Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಫೇಸ್ ಬುಕ್ ನಲ್ಲಿ ಕಂಡುಬರುವ ವಿಚಿತ್ರವಾದ ಅಭ್ಯಾಸಗಳು
ಫೇಸ್ ಬುಕ್ ಎಂಬ ಸಾಮಾಜಿಕ ತಾಣ 10 ವರ್ಷವರಿಂದ ಹಿಡಿದು 60 ದಾಟಿದವರಿಗೂ ಕೂಡ ಪ್ರಿಯವಾದ ತಾಣವಾಗಿದೆ. ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು, ಫ್ರೆಂಡ್ಸ್ ಜೊತೆ ಮಾತುಕತೆ ನಡೆಸಲು, ಚರ್ಚೆ ನಡೆಸಲು ಹೀಗೆ ಅದೊಂದು ಭಾವನೆಗಳ ವೇದಿಕೆಯಾಗಿದೆ. ಫೇಸ್ ಬುಕ್ ನಲ್ಲಿ ಫ್ರೆಂಡ್ಸ್ ಚಟುವಟಿಕೆ ಗಮನಿಸಿದರೆ ಸ್ವಲ್ಪ ವಿಚಿತ್ರವಾದ ನಡುವಳಿಕೆಗಳು ಗಮನಕ್ಕೆ ಬರುತ್ತದೆ. ಬನ್ನಿ, ಆ ವಿಚಿತ್ರವಾದ ನಡುವಳಿಕೆಗಳ ಬಗ್ಗೆ ತಿಳಿಯೋಣ:
ಅನಾವಶ್ಯಕವಾಗಿ ಸ್ಟೇಟಸ್ ಅಪ್ ಡೇಟ್ ಮಾಡುವುದು:ಪ್ರಯೋಜನಕ್ಕೆ ಬಾರದ ಫೋಟೊಗಳನ್ನು ಹಾಕುವುದು, ಪದೇ-ಪದೇ ಸ್ಟೇಟಸ್ ಅಪ್ ಡೇಟ್ ಮಾಡುವುದು ಈ ರೀತಿ ಮಾಡುತ್ತಿದ್ದರೆ ಫೇಸ್ ಬುಕ್ ಪೂರ್ತಿ ತಲೆಹರಟೆಯ ವಿಷಯಗಳೇ ಇರುತ್ತವೆ. ಇದರಿಂದ ಫೇಸ್ ಬುಕ್ ನಲ್ಲಿ ನಡೆಯುವ ಕೆಲವೊಂದು ಆಸಕ್ತಿಕರ ವಿಷಯದ ಬಗ್ಗೆ ತಿಳಿದುಕೊಳ್ಳದೇ ಹೋಗಬಹುದು.

ಎಲ್ಲಾ ಭಾವನೆಗಳನ್ನು ಪೋಸ್ಟ್ ಮಾಡುವುದು ಸರಿಯಲ್ಲ: ನನಗೆ ಖುಷಿಯಾಗಿದೆ, ನನಗೆ ತುಂಬಾ ಬೇಜಾರು ಆಗಿದೆ. ಸಂಸಾರದಲ್ಲಿ ನೆಮ್ಮದಿಯಿಲ್ಲ ಈ ರೀತಿಯ ಸ್ಟೇಟಸ್ ಗಳನ್ನು ಹಾಕಿದರೆ ಸ್ವಲ್ಪ ಕಮೆಂಟ್ ಬರುತ್ತದೆ ಹೊರತು ನಿಮಗೆ ಅದರಿಂದ ಪರಿಹಾರ ಸಿಗಲು ಸಾಧ್ಯವಿಲ್ಲ. ತೀರಾ ಖಾಸಗಿ ವಿಷಯವನ್ನು ಫೇಸ್ ಬುಕ್ ನಲ್ಲಿ ಹಾಕಬಾರದು.
ಎಮೋಷನಲ್ ಕಮೆಂಟ್: ಮೊಬೈಲ್ ನಲ್ಲಿ ಕೆಲವೊಂದು ಎಮೋಷನಲ್ ಕಮೆಂಟ್ ಬರುತ್ತದೆ. ಓಂ ನಮಃ ಹೇಳಿ 50 ಜನರಿಗೆ ಮೆಸೇಜ್ ಕಳುಹಿಸಿ ಇಲ್ಲದಿದ್ದರೆ ಅಪಾಯ ಬರುತ್ತದೆ, ಅದೇ ರೀತಿ ಫೇಸ್ ಬುಕ್ ನಲ್ಲಿ ಕೆಲವರು ಅಂತಹ ಎಮೋಷನಲ್ ಮೆಸೇಜ್ ಹಾಕಿ ಷೇರ್ ಮಾಡಿ ಎಂದಿರುತ್ತಾರೆ. ಅಂತಹ ಮೆಸೇಜ್ ಗಳನ್ನು ನೋಡುಗರಿಗೆ ಕಿರಿಕಿರಿ ಅನಿಸುತ್ತದೆ.
ತಲೆಹರಟೆಯ ಅಪ್ಲಿಕೇಷನ್ : ಕೆಲವೊಂದು ಅಪ್ಲಿಕೇಷನ್ ಇರುತ್ತದೆ ಅದನ್ನು ಬಳಸಿದರೆ ನಿಮ್ಮ ಭವಿಷ್ಯ, ನಿಮ್ಮ ಬಾಳ ಸಂಗಾತಿಯಾಗುವವರು ಯಾರಾಗಿರುತ್ತಾರೆ ಎಂದೆಲ್ಲಾ ಹುಚ್ಚುಹುಚ್ಚಾಗಿ ತೋರಿಸುತ್ತಿರುತ್ತಾರೆ. ಕೆಲವೊಂದು ವಿಷಯಗಳು ಮನರಂಜನೆಯನ್ನು ಕೊಟ್ಟರು ಮತ್ತೆ ಕೆಲವು ವಿಷಯಗಳು ತೀರಾ ಅತಿರೇಕ ಅನಿಸಬಹುದು. ಉದಾಹರಣೆಗೆ ನಿಮ್ಮ ಬೆಸ್ಟ್ ಫ್ರೆಂಡ್ ಇಂತಹವರು ಎಂದು ಕೆಲವರ ಹೆಸರು ತೋರಿಸಿರುತ್ಆದರೆ ಅದರಲ್ಲಿ ನಿಮ್ಮ ಬೆಸ್ಟ್ ಫ್ರೆಂಡ್ ನ ಹೆಸರು ಇಲ್ಲದಿದ್ದರೆ ಆ ಫ್ರೆಂಡ್ ಗೆ ಬೇಜಾರಾಗುತ್ತದೆ.
ಫೋಟೊ ಟ್ಯಾಗ್: ಕೆಲವೊಮ್ಮೆ ಫ್ರೆಂಡ್ಸ್ ಗಳು ಫೋಟೊ ಟ್ಯಾಗ್ ಮಾಡಿರುತ್ತಾರೆ. ಆದರೆ ಆ ಫೋಟೊಗಳು ನಿಮಗೆ ಸಂಬಂಧಿಸಿದ್ದು ಆಗಿರುವುದಿಲ್ಲ. ಅಂತಹ ಫೋಟೊಗಳನ್ನು ಡಿಲೀಟ್ ಮಾಡಬೇಕು.
ಹೀಗೆ ಬೇಡದ ವಿಷಯಗಳು ತುಂಬಾ ನಡೆಯುತ್ತಿರುತ್ತದೆ. ಇದನ್ನು ಆದಷ್ಟು ಉಪಯುಕ್ತ ಮಾಹಿತಿಗೆ ಬಳಸಿದರೆ ಫೇಸ್ ಬುಕ್ ನಿಂದ ಕಿರಿಕಿರಿ ಉಂಟಾಗುವುದಿಲ್ಲ.



Click it and Unblock the Notifications