Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಫೇಸ್‌ಬುಕ್ ಜನಕನ ಬಗ್ಗೆ ಇಂಟ್ರೆಸ್ಟಿಂಗ್ ವಿಷ್ಯಗಳು
ಫೇಸ್‌ಬುಕ್ ಇಂದು ಸರ್ವವ್ಯಾಪ್ತಿ. ಇಂಟರ್ ನೆಟ್ ಓಪನ್ ಮಾಡಿದ ತಕ್ಷಣ ಒಮ್ಮೆ ಫೇಸ್ ಬುಕ್ ಗೆ ಭೇಟಿ ಕೊಟ್ಟು ನಂತರ ಮುಂದಿನ ಕೆಲಸಕ್ಕೆ ಅಣಿಯಾಗುವುದು ಹೆಚ್ಚಿನವರ ದಿನಚರಿಯಾಗಿದೆ. ಗೆಳೆತನಕ್ಕೆ, ಜಗಳಕ್ಕೆ, ಚರ್ಚೆಗೆ ಫೇಸ್‌ಬುಕ್ ಮುಕ್ತ ವೇದಿಕೆಯಾಗಿದೆ.
ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಝುಕರ್ ಬರ್ಗ್ 2004ರ ಇಸವಿಯಲ್ಲಿ ಈ ಸಾಮಾಜಿಕ ಜಾಲವನ್ನು ಜಗತ್ತಿಗೆ ಪರಿಚಯಿಸಿದರು. ಅವರ ಹುಟ್ಟುಹಬ್ಬದ ದಿನವಾದ ಇಂದು ಅವರ ಬಗೆಗಿನ ಕೆಲವು ಆಸಕ್ತಿದಾಯಕ ವಿಷಯಗಳನ್ನು ತಿಳಿದುಕೊಳ್ಳೋಣ.

ಕಾಲೇಜಿಗೆ ಅರ್ಧದಲ್ಲೇ ಗುಡ್ ಬೈ: ಓದಿದರೆ ಮಾತ್ರ ಎತ್ತರಕ್ಕೆ ಬೆಳೆಯಬಹುದು ಅನ್ನುವುದಕ್ಕೆ ಅಪವಾದ ಮಾರ್ಕ್ ಝುಕರ್ ಬರ್ಗ್. ಇವರು ಫೇಸ್ ಬುಕ್ ನೆಡೆಗೆ ಆಕರ್ಷಿತರಾಗುವ ಮೊದಲು ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಕೋರ್ಸ್ ಕಂಪ್ಲಿಟ್ ಮಾಡುವ ಮುನ್ನವೇ ಕಾಲೇಜಿಗೆ ಗುಡ್ ಬೈ ಹೇಳಿದ್ರು. ಸ್ವೀವ್ ಜಾಬ್, ಬಿಲ್ ಗೇಟ್ಸ್ ಕೂಡ ಓದನ್ನು ಅರ್ಧದಲ್ಲಿ ಮೊಟಕುಗೊಳಿಸಿದ್ದರು.
ಪ್ರಪಂಚದಲ್ಲಿ ಶ್ರೀಮಂತರದಲ್ಲಿ 14 ಸ್ಥಾನ: ಇವರು ಪ್ರಪಂಚದ ಅತೀ ಚಿಕ್ಕ ವಯಸ್ಸಿನಲ್ಲೇ ಕೋಟ್ಯಧಿಪತಿಯಾಗಿದ್ದು, ಪ್ರಪಂಚದ ಶ್ರೀಮಂತರಲ್ಲಿ 14 ಸ್ಥಾನದಲ್ಲಿದ್ದಾರೆ.
ಆರಂಭದಲ್ಲಿ ಫೇಸ್ ಬುಕ್ ಖಾಸಗಿಯಾಗಿತ್ತು, ಮುಕ್ತವಾಗಿರಲಿಲ್ಲ: ಇವರು ಮೊದಲು ಹಾರ್ವಾರ್ಡ್ ವಿಶ್ವವಿಧ್ಯಾನಿಲಯದಲ್ಲಿ ಓದುತ್ತಿರುವಾಗ 'ಫೇಸ್ ಮಾಶ್' ಅಂತ ಪ್ರಾರಂಭಿಸಿದ್ದರು. ಇದರಲ್ಲಿ ವಿಧ್ಯಾರ್ಥಿಗಳು ತಮ್ಮ ಪ್ರೊಫೈಲ್ ಪಿಕ್ಚರ್ (ವ್ಯಕ್ತಿ ಚಿತ್ರ) ಹಾಕಬಹುದಾಗಿತ್ತು. ಆದರೆ ಈ ಪ್ರಯತ್ನ ಕಾಲೇಜಿನಲ್ಲಿ ಜನಪ್ರಿಯವಾಗಲಿಲ್ಲ. ನಂತರ ಫೇಸ್ ಬುಕ್ ಪ್ರಾರಂಭಿಸಿದರು. ಅದು ಗೆಳೆತನಕ್ಕೆ ಮತ್ತು ಸಂವಹನಕ್ಕೆ ಹೊಸ ವೇದಿಕೆಯಾಯಿತು.
ವರ್ಣ ಅಂಧತ್ವ: 28 ವರ್ಷದ ಮಾರ್ಕ್ಗೆ ವರ್ಣ ಅಂಧತ್ವ ಸಮಸ್ಯೆ ಇದೆ. ಅದರಿಂದ ಅವರು ತಮ್ಮ ಸೈಟ್ ಅನ್ನು ನೀಲಿ ಬಣ್ಣದಲ್ಲಿ ಆಯ್ಕೆ ಮಾಡಿದರು. ಏಕೆಂದರೆ ಆ ಒಂದು ಬಣ್ಣ ಮಾತ್ರ ಅವರಿಂದ ಗುರುತಿಸಲು ಸಾಧ್ಯ.



Click it and Unblock the Notifications
