Latest Updates
-
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ
ವಾರಾಂತ್ಯ ಈ ಕಳೆದರೆ ಮಾತ್ರ ಮೀನಿಂಗ್ ಫುಲ್!
ವಾರಾಂತ್ಯವು ಇನ್ನೇನು ಸಮೀಪಿಸುತ್ತಿದೆ. ಅತಿ ಶೀಘ್ರದಲ್ಲಿಯೇ ನೀವು ಎರಡು ದಿನ ಹಾಯಾಗಿ ವಿಶ್ರಾಂತಿಯನ್ನು ಪಡೆಯುತ್ತೀರಿ. ಜೊತೆಗೆ ನಿಮಗೆ ಖುಷಿಕೊಡುವ ಚಟುವಟಿಕೆಗಳಲ್ಲಿ ಸಹ ಪಾಲ್ಗೋಳ್ಳುತ್ತೀರಿ. ಆದರೆ ಇದು ಹೇಳಿದಷ್ಟು ಸುಲಭವಲ್ಲ. ಅದು ಹೇಗೆ ತಾನೇ ಐದು ದಿನ ಬಿಡುವಿಲ್ಲದೆ ಸಂದರ್ಶನ, ಚರ್ಚೆ ಮತ್ತು ನಿಗದಿತ ಉತ್ಪಾದನೆಯ ಬಗ್ಗೆ ಎಲ್ಲ ತಲೆ ಕೆಡೆಸಿಕೊಂಡು ವಾರಾಂತ್ಯದಲ್ಲಿ ಮಲಗಿ ಅಥವಾ ಸ್ನೇಹಿತರ ಜೊತೆಗೆ ಹರಟುತ್ತಾ ಕಾಲ ಕಳೆಯುವುದು ಸಾಮಾನ್ಯ.
ಬಿಡುವು ಸಿಕ್ಕಿದರೆ ಸಾಕಪ್ಪ ಸಾಕು ಎನ್ನುತ್ತಿರುತ್ತದೆ ಮನಸ್ಸು. ಹಾಗೆಂದು ಕೆಲಸದ ಜಂಜಾಟದ ಕುರಿತು ಯೋಚಿಸುತ್ತಾ ಅಥವಾ ಮಲಗಿ, ಟಿ.ವಿ ನೋಡುತ್ತ ಕಾಲ ವ್ಯರ್ಥ ಮಾಡುವ ಬದಲು ನಾವು ಕೊಡುವ ಈ ಆಕರ್ಷಕ ಆರೋಗ್ಯಕಾರಿ ಆಯ್ಕೆಗಳನ್ನು ಒಮ್ಮೆ ಪ್ರಯತ್ನಿಸಿ ನೋಡಿ.

1. ಬೇಗ ಏಳಿ
ಬೇಗ ಏಳುವುದು ಎಂದರೆ ದಿನವನ್ನು ಉತ್ತಮವಾಗಿ ಕಳೆಯಲು ಶುಭಾರಂಭ ಮಾಡಿದಂತೆಯೆ. ಬೇಗ ಹಾಸಿಗೆ ಬಿಟ್ಟು ಏಳಿ, ಮನೆಯಿಂದ ಹೊರಬನ್ನಿ, ಓಡಿ, ಜಾಗಿಂಗ್ ಮಾಡಿ ಅಥವಾ ವ್ಯಾಯಾಮ ಮಾಡಿ.

2. ಹಾಸಿಗೆಯಲ್ಲಿಯೇ ಮೈ ಸಡಿಲ ಮಾಡಿ
ಅಲಾರಂ ಬಾರಿಸಿದ ಒಡನೆಯೆ ಒಮ್ಮೆಗೆ ಹಾಸಿಗೆ ಬಿಟ್ಟು ಏಳುವ ಬದಲು ಹಾಸಿಗೆಯಲ್ಲಿಯೇ ನಿಮ್ಮ ಮೈಯನ್ನು ಸಡಿಲ ಮಾಡಿ. ಹಾಸಿಗೆಯಲ್ಲಿ ಮೈಯನ್ನು ಸಡಿಲ ಮಾಡಲು ಹಲವಾರು ವ್ಯಾಯಾಮಗಳಿವೆ. ಕತ್ತನ್ನು ಸಡಿಲ ಮಾಡುವುದು, ಕೈ, ಕಾಲುಗಳನ್ನು ಸಡಿಲ ಮಾಡುವ ವ್ಯಾಯಾಮವನ್ನು ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ದಿನವು ಸಂಪೂರ್ಣವಾಗಿ ಉತ್ಸಾಹದಾಯಕವಾಗಿರುತ್ತದೆ.

3. ಬಾಕಿ ಉಳಿಸಿದ ಕೆಲಸಗಳನ್ನು ಮಾಡಿ ಪೂರೈಸಿ
ವಾರಂತ್ಯದಲ್ಲಿ ಮರೆಯದೆ ಒಂದು ಕೆಲಸ ಮಾಡಿ. ಅದೇನೆಂದರೆ ನೀವು ಈ ವಾರದಲ್ಲಿ ಮಾಡಲು ಸಾಧ್ಯವಾಗದ ಕೆಲಸಗಳನ್ನು ಮಾಡಿ ಪೂರೈಸಿ. ಇದನ್ನು ಒಂದು ಅಭ್ಯಾಸವನ್ನಾಗಿ ಮಾಡಿಕೊಳ್ಳಿ. ಏಕೆಂದರೆ ಇದು ನಿಮ್ಮ ಒತ್ತಡ ಮತ್ತು ಉದ್ವೇಗಗಳನ್ನು ನಿವಾರಿಸುತ್ತದೆ.

4. ಪ್ರಶಾಂತವಾದ ಸ್ನಾನವನ್ನು ಮಾಡಿ
ವಾರದ ದಿನಗಳಲ್ಲಿ ನಾವು ಸ್ನಾನವನ್ನು ಸರಿಯಾಗಿ ಮಾಡುವುದಿಲ್ಲ. ಅದಕ್ಕೆ ವೇಳೆಯ ಕೊರತೆಯ ಕಾರಣವಿರಬಹುದು. ಹಾಗಾಗಿ ಈ ವಾರಾಂತ್ಯದಲ್ಲಿ ನಿಮ್ಮ ಮನೆಯಲ್ಲಿಯೇ ಲಭ್ಯವಿರುವ ಅಭ್ಯಂಜನ ಪದಾರ್ಥಗಳನ್ನು ಬಳಸಿ ಒಂದು ಒಳ್ಳೆಯ ಸ್ನಾನವನ್ನು ಮಾಡಿ.

5. ಆರೋಗ್ಯಕರವಾದ ಉಪಾಹಾರವನ್ನು ಸೇವಿಸಿ
ಆರೋಗ್ಯಕರವಾದ ಉಪಾಹಾರವನ್ನು ತಯಾರಿಸಿ ಮನೆ ಮಂದಿಯ ಜೊತೆಯಲ್ಲಿ ಸೇವಿಸಿ. ಆರೋಗ್ಯಕರಾದ ಉಪಾಹಾರವು ಆರೋಗ್ಯಕರ ಜೀವನದ ಮುನ್ನುಡಿಯಾಗಿದೆ. ನಿಮಗೆ ಉಪಾಹಾರವನ್ನು ಸೇವಿಸುವ ಅಭ್ಯಾಸವಿಲ್ಲದಿದ್ದರೆ, ಈ ವಾರಾಂತ್ಯದಲ್ಲಿ ಉಪಾಹಾರವನ್ನು ಸೇವಿಸುವ ಅಭ್ಯಾಸವನ್ನು ಪುನಃ ಪ್ರಾರಂಭಿಸಿ.

6. ದೈಹಿಕ ಸಾಮರ್ಥ್ಯ ವೃದ್ಧಿಗೆ ಒತ್ತು ಕೊಡಿ
ವಾರಾಂತ್ಯಗಳು ನಿಮ್ಮ ಮೈ ಮನಗಳನ್ನು ಸುಸ್ಥಿತಿಯಲ್ಲಿಡಲು ಅತ್ಯಂತ ಪ್ರಯೋಜನಕಾರಿಯಾಗಿ ಉಪಯೋಗವಾಗುತ್ತವೆ. ಈ ವಾರಾಂತ್ಯದಲ್ಲಿ ನಿಮ್ಮ ದೈಹಿಕ ಸಾಮರ್ಥ್ಯವನ್ನು ವೃದ್ಧಿಸುವ ಫಿಟ್‍ನೆಸ್ ತರಗತಿ ಅಥವಾ ಯೋಗ, ಝುಂಬಾ, ನಾಟ್ಯ ತರಗತಿ ಅಥವಾ ಇನ್ನಿತರ ಯಾವುದಾದರು ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ.

7. ನಿಮ್ಮನ್ನು ನೀವು ಸೂರ್ಯ ರಶ್ಮಿಗೆ ಒಡ್ಡಿಕೊಳ್ಳಿ
ಎಂಟು ಗಂಟೆಗಳ ಬಿಡುವಿಲ್ಲದ ಕಾರ್ಯ ಕಲಾಪಗಳಲ್ಲಿ ನಾವು ಪ್ರತಿದಿನ ಮುಳುಗಿರುತ್ತೇವೆ. ಇದರಿಂದಾಗಿ ನಮಗೆ ಸ್ವಾಭಾವಿಕವಾದ ತಂಗಾಳಿ ಮತ್ತು ಸೂರ್ಯನ ಬೆಳಕು ಸಹ ಸೋಕುವುದಿಲ್ಲ. ಇಡೀ ದಿನವನ್ನು ನಾವು ಎ ಸಿ ಕೋಣೆಗಳಲ್ಲಿ ಕಳೆದಿರುತ್ತೇವೆ. ಅವು ನಮಗೆ ಒಣ ಮತ್ತು ನಿರ್ಜೀವ ಕೂದಲನ್ನು ಕೊಡುಗೆಯನ್ನಾಗಿ ನೀಡುತ್ತವೆ. ಹಾಗಾಗಿ ಈ ವಾರಾಂತ್ಯದಲ್ಲಿ ಬೇಗ ಎದ್ದಾಗ ಹಾಗೆ ಬಿಸಿಲಿನಲ್ಲಿ ಸ್ವಲ್ಪ ಹೊತ್ತು ಓಡಾಡಿ. ಇದರಿಂದಾಗಿ ನಿಮ್ಮ ದೇಹಕ್ಕೆ ಅತ್ಯಾವಶ್ಯಕವಾದ ವಿಟಮಿನ್ ಡಿ ಸಹ ದೊರೆಯುತ್ತದೆ.

8. ಅತಿಯಾಗಿ ಕುಡಿಯುವುದನ್ನು ನಿಯಂತ್ರಿಸಿ
ಈ ವಾರಾಂತ್ಯದಲ್ಲಿ ನಿಮ್ಮ ಸ್ನೇಹಿತರ ಜೊತೆಗೆ ಸಂತೋಷಕೂಟವನ್ನು ನಡೆಸುವ ಯೋಜನೆಯಿದ್ದರೆ, ಅದರಲ್ಲಿ ಆಲ್ಕೋಹಾಲ್ ಅನ್ನು ಆದಷ್ಟು ಮಟ್ಟಿಗೆ ನಿಯಂತ್ರಿಸಿ. ಸ್ವಲ್ಪ ಮಟ್ಟಿಗೆ ಆಲ್ಕೋಹಾಲ್ ಸೇವಿಸುವುದರಿಂದ ನೀವು ವಿಶ್ರಾಂತಿಯನ್ನು ಪಡೆಯಲು ಅನುಕೂಲವಾಗುತ್ತದೆ. ಆದರೆ ಇದು ಅತಿಯಾದರೆ ಅದರ ಅಮಲು ನಿಮ್ಮ ವಾರಂತ್ಯವನ್ನು ಹಾಳು ಮಾಡುತ್ತದೆ.

9. " ನಿಮ್ಮದೇ" ಆದ ಸಮಯವನ್ನು ಕಳೆಯಿರಿ
ಸುಮ್ಮನೇ ದಿನವನ್ನು ಕಳೆಯುವ ಬದಲು ನಿಮಗಾಗಿ ಸ್ವಲ್ಪ ಸಮಯವನ್ನು ಮೀಸಲಾಗಿರಿಸಿ. ಆಗ ನಿಮಗೆ ವಿಶ್ರಾಂತಿ ನೀಡುವ, ನಿಮ್ಮ ಮನಸ್ಸಿಗೆ ಮುದ ನೀಡುವ ಕಾರ್ಯಗಳನ್ನು ಮಾಡಿ. ಒಟ್ಟಿನಲ್ಲಿ ನಿಮ್ಮನ್ನು ನೀವು ಖುಷಿ ಪಡಿಸಿಕೊಳ್ಳಿ.

10. ಆಟಗಳಲ್ಲಿ ತೊಡಗಿಸಿಕೊಳ್ಳಿ
ಈ ವಾರಾಂತ್ಯದಲ್ಲಿ ಫುಟ್‍ಬಾಲ್, ರಗ್ಬಿ, ಬ್ಯಾಸ್ಕೆಟ್ ಬಾಲ್ ಅಥವಾ ಕ್ರಿಕೇಟ್‍ನಂತಹ ಹೊರಾಂಗಣ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ಇದು ನಿಮ್ಮ ವಾರಾಂತ್ಯವನ್ನು ಉತ್ತಮವಾಗಿ ಮತ್ತು ಆರೋಗ್ಯಕರವಾಗಿ ಕಳೆಯಲು ಇರುವ ಅತ್ಯುತ್ತಮ ಮಾರ್ಗವಾಗಿದೆ. ಹಾಗಾಗಿ ಟಿ.ವಿ ಮುಂದೆಯಿಂದ ಎದ್ದು ಹೊರಬನ್ನಿ ನಿಮ್ಮ ನೆಚ್ಚಿನ ಆಟದಲ್ಲಿ ತೊಡಗಿಸಿಕೊಳ್ಳಿ.

11.ಮನೆಗೆಲಸಗಳನ್ನು ಮಾಡಿ
ಮನೆಗೆಲಸ ಮಾಡುವುದು ಸಹ ವಾರಾಂತ್ಯವನ್ನು ಪ್ರಯೋಜನಕಾರಿಯಾಗಿ ಕಳೆಯುವ ಉತ್ತಮ ಮಾರ್ಗವಾಗಿದೆ. ಮತ್ತೇಕೆ ತಡ ಪೊರಕೆಯನ್ನು ತೆಗೆಯಿರಿ ಕಸ ತುಂಬಿರುವ ಮೂಲೆಗಳನ್ನು ಶುಭ್ರಗೊಳಿಸಿ. ಈ ಚಟುವಟಿಕೆಯು ನಿಮ್ಮ ದೇಹಕ್ಕೆ ಉತ್ತಮ ವ್ಯಾಯಾಮವನ್ನು ಒದಗಿಸುತ್ತದೆ. ಅಲ್ಲದೇ ನಿಮ್ಮ ಮನೆಗೆ ಸಹ ಮೆರಗನ್ನು ನೀಡುತ್ತದೆ.

12. ಈ ವಾರಾಂತ್ಯದಲ್ಲಿ ಮಿಲನ ಕ್ರಿಯೆ ನಡೆಸಿ
ಹೌದು ಮಿಲನ ಕ್ರಿಯೆಯ ಹಿಂದೆ ಇರುವ ಮೂಲ ಉದ್ದೇಶವೇ ಸುಖಾನುಭವ ಮತ್ತು ವಂಶಾಭಿವೃದ್ದಿ. ಆದರೆ ಇದರಿಂದ ಆರೋಗ್ಯ ಮತ್ತು ಆಹ್ಲಾದಕತೆ ದೊರೆಯುತ್ತದೆ ಎಂಬುದನ್ನು ಮರೆಮಾಚುವಂತಿಲ್ಲ. ವಾರಕ್ಕೆರಡು ಬಾರಿ ಮಿಲನ ಕ್ರಿಯೆ ನಡೆಸುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಹಾಗಾದರೆ ಮತ್ತೇಕೆ ಯೋಚನೆ ಜಂಜಡಗಳಿಂದ ಕೂಡಿದ ವಾರವನ್ನು ಮರೆಯಲು, ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹಾಗು ನಿಮ್ಮ ದೇಹದಲ್ಲಿರುವ ಹೆಚ್ಚಿನ ಕ್ಯಾಲೋರಿಗಳನ್ನು ಕರಗಿಸಲು ಸಂಕೋಚವನ್ನು ಬದಿಗಿಟ್ಟು ನಿಮ್ಮ ಸಂಗಾತಿಯನ್ನು ಪ್ರೇರೇಪಿಸಿ.

13. ಹೆಚ್ಚಾಗಿ ನೀರು ಕುಡಿಯಿರಿ
ನಮ್ಮಲ್ಲಿ ಬಹಳಷ್ಟು ಮಂದಿ ವಾರದ ದಿನಗಳಲ್ಲಿ ಅವಶ್ಯಕತೆಯಿದ್ದಷ್ಟು ನೀರನ್ನು ಕುಡಿಯಲು ಸಹ ವಿಫಲವಾಗಿರುತ್ತೇವೆ. ಅದರಲ್ಲಿ ಪದೇ ಪದೇ ಮೂತ್ರ ವಿಸರ್ಜನೆ ಮಾಡಲು ಹೋಗಲು ಹಿಂಜರಿದು ನೀರನ್ನು ಕುಡಿಯದೇ ಇರುವವರು ಬಹುತೇಕ ಮಂದಿ. ಹಾಗಾಗಿ ಈ ಸಮಸ್ಯೆಯನ್ನು ಈ ವಾರಾಂತ್ಯದಲ್ಲಿ ಪರಿಹರಿಸಿ. ಇಡೀ ವಾರಾಂತ್ಯವನ್ನು ಸದಾ ಗುಟುಕು ನೀರನ್ನು ಕುಡಿಯುತ್ತ ನಿಮ್ಮ ದೇಹದಲ್ಲಿನ ನೀರಿನ ಅಂಶವನ್ನು ಕ್ರಮಬದ್ಧಗೊಳಿಸಿ. ಹಾಗು ಇದೇ ಅಭ್ಯಾಸವನ್ನು ಜೀವನ ಪರ್ಯಂತ ಮುಂದುವರೆಸಿ.

14. ತಂತ್ರಜ್ಞಾನಕ್ಕೆ ಬಿಡುವು ಕೊಡಿ
ವಾರಾಂತ್ಯದಲ್ಲಿ ನಿಮ್ಮ ಗ್ಯಡ್ಜೆಟ್‍ಗಳಿಗೆ ರಜೆ ಕೊಡಿ. ಇವುಗಳು ನಿಮ್ಮನ್ನು ಇನ್ನಿತರರೊಂದಿಗೆ ಸಂಪರ್ಕಿಸಲು ನೆರವು ನೀಡಿದರು ಸಹ ಅವುಗಳಿಗೆ ಯಾವುದೇ ಮುಲಾಜಿಲ್ಲದೆ ರಜೆ ಕೊಡಿ. ಏಕೆಂದರೆ ಅವು ನಿಮ್ಮನ್ನು ಸದಾ ಬಿಡುವಿಲ್ಲದಂತೆ ಮಾಡುತ್ತವೆ. ನೀವು ಆರಾಮದಾಯಕವಾದ ವಾರಾಂತ್ಯವನ್ನು ಕಳೆಯಲು ಬಯಸಿದರೆ ನಿಮ್ಮ ಫೋನ್, ಕಂಪ್ಯೂಟರ್, ಸಾಮಾಜಿಕ ತಾಣ ಇತ್ಯಾದಿಗಳಿಂದ ದೂರವಿರಿ.

16. ನಿರ್ಜೀವ ಚರ್ಮವನ್ನು ನಿರ್ಮೂಲಗೊಳಿಸಿ
ನಿಮ್ಮ ಎ.ಸಿ ಕಛೇರಿಯು ನಿಮ್ಮ ಚರ್ಮವನ್ನು ಒಣ ಮತ್ತು ನಿರ್ಜೀವಗೊಳಿಸಬಹುದು. ಹಾಗಾಗಿ ಈ ನಿರ್ಜೀವ ಚರ್ಮವನ್ನು ತೆಗೆಯುವ ಕಾರ್ಯದಲ್ಲಿ ತೊಡಗಿಸಿಕೊಳ್ಳಿ.
ಉಪ್ಪು ಮತ್ತು ಸಕ್ಕರೆಗಳಿಂದ ತಯಾರಿಸಿದ ಸ್ಕ್ರಬ್ ಈ ಒಣ ಮತ್ತು ನಿರ್ಜೀವ ಚರ್ಮವನ್ನು ತೆಗೆಯಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. 1/4 ಕಪ್‍ನಷ್ಟು ಉಪ್ಪು ಅಥವಾ ಪುಡಿಮಾಡಿದ ಸಕ್ಕರೆಯನ್ನು ಒಂದು ಬಟ್ಟಲಿನಲ್ಲಿ ಹಾಕಿಕೊಳ್ಳಿ. ಇದಕ್ಕೆ ಸ್ವಲ್ಪ ಆಲೀವ್ ಎಣ್ಣೆಯನ್ನು ಬೆರೆಸಿ. ಇದನ್ನು ಚೆನ್ನಾಗಿ ಕಲೆಸಿ ಮಿಶ್ರಣ ಮಾಡಿ ಮತ್ತು ಇದನ್ನು ಚರ್ಮದ ಮೇಲೆ ಲೇಪಿಸಿ. ಸ್ವಲ್ಪ ಸಮಯದ ನಂತರ ಇದನ್ನು ಚೆನ್ನಾಗಿ ತಿಕ್ಕಿ ತೊಳೆಯಿರಿ. ಹೀಗೆ ಮಾಡುವುದರಿಂದ ಒಣ ಮತ್ತು ನಿರ್ಜೀವ ಚರ್ಮದಿಂದ ಮುಕ್ತಿ ಪಡೆಯಬಹುದು.

17. ನಿಮ್ಮ ಮೈಕಾಂತಿಯನ್ನು ಹೆಚ್ಚಿಸಿಕೊಳ್ಳಿ
ನಿಮ್ಮ ಮೈಕಾಂತಿಯು ಹೆಚ್ಚಲು ಕಿತ್ತಳೆ ಅಥವಾ ಟೊಮೆಟೊದ ರಸವನ್ನು ಮಾಡಿಕೊಳ್ಳಿ. ಅದಕ್ಕೆ ಎರಡು ಚಮಚ ಮೊಸರು ಹಾಕಿ ಮಿಶ್ರಣ ಮಾಡಿ. ನಂತರ ಇದನ್ನು ಮೇಲ್ಮುಖವಾಗಿ ನಿಮ್ಮ ತ್ವಚೆಗೆ ಲೇಪಿಸಿ. ನಂತರ 15 ನಿಮಿಷ ಒಣಗಲು ಬಿಡಿ. ಆಮೇಲೆ ಇದನ್ನು ತಣ್ಣೀರಿನಿಂದ ಶುಭ್ರವಾಗಿ ತೊಳೆಯಿರಿ.

18. ನಿಮ್ಮ ಕಣ್ಣಿನ ಕಪ್ಪು ಕಲೆಗಳನ್ನು ಹೋಗಲಾಡಿಸಿ
ಟೀ ಬ್ಯಾಗ್‍ಗಳನ್ನು ಬಳಸಿ ನಿಮ್ಮ ಕಣ್ಣಿನ ಸುತ್ತ ಇರುವ ಕಪ್ಪುಕಲೆಗಳನ್ನು ಹೋಗಲಾಡಿಸಿ. ಇದಕ್ಕಾಗಿ ಚಮೋಮೈಲ್ ಅಥವಾ ಗ್ರೀನ್ ಟೀ ಬ್ಯಾಗ್‍ಗಳನ್ನು ಬಳಸಿ. ಇವುಗಳಲ್ಲಿರುವ ಸಮೃದ್ಧ ಪೋಷಕಾಂಶಗಳು ನಿಮಗೆ ಹೆಚ್ಚಿನ ಲಾಭವನ್ನು ಒದಗಿಸುತ್ತವೆ.

19. ಆ ತೊಂಡೆ ಹಣ್ಣಿನಂತಹ ತುಟಿಗಳಿಗೆ
ಗುಲಾಬಿ ದಳ, ಸ್ವಲ್ಪ ಮಲೈ ಮತ್ತು ಜೇನು ತುಪ್ಪವನ್ನು ಸೇರಿಸಿ ತುಟಿಗೆ ಹಚ್ಚಿ 15 ನಿಮಿಷ ಹಾಗೆ ಬಿಡಿ. ಈ ಚಿಕಿತ್ಸೆಯು ನಿಮ್ಮ ತುಟಿಯ ಮೇಲೆ ಇರುವ ನಿರ್ಜೀವ ಚರ್ಮವನ್ನು ತೆಗೆದು ಹಾಕಿ, ನಿಮ್ಮ ತುಟಿಯನ್ನು ಕೆಂಪಗೆ ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.

20. ಕೂದಲಿಗೆ ಎಣ್ಣೆ ಹಚ್ಚಿ
ನಿಮ್ಮ ಒಡೆದ ಕೂದಲಿಗೆ ಬೆಚ್ಚಗಿನ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡಿ. ಉತ್ತಮ ಫಲಿತಾಂಶಕ್ಕಾಗಿ ಇದನ್ನು ಶುಕ್ರವಾರ ರಾತ್ರಿಯೇ ಮಾಡಿ. ಬೆಳಗ್ಗೆ ಇದಕ್ಕೆ ಸ್ವಲ್ಪ ನಿಂಬೆರಸ ಮತ್ತು ವಿನೆಗರ್ ಅನ್ನು ಹಚ್ಚಿ ಸ್ನಾನ ಮಾಡಿ. ಹೀಗೆ ಮಾಡುವುದರಿಂದ ಹೊಳೆಯುವ ಮತ್ತು ಮೃದುವಾದ ಕೂದಲನ್ನು ನಿಮ್ಮದಾಗಿಸಿಕೊಳ್ಳಬಹುದು.



Click it and Unblock the Notifications











