Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ನಾನೇ ಬೇರೆ, ನನ್ನ ಸ್ಟೈಲೇ ಬೇರೆ

ನಾವು ಧರಿಸುವ ಉಡುಗೆ -ತೊಡುಗೆಗಳು ನಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ ಎಂಬ ಮಾತು ಸುಳ್ಳಲ್ಲ. ಅದರಲ್ಲೂ ಡ್ರೆಸ್, ಕೂದಲಿನ ವಿನ್ಯಾಸದಲ್ಲಿ ಇತರರನ್ನು ಅನುಸರಿಸುವುದೇ ಜಾಸ್ತಿ. ಎಲ್ಲರು ಮಾಡುವಂತೆ ಡ್ರೆಸ್ಸಿಂಗ್ ಮಾಡಿ ಎಲ್ಲರ ಹಾಗೆ ಇರುವ ಬದಲು ಸ್ವಲ್ಪ ವಿಭಿನ್ನವಾಗಿ ಕಾಣಬೇಕು, ನನ್ನ ವ್ಯಕ್ತಿತ್ವಕ್ಕೆ ಯಾವುದೇ ಧಕ್ಕೆ ಬಾರದ ರೀತಿಯಲ್ಲಿ ಡ್ರೆಸ್ಸಿಂಗ್ ಇರಬೇಕು ಎಂದು ಬಯಸುವುದಾದರೆ ಈ ಕೆಳಗಿನ ಸಲಹೆಗಳನ್ನು ಪಾಲಿಸಬಹುದು.
ಹೊಸ ಮತ್ತು ಹಳೆಯ ಟ್ರೆಂಡ್ ಡ್ರೆಸ್ : ಹೆಚ್ಚಾಗಿ ನಾವು ಹೊಸ ಟ್ರೆಂಡ್ ಏನಿದೆಯೋ ಆ ರೀತಿಯ ಡ್ರೆಸ್ ಹಾಕಲು ಇಷ್ಟಪಡುತ್ತೇವೆ. ಆದರೆ ಹೊಸ ಟ್ರೆಂಡ್ ಜೊತೆ, ಅಪರೂಪಕ್ಕೆ ಹಳೆಯ ಟ್ರೆಂಡ್ ಧರಿಸಿ ನೋಡಿ, ಇತರರಿಗಿಂತ ನಿಮ್ಮ ಸ್ಟೈಲ್ ಭಿನ್ನ ಅನ್ನಿಸಿ, ಇತರರ ಗಮನ ನಿಮ್ಮೆಡೆಗೆ ಸೆಳೆಯುವುದು. ಇದಕ್ಕಾಗಿ ಹಳೆಯ ಫ್ಯಾಷನ್ ಮ್ಯಾಗಿಜೆನ್ ನೋಡಿ, ಆಗ ಯಾವ ಸ್ಟೈಲ್ ಸೂಕ್ತ ಎಂಬ ಐಡಿಯಾ ಬರುತ್ತದೆ.
ಮಿಶ್ರ ಸ್ಟೈಲ್ : ನೀವು ಸ್ಪೋರ್ಟ್ಸ್ ಇಷ್ಟಪಡುವುದಾದರೆ ಸ್ಪೋರ್ಟ್ಸ್ ನ ಟ್ರೆಂಡಿ ಡ್ರೆಸ್ ಧರಿಸಿ, ಕೆಲವೊಮ್ಮೆ ಸಂಪ್ರದಾಯ ಪ್ರಕಾರ ಅಂದರೆ ಕ್ಲಾಸಿಕಲ್ ರೀತಿ ಡ್ರೆಸ್ ಮಾಡಿ, ಈ ರೀತಿ ನಿಮ್ಮದೇ ಆದ ಸ್ಟೈಲ್ ನಲ್ಲಿ ಮಿಂಚಿ.
ಸೂಜಿಗಲ್ಲಿನಂತಹ ಚೆಲುವಿಗೆ: ಸ್ಟೈಲ್ ಮತ್ತು ವ್ಯಕ್ತಿತ್ವನ್ನು ಮ್ಯಾಚ್ ಮಾಡುವಂತೆ ಇರಬೇಕು. ಸಂಪ್ರದಾಯದ ಪ್ರಕಾರ ಡ್ರೆಸ್ ಮಾಡಿದರೆ ನಿಮ್ಮ ಮೇಕಪ್ ನಿಂದ ಹಿಡಿದು, ಹೇರ್ ಸ್ಟೈಲ್ ವರೆಗೂ ಅದೇ ರೀತಿ ಇರಲಿ. ಆದರೆ ಮಾಡರ್ನ್ ಡ್ರೆಸ್ ಮಾಡಿದಾಗ ಹೂ ಮುಡಿಯುವುದು, ಹಳೆಯ ಕಾಲದಂತೆ ಮೇಕಪ್ ಮಾಡುವುದು ಮಾಡಿದರೆ ವಿಚಿತ್ರವಾಗಿ ಕಾಣುವುದು.
ಹೊಸ ಕೇಶ ವಿನ್ಯಾಸ: ಕೇಶ ವಿನ್ಯಾಸ ನಿಮ್ಮ ಲುಕ್ ಅನ್ನೇ ಬದಲಾಯಿಸುತ್ತದೆ. ದಿನಾ ಒಂದೇ ರೀತಿಯ ಕೇಶ ವಿನ್ಯಾಸದಲ್ಲಿ ಬರುವುದಕ್ಕಿಂತ ಹೇರ್ ಕಟ್ ಮಾಡಿ ಹೊಸ ಕೇಶ ವಿನ್ಯಾಸ ಮಾಡಿಸಿದರೆ ನಿಮ್ಮ ಲುಕ್ ವಿಭಿನ್ನವಾಗಿ ಕಾಣುವುದು. ಆದರೆ ಈ ರೀತಿ ಕೇಶ ವಿನ್ಯಾಸ ಮಾಡಿಸುವಾಗ ನುರಿತ ಬ್ಯೂಟಿಷಿಯನ್ ಬಳಿ ಮಾಡಿಸಿ.
ಬ್ಯೂಟಿ ಟಿಪ್ಸ್: ನಿಮ್ಮ ಫ್ರೆಂಡ್ಸ್ ಗೆ ಬ್ಯೂಟಿ ಸಲಹೆಗಳನ್ನು ನೀಡಿ, ಒಂದು ವೇಳೆ ನಿಮ್ಮ ಸ್ಟೈಲ್ ಅನ್ನು ಜೊತೆಯಲ್ಲಿದ್ದವರು ಕಾಪಿ ಮಾಡಲು ಬಯಸಿದರೆ ಅದಕ್ಕಾಗಿ ನೀವು ನಿಮ್ಮ ಸ್ಟೈಲ್ ಬಿಡಬೇಕಾಗಿಲ್ಲ, ಏಕೆಂದರೆ ನಿಮ್ಮನ್ನು ಇತರರು ಅನುಕರಿಸಿದರೆ ನೀವು ಈಗಾಗಲೇ ಇತರರ ಮನ ಸೆಳೆದ್ದೀರಾ ಎಂದು ಅರ್ಥ.
ಬೇರೆಯವರ ಸ್ಟೈಲ್ ಕಾಪಿ ಮಾಡುವುದಕ್ಕಿಂತ ತಮ್ಮ ವ್ಯಕ್ತಿತ್ವಕ್ಕೆ ಯಾವುದೇ ದಕ್ಕೆಯಾಗದ ರೀತಿಯಲ್ಲಿ ನಾವೇ ಹೊಸ ಟ್ರೆಂಡ್ ಹುಟ್ಟು ಹಾಕಿದರೆ ಇತರರಿಗಿಂತ ಭಿನ್ನವಾಗಿ ಕಾಣಬಹುದು. ನೀವೂ ಕೂಡ ಭಿನ್ನವಾಗಿ ಕಾಣಬೇಕೆಂದು ಇಷ್ಟಪಡುತ್ತೀರಾ ತಾನೆ?



Click it and Unblock the Notifications
