Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಅಲ್ಟ್ರಾ ಮಾಡರ್ನ್ ಹುಡುಗ ನೀವಾಗಬೇಕೆ?
ಹುಡುಗಿಯರಿಗೆ ತರಾವರಿ ವಿನ್ಯಾಸದ ಫ್ಯಾಷನೇಬಲ್ ಬಟ್ಟೆಗಳು ದೊರೆಯುತ್ತವೆ. ಆ ಲೆಕ್ಕ ನೋಡಿದರೆ ಹುಡಗರಿಗೆ ಪಾಪ ಪ್ಯಾಂಟ್, ಬರ್ಮೋಡ, ಶರ್ಟ್, ಟೀ ಶರ್ಟ್ ಇವುಗಳಲ್ಲಿಯೇ ಹೊಸ ವಿನ್ಯಾಸದ ಡ್ರೆಸ್ ಗಳನ್ನು ಆಯ್ಕೆ ಮಾಡಬೇಕಾಗುತ್ತದೆ. ಜೀನ್ಸ್ ಪ್ಯಾಂಟ್ ಅದಕ್ಕೊಂದು ಶರ್ಟ್ ಅಥವಾ ಟಿ ಶರ್ಟ್, ಫಾರ್ಮಲ್ ಡ್ರೆಸ್ ಇವಷ್ಟೆ ಹಾಕುತ್ತಿದ್ದರೆ ಫ್ಯಾಷನೇಬಲ್ ಅನಿಸುವುದಿಲ್ಲ.
ಅದರಲ್ಲೂ ವೀಕೆಂಡ್ ಗಳಲ್ಲಿ ಹೊರಗಡೆ ಸುತ್ತಾಡಲು ಹೋಗುವ ಫ್ಯಾಷನೇಬಲ್ ಆಗಿ ಕಾಣಲು ಇಷ್ಟಪಡುತ್ತಿರಾ ತಾನೆ. ಈ ಕೆಳಗಿನ ಫ್ಯಾಷನೇಬಲ್, ಡ್ರೆಸ್ ಗಳು ನಿಮಗೆ ನಿಮಗೆ ಅಲ್ಟ್ರಾ ಮಾಡರ್ನ್ ಲುಕ್ ನೀಡುತ್ತದೆ. ಬನ್ನಿ, ನಿಮಗೆ ಅಲ್ಟ್ರಾ ಮಾಡರ್ನ್ ಲುಕ್ ನೀಡುವಂತಹ ಡ್ರೆಸ್ ಗಳು ಯಾವುವು ಎಂದು ತಿಳಿಯೋಣ ಬನ್ನಿ.

ಫ್ಯಾಬ್ರಿಕ್: ಫ್ಯಾಬ್ರಿಕ್ ಬಟ್ಟೆಯ ಪ್ಯಾಂಟ್ ಗಳು ಮಳೆಗಾಲಕ್ಕೆ ಸೂಕ್ತವಾದ ಪ್ಯಾಂಟ್ ಆಗಿದೆ. ಇದನ್ನು ಧರಿಸಿದಾಗ ತುಂಬಾ ಕಂಫರ್ಟ್ ಅನಿಸುವುದು ಅಲ್ಲದೆ ಮಳೆಯಲ್ಲಿ ಒದ್ದೆಯಾದರೆ ಬೇಗನೆ ಒಣಗುವುದು. ಈ ರೀತಿಯ ಪ್ಯಾಂಟ್ ಗಳು ಫ್ಯಾಷನೇಬಲ್ ಲುಕ್ ನೀಡುತ್ತದೆ.
ಮುಕ್ಕಾಲು ಪ್ಯಾಂಟ್: ಈ ರೀತಿಯ ಪ್ಯಾಂಟ್ ಧರಿಸಿದರೆ ತುಂಬಾ ಫ್ಯಾಷನೇಬಲ್ ಆಗಿ ಕಾಣುವಿರಿ. ಆದರೆ ಈ ರೀತಿಯ ಪ್ಯಾಂಟ್ ತುಂಬಾ ಬಿಗಿಯಿರಬಾರದು. ಸ್ವಲ್ಪ ಸಡಿಲವಾಗಿದ್ದು ಡೇನಿಮ್ ಅಥವಾ ಲೈಟ್ ಶೇಡ್ಸ್ (ಸ್ವಲ್ಪ ಗಾಢ) ಬಣ್ಣದ ಡ್ರೆಸ್ ಅಂತೂ ಕ್ಲಾಸಿಕ್ ಲುಕ್ ನೀಡುತ್ತದೆ.
ಬರ್ಮೋಡಾ: ಬರ್ಮೋಡಾವನ್ನು ಹದಿಹರೆಯದವರಿಂದ ಹಿಡಿದು ಮಧ್ಯ ವಯಸ್ಸು ದಾಟಿದವರು ಕೂಡ ಧರಿಸಲು ಇಷ್ಟಡುತ್ತಾರೆ. ಪಿಕ್ ನಿಕ್, ಔಟಿಂಗ್ ಅಂತ ಹೋಗುವಾಗ ಈ ರೀತಿಯ ಡ್ರೆಸ್ ತುಂಬಾ ಕಂಫರ್ಟ್ ಅನಿಸುವುದು. ಬರ್ಮೋಡಾ ಮತ್ತು ಟಿ ಶರ್ಟ್ ಧರಿಸಿ ಕಾಲಿಗೆ ಒಳ್ಳೆಯ ಬ್ರಾಂಡ್ ನ ಚಪ್ಪಲಿ ಅಥವಾ ಶೂ ಧರಿಸಿದರೆ ಸಾಕು, ತುಂಬಾ ಫ್ಯಾಷನೇಬಲ್ ಆಗಿ ಕಾಣುವಿರಿ.
ಸ್ಲಿಮ್ ಫಿಟ್ ಪ್ಯಾಂಟ್: ಇದು ಫ್ಯಾಷನ್ ಪ್ರಿಯರ ಮೆಚ್ಚಿನ ಉಡುಗೆಯಾಗಿದೆ. ಈ ಪ್ಯಾಂಟ್ ಸ್ವಲ್ಪ ಬಿಗಿಯಾಗಿದ್ದು ಕೆಳಗಡೆ ಅಷ್ಟೇನು ಅಗಲವಿರುವುದಿಲ್ಲ. ಈ ಪ್ಯಾಂಟ್ ಧರಿಸಿ ಕೆಳಗಡೆ ಸ್ವಲ್ಪ ಮಡಚಿದರೆ ತುಂಬಾ ಆಕರ್ಷಕವಾಗಿ ಕಾಣುವುದು. ಈ ಪ್ಯಾಂಟ್ ಮತ್ತು ಟಿ ಶರ್ಟ್ ಧರಿಸಿ ಓವರ್ ಕೋಟ್ ಹಾಕಿದರೆ ನಿಮ್ಮ ಲುಕ್ಕೇ ಬದಲಾಗುವುದು.



Click it and Unblock the Notifications
