Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಚಿಯರ್ ಗರ್ಲ್ಸ್ ಗೆ ಆತ್ಮವಿಶ್ವಾಸ ನೀಡುವ ಡ್ರೆಸ್ಸಿಂಗ್
ಐಪಿಲ್ ಮ್ಯಾಚ್ ನಡೆಯುತ್ತಿದ್ದರೆ ಆಟದ ಜೊತೆ ಪ್ರೇಕ್ಷಕರ ಗಮನ ಜೊತೆ ಸೆಳೆಯುವ ಮತ್ತೊಂದು ವರ್ಗವೆಂದರೆ ಚಿಯರ್ ಗರ್ಲ್ಸ್(ಚಿಯರ್ ಲೀಡರ್ಸ್). ಇವರ ಬಗ್ಗೆ ಪ್ರಶಂಸೆ ಮತ್ತು ಟೀಕೆಗಳು ಸಮನಾಗಿ ಕೇಳಿ ಬರುತ್ತಿರುತ್ತದೆ. ಆದರೆ ಆ ಹುಡುಗಿಯರ ಚೆಲುವಿನ ರಹಸ್ಯದ ಬಗ್ಗೆ ತಿಳಿಯುವ ಕುತೂಹಲ ಎಲ್ಲರಲ್ಲೂ ಇರುತ್ತದೆ. ಇವತ್ತು ನಾವು ಚಿಯರ್ ಗರ್ಲ್ಸ್ ಸ್ಟೈಲ್ ಸೀಕ್ರೆಟ್ ಬಗ್ಗೆ ತಿಳಿಯೋಣ.

ಉಡುಗೆ: ಚಿಯರ್ ಗರ್ಲ್ಸ್ ಮೈಗಂಟಿದ ರೀತಿಯ ಡ್ರೆಸ್ ಧರಿಸಿರುತ್ತಾರೆ. ಏಕೆಂದರೆ ಈ ರೀತಿಯ ಡ್ರೆಸ್ ಅವರಿಗೆ ಡ್ಯಾನ್ಸ್ ಮಾಡುವಾಗ ಆತ್ಮವಿಶ್ವಾಸದಿಂದ ಹೆಜ್ಜೆ ಹಾಕಲು ಸಹಕಾರಿಯಾಗಿದೆ.
ಕೂದಲಿನ ವಿನ್ಯಾಸ: ಹೆಚ್ಚಿನವರು ಕೂದಲನ್ನು ಹಾಗೇ ಬಿಟ್ಟಿರುತ್ತಾರೆ, ಇಲ್ಲದಿದ್ದರೆ ಎತ್ತಿ ಒಂದು ಜುಟ್ಟು ಹಾಕಿರುತ್ತಾರೆ, ಡ್ಯಾನ್ಸ್ ಮಾಡುವಾಗ ಈ ರೀತಿಯ ಕೇಶ ವಿನ್ಯಾಸವೇ ಅವರಿಗೆ ಆರಾಮದಾಯಕವಾಗಿರುತ್ತದೆ.
ಕಣ್ಣಿನ ಬಣ್ಣ: ಹೊಳೆಯುವ ಬಟ್ಟೆ ಮತ್ತು ಹೊಳೆಯುವ ಕಣ್ಣಿನ ಅಲಂಕಾರ ಅವರ ಪ್ರಮುಖ ಆಕರ್ಷಣೆ. ನೀಲಿ, ಬಿಳಿ, ಕಪ್ಪು, ಚಿನ್ನದ ಬಣ್ಣವಿರುವ ಡ್ರೆಸ್ ಹಾಕಿ ನೃತ್ಯ ಮಾಡುತ್ತಿದ್ದರೆ ಪ್ರೇಕ್ಷಕರ ಗಮನವು ಅಟಗಾರರ ಕಡೆಯಿಂದ ಒಂದು ಕ್ಷಣ ಅತ್ತ ಚಲಿಸುವಂತೆ ಇರುತ್ತದೆ.
ಪಾದುಕೆಗಳು: ಎತ್ತರದ ಚಪ್ಪಲಿ ಧರಿಸುವ ಬದಲು ಸ್ಪೋರ್ಟ್ಸ್ ಶೂ ಧರಿಸಿರುತ್ತಾರೆ. ಈ ಶೂ ಧರಿಸುವುದರಿಂದ ಯಾವುದೇ ಆತಂಕವಿಲ್ಲದೆ ಹೆಜ್ಜೆ ಹಾಕಬಹುದಾಗಿದೆ. ಈ ಹುಡುಗಿಯರಲ್ಲಿ ಕಾಣುವ ಆತ್ಮವಿಶ್ವಾಸಕ್ಕೆ ಅವರ ಸ್ಟೈಲ್ ಕೂಡ ಒಂದು ಕಾರಣವಾಗಿದೆ.
ಇವರನ್ನು ನೋಡಿದಾಗ ಅನಿಸುವುದು ಏನೆಂದರೆ ನಾವು ಮಾಡುವ ಡ್ರೆಸ್ಸಿಂಗ್ ನಮಗೆ ಆತ್ಮವಿಶ್ವಾಸ ತುಂಬುವ ರೀತಿ ಇರಬೇಕು.



Click it and Unblock the Notifications
