Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಸಾನಿಯಾಳ ಫ್ಯಾಷನ್: ಮದುವೆಗೆ ಮೊದಲು, ನಂತರ
ಸ್ಪೋರ್ಟ್ಸ್ ಆಡುವವರನ್ನು ಹಾಗೂ ಮಾಡಲ್ ಗಳನ್ನು ನೋಡುವಾಗಲೇ ಅವರ ದೈಹಿಕ ಗುಣ ಲಕ್ಷಣದಲ್ಲಿ ಸಾಕಷ್ಟು ವ್ಯತ್ಯಸ ಗೊತ್ತಾಗುತ್ತದೆ. ಸ್ಪೋರ್ಟ್ಸ್ ನವರು ನೋಡಲು ಗಟ್ಟಿಮುಟ್ಟಾಗಿದ್ದರೆ ಮಾಡಲ್ ಗಳು ಬೆಣ್ಣೆ ಮೈಯಿಂದ ದಂತದ ಗೊಂಬೆಗಳಂತೆ ಇರುತ್ತಾರೆ. ಆದರೆ ಸ್ಪೋರ್ಟ್ಸ್ ನಲ್ಲೂ ಕೆಲ ಕ್ರೀಡಾಪಟುಗಳಿದ್ದಾರೆ ಅವರು ಆಟದಿಂದ ಮಾತ್ರವಲ್ಲ, ತನ್ನ ರೂಪಿನಿಂದ ಕೂಡ ಸಾಕಷ್ಟು ಅಭಿಮಾನಿಗಳನ್ನು ಗಳಿಸಿರುತ್ತಾರೆ. ಮಾಡಲ್ ಗಳಿಗೆ ಸರಿಸಮವಾಗಿ ನಿಲ್ಲುವ ರೂಪ ಲಾವಣ್ಯಗಳನ್ನು ಹೊಂದಿರುತ್ತಾರೆ. ಉದಾಹರಣೆಗೆ ರೊನಾಲ್ಡ್, ವಿರಾಟ್ ಕೊಹ್ಲಿ, ದೋನಿ ಇವರೆನ್ನೆಲ್ಲಾ ನೋಡಿ ಯಾವ ಹೀರೋಗಳಗಿಂತಲೂ ಕಮ್ಮಿಯಿಲ್ಲ.
ಅದರಲ್ಲಿ ಆಟಗಾರ್ತಿಯರಲ್ಲಿ ತನ್ನ ಆಟದ ಕೌಶಲ್ಯ ಮತ್ತು ರೂಪ-ಲಾವಣ್ಯದಿಂದ ಗಮನಸೆಳೆದಿದ್ದು ಮಾತ್ರ ಮೂಗುತಿ ಸುಂದರಿ ಸಾನಿಯಾ ಮಿರ್ಜಾ. ಸಾನಿಯಾ ಮೂಗಿಗೆ ರಿಂಗ್ ಹಾಕುವುದರ ಮುಖಾಂತರ ಹುಡುಗರ ಮಾತ್ರವಲ್ಲ, ಹೆಣ್ಣುಮಕ್ಕಳ ಚಿತ್ತವನ್ನು ಅವಳತ್ತ ಸೆಳೆದಳು. ನಂತರ ಮೂಗಿಗೆ ರಿಂಗ್ ಹಾಕುವುದು ಹೆಣ್ಣೂ ಮಕ್ಕಳಲ್ಲಿ ಫ್ಯಾಷನ್ ಆಗಿ ಮಾರ್ಪಟ್ಟಿತು.
ಭಾರತೀಯ ಹೆಮ್ಮೆಯ ಈ ಆಟಗಾರ್ತಿ ಪಾಕಿಸ್ಥಾನದ ಕ್ರಿಕೆಟ್ ಆಟಗಾರನನ್ನು ಮದುವೆಯಾದಾಗ ಭಾರತೀಯರಲ್ಲಿ ನಿರಾಶೆ ಮೂಡಿದರೂ ಮದುವೆಯ ನಂತರವೂ ನಾನು ಭಾರತದ ಪರವಾಗಿಯೇ ಆಡುವೆ ಎಂದು ಹೇಳಿದ್ದು ಭಾರತೀಯರಿಗೆ ಸಂತೋಷವನ್ನು ಮೂಡಿಸಿತು. ಸಾನಿಯಾ ತನ್ನ ಡ್ರೆಸ್ಸಿಂಗ್ ನಿಂದ ಹೆಚ್ಚಿನ ಗಮನ ಸೆಳೆದಳು. ಸಾನಿಯಾ ಡ್ರೆಸ್ಸಿಂಗ್ ಹೇಗೆ ಅವಳ ಜನಪ್ರಿಯತೆ ಹೆಚ್ಚಲು ಹೇಗೆ ಕಾರಣವಾಯಿತೆಂದು ಚಿತ್ರ ಮಾಹಿತಿ ನೀಡಲಾಗಿದೆ ನೋಡಿ:

ಸಾನಿಯಾಳ ಸ್ಪೋರ್ಟ್ಸ್ ಡ್ರೆಸ್
ಸಾನಿಯಾ ಟೆನ್ನೀಸ್ ಆಡುವಾಗ ಧರಿಸುತ್ತಿದ್ದ ಡ್ರೆಸ್ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಆದರೆ ಸಾನಿಯಾ ಮಾತ್ರ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ತನಗೆ ಕಂಫರ್ಟ್ ಆದ ಡ್ರೆಸ್ ನಲ್ಲಿ ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿ ಕಾಣುತ್ತಿದ್ದಳು.

ಸಾನಿಯಾಳ ಕನ್ನಡಕ ಮತ್ತು ಮೂಗುತಿ
ಸಾನಿಯಾಳ ಜನಪ್ರಿತೆ ಹೆಚ್ಚಾಗುತ್ತಿದ್ದಂತೆ ಅವಳ ಫ್ಯಾಷನ್ ಕನ್ನಡಕ ಮತ್ತು ಮೂಗುತಿ ಸ್ಟೈಲ್ ಹೆಚ್ಚು ಜನಪ್ರಿಯತೆಯನ್ನು ಗಳಿಸಿತು. ಕಾಲೇಜು ಯುವತಿಯರು ಅವಳ ಸ್ಟೈಲ್ ಅನ್ನು ಅನುಕರಣೆ ಮಾಡಲಾರಂಭಿಸಿದರು.

ಫ್ಯಾಷನೇಬಲ್ ಆಗಿ ಬೆಳೆಯಲಾರಂಭಿಸಿದಳು
ತನ್ನ ಜನಪ್ರಿಯತೆ ಹೆಚ್ಚಾಗುತ್ತಿದ್ದಂತೆ ಸಾನಿಯಾ ಹೆಚ್ಚು ಫಾಷನೇಬಲ್ ಆಗುತ್ತಾ ಹೋದಳು. ಪಾರ್ಟಿಗಳಿಗೆ ಬರುವಾಗ ಫ್ಯಾಷನೇಬಲ್ ಡ್ರೆಸ್, ಹೇರ್ ಸ್ಟೈಲ್, ಕಾಲಿಗೆ ಹೈ ಹೀಲ್ಡ್ ಚಪ್ಪಲಿ ಇವುಗಳಿಂದ ನಾನು ಯಾವ ಮಾಡಲ್ ಗಿಂತಲೂ ಕಮ್ಮಿಯಿಲ್ಲ ಎಂದು ಮಿಂಚಲಾರಂಭಿಸಿದಳು.

ನಿಶ್ಚಿತಾರ್ಥಕ್ಕೆ
ನಿಶ್ಚಿತಾರ್ಥದಲ್ಲಿ ಸಾನಿಯಾ ಸಾಂಪ್ರದಾಯಕವಾದ ಉಡುಗೆಯನ್ನು ಧರಿಸಿದ್ದಳು. ಚಿನ್ನ ಮಿಶ್ರಿತ ನೀಲಿ ಡ್ರೆಸ್ ನಲ್ಲಿ ಅತ್ಯಾಕರ್ಷಕವಾಗಿ ಕಾಣುತ್ತಿದ್ದಳು.

ಮದು ಮಗಳಾಗಿ
ಮದುವೆಯಲ್ಲಿ ಸಾನಿಯಾ ಕೆಂಪು ಬಣ್ಣದ ಲೆಹಂಗಾದಲ್ಲಿ ಅಪ್ಸರೆಯಂತೆ ಕಾಣುತ್ತಿದ್ದಳು. ಈ ಡ್ರೆಸ್ ಅನ್ನು ಫೇಮಸ್ ಡಿಸೈನರ್ ಶಾಂತನೂ ಮತ್ತು ನಿಕಿಲ್ ತಯಾರಿಸಿದರು.

ಬ್ಲೆಂಡರ್ಸ್ ಪ್ರೈಡ್ ಫ್ಯಾಷನ್ ಟೂರ್
ಬ್ಲೆಂಡರ್ಸ್ ಪ್ರೈಡ್ ಫ್ಯಾಷನ್ ಟೂರ್ ನಲ್ಲಿ ಸಾನಿಯಾ ramp walk ಮಾಡಿದ್ದಳು.ನೀಲಿ ಬಣ್ಣದ ಸೀರೆ ಗೌನ್ ನಲ್ಲಿ ಸಾನಿಯಾ ತುಂಬಾ ಆಕರ್ಷಕವಾಗಿ ಕಾಣುತ್ತಿದ್ದಳು. ಈ ಡ್ರೆಸ್ ನ ವಿನ್ಯಾಸವನ್ನು ವಸ್ತ್ರ ವಿನ್ಯಾಸಗಾರ ಶಾಂತನೂ ತಯಾರಿಸಿದರು.

ಶಾಂತಿದೂತಳಾಗಿ
ಇತೀಚಿಕೆ ನಡೆದ ವಾಕ್ ಆಫ್ ಪೀಸ್ ಫ್ಯಾಷನ್ ಶೋದಲ್ಲಿ ಸಾನಿಯಾ ಕ್ಯಾಟ್ ವಾಕ್ ಮಾಡಿದರು. ಬಿಳಿ ಬಣ್ಣದ ಅನಾರ್ಕಲಿ ಅದಕ್ಕೆ ಕಪ್ಪು ಬಾರ್ಡರ್ ಮತ್ತು ಕಪ್ಪು ಬಣ್ಣದ ಹೈ ಹೀಲ್ಡ್ ಧರಿಸಿ ಕ್ಯಾಟ್ ವಾಕ್ ಮಾಡಿದ್ದರು.



Click it and Unblock the Notifications
