Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಾರಿನಲ್ಲಿ ಕಾರು ಬಾರು ಮಾಡುವ 7 ಬಗೆಯ ಹೆಂಗಸರು
ವಾರವೆಲ್ಲ ದುಡಿಯುವ ಜೀವ, ವಾರಾಂತ್ಯಕ್ಕೆ ಸೋತು ಸುಣ್ಣವಾಗಿರುತ್ತದೆ. ಆಗ ಅದಕ್ಕೆ ಅಗತ್ಯವಾಗಿ ಬೇಕಾಗಿರುವುದು ಪುನಃಶ್ಚೇತನ. ಆಗ ಬಹುತೇಕ ಮಂದಿ ಗಂಡಸರು ಹೋಗುವುದು ಗಂಡು ಮಕ್ಕಳ ತವರಾದ ಬಾರಿಗೆ. ಇಲ್ಲಿ ಅವರ ವಾರಾಂತ್ಯಕ್ಕೆ ಬೇಕಾಗುವ ವಿಶ್ರಾಂತಿ, ಮನಃಶ್ಶಾಂತಿ ಮತ್ತು ಮನಸ್ಸಿಗು, ಕಣ್ಣಿಗು ತಂಪು ನೀಡುವ ಹೆಂಗಸರು ಸಹ ಸಿಗಬಹುದು. ನಶೆ ಏರಿಸುವ ಮದ್ಯದ ಮಧ್ಯೆ ನಶೆ ಏರಿಸುವಂತಹ ಹುಡುಗಿಯರು, ಹೆಂಗಸರು ಇದ್ದರೆ ಮತ್ತೇನು ಬೇಕು? ನಮ್ಮ ಹುಡುಗರಿಗೆ, ಸ್ವರ್ಗಕ್ಕೆ ಕಿಚ್ಚು ಹಚ್ಚಲಿಲ್ಲವಾದರು ಸರಿ!, ಸ್ವರ್ಗ ತಮ್ಮಿಂದ ಮೂರೇ ಗೇಣು ದೂರ ಎಂಬ ಆಶಾಭಾವನೆಯಿಂದ ಅಖಾಡಕ್ಕೆ ಇಳಿದು, ಆ ಹುಡುಗಿಯರ ಮಧ್ಯದಿಂದ ತನಗಾಗಿ ಒಬ್ಬಾಕೆಯನ್ನು ಆರಿಸಿಕೊಳ್ಳುವ ಅಥವಾ ಜೊತೆಗೆ ಇರಲಿ ಎಂದು ಹುಡುಕುವ ಪ್ರತಿಕ್ರಿಯೆಗೆ ಇಳಿಯುವುದು ಸಹಜ.
ಇದು ಸಾಮಾನ್ಯವಾಗಿ ನಡೆಯುವಂತಹದೇ, ಆದರೆ ಅಲ್ಲೇ ಎಡವಟ್ಟಾಗುವುದು. ಮೊದಲು ಅಲ್ಲಿ ಬಂದಿರುವವರು ಎಂತಹ ಹೆಂಗಸರು ಎಂಬ ಬಗ್ಗೆ ಸ್ವಲ್ಪ ಮಾಹಿತಿ ಪಡೆದುಕೊಳ್ಳಿ. ಆಮೇಲೆ ಅವರನ್ನು ನಿಮ್ಮ ಹಾದಿಗೆ ಬೀಳಿಸಿಕೊಳ್ಳುವುದು ಇದ್ದದ್ದೆ, ಇನ್ನೇಕೆ ತಡ ನಮ್ಮ ಸಲಹೆಗಳು ನಿಮಗಾಗಿ ಕಾದಿವೆ ಓದಿ, ಈ ವಾರಾಂತ್ಯದಲ್ಲಿ ಅದರ ಸದುಪಯೋಗಪಡಿಸಿಕೊಳ್ಳಿ.

1.ಕುಣಿದು ಕುಣಿದು ಬಾರೆ, ಬಾರಿಗೆ ಬಂದ ನೀರೆ
"ಕುಡಿಯೋಕು ಬಂದೋಳು ಕುಣಿಯೋಕೆ ಬರಲ್ವ" ಇದು ನಮ್ಮ ಕುಡುಕ ಮಹಾಶಯರ ಬಳಗದಲ್ಲಿ ಕೇಳಿ ಬರುವ ಬಾರ್ ಗಾದೆ!. ಕುಡಿದವರು ಕುಣಿಯುತ್ತಾರೆ. ಇಲ್ಲದಿದ್ದರೆ ಅದೇ ನಮ್ಮನ್ನು ಕುಣಿಸುತ್ತದೆ!. ಮಧಿರೆ ನಿಮ್ಮ ಗಂಟಲಲ್ಲಿ ಇಳಿದ ಮೇಲೆ ಒಮ್ಮೆ ಬಾರಿನ ಡಾನ್ಸ್ ಫ್ಲೋರ್ ಕಡೆಗೆ ಕಣ್ಣಾಯಿಸಿ. ಅಲ್ಲಿ ಈಗಾಗಲೇ ಅಮರ ಕಲಾವಿದರಂತೆ ಕುಣಿಯುತ್ತ ನಿಮ್ಮ ಕಣ್ಣು ಕುಕ್ಕುವ ಕೆಲವು ಹೆಂಗಳೆಯರು ನರ್ತಿಸುತ್ತಿರುತ್ತಾರೆ. ಅವರಲ್ಲಿ ಕೆಲವರು ಕುಣಿದು ಸುಸ್ತಾಗಿ ಬಂದು ಮತ್ತಷ್ಟು ಕುಡಿದು ಹೋಗುತ್ತಿರುತ್ತಾರೆ. ಇನ್ನು ಕೆಲವರು ಕುಣಿದು ಕುಣಿದು ಬೆವರಿನಲ್ಲಿ ತೊಯ್ದು ತೊಪ್ಪೆಯಾಗಿರುತ್ತಾರೆ. ಅವರ ಕೇಶರಾಶಿಯು ತನಗಿಂತ ಸ್ವತಂತ್ರರಾರು ಇಲ್ಲ! ಎಂದು ನಿಮ್ಮನ್ನು ಅಣಕಿಸುತ್ತಿರುತ್ತದೆ. ಕಣ್ಣಿಗೆ ಹಚ್ಚಿದ ಕಾಡಿಗೆಯು ಸಹ ಅವರ ಕುಣಿದಾಟಕ್ಕೆ ಸೋತು ಕೆನ್ನೆಯ ಮೇಲೆ ಜಾರಿ ಬೀಳುತ್ತಿರುತ್ತದೆ. ಅವರಲ್ಲಿರುವ ಅಗಾಧ ಶಕ್ತಿಯು ನಿಮ್ಮನ್ನು ಬೆಕ್ಕಸ ಬೆರಗಾಗಿ ಮಾಡುತ್ತದೆ. ಅವರು ಡಾನ್ಸ್ ಫ್ಲೋರಿನಲ್ಲೆ ತಮ್ಮ ಜೀವವನ್ನು ಹಿಡಿದಿಟ್ಟು ಕೊಂಡಿದ್ದಾರೋ? ಏನೋ? ಎಂಬಂತೆ ಅದಕ್ಕೆ ಅಂಟಿಕೊಂಡು ನೃತ್ಯ ಮಾಡುತ್ತಿರುತ್ತಾರೆ. ಅಂತಹ ಅರ್ಪಣಾ ಮನೋಭಾವ ಅವರಲ್ಲಿ ಈ ಸಮಯದಲ್ಲಿ ವ್ಯಕ್ತವಾಗುತ್ತದೆ. ಅವರನ್ನು ಒಂದು ಕಂಬ ( ಪೋಲ್) ಬಳಿ ಕರೆದುಕೊಂಡು ಹೋಗಿ ಬಿಡಿ, ಅವರ ನಾಚಿಕೆ, ಸಂಕೋಚಗಳು ಊರಿಂದ ಆಚೆಗೆ ಹೋಗಿ ಬಿಟ್ಟು ನಿಮ್ಮ ಮುಂದೆ ಕುಣಿಯುವುದನ್ನು ನೋಡುವಿರಿ.

2.ಒಳಗೆ ಸೇರಿದರೆ ಗುಂಡು, ಹುಡುಗಿ ಆಗುವಳು ಗಂಡು!
ಇವರು ಎರಡನೆಯ ಬಗೆಯವರು, ಹಾಗೆಂದು ಇವರ ಬಗ್ಗೆ ಎರಡು ಬಗೆಯ ಬೇಡಿ. ನಿಮಗೆ ಸವಾಲ್ ಹಾಕಿ ಕುಡಿಯಲು ಕೂರುವ ಈ ಗುಂಡು ಬೀರಿಯರು! ಸಾಮಾನ್ಯರಲ್ಲ. ಒಂದರ ಹಿಂದೆ, ಒಂದು ಕಾಕ್‍ಟೇಲ್ ಅನ್ನು ಗಟ ಗಟ ಎಂದು ಕುಡಿದು ಕಡೆಯದಾಗಿ ಬಾರಿನ ಸೂರು ಕಿತ್ತುಹೋಗುವಂತೆ ಕೂಗಲು, ಸಿಳ್ಳೆ ಹೊಡೆಯಲು ಇವರು ಹಿಂದೆ ಮುಂದೆ ನೋಡುವುದಿಲ್ಲ. ಬೀರ್ ಕುಡಿಯಲು ಕೂತರಂತು ಇವರು ಎದುರಿನವರ ಹಣೆಯಲ್ಲಿ ಬೆವರಿಳಿಸಿ ಬಿಡುತ್ತಾರೆ. ಆದರೆ ತಾವು ಮಾತ್ರ ಬೆವರುವುದು ಇಲ್ಲ, ಬೆದರುವುದು ಇಲ್ಲಾ!. ಇದಕ್ಕಾಗಿ ಆಕೆಯನ್ನು ನೀವು ಅಭಿನಂದಿಸಬೇಕು ಎಂದು ಬಯಸಬಹುದು, ಆದರೆ ಈಗಾಗಲೇ ನೀವು ಡಾನ್ಸ್ ಫ್ಲೋರಿನಲ್ಲಿಯೇ ಬಿದ್ದು ಹೋಗಿರುತ್ತೀರಿ, ಇಲ್ಲಿರುವವರು ನಿಮ್ಮ ಕಣ್ಣಿಗೆ ಕಾಣುತ್ತಾರೆಯೇ?

3.ಮಧಿರೆ ಮತ್ತು ಮಧುರ ಗಾನ ಪ್ರಿಯೆ
ಇವರು ಸಹ ನಿಮಗೆ ಸುಲಭವಾಗಿ ಕಾಣ ಸಿಗುತ್ತಾರೆ. ಬಾರಿನಲ್ಲಿ ಡಿಜೆ ಅಥವಾ ಜೂಕ್ ಬಾಕ್ಸ್ ಆಪರೇಟರ್ ಪಕ್ಕವೇ ಇವರು ಠಿಕಾಣಿ ಹೂಡಿರುತ್ತಾರೆ. ಡಿಜೆ ಒಂದರ ಹಿಂದೆ ಒಂದು ಹಾಡನ್ನು ನಿಮಗಾಗಿ ಫ್ಲೇ ಮಾಡುತ್ತಿದ್ದರೆ, ಈಕೆ ನಿಮ್ಮಲ್ಲಿ ಹೊಸ ಕನಸುಗಳ ಭಾವನೆಯನ್ನು ಬಿತ್ತುತ್ತಿರುತ್ತಾಳೆ. ನಿಮಗೆ ಸಂಗೀತ ಇಷ್ಟವಾದರೆ ಪರವಾಗಿಲ್ಲ, ಇಲ್ಲವಾದಲ್ಲಿ ಆ ಹುಡುಗಿಗಾಗಿಯಾದರು ಸ್ವಲ್ಪ ಹೊತ್ತು ಸಂಗೀತಕ್ಕೆ ಅಭಿಮಾನಿಯಾಗಿ. ಇಬ್ಬರು ಸೇರಿ ಸ್ವಲ್ಪ ಹೊತ್ತು ಕುಡಿದ ಮೇಲೆ ಮಧುರ ಗೀತೆಗಳು, ಸ್ವಲ್ಪ ಮಾಸ್ ಆಗಿ ಪರಿವರ್ತನೆಗೊಳ್ಳುತ್ತವೆ. ನಂತರ ಐಟೆಮ್ ಸಾಂಗ್ ಫ್ಲೇ ಮಾಡುವಷ್ಟರಲ್ಲಿ ನೀವಿಬ್ಬರು ಒಂದೇ ದೋಣಿಯಲ್ಲಿ ತೇಲುತ್ತಿರುತ್ತೀರಿ. ಐಟೆಮ್ ಹಾಡಿಗೆ ಬಿಂದಾಸ್ ಆಗಿ ಕುಣಿದ ನಂತರ ಆಕೆ ಸ್ವಲ್ಪ ಎಮೋಷನಲ್ ಆಗಿರುವ, ಹಾಡನ್ನು ಕೇಳಿ ಗೋಗರೆದು ಹಾಕಿಸಿ ಕೇಳಿ ಖುಷಿ ಪಡುತ್ತಾಳೆ. ಇನ್ನೇನು ಕಣ್ಣೀರು ಸುರಿಸಿದಳು ಎಂಬಷ್ಟರಲ್ಲಿ ಆಕೆ ತನ್ನನ್ನು ತಾನು ನಿಯಂತ್ರಣ ಮಾಡಿಕೊಂಡು ಬಿಡುತ್ತಾಳೆ. ನಂತರ ಮತ್ತದೇ ಜೋಶ್ ಇರುವ ಹಾಡುಗಳ ಧಮಾಕವನ್ನು ಶುರು ಮಾಡುತ್ತಾಳೆ. ಸ್ವಲ್ಪ ಅಡ್ಜಸ್ಟ್ ಮಾಡಿಕೊಂಡು ಹಾಡು ಕೇಳಿದರೆ ನಿಮಗೆ ಈಕೆ ಇಷ್ಟವಾಗುತ್ತಾಳೆ. ಇಷ್ಟವಾದರೆ ಇಷ್ಟ ಪಡಿ, ಇಲ್ಲವಾದರೆ ಬಿಡಿ, ಏನೇ ಆಗಲಿ ನಿಮ್ಮ ಪ್ರಯತ್ನಕ್ಕೆ ಖುಷಿಪಡಿ.

4.’ಕುಡಿಯೋದೇ ನನ್ನ ಬ್ಯುಸಿನೆಸ್, ಆದರೆ ಕುಡಿಸೋರೆ ನನಗೆ ಗ್ರೇಟೆಸ್ಟ್’
" ಮಳ್ಳಿ ಮಳ್ಳಿ ಎಷ್ಟು ರೌಂಡ್ ಕುಡಿದೆ ಅಂದರೆ ಮೂರು ಮತ್ತೊಂದು ಅಂದಳಂತೆ" ಎಂದು ನಮ್ಮ ಗಾದೆಯನ್ನು ಬದಲಾಯಿಸಬಹುದು. ಹಾಗಿರುತ್ತೆ ಈ ಪೈಕಿ ಹೆಂಗಸರ ವರ್ತನೆ. ನೋಡಲು ಮಳ್ಳಿ ತರ, ಆದರೆ ಕುಡಿಯಲು ಕೂತರೆ ಕುಡಿಯೋದೆ ನನ್ನ ಬ್ಯುಸಿನೆಸ್ ಎಂಬ ರೀತಿ ಇವರದು. ಮೊದ ಮೊದಲು ಒಂದು ಸಾಕು, ಎರಡು ಬೇಕು ಎಂಬ ರೀತಿಯಲ್ಲಿ ಕುಡಿಯಲು ಶುರು ಮಾಡುವ ಇವರು, ಕುಡಿಯುತ್ತ, ಕುಡಿಯುತ್ತ, ತಮ್ಮನ್ನು ತಾವೇ ಮರೆತು ಹೋಗುತ್ತಾರೆ. ನಂತರ ಯಾರೇ ಆಗಲಿ ಅವರಿಗೆ ಕುಡಿಯಲು ನೀಡಿದರೆ ನೋ ಎನ್ನದೆ ಕುಡಿಯುತ್ತಾರೆ. ಅವರು ಕುಡಿತವೆ ತಮ್ಮ ಸರ್ವಸ್ವ ಎಂಬ ರೀತಿಯಲ್ಲಿ ಶ್ರದ್ಧೆಯಿಂದ ಕುಡಿಯುತ್ತಾರೆ. ಕುಡಿಯುತ್ತಲೆ ಇರುತ್ತಾರೆ. ಅದೇ ಅವರಿಗೆ ತಾವೂ ಒಂದು ಸಾಧನೆ ಮಾಡಿದೆವು ಎಂಬ ಭಾವನೆಯನ್ನು ತುಂಬುತ್ತದೆ. ಪದೇ ಪದೇ ಈ ಭಾವನೆಯನ್ನು ಅವರು ತಮ್ಮ ಮನಸ್ಸಿನಲ್ಲಿ ನವೀಕರಣ ಮಾಡಿಕೊಳ್ಳಲು ಈ ಕುಡಿತ ಅವರಿಗೆ ಬೇಕೆ ಬೇಕು.

5.ಕಳ್ಳ ಬೆಕ್ಕಿನಂತಹ ಹೆಂಗಸು
ಬಾರಿನಲ್ಲಿ ಫಾಗ್ ಮೆಷಿನ್‍ನಿಂದ ತುಂಬಿದ ಹೊಗೆಯನ್ನು ದಾಟಿ ಮುಂದೆ ಹೋದರೆ, ಕಡೆಯಲ್ಲಿ ಮಂದ ಬೆಳಕಿನಲ್ಲಿ ಒಬ್ಬಾಕೆ ಕುಳಿತಿರುತ್ತಾಳೆ. ಅಲ್ಲಿ ಕುಳಿತಿರುವುದು ಆಕೆಯೋ, ಅಥವಾ ಒಂದು ಪ್ರಾಣಿಯೋ, ಅಥವಾ ಒಂದು ಜಿಂಕೆಯೋ ಎಂಬ ಸಂಶಯ ನಿಮ್ಮಲ್ಲಿ ಮೂಡಬಹುದು. ಕಾರಿನ ಬೆಳಕಿಗೆ ಕಂಗೆಟ್ಟ ಜಿಂಕೆಯ ರೀತಿ ಆಕೆ ಕುಳಿತಿರುತ್ತಾಳೆ. ಆಕೆಯ ಮುಖದ ಮೇಲೆ ವಯೋ ಸಹಜವಾಗಿ ಸುಕ್ಕು ಗಟ್ಟಿದ ಚರ್ಮ, ಪದರ-ಪದರಗಳಲ್ಲಿ ಹಂಚಿ ಹೋದ ಮೇಕಪ್ ಎಲ್ಲಾ ನಿಮ್ಮ ಗಮನಕ್ಕೆ ಬರುತ್ತದೆ. ಆಕೆಯ ವೇಷ- ಭೂಷಣವು ಆಕೆ ಕುಳಿತ ಕಡೆಯ ಬೆಂಚಿಗೆ ಅಚ್ಚುಕಟ್ಟಾಗಿ ಒಪ್ಪುವಂತಿರುತ್ತದೆ. ಆದರೆ ಆಕೆಗು ಒಂದು ಜೊತೆ ಬೇಕಾಗಿರುತ್ತದೆ. ಆಕೆಯ ವಿಚಾರದಲ್ಲಿ ತಾರತಮ್ಯ ಮಾಡದೆ ಆಕೆಗು ಸ್ವಲ್ಪ ಕುಡಿಯಲು ಆರ್ಡರ್ ಮಾಡಿ. ಏಕೆಂದರೆ ಆಕೆ ನಿಮ್ಮಿಂದ ಒಮ್ಮೆ ಮಾತ್ರ ಇದನ್ನು ಬಯಸುತ್ತಾಳೆ. ಮತ್ತೆ ಮತ್ತೆ ಆಕೆ ಅದೇ ಸ್ಥಳದಲ್ಲಿ ಕೂರುವುದಿಲ್ಲ. ಆದರೆ ನಾವು ಮಾತ್ರ ಆಕೆಯ ಹುಡುಕಾಟವನ್ನು ನಿಲ್ಲಿಸುವುದಿಲ್ಲ.

6.ಭಾವಜೀವಿ
ಇವರನ್ನು ಬಾರಿನಲ್ಲಿ ಕಂಡು ಹಿಡಿಯುವುದು ಸುಲಭ. ಒಮ್ಮೆ ಒಬ್ಬಾಕೆಯೊಂದಿಗೆ ಕುಡಿದು ನೋಡಿ, ಆಕೆಯ ರೌಂಡ್ ಮುಗಿದ ಕೂಡಲೆ ನಿಮ್ಮನ್ನು ತನ್ನ ಬೆಸ್ಟ್ ಫ್ರೆಂಡ್ ಎಂದು ಪರಿಗಣಿಸಲು ಪ್ರಾರಂಭಿಸಿದರೆ ಸಾಕು, ನೀವು ಒಬ್ಬ ಭಾವನೆಗಳನ್ನು ತುಂಬಿಕೊಂಡ ಬಾರ್ ಜೀವಿಯ ಬಳಿ ಕುಳಿತಿದ್ದೀರಿ ಎಂದು ಭಾವಿಸಿ. ಇವರು ಹೀಗೆ ಕುಡಿಸಿದರೆ ಒಳ್ಳೆಯವರು, ಕಷ್ಟಗಳನ್ನು ಕೇಳಿದರೆ ತುಂಬಾ ಒಳ್ಳೆಯವರು, ಅವರ ಕತೆ- ಪುರಾಣಗಳನ್ನು ಭಕ್ತನಂತೆ ಕೇಳಿದರೆ ಅಬ್ಬಾ ನೀವೆ ಸಾಕ್ಷಾತ್ ದೇವರು ಅವರಿಗೆ!. ಆಕೆ ನೋಡಲು ಚೆನ್ನಾಗಿ ಇರುತ್ತಾಳೆ, ಮತ್ತು ನಿಮಗೆ ಒಳ್ಳೆಯ ಕಂಪನಿ ಸಹ ಆಗಿರುತ್ತಾಳೆ. ಆದರೆ ಆಕೆಯ ಜೊತೆ ಕುಳಿತಾಗ ಸ್ವಲ್ಪ ಹೊಗಳಿಕೆ, ಸ್ವಲ್ಪ ತೆಗಳಿಕೆ ಕೇಳುವುದರ ಜೊತೆಗೆ ಒಂದಿಷ್ಟು ವಾಂತಿಯನ್ನು ಸಹ ಸ್ವೀಕರಿಸಲು ಸಿದ್ಧವಾಗಿರಿ!.

7.ಮಾಧಕ ವಸ್ತುಗಳ ಪ್ರಿಯೆ
ಹೆಣ್ಣಿನ ಸೌಂದರ್ಯದಲ್ಲಿಯೇ ಮಾಧಕತೆ ಇರುವುದು ರಸಿಕರಿಗೆ ತಿಳಿದ ವಿಷಯ. ಆದರೆ ಈ ಮಾನಿನಿಯರು,ಕೊಕೇನ್, ಎಕ್ಸ್ಟಾಸಿ, ಮಾರಿಜುವಾನ ಮತ್ತಿತರ ಮಾಧಕ ವಸ್ತುಗಳಿಗೆ ದಾಸರಾಗಿ ಬಿಟ್ಟಿರುತ್ತಾರೆ. ಇವರನ್ನು ಕಂಡು ಹಿಡಿಯುವುದು ಸುಲಭ. ಡಾನ್ಸ್ ಫ್ಲೋರಿನಲ್ಲಿ ಬಿಡುವಿಲ್ಲದೆ ಮೈಮೇಲಿನ ಪ್ರಙ್ಞೆಯಿಲ್ಲದೆ ಕುಣಿಯುವ ಇವರು, ಮಧ್ಯೆ ಮಧ್ಯೆ ಸ್ವಲ್ಪ ಬಿಡುವು ತೆಗೆದುಕೊಂಡು ಒಂದು ಧಮ್ ಅಥವಾ ಒಂದು ಚಗ್ ಕುಡಿಯುತ್ತಿರುತ್ತಾರೆ. ಅವರ ಧ್ವನಿಯಲ್ಲಿ ಸ್ಪಷತೆಯಿಲ್ಲದೆ ಗೊರಗೊರ ಎನ್ನುತ್ತಿರುತ್ತದೆ. ಆದರು ಅಸಹ್ಯ ಪಟ್ಟುಕೊಳ್ಳದೆ ಇವರಲ್ಲಿ ಸಹ ನಿಮ್ಮ ಸಂಗಾತಿಯನ್ನು ಅರಸಬಹುದು.



Click it and Unblock the Notifications