Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಮುಕ್ಕಾಲು ಪ್ಯಾಂಟ್ ಗಳು ನೀಡುತ್ತೆ ಫ್ಯಾಷನೇಬಲ್ ಲುಕ್
ಕಾಲಗಳು ಬದಲಾದಂತೆ ನಮ್ಮ ದಿರಿಸು ಮತ್ತು ಫ್ಯಾಷನ್ ಬದಲಾಗುತ್ತದೆ. ಸೆಕೆಗಾಲದಲ್ಲಿ ಹತ್ತಿ ಬಟ್ಟೆ ಧರಿಸಲು ಹಿತ ಅನಿಸಿದರೆ ಮಳೆ ಮತ್ತು ಚಳಿಗಾಲದಲ್ಲಿ ಉಣ್ಣೆ ಬಟ್ಟೆ ಧರಿಸಿ ಮೈಯನ್ನು ಬೆಚ್ಚಗೆ ಇಡುತ್ತೇವೆ. ಆದರೆ ಪ್ಯಾಂಟ್ ಮಾತ್ರ ಎಲ್ಲಾ ಕಾಲದಲ್ಲಿ ಧರಿಸಲು ಇಷ್ಟಪಡುತೇವೆ. ಪ್ಯಾಂಟ್ ಧರಿಸಿದರೆ ತುಂಬಾ ಕಂಫರ್ಟ್ (ಆರಾಮದಾಯಕ) ಅನಿಸುವುದು. ಆದ್ದರಿಂದ ಹದಿಹರೆಯದ ಹೆಣ್ಣುಮಕ್ಕಳು ಮಾತ್ರವಲ್ಲ ಮದುವೆಯಾದ ಮಹಿಳೆಯರು ಕೂಡ ಪ್ಯಾಂಟ್ ಧರಿಸುವುದನ್ನು ಇಷ್ಟಪಡುತ್ತಾರೆ. ಅದರಲ್ಲೂ 3/4th ಪ್ಯಾಂಟ್ ಅಂದರೆ ಮಂಡಿಗಿಂತ ಸ್ವಲ್ಪ ಕೆಳಗೆ ಇರುವ ಪ್ಯಾಂಟ್ ಮತ್ತೆ ಜನಪ್ರಿಯತೆಯನ್ನು ಗಳಿಸುತ್ತಿದೆ, ಯುವತಿಯರು ಶಾಪಿಂಗ್ ಹೋಗುವಾಗ, ಪಿಕ್ ನಿಕ್ ಹೋಗುವಾಗ ಅಥವಾ ಔಟಿಂಗ್ ಹೋಗುವಾಗ 3/4th ಪ್ಯಾಂಟ್ ಧರಿಸುವುದು ಫ್ಯಾಷನ್ ಆಗಿದೆ. ಇಂತಹ ಪ್ಯಾಂಟ್ ಗಳಲ್ಲಿ ಈ ಕೆಳಗಿನ ವಿನ್ಯಾಸದ ಪ್ಯಾಂಟ್ ಧರಿಸಿದರೆ ತುಂಬಾ ಫ್ಯಾಷನೇಬಲ್ ಆಗಿ ಕಾಣುವುದರಿಂದ ಇಂತಹ ಪ್ಯಾಂಟ್ ಧರಿಸಲು ಇಷ್ಟಪಡುತ್ತೇವೆ.

ಫ್ಯಾಷನೇಬಲ್ ಮುಕ್ಕಾಲು ಪ್ಯಾಂಟ್:
ಕಾರ್ಗೋ ಪ್ಯಾಂಟ್: 3/4th ಕಾರ್ಗೋ ಪ್ಯಾಂಟ್ ತುಂಬಾ ಆಕರ್ಷಕವಾಗಿ ಕಾಣುವುದರ ಜೊತೆ ಧರಿಸಿದರೆ ಆರಾಮದಾಕವಾಗಿರುವುದು. ಈ ಪ್ಯಾಂಟ್, ಟಿ ಶರ್ಟ್ ಧರಿಸಿ ಕಾಲಿಗೆ ಸ್ಪೋರ್ಟ್ಸ ಶೂ ಧರಿಸಿದರೆ ಸ್ಪೋರ್ಟಿ ಲುಕ್ ಸಿಗುತ್ತದೆ. ಈ ರೀತಿ ಡ್ರೆಸ್ ಮಾಡಿದಾಗ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮಾಡಿರುವಂತೆ ಅಲಂಕಾರ ಮಾಡಿಕೊಳ್ಳಿ ತುಂಬಾ ಫ್ಯಾಷನೇಬಲ್ ಆಗಿ ಕಾಣುವಿರಿ.
ಜೀನ್ಸ್ ಕ್ಯಾಪ್ರಿಸ್: ಈ ರೀತಿಯ ಜೀನ್ಸ್ ಪ್ಯಾಂಟ್ ಯುವತಿರ ಮೆಚ್ಚಿನ ಪ್ಯಾಂಟ್ ಆಗಿದೆ. ಈ ಪ್ಯಾಂಟ್ ನೀಲಿ, ಕಪ್ಪು , ಬಣ್ಣ ಮಾಸಿದ ನೀಲಿ ಬಣ್ಣ , ಕ್ರೀಮ್ ಕಲರ್ ನಲ್ಲಿ ದೊರೆಯುತ್ತದೆ. ಈ ಮುಕ್ಕಾಲು ಪ್ಯಾಂಟ್ ನ ಕೆಳಗಡೆ ಮಡಚಲಾಗಿರುತ್ತದೆ. ಈ ಪ್ಯಾಂಟ್ ಧರಿಸಿ ಶರ್ಟ್ ಅಥವಾ ಟಿ ಶರ್ಟ್ ಧರಿಸಿ ಕಾಲುಗಳಿಗೆ ಶೂ ಅಥವಾ ಚಪ್ಪಲಿ ಹಾಕಿದರೆ ತುಂಬಾ ಆಕರ್ಷಕವಗಿ ಕಾಣುವಿರಿ.
ಬ್ಲೋಟೆಡ್ ಕ್ಯಾಪ್ರಿ ಪ್ಯಾಂಟ್: ಇದನ್ನು ಜೋಧ್ ಪುರಿ ವಿನ್ಯಾಸದಲ್ಲಿ ಹೊಲಿಯಲಾಗಿರುತ್ತದೆ. ಇತಂಹ ಪ್ಯಾಂಟ್ ನಲ್ಲಿ ಬಟನ್ ಬದಲು ದಾರವಿದ್ದು ನಮ್ಮ ದೇಹದ ಅಳತೆಗೆ ತಕ್ಕ ಬಿಗಿ ಅಥವಾ ಸಡಿಲ ಮಾಡಿಕೊಳ್ಳಬಹುದು.
ಟ್ರೌಸರ್ 3/4th : ಇದು ಫ್ಯಾಷನೇಬಲ್ ಧಿರಿಸಾಗಿದೆ. ಇದನ್ನು ಬೇಕಾದರೆ ಡ್ರೆಸ್ ಕೋಡ್ ಇಲ್ಲದ ದಿನ ಆಫೀಸ್ ಗೂ ಹಾಕಿಕೊಂಡು ಹೋಗಬಹುದು. ಚಿತ್ರದಲ್ಲಿ ಸೋನಂ ಕಪೂರ್ ಧರಿಸಿರುವುದು ಈ ಕೂಡ ಟ್ರೌಸರ್ 3/4th ಆಗಿದೆ.
ಜಂಪ್ ಸೂಟ್: ಕತ್ರಿನಾ ಕಪೂರ್ ಧರಿಸಿರುವಂತಹ ಪ್ಯಾಂಟ್ ಅನ್ನು ಜಂಪ್ ಪ್ಯಾಂಟ್ ಅಂತ ಹೇಳಲಾಗುತ್ತದೆ. ಈ ಪ್ಯಾಂಟ್ ಕಾಟನ್, ಜೀನ್ಸ್, ಸ್ವೆಡೆ ಮುಂತಾದ ಬಟ್ಟೆಗಳಲ್ಲೂ ದೊರೆಯುತ್ತದೆ.
ಈ ಪ್ಯಾಂಟ್ ಗಳು ಮಳೆಗಾಲದಲ್ಲಿ, ಟೂರ್, ಟ್ರೆಕ್ಕಿಂಗ್ ಹೋಗುವಾಗ ಧರಿಸಿದರೆ ಆರಾಮದಾಯಕವಾಗಿರುತ್ತದೆ ಮತ್ತು ಫ್ಯಾಷನೇಬಲ್ ಆಗಿ ಕಾಣುವಿರಿ.



Click it and Unblock the Notifications
