Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕೆಲವೊಂದು ಕಂಪನಿಗಳಲ್ಲಿರುವ ಕೆಟ್ಟ ನಿಯಮಗಳು

ಕೆಲವಾರು ನಿಯಮಗಳನ್ನು ಕಂಪನಿಯ ಅಭಿವೃದ್ಧಿಗೆ, ಉದ್ಯೋಗಿಗಳ ಹಿತಕ್ಕೆ ಅಂತ ಮಾಡಿದ್ದರೂ ಸಹ ಅವುಗಳಿಂದ ಕಂಪನಿಗೆ ನಿಜವಾದ ಲಾಭವಾಗಲೀ, ಅಭಿವೃದ್ಧಿಯಾಗಲೀ ದೊರೆಯುವುದಿಲ್ಲ. ಏಕೆಂದರೆ, ಉದ್ಯೋಗಿಗಳು ಇದು ನನ್ನ ಕಂಪನಿ ಅಂತ ಭಾವಿಸಿದರೆ ಮಾತ್ರ ಕೆಲಸವನ್ನು ಮತ್ತಷ್ಟು ಮುತುವರ್ಜಿಯಿಂದ ಮಾಡುತ್ತಾರೆ. ಹಾಗಿರುವ ವಾತಾವರಣ ಇದ್ದರೆ ಎಷ್ಟು ಚೆನ್ನ.
ವೆಲ್, ಈ ಕೆಳಗಿನ 5 ನಿಯಮಗಳನ್ನು ಗಮನಿಸಿ.
1. ಕುಡಿಯುವ ನೀರಿಗೂ ಅಳತೆ: ಕೆಲವೊಂದು ಕಂಪನಿಗಳಲ್ಲಿ ಕುಡಿಯುವ ನೀರನ್ನು ಮಿತಿಯಲ್ಲಿ ಕೊಡುತ್ತಾರೆ. ಇದು ಕಂಪನಿಗೆ ಶುದ್ಧ ನೀರನ್ನು ಕೊಡಲು ಹಣವಿಲ್ಲದ ಕಾರಣಕ್ಕಲ್ಲ, ತುಂಬಾ ನೀರು ಕುಡಿದರೆ ಆಗಾಗ ಆಗಾಗ ಮೂತ್ರ ವಿಸರ್ಜನೆಗೆ ಹೋಗುತ್ತಾರೆ. ಇದರಿಂದ ಸಮಯ ನಷ್ಟವಾಗುತ್ತದೆ ಎಂಬ ಕಾರಣದಿಂದ ಈ ರೀತಿ ಮಾಡುತ್ತಾರೆ. ಆದರೆ ಈ ರೀತಿ ಮಾಡಿದರೆ ಉದ್ಯೋಗಿ ಸಂತೋಷದಿಂದ ಕೆಲಸ ಮಾಡಲು ಸಾಧ್ಯವಿಲ್ಲ, ತುಂಬಾ ಒತ್ತಡಕ್ಕೆ ಒಳಗಾಗುತ್ತಾರೆ, ಈ ರೀತಿ ಒತ್ತಡಕ್ಕೆ ಒಳಗಾದರೆ ಅದು ಕೆಲಸದ ಮೇಲೆ ಪ್ರಭಾವ ಬೀಳುತ್ತದೆ.
2. ಸಾವು ಮನೆಗೂ ಹೋದರೂ ಸಾಕ್ಷಿ: ಉದ್ಯೋಗಿಯ ಆಪ್ತರು ಮರಣ ಹೊಂದಿದ ಕಾರಣ ಕೆಲಸಕ್ಕೆ ಬರಲು ಸಾಧ್ಯವಾಗದೆ ನಂತರ ಬಂದು ಕೇಳಿದರೂ ಅದಕ್ಕೆ ಸಾಕ್ಷಿ ಕೇಳುತ್ತಾರೆ. ಇದು ಉದ್ಯೋಗಿಯ ಪ್ರಾಮಾಣಿಕತೆಯನ್ನೇ ಘಾಸಿ ಮಾಡಿದಂತಾಗುತ್ತದೆ.
3. ಒಂದು ಕಪ್‌ಗಿಂತ ಅಧಿಕ ಕಾಫಿ ಇಲ್ಲ:ಕಂಪನಿಗಳಲ್ಲಿ ಕಾಫಿ ಮತ್ತು ಕುಡಿಯುವ ನೀರಿನ ಸೌಲಭ್ಯವಿರುತ್ತದೆ. ಆದರೆ ಕೆಲವೊಂದು ಕಂಪನಿಗಳಲ್ಲಿ ದಿನದಲ್ಲಿ ಒಂದು ಕಪ್ ಕಾಫಿ ಮಾತ್ರ ಅಂತ ನಿಯಮವಿರುತ್ತದೆ.
4. ಕೆಲಸದಿಂದ ಬಿಡುವಾಗ ಯಾವುದೇ ಸೌಲಭ್ಯವಿರುವುದಿಲ್ಲ: ಕೆಲಸದಿಂದ ಬಿಡುವಾಗ ದೊರೆಯುವ PF , ಕೆಲಸದ ಅನುಭವ ಪ್ರಮಾಣಪತ್ರ ಏನೂ ಕೊಡುವುದಿಲ್ಲ.
5. ಮದುವೆಯಾದ ಹೆಣ್ಣು ಮಕ್ಕಳಿಗೆ ಕೆಲಸವಿಲ್ಲ: ಕೆಲವೊಂದು ಕಂಪನಿಗಳಲ್ಲಿ ಲಿಂಗ ತಾರತಮ್ಯವಿರುತ್ತದೆ. ಅಂತಹ ಕಂಪನಿಗಳಲ್ಲಿ ಮದುವೆಯಾದ ಹೆಣ್ಣು ಮಕ್ಕಳಿಗೆ ಕೆಲಸ ಕೊಡುವುದಿಲ್ಲ. ಇನ್ನು ಕೆಲವು ಕಂಪನಿಗಳಲ್ಲಿ ಹೆರಿಗೆ ಸಮಯದಲ್ಲಿ ದೊರೆಯಬೇಕಾದ ರಜೆ ಕೊಡದೆ ಅದಕ್ಕೆ ಸಂಬಳ ಕಟ್ಟು ಮಾಡುತ್ತಾರೆ.
ಇಂತಹ ಕೆಟ್ಟ ನಿಯಮಗಳಿದ್ದರೆ ಉದ್ಯೋಗಿ ಹೆಚ್ಚು ಕಾಲ ಆ ಕಂಪನಿಯಲ್ಲಿ ಕೆಲಸ ಮಾಡಲು ಇಚ್ಚಿಸುವುದಿಲ್ಲ.



Click it and Unblock the Notifications
