Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ವಿಶ್ವದಲ್ಲಿಯೇ ದುಬಾರಿಯಾದ 5 ನಗರಗಳು
ವಿದೇಶ ಪ್ರಯಾಣ ಮಾಡಬೇಕೆಂಬ ಆಸೆ ಹೆಚ್ಚಿನವರಲ್ಲಿ ಇರುತ್ತದೆ. ಅದರಲ್ಲೂ ಅಮೇರಿಕ, ಇಗ್ಲೆಂಡ್, ಫ್ರಾನ್ಸ್, ಸಿಂಗಾಪುರ್ ಗಳಿಗೆ ಭೇಟಿ ನೀಡುವ ಅವಕಾಶ ಸಿಕ್ಕಿದರೆ ತುಂಬಾ ಖುಷಿಪಡುತ್ತೇವೆ. ಆದರೆ ಹೊರದೇಶಕ್ಕೆ ಹೋಗುವಾಗ ಅಲ್ಲಿಯ ಜೀವನ ಶೈಲಿ ಹೇಗಿದೆ ಎಂದು ತಿಳಿದುಕೊಳ್ಳುವುದು ಕೂಡ ಒಳ್ಳೆಯದು.
ಸಾಮಾನ್ಯವಾಗಿ ವಿಶ್ವದಲ್ಲಿ ದುಬಾರಿಯಾದ ರಾಷ್ಟ್ರಗಳೆಂದರೆ ಅಮೇರಿಕ, ಇಂಗ್ಲೆಂಡ್, ಫ್ರಾನ್ಸ್ ಅಂತ ಯೋಚಿಸುತ್ತೇವೆ. ಆದರೆ ಇವೆಲ್ಲಾ ಶ್ರೀಮಂತ ರಾಷ್ಟ್ರಗಳೆನ್ನುವುದು ನಿಜ, ಆದರೆ ದುಬಾರಿ ರಾಷ್ಟ್ರಗಳಲ್ಲ! ಆದ್ದರಿಂದ ದುಬಾರಿ ರಾಷ್ಟ್ರಗಳಿಗೆ ಭೇಟಿ ಕೊಟ್ಟು ಅವರ ಜೀವನ ಶೈಲಿ ನೋಡಬೇಕೆಂದು ಬಯಸಿದರೆ ಅಮೇರಿಕ, ಲಂಡನ್ ಬದಲು ಈ ಕೆಳಗಿನ ರಾಷ್ಟ್ರಗಳಿಗೆ ಭೇಟಿ ಕೊಡಬೇಕು.

1. ಜಪಾನ್
ಇಲ್ಲಿಯ ಜೀವನ ಶೈಲಿ ತುಂಬಾ ದುಬಾರಿಯಾಗಿದೆ. ಜನರು ರೋಬಟ್ ಗಳ ರೀತಿಯಲ್ಲಿ ಕೆಲಸ ಮಾಡುತ್ತಾರೆ. ಇಲ್ಲಿ ಬಂದು ಇಲ್ಲಿಯ ಜೀವನ ಶೈಲಿಯನ್ನು ಅನುಭವಿಸಲು ಇವರಂತೆಯೇ ರೋಬಟ್ ಗಳಂತೆ ದುಡಿಯಬೇಕು. ಇಲ್ಲಿ ಒಂದು ಕಲ್ಲಂಗಡಿ ಹಣ್ಣಿನ ಬೆಲೆ ಎಷ್ಟು ಗೊತ್ತೆ. ಕೇವಲ 50 ಡಾಲರ್!
ಇಲ್ಲಿ ಪೆಟ್ರೋಲ್ ಬೆಲೆ ಭಾರತಕ್ಕಿಂತ 7 ಪಟ್ಟು ದುಬಾರಿಯಾಗಿದೆ.

2. ಸ್ವಿಜರ್ಲೆಂಡ್
ಜಿನಿವಾ ಪ್ರಂಚದಲ್ಲಿಯೇ ದುಬಾರಿಯಾದ ಸ್ಥಳವಾಗಿದೆ. ಅಲ್ಲಿ ಸುತ್ತಾಡಿ ಬರಬೇಕೆಂದು ಸ್ವಿಸ್ ಬ್ಯಾಂಕ್ ನಲ್ಲಿ ಅಕೌಂಟ್ ಇರುವಂತಹ ವ್ಯಕ್ತಿಗೆ ಮಾತ್ರ ಸಾಧ್ಯ. ಅಷ್ಟರ ಮಟ್ಟಿಗೆ ದುಬಾರಿಯಾದ ಸ್ಥಳವಾಗಿದೆ.
ಇಲ್ಲಿ ಪೆಟ್ರೋಲ್ ಬೆಲೆ ಜಪಾನಿಗಿಂತ ಸ್ವಲ್ಪ ಕಡಿಮೆಯಿದ್ದರು ಪ್ರಯಾಣ ಮಾತ್ರ ದುಬಾರಿಯಾಗಿರುತ್ತದೆ.

3. ಸಿಂಗಾಪುರ್
ಈ ಸುಂದರ ದೇಶಕ್ಕೆ ಹೋಗಿ ಬರಬೇಕೆಂದರೆ ಜೇಬಿನಲ್ಲಿ ಸಾಕಷ್ಟು ದುಡ್ಡಿದ್ದರೆ ಮಾತ್ರ ಸಾಧ್ಯ. ಇಲ್ಲಿ ಬಟ್ಟೆಗಳು ಕಡಿಮೆ ದರದಲ್ಲಿ ದೊರೆಯುತ್ತದೆ ಆದರೆ ಹೋಟೆಲ್ ರೂಂಗಳು ತುಂಬಾ ದುಬಾರಿಯಾಗಿರುತ್ತವೆ. ಇಲ್ಲಿಗೆ ಹೋದರೆ ರೆಸ್ಟೋರೆಂಟ್ ಆಹಾರಗಳು ದುಬಾರಿಯಾಗಿರುವುದರಿಂದ ಹೋಗುವ ಬದಲು ಬೀದಿ ಬದಿಯ ಆಹಾರಗಳನ್ನು ತಿನ್ನವುದು ಒಳ್ಳೆಯದು.
ಇಲ್ಲಿ ಪೆಟ್ರೋಲ್ ಬೆಲೆ ಜಪಾನಿಗಿಂತ ದುಬಾರಿಯಾಗಿದೆ.

4. ನಾರ್ವೆ
ಈ ಪ್ರದೇಶಗಳು ನೋಡಲು ತುಂಬಾ ಸುಂದರವಾಗಿರುತ್ತದೆ ಆದರೆ ಇಲ್ಲಿಗೆ ಹೋಗಿ ಬರುವುದೆಂದರೆ ಅಷ್ಟೇ ದುಬಾರಿ ಕೂಡ. ಇಲ್ಲಿಯ ಟ್ರೈನ್ ಟಿಕೆಟ್ ನಮ್ಮ ಇಲ್ಲಿನ ಫ್ಲೈಟ್ ಟಿಕೆಟ್ ಗೆ ಸಮವಾಗಿರುತ್ತದೆ.

5. ತೈವಾನ್
ಇತರ ಯೂರೋಪಿಯನ್ ದೇಶಗಳಿಗೆ ಹೋಲಿಸಿದರೆ ತೈವಾನ್ ನಲ್ಲಿ ಜೀವನ ಶೈಲಿ ತುಂಬಾ ದುಬಾರಿ. ಇಲ್ಲಿ ಹೋಟೆಲ್ ದರ ಹಾಗೂ ಸಾರಿಗೆಯ ದರ ತುಂಬಾ ದುಬಾರಿಯಾಗಿದೆ.



Click it and Unblock the Notifications
