Latest Updates
-
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು!
ಈಗೀನ ಟ್ರೆಂಡ್ ಆಗಿರುವ ಫ್ಯಾಷನಬಲ್ ಡ್ರೆಸ್
ಯೌವನದ ವಯಸ್ಸಿನಲ್ಲಿ ಇರುವ ಚೆಲುವು 30ರ ಹರೆಯದ ನಂತರ ಮಾಸುತ್ತಾ ಬರುತ್ತದೆ. ಯಾವ ಕ್ರೀಮ್ ನಮ್ಮ ಚೆಲುವನ್ನು ಚಿರವಾಗಿರಲು ಸಹಾಯಕ್ಕೆ ಬರುವುದಿಲ್ಲ. ಆದರೆ ನಾವು ನಡೆಸುವ ಜೀವಶೈಲಿಯಿದೆಯೆಲ್ಲಾ ಅದರ ಮುಖಾಂತರ ತಮ್ಮ ಚೆಲುವು ಕಡಿಮೆಯಾಗದಂತೆ ನೋಡಿಕೊಳ್ಳಬಹುದು.
ತಿನ್ನುವ ಆಹಾರ, ವ್ಯಾಯಾಮ,ಧನಾತ್ಮಕ ಯೋಚನೆ ಇವುಗಳಿಂದ 40 ಹರೆಯದಲ್ಲೂ 16ರ ಬಾಲೆಯಂತೆ ಚುರುಕಿನಿಂದ, ಯೌವನದ ಚೆಲುವಿನಿಂದ ಇರಬಹುದು. ಉದಾಹರಣೆಗೆ ಕನ್ನಡದ ಚಿತ್ರ ನಟಿ ಅನುಪ್ರಭಾಕರ್ ಹತ್ತಿರ ಕೇಳಿದರೆ ದಿನ ವ್ಯಾಯಾಮ ಮಾಡುವುದು ನನ್ನ ಫಿಟ್ ನೆಸ್ ಸೀಕ್ರೆಟ್ ಅಂತಾರೆ.
ಇನ್ನು ಬಾಲಿವುಡ್ ನಟಿಯರಾದ ರೇಖಾ, ಮಾಧುರಿ, ಶ್ರೀದೇವಿ ತಮ್ಮ ಸೌಂದರ್ಯ, ಫ್ಯಾಷನಬಲ್ ಧಿರಿಸಿನಿಂದ 25ರ ಹರೆಯದವರಂತೆ ಕಾಣುತ್ತಾರೆ.
ಅವರ ಫ್ಯಾಷನ್ ಟಿಪ್ಸ್ ಗಳನ್ನು ಯುವತಿಯರು ತೆಗೆದುಕೊಳ್ಳಬಹುದಾಗಿದ್ದು ಇಲ್ಲಿ ನಾವು 2012ರಲ್ಲಿ ಗಮನ ಸೆಳೆದ ಕೆಲವು ಫ್ಯಾಷನಬಲ್ ಡ್ರೆಸ್ಸ್ ಗಳ ಬಗ್ಗೆ ಚಿತ್ರಮಾಹಿತಿ ನೀಡಲಾಗಿದೆ:

ಅನಾರ್ಕಲಿ
ಮಾಧುರಿ ಧರಿಸಿರುವ ಈ ಕೆಂಪು ಬಣ್ಣದ ಅನಾರ್ಕಲಿ ಆಕರ್ಷಕವಾಗಿದೆಯಲ್ಲವೇ? ಈ ವಿನ್ಯಾಸದ ಅನಾರ್ಕಲಿ ಈಗೀನ ಟ್ರೆಂಡ್ ಆಗಿದೆ.

ಮಲ್ಟಿ ಕಲರ್ ಗೌನ್
ಶ್ರೀದೇವಿ ಈ ಮಲ್ಟಿ ಕಲರ್ ಗೌನ್ ಧರಿಸಿ 18ರ ಬಾಲೆಯನ್ನು ನಾಚಿಸುವಂತಹ ಯೌವನದ ಚೆಲುವಿನಿಂದ ಕಂಗೊಳಿಸುತ್ತಿದ್ದಾರೆಯಲ್ಲವೇ? ನಾವು ಧರಿಸುವ ಡ್ರೆಸ್ ನಮ್ಮನ್ನು ವಯಸ್ಸನ್ನು ಮರೆ ಮಾಚಿಸುತ್ತದೆ.

ಟೋಗಾ ಗೌನ್
ಮಾಧುರಿಯವರು ಇತ್ತೀಚಿಗೆ ಹೆಚ್ಚಾಗಿ ವಿದೇಶಿ ಡ್ರೆಸ್ ಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆ. ಆದರೆ ಈ ಗೌನ್ ಅವರಿಗೆ ತುಂಬಾ ಆಕರ್ಷಕವಾಗಿ ಮತ್ತು ನೀಟಾಗಿ ಕಾಣುತ್ತದೆ. ಯುವತಿಯರಿಗೆ ಬೆಸ್ಟ್ ಪಾರ್ಟಿ ವೇರ್ ಇದಾಗಿದೆ.

ಕಲರ್ ಜೀನ್ಸ್
ಹಳದಿ, ಪಿಂಕ್ ಈ ರೀತಿಯ ಜೀನ್ಸ್ ಧರಿಸುವುದು ಈಗೀನ ಟ್ರೆಂಡ್ . ಟ್ರೆಂಡ್ ಗೆ ತಕ್ಕಂತೆ ಶ್ರೀದೇವಿಯ ಡ್ರೆಸ್ ಹೇಗಿದೆ ನೋಡಿ!

ಫಂಕ್ಷನ್ ವೇರ್
ಮದುವೆ ಸಮಾರಂಭಗಳಿಗೆ ಹೋಗುವಾಗ ಸ್ಯಾರಿ ಹಾಕಲು ಇಷ್ಟಪಡದವರು ಈ ರೀತಿ ಡ್ರೆಸ್ ಮಾಡಿಕೊಂಡು ಹೋಗಬಹುದು.

ನೆಟ್ ಸೀರೆ
ನೆಟ್ ಸೀರೆಯಲ್ಲಿ ಸೆಕ್ಸಿಯಾಗಿ ಕಾಣಬೇಕೆಂದು ಬಯಸುವವರು ಶ್ರೀದೇವಿಯ ಸ್ಟೈಲ್ ಅನ್ನು ನಕಲಿ ಮಾಡಬಹುದು.

ದಾವಣಿ ಸೀರೆ
ಈ ರೀತಿಯ ಸೀರೆ ಈಗ ಫ್ಯಾಷನ್ ಆಗಿದೆ. ತನ್ನ ಗಂಡ , ಮಕ್ಕಳ ಜೊತೆ ನಿಂತಿರುವ ಶ್ರೀದೇವಿ, ತನ್ನ ಮಗಳಿಗೆ ಸರಿಸಾಟಿಯಾಗಿ ಫ್ಯಾಷನೇಬಲ್ ಆಗಿ ಕಾಣಿಸುತ್ತಿದ್ದಾರೆ ಅಲ್ಲವೇ?



Click it and Unblock the Notifications