Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವೈನ್ ಪ್ರಿಯರಿಗಾಗಿ ಬರುತ್ತಿದೆ-ವೈನ್ ಹಬ್ಬ
ಭಾರತದಲ್ಲಿ ಹಬ್ಬಗಳು ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಭಿನ್ನವಾಗಿರುತ್ತದೆ. ಆದರೆ ಕೆಲವೊಂದು ಹಬ್ಬಗಳು, ಆಚರಣೆಗಳು ಮಾತ್ರ ಭಿನ್ನವಾಗಿದ್ದು ಅವುಗಳ ಬಗ್ಗೆ ಕೇಳುವಾಗ ಅಚ್ಚರಿಯಿಂದ ಹುಬ್ಬೇರಿಸುತ್ತೇವೆ. ಉದಾಹರಣೆಗೆ ಕೊಡಗಿನಲ್ಲಿ ಕಂಡು ಬರುವ ಕುಂಡೆ ಹಬ್ಬ, ಪುಣೆಯ ವೈನ್ ಹಬ್ಬ ಹೀಗೆ ಅನೇಕ ವಿಚಿತ್ರಗಳ ಹಬ್ಬಗಳು ಆಚರಣೆಯಲ್ಲಿರುವುದನ್ನು ಕಾಣಬಹುದು.
ಪುಣೆಯ ವೈನ್ ಹಬ್ಬ ಪ್ರಾರಂಭವಾಗಿ 2012ಕ್ಕೆ 6 ವರ್ಷ ತುಂಬುತ್ತದೆ. ಈ ಹಬ್ಬವನ್ನು ಡಿಸೆಂಬರ್ 15-16 ವಾರಾಂತ್ಯದಲ್ಲಿ ಆಚರಿಸಲಾಗುವುದು. ಈ ವೈನ್ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಜನಪ್ರಿಯತೆ ಹೆಚ್ಚುತ್ತಿದೆ (ಎಷ್ಟೆಂದರೂ ವೈನ್ ಹಬ್ಬವಲ್ಲವೇ?).

ಇದೊಂದು ವಿದೇಶಿ ಸಂಸ್ಕೃತಿಯಾಗಿದೆ. ಇದನ್ನು ಭಾರತಕ್ಕೆ ತಂದಾಗ ಅನೇಕ ಜನರು ಅಸಮ್ಮತಿಯನ್ನು ತೋರಿಸಿದರು. ಆದರೆ ನಿಧಾನಕ್ಕೆ ಪರಿಸ್ಥಿತಿ ಬದಲಾಯಿತು. ಶ್ರೀಮಂತರು ಆಚರಿಸುತ್ತಿದ್ದ ಈ ಹಬ್ಬವನ್ನು ಮಧ್ಯಮ ವರ್ಗದವರು ಆಚರಿಸಲಾರಂಭಿಸಿದರು. ಪುಣೆಯ ನಾಶಿಕ್ ಭಾಗ ವೈನ್ ಗಳಿಗೆ ಪ್ರಸಿದ್ಧವಾಗಿದೆ. ಇಲ್ಲಿ ದ್ರಾಕ್ಷಿ ಬೆಳೆಯನ್ನು ಬೆಳೆದು ವಿಭಿನ್ನ ರುಚಿಯ ಗುಣಮಟ್ಟದ ವೈನ್ ಗಳನ್ನು ತಯಾರಿಸಲಾಗುತ್ತದೆ.
ಈ ಪುಣೆ ವೈನ್ ಹಬ್ಬದಲ್ಲಿ ಅನೇಕ ಬಗೆಯ ವೈನ್ ಗಳನ್ನು ಇಡಲಾಗಿರುತ್ತದೆ. ಪುಣೆಯ ವೈನ್ ಹಬ್ಬದ ವಿಶೇತೆಗಳನ್ನು ಇಲ್ಲಿ ನೀಡಲಾಗಿದೆ.
1. ಈ ವೈನ್ ಹಬ್ಬದಲ್ಲಿ 10 ರೀತಿಯ ವೈನ್ ಗಳಿರುತ್ತವೆ. ಈ ವೈನ್ ಗಳಲ್ಲಿ ಭಾರತದಲ್ಲಿ ತಯಾರಿಸಿದ ಹಾಗೂ ವಿದೇಶದಿಂದ ತಯಾರಿಸಿದ ವೈನ್ ಗಳಿರುತ್ತವೆ.
2. ವೈನ್ ಗಳ ಜೊತೆ ಅನೇಕ ಬಗೆಯ ಚೀಸ್ ಗಳಿರುತ್ತವೆ. ಗುಣ ಮಟ್ಟದ ವೈನ್ ಗಳನ್ನು ಚೀಸ್ ಜೊತೆ ಸವೆಯಲಾಗುವುದು.
3. ಈ ವೈನ್ ಹಬ್ಬದಲ್ಲಿ ವೈನ್ ಕುಡಿದ ಬಳಿಕ ಡ್ಯಾನ್ಸ್ ನ ಕಿಮ್ಮತ್ತು ಕೂಡ ಇರುತ್ತದೆ.
4. ಇಲ್ಲಿ ವೈನ್ ಅನ್ನು ಕುಡಿಯುವುದು ಮಾತ್ರವಲ್ಲ ತಯಾರಿಸಲೂಬಹುದು! ದ್ರಾಕ್ಷಿಗಳನ್ನು ಗುಡ್ಡೆ ಹಾಕಿ ಕಾಲಿನಿಂದ ತುಳಿಯಲಾಗುತ್ತದೆ. ನಂತರ ಈ ತುಳಿದ ದ್ರಾಕ್ಷಿಯನ್ನು ವೈನ್ ಮಾಡಲು ಬಳಸಲಾಗುವುದು.
ವೈನ್ ಪ್ರಿಯರು ಈ ಹಬ್ಬವನ್ನು ಆಚರಿಸಬೇಕೆಂದು ಬಯಸುವುದಾದರೆ ಡಿ. 15, 16 ಕ್ಕೆ ಪುಣೆಗೆ ಭೇಟಿ ನೀಡಬಹುದು.



Click it and Unblock the Notifications
