ಎಲ್ಲರೂ ಇಷ್ಟ ಪಡುವ ವ್ಯಕ್ತಿತ್ವ ರೂಪಿಸಲು ಸಾಧ್ಯವೇ?

By Super

ಧನಾತ್ಮ ಚಿಂತನೆಗಳ ಬಗ್ಗೆ ನಿರರ್ಗಳವಾಗಿ ಮಾತನಾಡುವುದು ಸುಲಭ. ಆದರೆ ಹೃಯಪೂರ್ವಕವಾಗಿ ಧನಾತ್ಮಕ ಚಿಂತನೆಯನ್ನು ಅಳವಡಿಸಿಕೊಳ್ಳುವುದು ಕಷ್ಟ. ಹೊರಗಿನ ನೋಟವನ್ನು ಮಾತ್ರ ನಂಬಿ ಹೊಗಳುವುದಕ್ಕಿಂತ ಮೊದಲು ಒಳಗಣ್ಣಿನಿಂದ ನೋಡಿ. ನಿಮ್ಮತ್ತ ಸಲೆಹಗಳನ್ನು ಕೇಳಿದಾಗ ಕೇವಲ ಋಣಾತ್ಮ ಸಲೆಹಗಳನ್ನು ಮಾತ್ರ ನೀಡಬೇಡಿ.

ನಿಮ್ಮನ್ನು ನೀವು ಪಾಸಿಟಿವ್ ವ್ಯಕ್ತಿ ಎಂದು ಸಾಬೀತು ಪಡಿಸಿಕೊಳ್ಳಲು ಇಲ್ಲಿದೆ ನೋಡಿ ಉಪಾಯ:

ಹೆಬ್ಬಯಕೆಯನ್ನು ಹೊಂದಿ: ಧನಾತ್ಮಕ ಆಗಲು ಬಯಸುವ ವ್ಯಕ್ತಿ ಮೊದಲು ಧನಾತ್ಮ ಚಿಂತನೆ ಬೆಳೆಸಿಕೊಳ್ಳುವ ಹೆಬ್ಬಯಕೆಯನ್ನು ಹೊಂದಿರಬೇಕು. ಧನಾತ್ಮಕತೆಯಿಂದ ಬದುಕಿನ ಗುಣಮಟ್ಟ ಹೆಚ್ಚುತ್ತದೆ ಎಂದು ಗಟ್ಟಿಯಾಗಿ ನಂಬಿದಾಗ ಮಾತ್ರ ಹೆಬ್ಬಯಕೆ ಛಲ ಮೂಡಲು ಸಾಧ್ಯ. ಧನಾತ್ಮಕ ಚಿಂತನೆ ಎನ್ನುವುದು ಒಂದು ರೀತಿಯಲ್ಲಿ ಪರಿಮಳವಿದ್ದಂತೆ, ಜನ ನಿಮ್ಮನ್ನು ನಂಬತೊಡಗುತ್ತಾರೆ , ಕೆಲವೊಂದಿಷ್ಟು ಮಂದಿ ನಿಮ್ಮನ್ನು ತೆಗಳಬಹುದು.

 Tricks To Become A Loving, Positive Person

ವಾಸ್ತವವಾದಿಯಾಗಿ: ಸುಖಾ ಸುಮ್ಮನೆ ಸಂತನಂತೆ ಪೋಸು ಕೊಡುವುದು ಬೇಡ. ಧನಾತ್ಮಕ ಚಿಂತನೆ ಎನ್ನುವುದರ ಅರ್ಥ ಋಣಾತ್ಮಕ ಭಾವನೆಗಳೇ ಇಲ್ಲವೆಂದಲ್ಲ ಅಥವಾ ಋಣಾತ್ಮಕ ಸಂದರ್ಭಗಳು ಎದುರಾಗುವುದೇ ಇಲ್ಲ ಎಂದಲ್ಲ. ಇದು ಇಡೀ ವ್ಯಕ್ತಿತ್ವದ ನಡೆಯನ್ನು ನಿರ್ಧರಿಸುತ್ತದೆ. ನಿಮ್ಮ ಅನಿಸಿಕೆಯಷ್ಟು ಸಾಧಿಸಲಾಗದಿದ್ದರೆ ಅಥವಾ ಸೋಲು ಎದುರಾದರೆ ಕುಸಿದುಹೋಗಬೇಡಿ.

ಪ್ರಯೋಗಶೀಲತೆ: ಸದಾ ಗಮನಿಸುವಂತವರಾಗಿ. ಪ್ರತಿದಿನದ ಘಟನಾವಳಿಗಳನ್ನು ಗಮನಿಸಿ ಮತ್ತು ನೀವದನ್ನು ಎಷ್ಟು ಧನಾತ್ಮಕವಾಗಿ ನಿಭಾಯಿಸಿದ್ದೀರಿ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಈ ಸಿಂಹಾವಲೋಕನ ನಿಮ್ಮನ್ನು ಹೆಚ್ಚು ಧನಾತ್ಮಕಗೊಳಿಸುತ್ತದೆ. ನೆನಪಿಡಿ, ಬೇರೆ ವ್ಯಕ್ತಿಗಳನ್ನು ನೀವು ನಂಬುವುದೂ ಕೂಡ ನಿಮ್ಮ ಬದ್ದತೆಯನ್ನು ತೋರಿಸುತ್ತದೆ.

ಮಾತು ಮತ್ತು ದೈಹಿಕ ನಡವಳಿಕೆ: ನಿಮ್ಮ ಮಾತಿನಲ್ಲಿ ಧನಾತ್ಮಕ ಶಬ್ದಗಳಿರಲಿ ಮತ್ತು ದೈಹಿಕ ಭಾಷೆಯೂ ಕೂಡ ಸ್ನೇಹಿ ಹಾಗೂ ಮಾತನಾಡಲು ಪ್ರೋತ್ಸಾಹಿಸುವಂತಿರಲಿ. ವಿನೋದದ ಸಂಗತಿಗಳಿದ್ದರೆ ನಕ್ಕು ಖುಷಿ ಪಡಿ, ಬೇರೇಯವರ ಸಾಧನೆಗೆ ಪ್ರಶಂಸೆ ನೀಡಿ, ಬೇರೇಯವರ ಕಥೆಗಳಿಗೆ ಕಿವಿಯಾಗಿ. ನಿಮ್ಮ ಸುತ್ತಮುತ್ತಲಿನವರಲ್ಲಿ ನೀವೊಬ್ಬರೇ ಎಲ್ಲವನ್ನೂ ಬಲ್ಲವರು ಮತ್ತು ಆಸಕ್ತಿದಾಯಕ ವ್ಯಕ್ತಿ ಎಂದು ಭಾವಿಸುವುದು ಬೇಡ.

ಕಂಪನಿ: ಧನಾತ್ಮಕ ಚಿಂತನೆ ಬೆಳೆಸಿಕೊಳ್ಳಲು ಮತ್ತೊಂದು ದಾರಿ ಎಂದರೆ ಆದಷ್ಟು ಧನಾತ್ಮಕ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿರಿ. ನೀವು ನಿಮ್ಮ ಹೆಚ್ಚಿನ ಸಮಯವನ್ನು ಋಣಾತ್ಮ ವ್ಯಕ್ತಿಗಳೊಂದಿಗೆ ಕಳೆದರೆ ನಿಮ್ಮ ಚಿಂತನೆಗಳೂ ಹಾಗೇ ಆಗಿಬಿಡುತ್ತವೆ. ಧನಾತ್ಮಕ, ುತ್ಸಾಹಭರಿತ ಮತ್ತು ಖುಷಿ ತುಂಬಿದ ಗೆಳೆಯರೊಂದಿಗೆ ಸಮಯ ಕಳೆಯಿರಿ.

ಚಟುವಟಿಕೆಗಳು: ಸದಾ ಸೋಮಾರಿತನದಿಂದ ಕಾವು ಕೊಡಲು ಕೂತಂತಿರಬೇಡಿ. ಸದಾ ಚಟುವಟಿಕೆಯಿಂದಿರಿ. ಜೋಕ್ ಹಂಚಿಕೊಳ್ಳಿ, ಹಿತಕರವಾದ ಸಂಗತಿಗಳನ್ನು ಹೇಳಿಕೊಳ್ಳಿ, ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ, ಕೆಲಸ ಮುಗಿದ ಮೇಲೆ ವಾಕಿಂಗ್ ಮಾಡಿ, ಆರೋಗ್ಯಕರ ಸೆಕ್ಸ್ ನಡೆಸಿ, ಸದಾ ಧನಾತ್ಮಕ ಶಕ್ತಿಯನ್ನು ಮೈಗೂಡಿಸಿಕೊಳ್ಳಿ.

ಸುಲಭವಾಗಿ ಸ್ವೀಕರಿಸಿ: ಪ್ರತಿದಿನದ ಬದುಕಿನಲ್ಲಿ ಹಲವಾರು ಶಾಕ್ ಗಳು ಎದುರಾಗುತ್ತವೆ. ಅವುಗಳಿಂದ ಆದಷ್ಟು ಶಾಕ್ ಕಡಿಮೆ ಮಾಡಿಕೊಳ್ಳಿ.ಕೆಲವೊಂದು ಸಂಗತಿಗಳನ್ನು ಬದಲಾಯಿಸಲು ಸಾದ್ಯವಿಲ್ಲ. ಅಂತಹವುಗಳನ್ನು ಹೇಗೆ ಇದೆಯೋ ಹಾಗೇ ಒಪ್ಪಿಕೊಳ್ಳಿ.

ಯೋಗ ಮತ್ತು ಧ್ಯಾನ: ನಿಮ್ಮ ಮನಸ್ಸನ್ನು ಕೇಂದ್ರೀಕರಿಸಿ ಪ್ರಾಣಾಯಾಮ ಮತ್ತು ಧ್ಯಾನ ಮಾಡಿ. ಇದರಿಂದ ಕೇವಲ ಸಂತೋಷ ಹಾರ್ಮೋನ್ ಗಳು ಉತ್ಪತ್ತಿಯಾಗೋದಿಲ್ಲ. ಜೊತೆಗೆ ನಿಮ್ಮ ಅಂತರಂಗದ ಒಳಗೆ ಜಾಗೃತಿಯೂ ಮೂಡುತ್ತದೆ. ಯೋಗ ಮಾಡುವಾಗೆಲ್ಲ ನಿಮ್ಮೊಳಗೆ ಧನಾತ್ಮಕ ಶಕ್ತಿ ಪ್ರವಹಿಸುವ ಭಾವವಾಗುತ್ತದೆ ಮತ್ತು ನಿಮ್ಮ ನರನಾಡಿ, ಮನಸ್ಸು, ಭಾವನೆಗಳಲ್ಲೂ ಉತ್ಸಾಹ ಚಿಮ್ಮುತ್ತದೆ.

ದಿನಚರಿ ಪುಸ್ತಕವನ್ನು ಬರೆಯರಿ: ದಿನದಲ್ಲಿ ನಡೆದ ಎಲ್ಲ ಸಂಗತಿಗಳ ಬದಲಿಗೆ ಕೆಲವೇ ಕೆಲವು ಧನಾತ್ಮಕ ವಿಷಯಗಳನ್ನು ಬರೆಯುವ ಹವ್ಯಾಸ ರೂಢಿಸಿಕೊಳ್ಳಿ. ಧನಾತ್ಮಕ ಅಂಶಗಳಿಗೆ ಹೆಚ್ಚು ಬೆಲೆ ಕೊಟ್ಟಷ್ಟು ಋಣಾತ್ಮಕತೆಗೆ ಜಾಗವಿಲ್ಲದಂತಾಗುತ್ತದೆ.

ಕೃತಜ್ಞತೆಯನ್ನು ಹೇಳಿ: ಸ್ನೇಹಿತರು, ತಂದೆ-ತಾಯಿ, ಏವರಿಗೆ ನ್ಯವಾದಗಳನ್ನು ಅರ್ಪಿಸಿ. ನೀವೇ ಮಾಡಿದ ಉತ್ತಮ ಶ್ರಮದಾಯಕ ಕೆಲಸಗಳಿಗೆ ನಿಮಗೆ ನೀವೆ ಥ್ಯಾಂಕ್ಸ್ ಹೇಳಿಕೊಳ್ಳಿ. ದನ್ಯವಾದಗಳನ್ನು ಹೇಳಿಕೊಳ್ಳುತ್ತಿದ್ದರೆ ವಿನೀತ ಭಾವ ಮೂಡುತ್ತದೆ.

ಈ ಎಲ್ಲ ರೂಢಿಗಳನ್ನು ಅಳವಡಿಸಿಕೊಳ್ಳಿ ಮತ್ತು ಬೇರೆಯವರು ನಿಮ್ಮಲ್ಲಿನ ಬದಲಾವಣೆಗಳನ್ನು ಗುರುತಿಸುವುದನ್ನು ನೋಡಿ.

X
Desktop Bottom Promotion