Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸರಳ ಡ್ರೆಸ್ಸಿಂಗ್ ನಲ್ಲಿ ಮದುಮಗಳಾದ ವಿದ್ಯಾ ಬಾಲನ್
ಡರ್ಟಿ ಸಿನಿಮಾದ ಮುಖಾಂತರ ಜನಪ್ರಿಯತೆಯ ಉತ್ತುಂಗಕ್ಕೇರಿದ ವಿದ್ಯಾ ಬಾಲನ್ ಮದುವೆಯಾಗಿ ಹೊಸ ಜೀವನಕ್ಕೆ ಅಡಿಯಿಡುತ್ತಿದ್ದಾರೆ. ಈ ತಮಿಳು ಹುಡುಗಿ ಪಂಜಾಬಿ ಹುಡುಗನಾದ ರಾಯ್ ಕಪೂರ್ ನ ಕೈ ಹಿಡಿಯುತ್ತಿದ್ದಾರೆ. ಇವರ ಮದುವೆಯನ್ನು ಪಂಜಾಬಿ ಮತ್ತು ತಮಿಳು ಮಿಶ್ರಿತ ಸಂಪ್ರದಾಯದ ಪ್ರಕಾರ ಮಾಡಲಾಗುತ್ತಿದೆ.
ಸಂಗೀತ್ ಸೆರ್ಮನಿ ಪಂಜಾಬಿ ಸಂಪ್ರದಾಯದಂತೆ ನಡೆಯಿತು. ಮದುವೆ ಕೂಡ ಪಂಜಾಬಿಯರ ಸಂಪ್ರದಾಯದಂತೆ ಮಾಡಲಾಗುವುದು. ಸಂಗೀತ್ ಸೆರ್ಮನಿಯಲ್ಲಿ ವಿದ್ಯಾ ಬೆಂಗಾಲಿ ಸೀರೆಯಲ್ಲಿ ಉತ್ತರ ಭಾರತದ ಕಡೆಯವಳಂತೆ ಕಾಣುತ್ತಿದ್ದಳು.
ಸಂಗೀತ್ ಸೆರ್ಮನಿಯಲ್ಲಿ ವಿದ್ಯಾಳ ಡ್ರೆಸ್ಸಿಂಗ್ , ಹೇರ್ ಸ್ಟೈಲ್ , ಮೇಕಪ್ ಎಲ್ಲವೂ ತುಂಬಾ ಸರಳವಾಗಿದೆ, ವಿದ್ಯಾ ಸಿಂಪ್ಲಿಸಿಟಿಗೆ ಹೆಚ್ಚು ಒತ್ತು ನೀಡಿದಂತೆ ಕಾಣುತ್ತಿದೆ. ಏಕೆಂದರೆ ಸಂಗೀತ ಸೆರ್ಮನಿಯಲ್ಲಿ ವಿದ್ಯಾ ಸರಳ ಮತ್ತು ಸುಂದರವಾಗಿ ಕಾಣಿಸಿಕೊಂಡಿದ್ದು ಹೀಗೆ.

ಹಳದಿ ಬಣ್ಣದ ಸೀರೆಯಲ್ಲಿ ಮದುಮಗಳು
ವಿದ್ಯಾ ಬಾಲನ್ ಹಳದಿ ಬಣ್ಣದ ಸೀರೆಯನ್ನು ಬೆಂಗಾಲಿ ಸ್ಟೈಲ್ ನಲ್ಲಿ ಉಟ್ಟಿದ್ದರು. ಮೆಹಂದಿಯಿಂದ ಅಲಂಕರಿಸಿದ ಕೈಯನ್ನು ತೋರಿಸುತ್ತಾ ವಿದ್ಯಾ ಕ್ಯಾಮೆರಾಕ್ಕೆ ಪೋಸು ಕೊಟ್ಟಿದ್ದು ಹೀಗೆ.

ಮೆಹಂದಿಯ ಅಲಂಕಾರ
ಮದುವೆಗೆ ವಿದ್ಯಾ ತುಂಬಾ ಸರಳವಾದ ಮೆಹಂದಿ ವಿನ್ಯಾಸವನ್ನು ಹಾಕಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಮದು ಮಗಳು ಆಕರ್ಷಕ ವಿನ್ಯಾಸದಲ್ಲಿ ಮೆಹಂದಿಯನ್ನು ಹಾಕಿಸಿಕೊಳ್ಳುತ್ತಾಳೆ. ಆದರೆ ವಿದ್ಯಾ ಮಾತ್ರ ಸರಳವಾಗಿ ಹಾಕಿಸಿಕೊಂಡಿದ್ದು, ಸಾಂಪ್ರದಾಯಕವಾದ ಲುಕ್ ನಿಂದ ಮಿಂಚುತ್ತಿದ್ದಾರೆ.

ಆಭರಣ ಚೆಲುವೋ, ನಾ ಚೆಲುವೊ
ಹೂವಿನ ವಿನ್ಯಾಸವಿರುವ ಆಭರಣಗಳನ್ನು ಧರಿಸಿರುವ , ತುಂಬಾ ಸರಳವಾಗಿ ಹಾಗೂ ಆಕರ್ಷಕವಾಗಿ ಕಾಣುತ್ತಿದ್ದಾರೆ.

ಕೂದಲಿನ ವಿನ್ಯಾಸ
ಸಂಗೀತ್ ಸೆರ್ಮನಿಗೆ ವಿದ್ಯಾ ಸರಳವಾದ ಕೂದಲಿನ ವಿನ್ಯಾಸವನ್ನು ಮಾಡಿಸಿಕೊಂಡಿದ್ದರು. ಎಲ್ಲಾ ವಿಷಯದಲ್ಲೂ ಸಿಂಪಲ್ ಮಂತ್ರವನ್ನು ಅನುಸರಿದ್ದಾರೆ ಅಂತೆ ಕಾಣುತ್ತೆ.

ಮನೆಯವರ ಜೊತೆ
ತನ್ನ ಮದುವೆ ಸಮಾರಂಭದಲ್ಲಿ ವಿದ್ಯಾ ತನ್ನ ಮನೆಯವರೊಂದಿಗೆ ಕಾಣಿಸಿಕೊಂಡಿದ್ದು ಹೀಗೆ.

ಚಿರ ಯೌವನ ತಾರೆ
ಚಿರ ಯೌವನ ತಾರೆ ರೇಖಾ ಈ ಸಮಾರಂಭಕ್ಕೆ ಬಂದಿದ್ದರು. ಹಸಿರು ಬಣ್ಣದ ಸೀರೆಯಲ್ಲಿ ರೇಖಾ 50ರಲ್ಲೂ ಯೌವನದ ಕಳೆಯಿಂದ ಮಿಂಚುತ್ತಿದ್ದಾರೆ!

ನಿಶ್ಚಿತಾರ್ಥದ ಉಂಗುರ
ಈಗೆಲ್ಲಾ ಸೆಲೆಬ್ರಟಿಗಳು ನಿಶ್ಚತಾರ್ಥಕ್ಕೆ ವಜ್ರದ ಉಂಗುರವನ್ನು ಹಾಕುತ್ತಾರೆ. ಆದರೆ ವಿದ್ಯಾಳ ನಿಶ್ಚಿತಾರ್ಥ ಉಂಗುರ ಚಿನ್ನದಾಗಿದೆ. ಈ ಉಂಗುರ ದೊಡ್ಡದಾಗಿದ್ದು ಹಳೆಯ ಫ್ಯಾಷನ್ ಮರುಕಳಿಸಿದಂತೆ ತೋರುತ್ತದೆ.

ಮದುಮಗ, ಮದುಮಗಳು
ಮದುವೆಗೆ ಮುನ್ನ ಮದುಮಗ ಮತ್ತು ಮದುಮಗಳು ಜೋಡಿಯಾಗಿ ಕಾಣಿಸಿಕೊಂಡಿದ್ದು ಹೀಗೆ.



Click it and Unblock the Notifications
