Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ರಾಸಾಯನಿಕ ಮುಕ್ತ ಮಾವಿನ ಹಣ್ಣಿನ ರಸ ಮಾರುಕಟ್ಟೆಗೆ
ರಾಸಾಯನಿಕ ಮುಕ್ತ ಗಾಳಿ, ಆಹಾರ, ನೀರು ಇವುಗಳ ಸೇವನೆ ಅಸಾಧ್ಯ ಅನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಾವಯವ ಆಹಾರ ಆರೋಗ್ಯಕ್ಕೆ ಒಳ್ಳೆಯದು. ಇಂತಹ ಸಾವಯದ ಆಹಾರ ಪೂರೈಕೆ ಮಾಡುವ ದೇಶದ ಪ್ರಮುಖ ಬ್ರಾಂಡ್ 24 ಲೆಟರ್ ಮಂತ್ರಾ'. ಇದೀಗ ಈ ಬ್ರಾಂಡ್ ಸಾವಯವ ಮಾವಿನ ಹಣ್ಣಿನ ರಸವನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಈ ಮಾವಿನ ಹಣ್ಣಿನ ರಸವು ಶೇ 100ರಷ್ಟು ಶುದ್ಧವಾಗಿದೆ. ಇದರಲ್ಲಿ ಯಾವುದೇ ಕೃತಕ ದ್ರವ ಅಥವಾ ಬಣ್ಣ ಬಳಸಿ ತಯಾರಿಸಿಲ್ಲ. ಅಲ್ಲದೆ ಹಾಳಾಗದಂತೆ ಕಾಪಾಡುವ ಯಾವುದೇ ರಾಸಾಯನಿಕ ಪದಾರ್ಥವನ್ನು ಇದರಲ್ಲಿ ಸೇರ್ಪಡೆ ಮಾಡಿಲ್ಲ. ಆದ್ದರಿಂದ ಈ ಜ್ಯೂಸ್ ಅನ್ನು ಮಕ್ಕಳಿಗೂ ಕೊಡಬಹುದಾಗಿದೆ. ಈ ರಸವನ್ನು ಇತರ ಹಣ್ಣಿನ ರಸಕ್ಕೆ ಹೋಲಿಸಿದರೆ ಇದರಲ್ಲಿ ಹೆಚ್ಚು ತಿರುಳು ಒದಗಿಸಿದೆ. ಇತರ ಹಣ್ಣಿನ ರಸಗಳಲ್ಲಿ ಶೇ 20ರಷ್ಟು ಹಣ್ಣಿನ ತಿರುಳು ಇದ್ದರೆ, 24 ಮಂತ್ರಾ ಸಾವಯವ ಮಾವಿನ ಹಣ್ಣಿನ ರಸದಲ್ಲಿ ಶೇ 26ರಷ್ಟು ತಿರುಳು ಇದ್ದು, ಯಾವುದೇ ರಾಸಾಯನಿಕವಿಲ್ಲದ ನೈಜವಾದ ಮಾವಿನ ಹಣ್ಣಿನ ರಸವಾಗಿದೆ. ಆದ್ದರಿಂದ ಸ್ವಾದಿಷ್ಟ ರುಚಿ ಮತ್ತು ಪೋಷಕಾಂಶದ ವಿಷಯದಲ್ಲಿ ಈ ಹಣ್ಣಿನ ರಸ ಹೊಸ ಮಾನದಂಡವನ್ನೂ ಹೊಂದಿದೆ.
ಈ ಸಾವಯವ ಮಾವಿನ ಹಣ್ಣಿನ ರಸ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ ಸೂಪರ್ ಮಾರುಕಟ್ಟೆಗಳಲ್ಲಿ ಲಭ್ಯ ಇದೆ. ಒಂದು ಲೀಟರ್ ಟೆಟ್ರಾ ಪ್ಯಾಕೆಟ್ ನಲ್ಲಿ ಲಭ್ಯ ಇರುವ ನೈಸರ್ಗಿಕವಾದ ಹಣ್ಣಿನ ರಸದ ಬೆಲೆ ರೂ 120 ಆಗಿದೆ.



Click it and Unblock the Notifications
