Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಥ್ಯಾಂಕ್ಸ್ ಗೀವಿಂಗ್ ಆಚರಣೆಯ ವಿಶೇಷತೆ ಏನು?
ಇಂದು ಥ್ಯಾಂಕ್ಸ್ ಗೀವಿಂಗ್ ದಿನ. ಥ್ಯಾಂಕ್ಸ್ ಗೀವಿಂಗ್ ಅನ್ನುವುದು ಒಂದು ಹಬ್ಬ. ಈ ಹಬ್ಬವನ್ನು ಅಮೇರಿಕಾ ಹಾಗೂ ಕೆನಡಾದಲ್ಲಿ ಆಚರಿಸುತ್ತಾರೆ. ಪ್ರತಿವರ್ಷ ನವಂಬರ್ ತಿಂಗಳಿನ ನಾಲ್ಕನೇ ವಾರದ ಗುರುವಾರದಂದು ಈ ಹಬ್ಬವನ್ನು ಆಚರಿಸಲಾಗುವುದು. ಈ ಹಬ್ಬಕ್ಕೆ ಮನೆಯಿಂದ ದೂರವಿರುವವರು ಕೂಡ ಮನೆಗೆ ಬರುತ್ತಾರೆ. ನಂತರ ಎಲ್ಲರು ಸೇರಿ ದೇವರಿಗೆ ಥ್ಯಾಂಕ್ಸ್ ಅನ್ನು ಹೇಳಲಾಗುವುದು.
ಈ ದಿನ ಕೆಲಸಕ್ಕೆ ಹೋಗುವುದಿಲ್ಲ. ಮನೆಯಲ್ಲಿ ವಿವಿಧ ಬಗೆಯ ಅಡುಗೆಗಳನ್ನು ತಯಾರಿಸಲಾಗುವುದು. ಅದರಲ್ಲೂ ಈ ದಿನದಂದೂ ಕೆಲವೊಂದು ಸ್ಪೆಷೆಲ್ ಆಹಾರಗಳು ಇರಲೇಬೇಕು. ಡಿನ್ನರ್ ಟೇಬಲ್ ಅನ್ನು ಮೇಣದ ಬತ್ತಿಗಳಿಂದ ಅಲಂಕರಿಸಲಾಗುವುದು.
ಥ್ಯಾಂಕ್ಸ್ ಗೀವಿಂಗ್ ಹಬ್ಬದಲ್ಲಿ ಟರ್ಕಿ ಕೋಳಿ ಕಡ್ಡಾಯವಾಗಿರಬೇಕು. ಟರ್ಕಿ ಕೋಳಿಯ ಅಡುಗೆ ಮಾಡಲು ಕಾರಣವೇನು ಮತ್ತು ಈ ದಿನದಂದು ಡಿನ್ನರ್ ಟೇಬಲ್ ನಲ್ಲಿ ಇರಬೇಕಾದ ವಸ್ತುಗಳೇನು ಎಂದು ನೋಡೋಣ ಬನ್ನಿ:

ಟರ್ಕಿ ಕೋಳಿ
ಮನೆ ಮಂದಿಯೆಲ್ಲಾ ಜೊತೆಗೆ ಸೇರಿದಾಗ ತಿನ್ನಲು ಅಧಿಕ ಆಹಾರ ಬೇಕಾಗುತ್ತದೆ. ಮೊದಲು ರೆಡ್ ಇಂಡಿಯನ್ ರು ಭೇಟೆ ಆಡಿ ಪ್ರಾಣಿಗಳನ್ನು ಕೊಂದು ತಿನ್ನುತ್ತಿದ್ದರು. ಒಂದು ಕಡೆ ನೆಲೆನಿಂತು ವ್ಯವಸಾಯ ಪ್ರಾರಂಭಿಸಿದ ಮೇಲೆ ಟರ್ಕಿ ಕೋಳಿಯನ್ನು ತಿನ್ನಲಾರಂಭಿಸಿದರು. ಈ ಹಬ್ಬದಲ್ಲಿ ಟರ್ಕಿ ಕೋಳಿ ಮಾಡಿದರೆ ಎಲ್ಲರಿಗೆ ಸಾಕಾಗುವಷ್ಟು ಇರುವುದಿಂದ ಇದರ ಆಹಾರವನ್ನು ತಯಾರಿಸುತ್ತಿದ್ದರು. ನಂತರ ಇದು ಪದ್ಧತಿಯಾಯಿತು.

ಟರ್ಕಿ ಆಹಾರ
ಟರ್ಕಿ ಕೋಳಿಯಿಂದ ಸಾರು, ರೋಸ್ಟ್, ಸ್ಟಫ್ಡ್ ಟರ್ಕಿ, ಕಟ್ಲೇಟ್ ಈ ರೀತಿ ಅನೇಕ ಬಗೆಯ ಖಾದ್ಯಗಳನ್ನು ತಯಾರಿಲಾಗುವುದು. ಈ ದಿನ ಟರ್ಕಿ ಕೋಳಿಯಿಂದ ತಯಾರಿಸಿದ ಅಡುಗೆ ಈ ಹಬ್ಬ ಆಚರಿಸುವವರ ಮನೆಯಲ್ಲಿ ಇದ್ದೇ ಇರುತ್ತದೆ.

ವೈನ್
ಮಾಂಸ ಇದ್ದ ಮೇಲೆ ವೈನ್ ಇಲ್ಲದಿದ್ದರೆ ಹೇಗೆ? ಅದರಲ್ಲೂ ಟರ್ಕಿ ಕೋಳಿಯ ಅಡುಗೆ ಜೊತೆ ಕುಡಿಯಲು ವೈನ್ ಇದ್ದರೆ ಅಡುಗೆಯ ಘಮ್ಮತ್ತು ಹೆಚ್ಚಾಗುವುದು.

ಡಿನ್ನರ್ ಟೇಬಲ್
ಈ ಹಬ್ಬದಲ್ಲಿ ಡಿನ್ನರ್ ಟೇಬಲ್ ಅನ್ನು ತುಂಬಾ ವಿಶೇಷವಾಗಿ ಅಲಂಕರಿಸಲಾಗವುದು. ಆಕರ್ಷಕವಾದ ಮೇಣದ ಬತ್ತಿಗಳನ್ನು ಹಚ್ಚಿಡಲಾಗುವುದು. ಹೊಸ ಟೇಬಲ್ ಕ್ಲೋಥ್ ಹಾಕಿ ಹೊಸ ಸ್ಪೂನ್, ನೈಫ್ ಅಂತ ಟೇಬಲ್ ಅನ್ನು ಅಲಂಕರಿಸಲಾಗುವುದು.

ಜೊತೆಯಲ್ಲಿ ಡಿನ್ನರ್
ಮನೆ ಮಂದಿಯೆಲ್ಲಾ ಜೊತೆ ಸೇರಿ ದೇವರಿಗೆ ಧನ್ಯವಾದಗಳನ್ನು ಅರ್ಪಿಸಿ ನಂತರ ಎಲ್ಲರೂ ಜೊತೆಯಲ್ಲಿ ಸೇರಿ ಹಬ್ಬದ ಅಡುಗೆಯನ್ನು ತಿನ್ನುತ್ತಾರೆ. ಇವು ಈ ಹಬ್ಬದ ವಿಶೇಷವಾಗಿವೆ.



Click it and Unblock the Notifications
