ಜಗತ್ತಿನ ಟಾಪ್ 10 ಹಾಸ್ಯಾಸ್ಪದ ಕಾನೂನುಗಳು!

ಇತ್ತೀಚೆಗೆ ಮದರಾಸ್ ಉಚ್ಚ ನ್ಯಾಯಾಲಯ ವಿವಾಹವಾಗದ ಜೋಡಿಗಳು ದೈಹಿಕ ಸಂಪರ್ಕದಲ್ಲಿದ್ದರೆ ಅಂತಹ ಜೋಡಿಗಳನ್ನು ವಿವಾಹಿತ ಜೋಡಿ ಎಂದು ಪರಿಗಣಿಸಲಾಗುವುದು ಎನ್ನುವ ಆದೇಶ ಹೊರಡಿಸಿದ್ದು, ಅದು ದೊಡ್ಡ ಸುದ್ದಿಯಾದದು ನಮಗೆಲ್ಲಾ ಗೊತ್ತೇ ಇದೆ. ಅಂತರ್ಜಾಲ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ತಾಣಗಳಲ್ಲಿ ಈ ಕಾನೂನಿಗೆ ತೀವ್ರ ವಿರೋಧ ವ್ಯಕ್ತವಾದಾಗ ಎಚ್ಚೆತ್ತ ಘನ ಪೀಠವು ಆದ ತಪ್ಪನ್ನು ಸರಿಪಡಿಸಿ ಮತ್ತೆ ಸಹಜ ಸ್ಥಿತಿಗೆ ಮರಳಿಸಿತ್ತು. ಇದರಿಂದ ಭಾರತದಲ್ಲಿ ಈ ಹಾಸ್ಯಾಸ್ಪದವಾದ ಕಾನೂನು ಜಾರಿಗೆ ಬರುವುದು ತಪ್ಪಿತು.

ಬೇರೆ-ಬೇರೆ ದೇಶದಲ್ಲಿ ಬೇರೆ-ಬೇರೆ ಕಾನೂನುಗಳಿವೆ, ಆದರೆ ಕೆಲವೊಂದು ದೇಶಗಳಲ್ಲಿ ತುಂಬಾ ವಿಚಿತ್ರವಾದ ಕಾನೂನುಗಳಿವೆ, ಅವುಗಳ ಬಗ್ಗೆ ಕೇಳಿದಾಗ ತುಂಬಾ ವಿನೂತನ ಅಂತ ಅನಿಸಿದರೂ ಆ ಕಾನೂನುಗಳು ಮಾತ್ರ ತುಂಬಾ ಭಯಂಕರವಾಗಿದೆ ಕಣ್ರೀ. ಯಾವೆಲ್ಲಾ ದೇಶದಲ್ಲಿ ವಿಚಿತ್ರವಾದ, ಹಾಸ್ಯಾಸ್ಪದವಾದ ಕಾನೂನುಗಳಿವೆ ಎಂದು ನೋಡೋಣ ಬನ್ನಿ:

1. ನೋ ಲೋ ವೇಯಿಸ್ಟ್ ಪ್ಯಾಂಟ್ - ಮಿಚಿಗನ್

1. ನೋ ಲೋ ವೇಯಿಸ್ಟ್ ಪ್ಯಾಂಟ್ - ಮಿಚಿಗನ್

ಮಿಚಿಗನ್ ನಲ್ಲಿ ಲೋ ವೇಯಿಸ್ಟ್ ಪ್ಯಾಂಟ್ ಹಾಕಬಾರದೆಂಬ ಕಾನೂನು ಇದ್ದು, ಈ ಕಾನೂನು ಸ್ವಲ್ಪ ಮಟ್ಟಿಗೆ ಸಡಿಲವಾಗಿದೆ. ಈ ಕಾನೂನು ಸಡಿಸಲು ಕಲಾವಿದರು ಮತ್ತು ಇತರರು ಸಹಕರಿಸಿದರು ಕೂಡ. ಈ ಕಾನೂನು ಜಾರಿಗೆ ಬಂದ ಹಿನ್ನಲೆ ಹೀಗಿದೆ- ಜೈಲಿನಲ್ಲಿ ಖೈದಿಗಳು ಉದ್ಡೇಶ ಪೂರ್ವಕವಾಗಿ ಈ ರೀತಿಯ ಪ್ಯಾಂಟುಗಳನ್ನು ಧರಿಸುತ್ತಿದ್ದರು. ಸಲಿಂಗ ಕಾಮ ರಹಸ್ಯ ಮಾಹಿತಿಗಳನ್ನು ಇತರ ಖೈದಿಗಳ ಜೊತೆ ವಿನಿಮಯ ಮಾಡಿಕೊಳ್ಳಲು ಅವರು ಬಳಸುವ ಸನ್ನೆ ಇದಾಗಿತ್ತು. ಆದ್ದರಿಂದ ಲೋ ವೇಯಿಸ್ಟ್ ಪ್ಯಾಂಟ್ ಧರಿಸಬಾರದೆಂಬ ಕಾನೂನು ಬಂತು, ತುಂಬಾ ವಿಚಿತ್ರವಾಗಿದೆಯೆಲ್ಲಾ?

ಈಗ ನೀವು ಹೇಳಿ ಲೋ ವೇಯಿಸ್ಟ್ ಪ್ಯಾಂಟ್ ನಿಮಗಿಷ್ಟವೇ?

2. ಸಾರ್ವಜನಿಕವಾಗಿ ಅಕ್ಷೀ.. ಅಕ್ಷೀ ಅನ್ನುವಾಗಿಲ್ಲ - ವಾಷಿಂಗ್ಟನ್

2. ಸಾರ್ವಜನಿಕವಾಗಿ ಅಕ್ಷೀ.. ಅಕ್ಷೀ ಅನ್ನುವಾಗಿಲ್ಲ - ವಾಷಿಂಗ್ಟನ್

ನೀವು ತೀವ್ರ ಫ್ಲೂ ಮತ್ತು ಶೀತದಿಂದ ಬಳಲುತ್ತಿದ್ದೀರಾ? ಭಾರತದಲ್ಲಿದ್ದೀರಾ, ಪರ್ವಾಗಿಲ್ಲ, ಆದರೆ ವಾಷಿಂಗ್ಟನ್ ನಲ್ಲಿ ಇದ್ದಿದ್ದರೆ ಮಾತ್ರ ಮನೆಯಲ್ಲಿಯೇ ಇರಬೇಕಾಗುತ್ತಿತ್ತು. ಏಕೆಂದರೆ ಸಾರ್ವಜನಿಕವಾಗಿ ನೀವು ಯಾವುದೇ ಕಾಯಿಲೆಯಿಂದ ಬಳಲುತ್ತಿರುವುದು ಗೊತ್ತಾದರೆ ವಾಷಿಂಗ್ಟನ್ ನಗರದಲ್ಲಿ ನಿಮಗೆ ದಂಡ ಅಥವಾ ಜೈಲು ಶಿಕ್ಷೆ ಖಂಡಿತ, ಸಾರ್ವಜನಿಕವಾಗಿ ಸೀನುವಂತೆಯೂ ಇಲ್ಲ. ಯಾಕೆಂದರೆ ವಾಷಿಂಗ್ಟನ್ ನಗರದಲ್ಲಿ ನಾಗರಿಕರು ತಮ್ಮ ಕಾಯಿಲೆಗಳನ್ನು ವಿಶ್ವಕ್ಕೆ ತೋರಿಸುವ ಅವಕಾಶವಿಲ್ಲ.

3. ದುಂಡಗಿದ್ದರೆ ಕಾನೂನುಬಾಹಿರ - ಜಪಾನ್

3. ದುಂಡಗಿದ್ದರೆ ಕಾನೂನುಬಾಹಿರ - ಜಪಾನ್

ಜಪಾನ್ ತನ್ನ ನಾಗರೀಕರನ್ನು ಆರೋಗ್ಯಕರವಾಗಿರಲು ಪಟತೊಟ್ಟಿದೆ, ಮತ್ತು ಅದರ ಪಾಲನೆಗೆ ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತದೆ. ಎಷ್ಟರ ಮಟ್ಟಿಗೆ ಕಟ್ಟುನಿಟ್ಟು ಅಂತೀರಾ? ಗಂಡಸರು ಅಥವಾ ಹೆಂಗಸರು ನಲವತ್ತು ವರ್ಷದ ಮೇಲೆ ಕ್ರಮವಾಗಿ 32 ಇಂಚು ಮತ್ತು 36 ಇಂಚು ಸೊಂಟಳತೆ ಮೀರುವಂತಿಲ್ಲ. ಆದರೆ ಆಶ್ಚರ್ಯಗೊಳಿಸುವ ಸಂಗತಿ ಏನಂದರೆ ಜಪಾನಿನ ಮನೆಮನೆಯ ಪುರಾತನ ಕ್ರೀಡೆ ಸುಮೋ ರೆಸ್ಟ್ಲಿಂಗ್ (ಕುಸ್ತಿ, ಮಲ್ಲಯುದ್ದ) ಮಾಡುವವರು ಮಾತ್ರ ಗುಂಡಗೆ ಇರುತ್ತಾರೆ.

4. ಪುರುಷರ ಮೇಲೆ ಚಾಕು ಎಸೆಯುವ ಕಾನೂನು

4. ಪುರುಷರ ಮೇಲೆ ಚಾಕು ಎಸೆಯುವ ಕಾನೂನು

ಒಂದು ರೀತಿಯಲ್ಲಿ ಚಾಕು ಎಸೆಯುವುದು ಕಾನೂನು ಬಾಹಿರವಾಗಿದ್ದರೂ ಕಾನಾಸ್ ನಲ್ಲಿ ಗೆರೆಯಿರುವ ಬಟ್ಟೆ ಧರಿಸಿದ ಪುರುಷರ ಮೇಲೆ ಚಾಕು ಎಸೆಯುವುದು ಅಪರಾಧವಲ್ಲ. ಈ ಹಾಸ್ಯಾಸ್ಪದ ಕಾನೂನು ಗೆರೆ ಇರುವ ಡ್ರೆಸ್ ನಲ್ಲಿ ಪುರುಷರನ್ನು ನೋಡಿ ಬೋರು ಹೊಡೆದು ಈ ರೀತಿ ಚಾಕು ಎಸೆಯುವುದನ್ನು ಆರಂಭಿಸಿದರೇನೋ! ಒಂದು ವೇಳೆ ಅಲ್ಲಿಗೆ ಹೋದರೆ ಗೆರೆ ಇರುವ ಡ್ರೆಸ್ ಧರಿಸಬೇಡಿ ಅನ್ನುವುದೇ ನಮ್ಮ ಸಲಹೆ.

5. ಅರೆಬೆತ್ತಲೆಯಾಗಿ ಮೀನು ಮಾರಾಟಕ್ಕೆ ಅವಕಾಶ

5. ಅರೆಬೆತ್ತಲೆಯಾಗಿ ಮೀನು ಮಾರಾಟಕ್ಕೆ ಅವಕಾಶ

ಮತ್ತೊಂದು ಹಾಸ್ಯಾಸ್ಪದ ಕಾನೂನು ಪಟ್ಟಿ ಮಾಡಬಹುದಾದರೆ, ಲಿವರ್ ಪೂಲ್ ನಲ್ಲಿ (Liverpool) ಮಹಿಳೆಯರು ಆತ್ಮ ಸಂತೋಷವಾಗಿ ತನ್ನ ಆಸ್ತಿಯನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದು ಕಾನೂನು ಬಾಹಿರ. ಆದರೆ ಮೀನು ಮಾರಾಟ ಮಾಡಲು ಬರುವ ಮಹಿಳೆಯರು ಮಾರುಕಟ್ಟೆಯಲ್ಲಿ ಅರೆಬೆತ್ತಲೆಯಾಗಿರಬಹುದು. ಕೆಲವರು ಹೇಳುವ ಪ್ರಕಾರ ಲಿವರ್ ಪೂಲಿನಲ್ಲಿ ಮಾರುಕಟ್ಟೆಗೆ ವ್ಯಾಪಾರ ಮಾಡಲು ಬರುವವರನ್ನು ಸೆಳೆಯಲು ಈ ರೀತಿಯ ತಂತ್ರ ಬಳಸುತ್ತಿದ್ದಾರೆ.

6. ನಕಲಿ ಡ್ರಗ್ಸ್ ಮಾಡಿದರೆ ದೊಡ್ಡ ಅಪರಾಧ -ಆರಿಜೋನಾ

6. ನಕಲಿ ಡ್ರಗ್ಸ್ ಮಾಡಿದರೆ ದೊಡ್ಡ ಅಪರಾಧ -ಆರಿಜೋನಾ

ಮಾದಕ ವಸ್ತುಗಳ ಮಾರಾಟ ಕ್ರೈಂ, ಅದರಲ್ಲೂ ನಕಲಿ ಮಾದಕ ವಸ್ತುಗಳನ್ನು ಮಾರಾಟ ಮಾಡಿದರೆ ಮಹಾಪರಾಧ ಎಂಬ ಕಾನೂನು -ಆರಿಜೋನಾದಲ್ಲಿದೆ. ಈ ಕಾನೂನು ಹೇಗೆ ಬಂತೆಂದರೆ ಒಬ್ಬ ವ್ಯಕ್ತಿ ಡ್ರಗ್ಸ್ ಎಂದು ಖರೀದಿ ಮಾಡಿದ್ದು ಮುಖಕ್ಕೆ ಹಚ್ಚುವ ಪೌಡರ್ ಆಗಿತ್ತು, ಅಲ್ಲಿಂದ ಈ ರೀತಿಯ ವಿಚಿತ್ರವಾದ ಕಾನೂನು ಜಾರಿಗೆ ಬಂತು.

7. ಪೂರ್ಣವಾಗಿರದಿದ್ದರೆ ಪಾವತಿಸ ಬೇಡಿ - ಡೆನ್ಮಾರ್ಕ್

7. ಪೂರ್ಣವಾಗಿರದಿದ್ದರೆ ಪಾವತಿಸ ಬೇಡಿ - ಡೆನ್ಮಾರ್ಕ್

ಡೆನ್ಮಾರ್ಕ್ ನಲ್ಲಿ ತಿನ್ನುವವನು ತೃಪ್ತಿಯಾಗಿದ್ದರೆ ಮಾತ್ರ ಪೂರ್ತಿ ದುಡ್ಡನ್ನು ಪಾವತಿಸಬೇಕು. ಇಲ್ಲದಿದ್ದರೆ ಆತ ಯಾವುದೇ ಕಾರಣಕ್ಕೂ ದುಡ್ಡು ಪಾವತಿಸದೇ ಮುಂದಕ್ಕೆ ನಡೆಯಬಹುದು. ನಮ್ಮಲ್ಲಿ ಈ ಕಾನೂನು ಇದ್ದರೆ ಹೋಟೆಲ್ ಗಳೆಲ್ಲಾ ಮುಚ್ಚಿ ಹೋಗುತ್ತಿತ್ತೇನೋ ಅಲ್ವಾ?

8. ಕಳ್ಳ ಪೋಲಿಸರಿಗೆ ಮಾಹಿತಿ ನೀಡಿ ಕಳ್ಳತನ ಮಾಡಬೇಕು

8. ಕಳ್ಳ ಪೋಲಿಸರಿಗೆ ಮಾಹಿತಿ ನೀಡಿ ಕಳ್ಳತನ ಮಾಡಬೇಕು

ವಾಷಿಂಗ್ಟನ್ ನಗರದಲ್ಲಿರುವ ಕಾನೂನು ಬಗ್ಗೆ ಕೇಳಿದರೆ ನೀವು ಬಿದ್ದು- ಬಿದ್ದು ನಗುವಿರಿ. ಅಲ್ಲಿ ಕಳ್ಳತನ ಮಾಡುವ ಮುಂಚೆ ಕಳ್ಳ ಪೋಲಿಸರಿಗೆ ಮಾಹಿತಿ ನೀಡಿ ಮಾಡಬೇಕೆಂಬ ಕಾನೂನು ಇದೆ. ಅಲ್ಲಿದೆ ಎಷ್ಟು ದೋಚಲು ಸಂಚು ಹೂಡಿದ್ದಾರೆ ಅನ್ನುವುದನ್ನು ಕೂಡ ಹೇಳಬೇಕು.

9. ರಾಯಲ್ ವಿಶೇಷ ಅಧಿಕಾರ 1324 - ಗ್ರೇಟ್ ಬ್ರಿಟನ್

9. ರಾಯಲ್ ವಿಶೇಷ ಅಧಿಕಾರ 1324 - ಗ್ರೇಟ್ ಬ್ರಿಟನ್

ಗ್ರೇಟ್ ಬ್ರಿಟನ್ ನಲ್ಲಿ ಸ೦ವಿಧಾನಾತ್ಮಕವಾಗಿ ಪರಿಚ್ಛೇಧ 1324 ಪರಿಚ್ಛೇಧದ ಪ್ರಕಾರ ಯಾವುದೇ ರಾಯಲ್ ಕುಟುಂಬಕ್ಕೆ ಸೇರಿದ ಸಮುದ್ರದಲ್ಲಿ ದೊಡ್ಡ ಮೀನು ದೊರೆತರೆ ಅದನ್ನು ರಾಜಮನೆತನದವರೆಗೆ ಕೊಡಬೇಕು . ಅದರರ್ಥ, ಆ ಸಮುದ್ರದಿಂದ ದೊಡ್ಡ ತಿಮಿಂಗಿಲವನ್ನೂ ಹಿಡಿದರೂ ಇತರರು ತೆಗೆದುಕೊಂಡು ಹೋಗುವಂತಿಲ್ಲ ಬದಲಿಗೆ ರಾಯಲ್ ಕುಟುಂಬವನ್ನು ಪ್ರತಿನಿಧಿಸುವ ಅಧಿಕಾರಿಗಳಿಗೆ ಹಸ್ತಾಂತರಿಸಬೇಕು. ಅಷ್ಟೊಂದು ದೊಡ್ಡ ಮೀನನ್ನು ರಾಜಮನೆತನದವರೆಗೆ ಮಾತ್ರ ತಿಂದು ಮುಗಿಸಲು ಸಾಧ್ಯವೇ?

10. ಹಸ್ತಮೈಥುನ ಮಾಡುವವರಿಗೆ ಶಿರಚ್ಚೇದನ - ಇಂಡೋನೇಷ್ಯಾ

10. ಹಸ್ತಮೈಥುನ ಮಾಡುವವರಿಗೆ ಶಿರಚ್ಚೇದನ - ಇಂಡೋನೇಷ್ಯಾ

ಇಂಡೋನೇಷ್ಯಾದಲ್ಲಿ ಹಸ್ತಮೈಥುನ ಮಾಡಿಕೊಳ್ಳುವುದು ಕಾನೂನುಬಾಹಿರ. ಸ್ನಾನದ ಕೋಣೆಯಲ್ಲಿ ಈ ಕಾನೂನು ಉಲ್ಲಂಘಿಸುವವರನ್ನು ಹೇಗೆ ಕಂಡು ಹಿಡಿಯುವುದು ಅನ್ನುವುದೇ ಈ ಕಾನೂನಿಗೆ ಇರುವ ದೊಡ್ಡ ಸವಾಲಾಗಿದೆ.

X
Desktop Bottom Promotion