Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಚರಿತ್ರೆಯಲ್ಲಿ ನಾವು ಕಾಣುವ 10 ಕ್ರೂರ ಸ್ತ್ರೀಯರು
ಸ್ತ್ರೀ ಕರುಣಿಯ ಮೂರ್ತಿ, ತ್ಯಾಗದ ಪ್ರತಿಮೆ, ಪ್ರೀತಿಯ ಪ್ರತೀಕ, ಭೂಮಿಯಷ್ಟು ತಾಳ್ಮೆಯುಳ್ಳವಳು ಹೀಗೆ ನಾನಾ ರೀತಿಯಲ್ಲಿ ಅವಳನ್ನು ವರ್ಣಿಸಲಾಗುವುದು. ಹೆಣ್ಣಿಲ್ಲದ ಮನೆ ಸ್ಮಶಾನಕ್ಕೆ ಸಮಾನವೆಂದು ಕೂಡ ಹೇಳುತ್ತಾರೆ. ಮನೆಯಲ್ಲಿ ತಾಯಿಯಾಗಿ, ಮಗಳಾಗಿ, ಹೆಂಡತಿಯಾಗಿ, ಸಹೋದರಿಯಾಗಿ ತನ್ನ ಪಾತ್ರ ನಿರ್ವಹಿಸುವ ಸ್ತ್ರೀ ಮನಸ್ಸು ಮಾಡಿದರೆ ಏನು ಬೇಕಾದರು ಸಾಧಿಸುತ್ತಾಳೆ ಅನ್ನುವುದಕ್ಕೆ ಉದಾಹರಣೆ ಚರಿತ್ರೆ ನೋಡುವಾಗ ತಿಳಿಯುತ್ತದೆ.
ಸ್ತ್ರೀ ದೈಹಿಕವಾಗಿ ಅಲ್ಲದಿದ್ದರೂ, ಮಾನಸಿಕವಾಗಿ ಪುರುಷರಿಗಿಂತ ಹತ್ತು ಪಟ್ಟು ಬಲಶಾಲಿ ! ಹೂವಿನಂತ ಮನಸ್ಸಿನ ಹೆಣ್ಣಿಗೆ ಕಲ್ಲಿನಷ್ಟೇ ಗಟ್ಟಿ ಮನಸ್ಸನ್ನು ತಾಳಲು ಸಾಧ್ಯ. ಹೆಣ್ಣಿನ ವಕ್ರ ಬುದ್ಧಿಯ ಬಗ್ಗೆ, ಅವಳ ಸ್ವಾರ್ಥದ ಬಗ್ಗೆ ಸಾಕಷ್ಟು ಕೇಳಿರುತ್ತೀರಿ. ಇಲ್ಲಿ ನಾವು ಚರಿತ್ರೆಯ ಪುಟದಲ್ಲಿ ಕಂಡು ಬರುವ ಅತೀ ಕ್ರೂರಿಯಾದ ಸ್ತ್ರೀಯರ ಬಗ್ಗೆ ಹೇಳಿದ್ದೇವೆ ನೋಡಿ:

ರಾಣಿ ಎಲಿಜಬೆತ್
ಇಲ್ಲಿರುವ ಫೋಟೊ ನೋಡಬೇಡಿ, ಏಕೋ ಚಿತ್ರಗಾರನಿಗೆ ರಾಣಿ ಎಲಿಜಬೆತ್ ಗೆ ಇದೇ ಸರಿಯಾದ ವೇಷ ಎಂದೆನಿಸಿರಬಹುದು. ಇಂಗ್ಲೆಂಡ್ ಮತ್ತು ಐರ್ಲ್ಯಾಂಡ್ ನಲ್ಲಿ ಸಾವಿರಗಟ್ಟಲೆ ಕ್ಯಾಥೋಲಿಕ್ ಜನರನ್ನು ಕೊಲ್ಲಿಸಿದ ಕೀರ್ತಿ ಅವಳಿಗೆ ಸಲ್ಲುತ್ತದೆ. ಗುಲಾಮಗಿರಿಗೆ ಕೂಡ ಹೆಚ್ಚು ಪ್ರಾಮುಖ್ಯತೆ ನೀಡಿದ್ದಳು. ಕ್ರೂರತನದಿಂದ ಮೆರೆದ ಈ ರಾಣಿಗೆ ಕೊನೆಗೂ ತಕ್ಕ ಶಾಸ್ತಿಯಾಯಿತು. 19 ವರ್ಷ ಜೈಲು ಶಿಕ್ಷೆ ನೀಡಿ, ನಂತರ ಅವಳನ್ನು ಕೊಲ್ಲಲಾಯಿತು.

ರಾಣಿ ಮೇರಿ
ಕ್ವೀನ್ ಮೇರಿಯನ್ನು ಬ್ಲಡಿ ಮೇರಿ ಎಂದು ಕರೆದಿದ್ದು ಸರಿಯಾಗಿಯೇ ಇದೆ. ಇವಳ ಆಡಳಿತಾವಧಿ ಅಲ್ಪ ಕಾಲದವರೆಗೆ ಮಾತ್ರ ಇದ್ದರೂ 3000 ಕ್ಕೂ ಅಧಿಕ ಪ್ರೊಟೆಸ್ಟೆಂಟ್ ರನ್ನು ಕೊಲ್ಲಿಸಿದಳು.

ಎಲಿಜಬತ್ ಬಾಥೋರಿ
ಚರಿತ್ರೆಯಲ್ಲಿ ಕಂಡು ಬರುವ ಮತ್ತೊಬ್ಬ ಸೀರಿಯಲ್ ಕಿಲ್ಲರ್ ಅಂದರೆ ಎಲಿಜಬೆತ್ ಬಾಥೋರಿ. ಯುವ ತರುಣಿಯರ ರಕ್ತದಲ್ಲಿ ಸ್ನಾನ ಮಾಡುವ ಬಯಕೆಯಿಂದ ಸಾಕಷ್ಟು ತರುಣಿಯರನ್ನು ಕೊಂದ ಕ್ರೂರಿ ಸ್ತ್ರೀ.

ಮೇರಿ ಆನ್ ಕಾಟನ್
ಮೇರಿ ಆನ್ ಕಾಟನ್ 20ಕ್ಕೂ ಹೆಚ್ಚು ತನ್ನ ಆಪ್ತರನ್ನು ಕೊಂದ ಕಠಿಣ ಹೃದಯದವಳು. ಎರಡು ಬಾರಿ ಮದುವೆಯಾದ ಈಕೆ ತನ್ನ ಇಬ್ಬರು ಗಂಡಂದಿರನ್ನು ವಿಷ ಕೊಟ್ಟು ಕೊಂದವಳು. ಅಷ್ಟಲ್ಲದೆ ಅವಳ ಏಳು ಮಕ್ಕಳನ್ನು, ತಾಯಿ, ಪ್ರಿಯತಮ, ಫ್ರೆಂಡ್ ಹಾಗೂ ಇತರ ಮಕ್ಕಳನ್ನೂ ವಿಷ ಹಾಕಿ ಕೊಂದವಳು.

ಡೆಲ್ಫಿನ್ ದಿ ಲಾಲೌರೀ
ಈಕೆ ತನ್ನಲ್ಲಿ ಕೆಲಸ ಮಾಡುತ್ತಿರುವ ಗುಲಾಮರನ್ನು ಚೈನ್ ಹಾಕಿ ಬಂಧಿಸಿ ಅವರ ಭಾಗದ ಅಂಗಾಂಗಗಳನ್ನು ಕತ್ತರಿಸಿ, ಬೇರೆಯವರ ಅಂಗದ ಜೊತೆ ಇಟ್ಟು ಹೊಲಿಯುತ್ತಿದ್ದಳು. ಕೆಲವರ ನಾಲಗೆಯನ್ನು ಕೂಡ ಕತ್ತರಿಸಿದ್ದಳು.

ಬೆಲ್ಲೇ ಗನ್ನೀಸ್
ಇವಳು ಕೂಡ ಅಮೇರಿಕದ ಚರಿತ್ರೆಯಲ್ಲಿ ಕಂಡು ಬರುವ ಸೀರಿಯಲ್ ಕಿಲ್ಲರ್. ತನ್ನ ಸ್ವಾರ್ಥಕ್ಕಾಗಿ ತನ್ನ ಗಂಡ ಮತ್ತು ಮಕ್ಕಳನ್ನು ಕೊಂದಂತಹ ಸ್ವಾರ್ಥಿ.

ಜಿಯಾಂಗ್ ಕಿಂಗ್
ಚೀನಾದಲ್ಲಿ ಸಾಂಸ್ಕೃತಿಕ ಕ್ರಾಂತಿ ನಡೆದಾಗ ಅದರ ಮುಂದಾಳತ್ವ ವಹಿಸಿದ ಈಕೆ, ತನ್ನ ತತ್ವಗಳಿಗೆ ಬಗ್ಗದ ಸುಮಾರು 50,000ಕ್ಕೂ ವಿದ್ವಾಂಸರನ್ನು, ಬುದ್ಧಿ ಜೀವಿಗಳನ್ನು ಕೊಲ್ಲಿಸಿದಳು.

ಇರ್ಮಾ ಗ್ರೆಸೆ
ಈಕೆ ಕುಖ್ಯಾತ ನಾಜಿ. ನಾಜಿ ತತ್ವಕ್ಕೆ ವಿರೋಧ ವ್ಯಕ್ತ ಪಡಿಸಿದ ಜರ್ಮನಿಯರಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳವನ್ನು ನೀಡಿದ್ದಳು. ದಿನಾ ಭಾರವಾದ ಬೂಟ್ ಧರಿಸಿ, ಕೈಲ್ಲಿ ದೊಡ್ಡ ಚಾವಟಿ ಹಿಡಿದು ಬರುತ್ತಿರುವ ಇವಳನ್ನು ನೋಡಿದರೆ ಎಂತಹ ಗಂಡಸರ ಎದೆಯ ಗೂಡು ನಡುಗದೆ ಇರುತ್ತಿರಲಿಲ್ಲ.

ಇಲ್ಸ್ ಕೋಚ್
ಇವಳು ಕಾರ್ಲ್ ಕೋಚ್ ನ ಪತ್ನಿ. ನಾಜಿ ತತ್ವ ವಿರೋದಿಸುವವರನ್ನು ಶಿಕ್ಷಿಸುವ ಸೆರೆ ಶಿಬಿರದ ಅಧಿಕಾರಿ ಕಾರ್ಲ್ಸ್ ಕೋಚ್. ಈಕೆ ಸೆರೆ ಸಿಕ್ಕ ಜನರ ಮೈಗೆ ಟ್ಯಾಟೂ ಹಾಕುವುದು, ಅವರಿಗೆ ದೈಹಿಕ ಹಿಂಸೆ ಕೊಡುವುದು ಮಾಡುತ್ತಿದ್ದಳು. ಕೊನೆಗೆ ನೇಣು ಹಾಕಿಕೊಂಡು ತನ್ನ ಕ್ರೂರತನಕ್ಕೆ ಮುಕ್ತಾಯ ಹಾಡಿದಳು.

ಜೇನ್ ಥೋಫನ್
ಇವಳು ಒಂಥರಾ ಸೈಕೋ ಆಗಿದ್ದಳು. ಹುಷಾರಿಲ್ಲದವರಿಗೆ ವಿಷ ಕೊಟ್ಟು, ಅವರನ್ನು ಸಾವಿನ ಸಮೀಪಕ್ಕೆ ತಂದು, ಅವರು ಪ್ರಜ್ಞೆ ಇಲ್ಲದಿದ್ದಾಗ ಸೆಕ್ಸ್ ಸುಖ ಅನುಭವಿಸಿ, ನಂತರ ವಿಷ ಕೊಟ್ಟು ಕೊಲ್ಲುತ್ತಿದ್ದಳು.



Click it and Unblock the Notifications
