Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಪುರುಷರ ಕಿರಿಕಿರಿಯಾಗುವ ಅಭ್ಯಾಸಗಳು
ಪುರುಷರನ್ನು ಮಹಿಳೆಯರು ಎಷ್ಟೇ ಇಷ್ಟಪಟ್ಟರೂ, ಪ್ರೀತಿಸಿದರೂ ಕೆಲವೊಂದು ಕಿರಿಕಿರಿ ಉಂಟುಮಾಡುವ ಅಭ್ಯಾಸಗಳು ಪುರುಷ ಸಹಜ ಗುರುತುಗಳೆನ್ನಬಹುದು. ಕೆಲವು ಪುರುಷರ ಸ್ವಭಾವ ಮಹಿಳೆಯರಿಗೆ ಕಿರಿಕಿರಿ ಉಂಟುಮಾಡುತ್ತದೆ. ಕೆಲವೊಂದು ಸಲ ಮಹಿಳೆಯರಿಗೆ ಕಿರಿಕಿರಿ ಉಂಟುಮಾಡುವ ವಿಷಯಗಳು ಪುರುಷರಿಗೆ ದೊಡ್ಡದೆಂದು ಅನಿಸದು ಮತ್ತು ಅವರು ಇದನ್ನು ಸಾಮಾನ್ಯವೆಂದು ಪರಿಗಣಿಸಬಹುದು.
ಆದಾಗ್ಯೂ ಪುರುಷರು ತಮ್ಮ ಜೊತೆಗಾರ್ತಿಯೊಂದಿಗೆ ಇರುವಾಗ ಕೆಲವೊಂದು ಸಾರ್ವತ್ರಿಕ ಅಭ್ಯಾಸಗಳನ್ನು ತಡೆಯಬೇಕು ಅಥವಾ ದಮನಮಾಡಬೇಕು. ಇಲ್ಲವಾದಲ್ಲಿ ನಿಮ್ಮ ಹುಡುಗಿಗೆ ಕಿರಿಕಿರಿಯಾಗಿ ಕೋಪಬರಬಹುದು. ಎಲ್ಲಾ ಮಹಿಳೆಯರು ಒಂದೇ ರೀತಿ ಇರುವುದಿಲ್ಲ. ಆದರೆ ಆಕೆಗೆ ಯಾವೆಲ್ಲಾ ಅಭ್ಯಾಸಗಳು ಕಿರಿಕಿರಿ ಉಂಟು ಮಾಡುತ್ತದೆ ಎಂದು ಅರಿತುಕೊಂಡು ಅವುಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಕಡೆಗಣಿಸಬಹುದು. ಈ ರೀತಿ ನೀವು ಮುಂದೆ ಉದ್ಭವಿಸಬಹುದಾದ ಯಾವುದೇ ರೀತಿಯ ಸಂಘರ್ಷ ತಪ್ಪಿಸಬಹುದು. ಕೆಲವೊಮ್ಮೆ ನಿಮಗೆ ಸ್ಪಷ್ಟವೆಂದು ತೋರುವ ವಿಷಯಗಳಿಂದ ಆಕೆಗೆ ಕಿರಿಕಿರಿಯಾಗಬಹುದು. ದೀರ್ಘಕಾಲದ ಸಂಬಂಧಕ್ಕೆ ಆಕೆಯ ಭಾವನೆಗಳನ್ನು ಗೌರವಿಸುವುದರೊಂದಿಗೆ ಆಕೆಗೆ ಆತ್ಮೀಯ ಮತ್ತು ಹತ್ತಿರವಾಗಬಹುದು.
ಮಹಿಳೆಯರನ್ನು ಕಿರಕಿರಿ ಉಂಟು ಮಾಡುವ ಕೆಲವೊಂದು ಅಭ್ಯಾಸಗಳಲ್ಲಿ ಸೆಕ್ಸ್ ಬಳಿಕ ನಿದ್ದೆಗೆ ಜಾರುವುದು, ಮಾತನ್ನು ಕೇಳದಿರುವುದು, ಭಾವೋದ್ರೇಕ ಮತ್ತು ಜೋರಾಗಿ ನಗುವುದು, ಕೀಳು ಶೈಲಿಯಲ್ಲಿ ನಗುವುದು ಇತ್ಯಾದಿ. ಇಂತಹ ಕೆಲವೊಂದು ಅಭ್ಯಾಸಗಳು ಪುರುಷರಿಗೆ ಜೀವನದ ಶೈಲಿಯಾಗಿರಬಹುದು. ಆದರೆ ಇದು ಮಹಿಳೆಯರಿಗೆ ಕಿರಿಕಿರಿಯಾಗುತ್ತದೆ. ಸಂಬಂಧದ ದೃಷ್ಟಿಯಿಂದ ನಿಮ್ಮ ಅಭ್ಯಾಸದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುವುದು ತುಂಬಾ ಮುಖ್ಯ.

1. ಸೆಕ್ಸ್ ಬಳಿಕ ನಿದ್ದೆಗೆ ಜಾರುವುದು
ಸೆಕ್ಸ್ ಎನ್ನುವುದು ನಿಮ್ಮ ಅನ್ಯೋನ್ಯ ಸಂಬಂಧದ ಒಂದು ಭಾಗ. ಇದರಿಂದ ಸೆಕ್ಸ್ ಬಳಿಕ ನಿದ್ದೆಗೆ ಜಾರುವುದರಿಂದ ಮಹಿಳೆಗೆ ಕಿರಿಕಿರಿಯಾಗಬಹುದು. ಯಾಕೆಂದರೆ ಆಕೆ ಹೆಚ್ಚಿನ ರೋಮ್ಯಾನ್ಸ್ ನ್ನು ನಿರೀಕ್ಷಿಸುತ್ತಿರಬಹುದು.

2. ಕಡಿಮೆ ಮಾತನಾಡುವುದು
ಮಹಿಳೆಯರು ಸಾಮಾನ್ಯವಾಗಿ ಹೆಚ್ಚು ಮಾತನಾಡುತ್ತಾರೆ. ಆದರೆ ಪುರುಷರು ಕಡಿಮೆ ಮತ್ತು ಸ್ಪಷ್ಟವಾಗಿ ಮಾತನಾಡಲು ಬಯಸುತ್ತಾರೆ. ಆಕೆಯ ಮಾತುಗಳಿಗೆ ಸಣ್ಣ ಪ್ರತಿಕ್ರಿಯೆ ನೀಡಿದರೆ ಕೋಪಗೊಂಡು ನಿಮ್ಮಿಬ್ಬರ ಸಂಬಂಧಕ್ಕೆ ತೊಂದರೆಯಾಗಬಹುದು.

3. ಕಳಪೆ ಶೈಲಿ
ಪುರುಷರೊಂದಿಗೆ ಹೊರಗೆ ಹೋಗುವಾಗ ಮಹಿಳೆಯರು ಶೃಂಗಾರ ಮಾಡಲು ಕೆಲವು ಗಂಟೆಗಳೇ ಬೇಕಾಗುತ್ತದೆ. ಆದರೆ ಪುರುಷರು ಕೆಲವೇ ನಿಮಿಷಗಳಲ್ಲಿ ತಯಾರಾಗುತ್ತಾರೆ ಮತ್ತು ಬಟ್ಟೆ ಸರಿಹೊಂದುತ್ತದೆಯಾ ಎನ್ನುವ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಇದು ಮಹಿಳೆಯರಲ್ಲಿ ಸಿಟ್ಟನ್ನು ಉಂಟುಮಾಡುತ್ತದೆ.

4. ಕ್ಷೌರ ಬಳಿಕದ ಅವ್ಯವಸ್ಥೆ
ಶೇವಿಂಗ್ ಮಾಡಿದ ಬಳಿಕ ಕೂದಲುಗಳನ್ನು ಸಿಂಕ್ ನಲ್ಲಿ ಹಾಗೆ ಬಿಟ್ಟುಬಿಡುವ ಅಭ್ಯಾಸದವರಾಗಿದ್ದರೆ ಇದನ್ನು ಬದಲಾಯಿಸಲು ಸಮಯ ಬಂದಿದೆ. ಈ ಅಭ್ಯಾಸವನ್ನು ಮಹಿಳೆಯರು ತುಂಬಾ ದ್ವೇಷಿಸುತ್ತಾರೆ.

5. ಆಲಿಸುವುದು
ಮಹಿಳೆಯರು ಮಾತನಾಡಲು ಹೆಚ್ಚಿಗೆ ಇಷ್ಟಪಡುವ ಕಾರಣ ಪುರುಷರು ತಮ್ಮ ಮಾತನ್ನು ಆಲಿಸಬೇಕೆಂದು ಮಹಿಳೆಯರು ಬಯಸುತ್ತಾರೆ. ಆಲಿಸುವುದನ್ನು ನಿಲ್ಲಿಸಲು ಯಾವುದೇ ಸಭ್ಯತೆಯಿಲ್ಲ. ಆಲಿಸುವುದನ್ನು ನೀವು ನಿಲ್ಲಿಸಿದ ತಕ್ಷಣ ಸಮಸ್ಯೆ ಆರಂಭವಾಗುತ್ತದೆ.

6. ಮನೆಗೆಲಸ ತಪ್ಪಿಸುವುದು
ಪುರುಷರು ಯಾವಾಗಲೂ ತಮಗೆ ಒಪ್ಪಿಸಿರುವ ಮನೆಗೆಲಸ ತಪ್ಪಿಸಲು ಹಲವಾರು ದಾರಿಗಳನ್ನು ಹುಡುಕುತ್ತಿರುತ್ತಾರೆ. ಇದರಿಂದ ನೀವು ತಪ್ಪಿಸಬಹುದೆಂದು ಭಾವಿಸಿರಬಹುದು. ಆದರೆ ಇದರಿಂದ ಮನೆಯಲ್ಲಿ ದೊಡ್ಡ ಬಿರುಗಾಳಿ ಏಳಬಹುದು.

7. ಶಬ್ದ
ಪುರುಷರು ಹೂಸು ಬಿಡುವುದು, ಗುಂಯ್ ಗುಡುವಂತಹ ಶಬ್ದಗಳನ್ನು ಮಾಡುತ್ತಿರುತ್ತಾರೆ. ಇದು ನಿಮಗೆ ಸಾಮಾನ್ಯವೆಂದು ಕಾಣಬಹುದು. ಆದರೆ ಮಹಿಳೆಯರಿಗೆ ಇದು ತುಂಬಾ ಕಿರಿಕಿರಿ ಉಂಟು ಮಾಡುತ್ತದೆ. ಇದನ್ನು ಖಾಸಗಿಯಾಗಿ ಇಟ್ಟುಕೊಂಡರೆ ಒಳ್ಳೆಯದು.

8. ಪುರುಷರ ರೀತಿಯಲ್ಲಿ ಟಿವಿ ವೀಕ್ಷಿಸುವುದು!
ಹೆಚ್ಚಿನ ಪುರುಷರು ಟಿವಿ ನೋಡುವ ಸಾರ್ವತ್ರಿಕ ವಿಧಾನವಿದೆ. ಅದೇನೆಂದರೆ ನ್ಯೂಸ್ ಮತ್ತು ಮನೋರಂಜನಾ ಚಾನೆಲ್ ಗಳನ್ನು ಆಗಾಗ ಬದಲಾಯಿಸುತ್ತಾ ಇರುವುದು. ಯಾವುದೇ ಒಂದು ಚಾನೆಲ್ ನೋಡದಿರುವುದು. ಇದು ಸುತ್ತಲಿದ್ದವರಿಗೆ ತುಂಬಾ ಕಿರಿಕಿರಿ ಉಂಟುಮಾಡುತ್ತದೆ.

9. ಗಲೀಜುಮಯವಾಗಿ ಮೂತ್ರ ಮಾಡುವುದು
ಇದು ನೀವು ಮೂತ್ರ ಮಾಡಲು ತಿಳಿದಿರುವ ಏಕೈಕ ಮಾರ್ಗವೇ? ಮೂತ್ರ ಮಾಡುವ ಸರಿಯಾದ ವಿಧಾನ ಕಲಿತುಕೊಂಡು ಅದನ್ನು ಆದಷ್ಟು ಬೇಗನೆ ಅಳವಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ನಿಮಗೆ ಶೌಚಾಲಯದಿಂದ ದೂರ ಉಳಿಯುವ ಆದೇಶ ಬರಬಹುದು.

10. ಅವ್ಯವಸ್ಥೆ
ಪುರುಷರು ಏಕಾಂಗಿಯಾಗಿರುವಾಗ ತಮ್ಮ ಬಟ್ಟೆಬರೆ ಮತ್ತಿತರ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಕಿರುತ್ತಾರೆ. ಮತ್ತೆ ಇದನ್ನು ಸರಿಯಾಗಿಡಬೇಕೆಂದು ಬಯಸಿದರೂ ಆ ಸಮಯ ಬರುವುದೇ ಇಲ್ಲ. ಪ್ರತೀ ಸಲ ನಿಮ್ಮ ಅವ್ಯವಸ್ಥೆಯನ್ನು ಸರಿಮಾಡುವುದು ಮಹಿಳೆಯರಿಗೆ ತುಂಬಾ ಕಿರಿಕಿರಿಯುಂಟು ಮಾಡುತ್ತದೆ.



Click it and Unblock the Notifications