಕಾರದ ಬಗ್ಗೆ ಹೇಳದಿರಲು ಸಾಧ್ಯವೇ ಇಲ್ಲ.
ಈ ತಾರೆಯರು ನೂಪುರ್ ಕನೋಯಿಯಿಂದ ಹಿಡಿದು ಹಲವು ಬ್ರಾಂಡ್ ಗಳ ಉಡುಪುಗಳನ್ನು ತೊಟ್ಟಿದ್ದರು. ಹೆಚ್ಚು ಪ್ರಖರವಾದ ಬಣ್ಣಗಳ ಮಿಶ್ರಣವನ್ನು ಇಲ್ಲಿ ಕಾಣಬಹುದಿತ್ತು. ಪ್ರತಿ ನಟಿಯು ತೊಟ್ಟಿದ್ದ ಬಟ್ಟೆ ನೋಡುಗರು ವಾಹ್! ಎಂದು ಉದ್ಗರಿಸುವಂತಿತ್ತು. ಗೌನುಗಳನ್ನು ತೊಟ್ಟಿದ್ದ ಕೆಲವರಂತೂ ಅಪ್ಸರೆಯರ ಹಾಗೆ ಕಾಣುತ್ತಿದ್ದರು. ಇಂತಹ ಕೆಲವು ಸುಂದರ ತಾರೆಯರ ಚಿತ್ರಗಳು ನಿಮಗಾಗಿ ಇಲ್ಲಿವೆ.

ಕರಿಷ್ಮಾ ಕಪೂರ್
ನೂಪುರ್ ಕನೊಯಿಯ ಕಪ್ಪು ಮತ್ತು ಬಿಳಿ ಬಣ್ಣದ ಸೂಟ್ ನಲ್ಲಿ ಕರಿಷ್ಮಾ ಸುಂದರವಾಗಿ ಕಾಣುತ್ತಿದ್ದಳು. ಪಿಂಕಿ ಸರಾಫ್ ಕ್ಲಚ್, ಕ್ಯೂರಿಯೊ ಕಾಟೇಜ್ ನ ಕಿವಿಯೋಲೆ ಮತ್ತು ಜಿಮ್ಮಿ ಚೂ ಚಪ್ಪಲಿ ಧರಿಸಿದ್ದಳು. ಇದರೊಂದಿಗೆ ಚೆರಿ ಕೆಂಪು ಲಿಪ್ ಸ್ಟಿಕ್ ಮತ್ತು ಮೆಸ್ಸಿ ಬನ್ ಕೇಶವಿನ್ಯಾಸ ಮಾಡಿಕೊಂಡಿದ್ದಳು.

ರಾಣಿ ಮುಖರ್ಜಿ
ಸುಂದರವಾದ ಕಪ್ಪು ಬಣ್ಣದ ಸೀರೆ, ಬಣ್ಣ ಬಣ್ಣದ ಬಳೆಗಳು, ಕೆಂಪು ಬಿಂದಿಯೊಂದಿಗೆ ರಾಣಿ ಮುಖರ್ಜಿ ಸರಳ ಸುಂದರಿಯಂತೆ ಕಂಗೊಳಿಸುತ್ತಿದ್ದಳು.

ಪ್ರೀತಿ ಜಿಂಟ
ನೀವು ಈ ನಟಿಯನ್ನು ಹತ್ತಿರದಿಂದ ಗಮನಿಸಿದರೆ ನಿಮಗೆ ತಿಳಿಯುತ್ತದೆ. ಈಕೆ ಈ ತಾಮ್ರ ಬಣ್ಣದ ಸೀರೆಯಲ್ಲಿ ಹೊಳೆಯುತ್ತಿದ್ದಾಳೆ ಎಂದು. ತಾಮ್ರ ಮತ್ತು ಬೆಳ್ಳಿಯ ಮಿಶ್ರಣ ಇದಕ್ಕೆ ವಿಶೇಷ ಮೆರುಗನ್ನು ತಂದುಕೊಟ್ಟಿದೆ.

ಶ್ವೇತ ಮೆನನ್
ಶ್ವೇತ ಮೆನನ್ ಕಪ್ಪು-ನೀಲಿ ಬಣ್ಣದ ನೆಟ್ ಸೀರೆ ಉಟ್ಟಿದ್ದಳು. ಆಕೆ ಮುಡಿದ ಹೂವು ಮತ್ತು ಗಂಟು ಕಟ್ಟಿದ ಕೂದಲು ಆಕೆಯ ಅಲಂಕಾರಕ್ಕೆ ಒಪ್ಪುವಂತಿತ್ತು.

ಕಾಜಲ್ ಅಗರವಾಲ್
ಕಾಜಲ್ ಸೀ ಗ್ರೀನ್ ಬಣ್ಣದ ಹೊಳೆಯುವ ಗೌನಿನಲ್ಲಿ ರಾಜಕುಮಾರಿಯಂತೆ ಕಂಗೊಳಿಸುತ್ತಿದ್ದಳು. ಕೆಂಪು ಬಣ್ಣದ ಲಿಪ್ ಸ್ಟಿಕ್ ಮತ್ತು ಮೆಸ್ಸಿ ಹೇರ್ ಸ್ಟೈಲ್ ಆಕೆಯ ಅಂದ ಹೆಚ್ಚಿಸಿತ್ತು.

ಜಾನ್ ಅಬ್ರಾಹಂ
ಇಡೀ ಸಮಾರಂಭದ ಅತ್ಯಂತ ಸುಂದರಾಂಗ ನಟ ಜಾನ್ಅಬ್ರಾಹಂ. ಆತ ತೊಟ್ಟಿದ್ದ ಮಿರುಗುವ ಸೂಟ್ ಅವನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿತ್ತು.



Click it and Unblock the Notifications
